ಬಾಗೇಪಲ್ಲಿ ಶ್ರೀ ಅಮರನಾರಾಯಣಸ್ವಾಮಿ ಬಲಿಜ ಸಂಘದ ನೂತನ ಪದಾಧಿಕಾರಿಗಳು
by Ra Na Gopala Reddy Bagepalli
ಬಾಗೇಪಲ್ಲಿ: ಕರ್ನಾಟಕ ರಾಜ್ಯಾದ್ಯಂತ 45 ಲಕ್ಷ ಜನಸಂಖ್ಯೆ ಇರುವ ಬಲಿಜ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ, ಕೈವಾರ ಅಮರನಾರೇಯಣ ಜಯಂತಿ, ಶ್ರೀ ಕೃಷ್ಣದೇವರಾಯ ಜಯಂತಿ ಹಾಗೂ 3ಎಯಿಂದ 2ಎಗೆ ಸೇರಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಬಾಗೇಪಲ್ಲಿ ತಾಲೂಕು ಶ್ರೀ ಅಮರನಾರಾಯಣ ಸ್ವಾಮಿ ಬಲಿಜ ಸಂಘದ ನೂತನ ಗೌರಾಧ್ಯಕ್ಷ ಎ.ಜಿ.ಸುಧಾಕರ್ ಒತ್ತಾಯಿಸಿದರು.
ಪಟ್ಟಣದಲ್ಲಿ ಬಾಗೇಪಲ್ಲಿ ತಾಲೂಕು ಅಮರನಾರಾಯಣ ಬಲಿಜ ಸಂಘದ ವತಿಯಿಂದ ಸೋಮವಾರ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಶ್ರೀ ಅಮರನಾರಾಯಣ ಸ್ವಾಮಿ ಬಲಿಜ ಸಂಘ ಪಟ್ಟಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ 45 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಬಲಿಜ ಸಮುದಾಯ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ತುಳಿತಕ್ಕೆ ಒಳಗಾಗಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ನಮ್ಮ ಸಮುದಾಯಕ್ಕೆ ಮಾಡಿದ ಅನ್ಯಾಯವನ್ನು ಹಾಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಸರಿಪಡಿಸಿ ಬಲಿಜ ಸಮುದಾಯಕ್ಕೆ ನ್ಯಾಯ ನೀಡುವ ಪ್ರಯತ್ನ ಮಾಡಬೇಕಾಗಿದೆ. ಇಲ್ಲವಾದರೆ ಹೋರಾಟ ಮೂಲಕವೇ ನಮ್ಮ ಹಕ್ಕನ್ನು ಮತ್ತೆ ಪಡೆಯುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಲಿಜ ಸಮದಾಯದ ಹಿರಿಯ ಮುಖಂಡ ಬಿ.ಆರ್.ನರಸಿಂಹ ನಾಯ್ಡು ಮಾತನಾಡಿ; ಈ ಹಿಂದೆ ನಡೆದ ಸಭೆಯಲ್ಲಿ ಬಾಗೇಪಲ್ಲಿ ತಾಲೂಕು ಸಮಸ್ತ ಬಲಿಜ ಸಮದಾಯ ಸಭೆಯನ್ನು ಸೇರಿ ಬಾಗೇಪಲ್ಲಿ ತಾಲೂಕು ಶ್ರೀ ಅಮರನಾರಾಯಣ ಸ್ವಾಮಿ ಬಲಿಜ ಸಂಘ ಅಸ್ತಿತ್ವಕ್ಕೆ ಬಂದಿದ್ದು ಈಗ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು.
ಬಲಿಜ ಸಮುದಾಯವು ಶಾಂತಿ ಮತ್ತು ಸರಳತೆಯ ಪ್ರತಿರೂಪವಾಗಿದೆ. ದೇಶದಲ್ಲಿ ನಮ್ಮ ಸಮುದಾಯ ಬಹಳ ಬಲಿಷ್ಠವಾಗಿದೆ. ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯು ಬಲಿಜ ಸಮುದಾಯವೇ ರಾಜಕೀಯದ ನಿರ್ಣಾಯಕ ಪಾತ್ರ ವಹಿಸಲಿದೆ. ರಾಜ್ಯ ಸರಕಾರ ತಕ್ಷಣ ನಮ್ಮ ಸಮುದಾಯದ ಬೇಡಿಕೆಯನ್ನು ಈಡೇರಿಸುವ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು.
ನೂತನ ಪದಾಧಿಕಾರಿಗಳು
- ಗೌರಾವಾಧ್ಯಕ್ಷ: ಎ.ಜಿ.ಸುಧಾಕರ್
- ಅಧ್ಯಕ್ಷ: ಬಿ.ಎನ್. ಶ್ರೀನಿವಾಸ್
- ಕಾರ್ಯಾಧ್ಯಕ್ಷರು: ವಿ.ನಾರಾಯಣ, ಬಿ.ಎ.ನರಸಿಂಹ ಮೂರ್ತಿ, ಟಿ.ಪ್ರಕಾಶ್
- ಉಪಾಧ್ಯಕ್ಷರು: ನರಸಿಂಹಪ್ಪ, ಮುನಿಸ್ವಾಮಿ, ಮಂಜುನಾಥ ಚಲ್ಲಾ
- ಪ್ರಧಾನ ಕಾರ್ಯದರ್ಶಿ: ವೆಂಕಟರವಣ
- ಕಾರ್ಯದರ್ಶಿ: ಶ್ರೀನಿವಾಸ್ .ಕೆ.ಎಸ್.
- ಜಂಟಿ ಕಾರ್ಯದರ್ಶಿ: ರಘುನಾಥ್
- ಖಜಾಂಚಿ: ರಾಮಚಂದ್ರ
- ಕಾರ್ಯಕಾರಿ ಸಮಿತಿ ಸದಸ್ಯರು: ಮಲ್ಲಿಕಾರ್ಜುನ, ರಘು
- ಸಂಘಟನಾ ಕಾರ್ಯದರ್ಶಿಗಳು: ಆರ್.ಎಲ್. ಚಂದ್ರಶೇಖರ, ಜಿ.ಬಾಲಾಜಿ ರಾಯಲ್, ಬುಜೇಂದ್ರ ರಾಯಲ್, ಬಿ.ಎನ್.ಗೋಪಾಲ್