ಬಾಗೇಪಲ್ಲಿ ತಾಲೂಕಿನ 2 ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಲೋಕಾರ್ಪಣೆ
by Ra Na Gopala Reddy Bagepalli
ಬಾಗೇಪಲ್ಲಿ: ಈಗಿನ ಮನುಕುಲಕ್ಕೆ ಅಗತ್ಯವಾಗಿರುವುದು ಉತ್ತಮ ಆರೋಗ್ಯ ಮತ್ತು ಒಳ್ಳೆಯ ವಿದ್ಯೆ ಎಂದು ರೈಟ್ ಟು ಲೀವ್ ಫೌಂಡೇಶನ್ʼನ ಪ್ರೋಗ್ರಾಂ ಡೈರೆಕ್ಟರ್ ಸಿ.ಕೆ.ರಮೇಶ್ ಅಭಿಪ್ರಾಯಪಟ್ಟರು.
ರೈಟ್ ಟು ಲೀವ್, ನ್ಯಾಸ್ಡ್ಯಾಕ್ ಮತ್ತು ಯಂಗ್ ಲೈವ್ಸ್ ಫೌಂಡೇಶನ್ʼಗಳ ಸಂಯುಕ್ತಾಶ್ರದಲ್ಲಿ ತಾಲ್ಲೂಕಿನ ಮಾಡಪಲ್ಲಿ ಮತ್ತು ನಾರಾಯಣಸ್ವಾಮಿ ಕೋಟೆ ಗ್ರಾಮಗಳಲ್ಲಿ ನೀರಿನ ಶುದ್ದೀಕರಣ ಘಟಕಗಳನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಜನರನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆಯೂ ಒಂದು. ಫ್ಲೋರೈಡ್, ನೈಟ್ರೇಟ್ʼನಂಥ ಅಂಶಗಳು ಅತಿಯಾಗಿ ನೀರಿನಲ್ಲಿದ್ದು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಇಂತಹ ಸಂದರ್ಭದಲ್ಲಿ ನೀರಿನ ಶುದ್ದೀಕರಣ ಘಟಕಗಳಿಂದ ಉಪಯುಕ್ತವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಪ್ರಜಾವೈದ್ಯ ಡಾ.ಅನಿಲ್ ಕುಮಾರ್; “ಜನರು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು. ಉತ್ತಮ ಆಹಾರ ಮತ್ತು ಶುದ್ದ ನೀರನ್ನು ಸೇವಿಸಬೇಕು” ಎಂದರು.
ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾಶ ಮಾಡಿ ನೀರು, ಗಾಳಿಯನ್ನು ಮಲಿನ ಮಾಡುತ್ತಿದ್ದಾರೆ. ಇದರಿಂದ ಆರೋಗ್ಯದ ದುಷ್ಪರಿಣಾಮ ಉಂಟಾಗುತ್ತಿದೆ. ಇದಕ್ಕೆ ಹೆಚ್ಚಾಗಿ ಗ್ರಾಮೀಣ ಜನರೇ ಬಲಿಪಶುಗಳಾಗುತ್ತಿದ್ದಾರೆ. ಆದ್ದರಿಂದ ಜನರು ವೈಯಕ್ತಿಕ ಜೀವನಕ್ಕೆ ಕೊಟ್ಟಷ್ಟೆ ಪ್ರಾಮುಖ್ಯತೆಯನ್ನು ಸಾಮಾಜಿಕ ಜೀವನಕ್ಕೂ ಕೊಡಬೇಕು ಎಂದು ಅನಿಲ್ ಕುಮಾರ್ ಹೇಳಿದರು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮಾಡಿದ ಮಾರಗಾನಕುಂಟೆ, ಗೂಳೂರು ಮತ್ತು ತಿಮ್ಮಂಪಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿದ ಐವರು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಲಾಯಿತು. ಜತೆಗೆ ಕೊಲಿಂಪಲ್ಲಿ ವೇಣುಗೋಪಾಲ್ ಅವರಿಗೆ ಲ್ಯಾಪ್ʼಟ್ಯಾಪ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರೈಟ್ ಟು ಲೀವ್ ಫೌಂಡೇಶನ್ ವ್ಯವಸ್ಥಾಪಕಿ ಶಾಂಭವಿ, ಆಪ್ರೇಷನ್ ಮ್ಯಾನೇಜರ್ ವೀರೇಶ್, ಪ್ರೋಗ್ರಾಮ್ ಕೋ-ಆರ್ಡಿನೇಟರ್ ಐವಾರಪಲ್ಲಿ ವೈ.ಎನ್ ಹರೀಶ್, ಮಾರಗಾನಕುಂಟೆ ಸಿಆರ್ಪಿ ಶ್ರೀನಿವಾಸ್, ಶಿಕ್ಷಕ ಶಂಕರಪ್ಪ, ಯಂಗ್ ಲೈವ್ಸ್ ಫೌಂಡೇಶನ್ ನಿರ್ದೇಶಕ ಎಂ.ಎಲ್.ನರಸಿಂಹಮೂರ್ತಿ, ಪ್ರೋಗ್ರಾಂ ಡೈರೆಕ್ಟರ್ ಮಾರುತಿ, ಕೋ-ಆರ್ಡಿನೇಟರ್ ಪಿಚ್ಚಲವಾರಪಲ್ಲಿ ನಾಗಭೂಷಣ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಂಚಾಲಕಿ ಬಿ.ಸಾವಿತ್ರಮ್ಮ ಮುನಿಸ್ವಾಮಿ, ಗ್ರಾಮಸ್ಥರಾದ ಲಕ್ಷ್ಮಿನರಸಪ್ಪ, ಪದ್ಮಾವತಿ, ಮಮತಾ, ಅನಸೂಯಮ್ಮ, ಎಂ.ಆರ್.ಅಜಯ್ ಕುಮಾರ್, ಮುರಳಿಕುಮಾರ್, ಎಂ.ಎಸ್ ಮಂಜುನಾಥರೆಡ್ಡಿ, ಕಲ್ಯಾಣ್ ಕುಮಾರ್, ಭರತ್ ಸೇರಿದಂತೆ ಹಲವರು ಹಾಜರಿದ್ದರು.