• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಪ್ರಥಮ ವಿಶ್ವ ಮಹಾಯುದ್ಧದಲ್ಲಿ ಕನ್ನಡಿಗರ ಪರಾಕ್ರಮ

cknewsnow desk by cknewsnow desk
September 23, 2021
in GUEST COLUMN
Reading Time: 2 mins read
0
ಪ್ರಥಮ ವಿಶ್ವ ಮಹಾಯುದ್ಧದಲ್ಲಿ ಕನ್ನಡಿಗರ ಪರಾಕ್ರಮ

1918ರಲ್ಲಿ 'ಹೈಫಾ' ನಗರದಲ್ಲಿ ಗೆಲುವಿನ ಪರೇಡ್‌ ನಡೆಸಿದ ಭಾರತೀಯ ಪಡೆಗಳು.

970
VIEWS
FacebookTwitterWhatsuplinkedinEmail

ಪರಕೀಯ ನೆಲದಲ್ಲಿ ಭಾರತೀಯ ಯೋಧರ ವಿರೋಚಿತ ಹೋರಾಟದ ಕಥನ

ಮೊದಲನೇ ವಿಶ್ವ ಮಹಾ ಯುದ್ಧದಲ್ಲಿ ಇಸ್ರೇಲಿನ ಹೈಫಾ ನಗರಕ್ಕಾಗಿ ನಡೆದ ರೋಚಕ ಕದನವು ಭಾರತದ ಶೌರ್ಯವನ್ನು ಜಗತ್ತಿಗೆ ಪರಿಚಯಿಸಿದ ಮಹೋನ್ನತ ಘಟನೆಗಳಲ್ಲಿ ಒಂದು. ಟರ್ಕಿ ಸೇನೆಯನ್ನು ಮಣ್ಣುಮುಕ್ಕಿಸಿದ ಭಾರತೀಯ ಯೋಧರ ವಿರೋಚಿತ ಹೋರಾಟ ಏನು? ಎತ್ತ? ಎಂಬುದರ ಬಗ್ಗೆ ನಮ್ಮ ಅಂಕಣಕಾರ ಡಾ.ಗುರುಪ್ರಸಾದ್‌ ಹವಲ್ದಾರ್‌ ಇಲ್ಲಿ ಚಿತ್ರಿಸಿದ್ದಾರೆ.

ಮೊದಲ ವಿಶ್ವ ಮಹಾಯುದ್ಧದ ನಡೆದು ಇಂದಿಗೆ ನೂರಾರು ವರ್ಷ ಸಂದಿವೆ. ಭಾರತೀಯರು ತಮ್ಮದಲ್ಲದ ಯುದ್ದದಲ್ಲಿ ಭಾಗವಹಿಸಬೇಕಾದ ಸಂದರ್ಭ ಒದಗಿಬಂದಾಗ ಹಿಂಜರಿಯದೇ ಹೋರಾಡಿ ದಿಗ್ವಿಜಯ ಸಾಧಿಸಿದವರು.

ಇಸ್ರೇಲ್ ಹೈಫಾ ನಗರವನ್ನು ಶತ್ರುಗಳಿಂದ ಗೆದ್ದುಕೊಟ್ಟು ಇಸ್ರೇಲ್ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆದು ಇಂದಿಗೂ ಭಾರತೀಯರಂದರೆ ಅಭಿಮಾನಪಡುವಂತೆ, ಎಂತಹ ಸಂದಿಗ್ಧತೆಯ ಸ್ಥಿತಿಯಲ್ಲಿಯೂ ನಮ್ಮ ಪರವಾಗಿ ನಿಲ್ಲುವಂತೆ ಮಾಡಿದ ಕೀರ್ತಿ ನಮ್ಮ ಯೋಧರದು. ಅದರಲ್ಲಿ ನಮ್ಮ ಮೈಸೂರಿನ ಸಂಸ್ಥಾನದ ವೀರಯೋಧರು ಭಾಗವಹಿಸಿದ್ದು ವಿಶೇಷ.
ತಮ್ಮ ತ್ಯಾಗ ಬಲಿದಾನದ ಮೂಲಕ ಇಸ್ರೇಲ್’ನ ಸ್ವತಂತ್ರಕ್ಕೆ ಮುನ್ನುಡಿ ಬರೆದರು ನಮ್ಮ ಯೋಧರು.

