by GS Bharath Gudibande
ಗುಡಿಬಂಡೆ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬುಧವಾರ ಗುಡಿಬಂಡೆಗೆ ಭೇಟಿ ಮಾಡಿ ರಾಸಾಯನಿಕ ಕೆಮಿಕಲ್ ವಿಲೇವಾರಿ ಮಾಡಲು ಬಂದಿದ್ದ ವಿನಾಶಕಾರಿ ಟ್ಯಾಂಕರ್ ಹಾಗೂ ಅದರಲ್ಲಿದ್ದ ತ್ಯಾಜ್ಯದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ತಾಲೂಕಿನ ಮೀಸಲು ವಲಯ ಅರಣ್ಯ ಪ್ರದೇಶ ಹಾಗೂ ವಾಟದಹೊಸಳ್ಳಿ ಗ್ರಾಮದ ಬಳಿ ಕಳೆದ ಅಗಸ್ಟ್ 29ರಂದು ರಾತ್ರಿ ಅರಣ್ಯ ಇಲಾಖೆಯು ಕೆಮಿಕಲ್ ಲಾರಿಯನ್ನು ಸೀಜ್ ಮಾಡಿತ್ತು, ವಾಹನದಲ್ಲಿರುವ ಕೆಮಿಕಲ್ ಬಗ್ಗೆ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಮಂಡಳಿ ಅಧಿಖಾರಿಗಳು ಎಲ್ಲ ಅಂಶಗಳನ್ನೂ ಕೂಲಂಕಶವಾಗಿ ಪರಿಶೀಲನೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಅಧಿಕಾರಿಗಳು ಗುಡಿಬಂಡೆಯ ಅರಣ್ಯಾಧಿಕಾರಿಗಳ ಕಚೇರಿ ಹಾಗೂ ಕೆಮಿಕಲ್ ವಾಹನ ಸೀಜ್ ಮಾಡಿರುವ ಜಾಗವನ್ನು ಮಹಜರ್ ಮಾಡಿಕೊಂಡು, ವಾಹನದಲ್ಲಿದ್ದ ಕೆಮಿಕಲ್ ಶ್ಯಾಂಪಲ್ ಲ್ಯಾಬ್ʼಗೆ ಕಳುಹಿಸಿದ್ದಾರೆ ಎಂಬ ಮಾಹಿತಿ ಸಿಕೆನ್ಯೂಸ್ ನೌ ವೆಬ್‌ತಾಣಕ್ಕೆ ಲಭ್ಯವಾಗಿದೆ.
ಗುಡಿಬಂಡೆ ತಾಲೂಕಿನ ಮೀಸಲು ಅರಣ್ಯ ಪ್ರದೇಶದಲ್ಲಿ ಹಾಗೂ ವಾಟದಹೊಸಳ್ಳಿ ಕೆರೆ ಬಳಿ ಮಹಾ ದುರಂತದ ಅನಾಹುತ ತಪ್ಪಿದ ಘಟನೆ ನಡೆದು 12 ದಿನಗಳು ಕಳೆದಿದ್ದರೂ, ಇನ್ನು ಪ್ರಯೋಗಾಲಯದಿಂದ ವರದಿ ಬಂದಿಲ್ಲ, ಯಾಕೆ ಇಷ್ಟು ತಡವಾಗುತ್ತಿದೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..