ಹಸಿರೇ ಉಸಿರು ಅಭಿಯಾನದಡಿ ಪರಿಸರ ವೇದಿಕೆಯಿಂದ ಶುಭ ಹಾರೈಕೆ; ಸಿಕೆನ್ಯೂಸ್ ನೌ ಬಗ್ಗೆ ಅಕ್ಕರೆಯ ನುಡಿ
By GS Bharath Gudibande
ಗುಡಿಬಂಡೆ: ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯ ನಿಜದನಿಯಾದ ಸಿಕೆನ್ಯೂಸ್ ನೌ ವೆಬ್ʼತಾಣದ ಸಂಸ್ಥಾಪಕ ಸಂಪಾದಕ ಪಿ.ಕೆ.ಚನ್ನಕೃಷ್ಣ ಅವರ ಜನ್ಮದಿನ ನಿಮಿತ್ತ ಪಟ್ಟಣದ ಪತ್ರಕರ್ತ ಮಿತ್ರರು ಹಾಗೂ ಸಿಕೆನ್ಯೂಸ್ ನೌ ಬಳಗದ ಗೆಳೆಯರೆಲ್ಲ ಸೇರಿ ಶುಭ ಕೋರಿದ್ದಾರೆ.
ಪಟ್ಟಣದ ಶ್ರೀ ಗುಂಡಾಲಚ್ಚಮ್ಮ ಅಮ್ಮನವರ ದೇವಾಲಯದ ಆವರಣದಲ್ಲಿ ಪರಿಸರ ವೇದಿಕೆಯಿಂದ ಗಿಡ ನೆಡುವ ಮೂಲಕ ಶುಭ ಕೋರಿದರು.
ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ವಿಭಾಗದ ಅಧ್ಯಕ್ಷ ಜಿ.ಎನ್.ನವೀನ್ ಮಾತನಾಡಿ; “ಪಿ.ಕೆ.ಚನ್ನಕೃಷ್ಣ ಅವರು ಮೂಲತಃ ಗುಡಿಬಂಡೆ ತಾಲೂಕಿನ ಪೋಲಂಪಲ್ಲಿ ಗ್ರಾಮದವರು. ಪೋಲಂಪಲ್ಲಿಯಲ್ಲಿ ಪ್ರಾಥಮಿಕ, ಗುಡಿಬಂಡೆಯಲ್ಲಿ ಪ್ರೌಢ-ಪದವಿಪೂರ್ವ ಶಿಕ್ಷಣ ಹಾಗೂ ಬಾಗೇಪಲ್ಲಿಯಲ್ಲಿ ಪದವಿ ವಿದ್ಯಾಭ್ಯಾಸ ಮಾಡಿದ್ದಾರೆ” ಎಂದರು.
“ಪತ್ರಿಕಾ ರಂಗದಲ್ಲಿ ದಶಕಗಳ ಕಾಲ ಸೇವೆ ಮಾಡಿದ್ದು, ಸಮಾಜದಲ್ಲಿ ಹಲವು ಬದಲಾವಣೆ ತರಲು ಪ್ರಯತ್ನಿಸಿದವರು ಅವರು. ಸರಕಾರದ ತಪ್ಪುಗಳನ್ನು ಎತ್ತಿಹಿಡಿದು ಪತ್ರಿಕಾರಂಗದ ಗೌರವ ಎತ್ತಿ ಹಿಡಿದವರು. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಉತ್ತಮ ಕೆಲಸ ಮಾಡಲಿ” ಎಂದು ನವೀನ್ ಹಾರೈಸಿದರು.
ಕಾರ್ಯಕ್ರಮದಲ್ಲಿ ಪರಿಸರ ವೇದಿಕೆಯ ವಿ.ಶ್ರೀರಾಮಪ್ಪ ಮಾತನಾಡಿ, ಸಿಕೆನ್ಯೂಸ್ ನೌ ವೆಬ್ʼತಾಣದಲ್ಲಿ ಮೂಡಿಬರುತ್ತಿರುವ ಎಲ್ಲಾ ವರದಿಗಳು ಮನನ ಮಾಡುತ್ತಿದ್ದೇನೆ. ತಾಲೂಕಿನಲ್ಲಿ ಹಲವು ವರದಿಗಳ ಮೂಲಕ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ಇದು ಹೀಗೆ ಮುಂದುವರಿಸುತ್ತಾ ಸಿಕೆನ್ಯೂಸ್ ನೌ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಪ್ರಾರ್ಥಿಸುವೆ” ಎಂದರು.
ಈ ಸಂದರ್ಭದಲ್ಲಿ ಪರಿಸರ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಜಿ.ಎಸ್.ಭರತ್, ಭಜರಂಗದಳದ ತಾಲೂಕು ಸಂಚಾಲಕ ಜಿ.ಎ.ಅಮರೇಶ್, ಪತ್ರಕರ್ತರಾದ ರಾಜೇಶ್, ಅರಣ್ಯ ಇಲಾಖೆಯ ವಾಚರ್ ರಾಜೇಶ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.