ಒಟ್ಟೋಮನ್ ಟರ್ಕಿಯು ಈಗಿನ ಇಸ್ರೇಲ್ʼನ ಹೈಫಾ ಸೇರಿದಂತೆ ಬಹುಭಾಗ ಆಕ್ರಮಿಸಿಕೊಂಡು 400 ವರ್ಷಗಳಿಂದ ಆಡಳಿತ ನಡೆಸುತಿತ್ತು. ಇಸ್ರೇಲಿಗರು ಜಗತ್ತಿನಾದ್ಯಂತ ಹರಿದು ಹಂಚಿ ಹೋಗಿದ್ದರು. ತಮ್ಮದೇ ಆದ ರಾಜ್ಯ ಅಥವಾ ರಾಷ್ಟ್ರ ಇರಲಿಲ್ಲ. ಮೊದಲ ಮಹಾಯುದ್ಧದ ಸಂದರ್ಭಗಳಲ್ಲಿ ಇಸ್ರೇಲಿಗರಿಗೆ ಬ್ರಿಟಿಷರು ನೀಡಿದ್ದ ಆಶ್ವಾಸನೆಯಂತೆ 1918ರ ಸೆಪ್ಟೆಂಬರ್‌ 22 ಮತ್ತು 23ನೇ ದಿನ ಒಟ್ಟೋಮನ್ ಟರ್ಕರ ಪ್ಯಾಲೆಸ್ತೀನ್‍ನ ಭಾಗವಾಗಿದ್ದ ಹೈಫಾ ನಗರವನ್ನು ಬಿಡುಗಡೆಗೊಳಿಸಿ ಇಸ್ರೇಲಿಗರಿಗೆ ಒಪ್ಪಿಸಿದರು.

ಹೈಫಾ ನಗರವು ಒಟ್ಟೋಮನ್ ಟರ್ಕಿ ಆಳ್ವಿಕೆಯಿಂದ ಬಿಡುಗಡೆಗೊಂಡ ನಂತರ ತಮ್ಮ ತಾಯ್ನಾಡಿಗಾಗಿ ‘ಜಿಯಾನಿಸಂ’ ಆಂದೋಲನ ನಡೆಸುತ್ತಿದ್ದ ಯಹೂದಿಗಳಲ್ಲಿ ಹೊಸ ವಿಶ್ವಾಸ ಮತ್ತು ಉತ್ಸಾಹ ಮೂಡಿತು. ಭೂಪಟದಾದ್ಯಂತ ಚದುರಿದ್ದ ಯಹೂದಿ ಜನಾಂಗವು ನಿಧಾನವಾಗಿ ತಮ್ಮ ದೇಶಕ್ಕೆ ಮರಳಲು ಆರಂಭಿಸಿದರು.

ಭಾರತದಲ್ಲಿ ಮುಂಬಯಿ, ಪುಣೆ, ಥಾಣೆ ನಗರಗಳಲ್ಲಿ ವಾಸವಿದ್ದ ಯಹೂದಿಗಳನೇಕರು ತಮ್ಮ ದೇಶಕ್ಕೆ ಹೊರಟರು. ಮಧ್ಯಪ್ರಾಚ್ಯದ ರಾಜಕೀಯದ ಚಿತ್ರಣ ಬದಲಾಯ್ತು. ಅತ್ತ ಜರ್ಮನಿ ಸೋತು ಯುರೋಪ್‍ನ ಸಮೀಕರಣ ಬದಲಾದರೆ, ಇತ್ತ ಅಮೆರಿಕ ಹೊಸ ಶಕ್ತಿಯಾಗಿ ಉದಯಿಸಿ ವಲಸೆ ಬಂದ ಯಹೂದಿಗಳನ್ನು ತನ್ನವರನ್ನಾಗಿಸಿಕೊಂಡಿತು.

ಬ್ರಿಟಿಷರಿಗೆ ಹೈಫಾವನ್ನು ಬಿಡುಗಡೆಗೊಳಿಸಲು ಅವರದ್ದೇ ಆದ ಇನ್ನೊಂದು ಕಾರಣವಿತ್ತು. ಮಧ್ಯಪ್ರಾಚ್ಯದ ಮೇಲೆ ಪ್ರಭುತ್ವ ಸಾಧಿಸಲು ಅವರಿಗೆ ನೆಲೆ ನಿಂತು, ರಾಜಕೀಯ ಮಾಡಲು ಕೇಂದ್ರವಲ್ಲದಿದ್ದರೂ ಆಯಕಟ್ಟಿನ ಜಾಗದ ಅವಶ್ಯಕತೆಯಿತ್ತು. ಹಾಗೆ ಅವರ ಕಣ್ಣಿಗೆ ಬಿದ್ದಿದ್ದು ಇಸ್ರೇಲ್‍ನ ಬಂದರು ನಗರ ಹೈಫಾ. ಹೈಫಾ ನಗರವು ಸರಕು ಸರಂಜಾಮು, ಆಯುಧಗಳು, ಸೈನಿಕರ ಚಲನೆಗೆ ಅನುಕೂಲಕರವಾಗಿದ್ದ ಆಯಕಟ್ಟಿನ ಜಾಗವಾಗಿತ್ತು ಅದಕ್ಕಾಗಿ 1917ರಲ್ಲಿ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಆರ್ಥರ್ ಬಾಲ್‌ಫೋರ್‌ ತನ್ನ ಘೋಷಣಾ ಪತ್ರದಲ್ಲಿ ಪ್ಯಾಲೆಸ್ತೀನ್‍ನಲ್ಲಿ ಯಹೂದಿಗಳಿಗಾಗಿ ಒಂದು ರಾಜ್ಯ ಸ್ಥಾಪನೆ ಮಾಡಲು ಅರಸೊತ್ತಿಗೆಯು ಸಮ್ಮತಿಸಿದೆ ಎಂದು ಉಲ್ಲೇಖಿಸಿದ್ದ. ಈ ರೀತಿ ಬ್ರಿಟಿಷ್‍ರು ಯಹೂದಿಗಳ ಪರ ವಹಿಸಿದರು. ಮೊತ್ತೊಂದು ಪ್ರಮುಖ ಅಂಶವೆಂದರೆ, ಮೊದಲ ವಿಶ್ವ ಯುದ್ಧದಲ್ಲಿ ಬ್ರಿಟಿಷರ ಬತ್ತಳಿಕೆಗೆ ಸೇರ್ಪಡೆಗೊಂಡ ಶಕ್ತಿಶಾಲಿ ಅಸ್ತ್ರTNTಯನ್ನು ಕಂಡು ಹಿಡಿದ ರಸಾಯನಶಾಸ್ತ್ರಜ್ಞ ಕೆಮ್ ಮೆಜ್‍ಮನ್ ಓರ್ವ ಯಹೂದಿ. ಮುಂದೆ ಮೆಜ್‍ಮನ್ ಸ್ವತಂತ್ರ ಇಸ್ರೇಲ್‍ನ ಮೊದಲನೇ ರಾಷ್ಟ್ರಾಧ್ಯಕ್ಷನಾದ.

  • ಇಂದಿನ ಹೈಫಾ ನಗರದ ಒಂದು ನೋಟ.

ಹೈಫಾ ನಗರ ಮುತ್ತಿಗೆ

ಸೆಪ್ಟಂಬರ್ 22ರಂದು ಬ್ರಿಟಿಷ್ ಸೇನೆಯು ಟರ್ಕಿ, ಆಸ್ಟ್ರೀಯಾ ಮತ್ತು ಹಂಗೇರಿಯ ಸಂಯುಕ್ತ ಸೇನೆಯನ್ನು ಯುದ್ಧದಲ್ಲಿ ಎದುರುಗೊಂಡು ಹಿನ್ನಡೆ ಅನುಭವಿಸಿತ್ತು. ಸುರಕ್ಷಿತ ನೆಲೆಯಲ್ಲಿ ನಿಂತು ಕಾದಾಡುತ್ತಿದ್ದ ಸಂಯುಕ್ತ ಸೇನೆಯನ್ನು ಎದುರಿಸಲು ಬಯಲು ಮೈದಾನದಲ್ಲಿ ಅಸುರಕ್ಷಿತ ವ್ಯೂಹ ರಚಿಸುವುದು ಅವಿವೇಕ ಮತ್ತು ಅವ್ಯವಹಾರಿಕ ಎಂದು ನಿರ್ಧರಿಸಿ ಬ್ರಿಟಿಷ್ ಸೇನೆಯು ಹಿಂದೆ ಸರಿಯಲು ಮುಂದಾದಾಗ ಜೋಧ್‌ಪುರ, ಮೈಸೂರು ಮತ್ತು ಹೈದರಾಬಾದ್ ಸೇನೆಯ ಸೇನಾಧಿಪತ್ಯದ ಹೊಣೆ ಹೊತ್ತ ಮೇಜರ್‌ ದಳಪತ್ ಸಿಂಗ್ ಶೇಖಾವತ್, “ನಾವು ಕ್ಷತ್ರಿಯರು, ಕೇವಲ ಸಂಬಳಕ್ಕಾಗಿ ಹೋರಾಡುವ ಸೇವಕರಲ್ಲ. ಯುದ್ಧದಲ್ಲಿ ಫಲಿತಾಂಶ ಸಿಗದೆ ವಾಪಸ್ ಹೋಗುವುದಿಲ್ಲ. ಯುದ್ಧವನ್ನು ಮುಂದುವರಿಸಲು ಅನುಮತಿ ನೀಡಿ” ಎಂದು ಬ್ರಿಟಿಷರಿಗೆ ಅನುಮತಿ ಪತ್ರಕ್ಕಾಗಿ ಒತ್ತಾಯಿಸಿದರು. ನಂತರ ಒಪ್ಪಿಗೆ ಪಡೆದು ಸೆಪ್ಟಂಬರ್ 22ರ ನಡುರಾತ್ರಿ ಮತ್ತೆ ಯುದ್ಧಕ್ಕೆ ಅಣಿಯಾದರು.

ಕಾರ್ಮೆಲ್ ಪರ್ವತದ ಮೇಲೆ ಸಜ್ಜಾಗಿದ್ದ ಜರ್ಮನಿ ಮತ್ತು ಆಸ್ಟ್ರಿಯಾದ ಸೇನೆಯನ್ನು ಅಲ್ಲಿಯೇ ಸದೆಬಡಿಯುವ ತಂತ್ರದೊಂದಿಗೆ ಮೈಸೂರಿನ 15ನೇ ಇಂಪೀರಿಯಲ್ ಸರ್ವೀಸ್ ತುಕಡಿಯು ಪರ್ವತವನ್ನೇರಿದರೆ, ಪರ್ವತದ ಕೆಳಗೆ ತೆರೆದ ಮೈದಾನದಲ್ಲಿ ನಿಂತಿದ್ದ ಟರ್ಕಿ ಸೇನೆಯನ್ನು ನಸುಕಿನಲ್ಲಿ ಮಣಿಸಲು ಜೋಧ್‌ಪುರದ ಸೇನೆ ಖಡ್ಗ ಹಿಡಿದು ನಿಂತಿತು. ಯುದ್ಧ ಕೈದಿಗಳಾಗಿ ಸೆರೆಸಿಕ್ಕವರನ್ನು ನಿಭಾಯಿಸುವ ಹೊಣೆಯನ್ನು ಹೈದರಾಬಾದ್ ಸೈನಿಕರದಾಗಿತ್ತು.

ಭಾರತದಿಂದ ಮಹಾಯುದ್ಧದಲ್ಲಿ ಭಾಗಿಯಾಗಿದ್ದ ಸೈನಿಕರಿಗೆ ರಣರಂಗದ ಕಷ್ಟಗಳು ಮೊದಲೇ ತಿಳಿದಿತ್ತು. ಅಪರಿಚಿತ ಪ್ರದೇಶ, ಗೆಲುವು ಅನಿಶ್ಚಿತ, ಆಯುಧಗಳ ಕೊರತೆಯಾದರೆ ತಕ್ಷಣವೇ ಅದನ್ನು ಪೂರೈಸಬಲ್ಲ ಸೇನಾ ನೆಲೆಗಳಿಲ್ಲ. ಸೈನಿಕರ ಕೊರತೆಯಾದರೂ ಕೂಡಲೇ ಅದನ್ನು ತುಂಬಿಸುವ ವ್ಯವಸ್ಥೆಯಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ತಾವು ಯಾರಿಗಾಗಿ ಯುದ್ಧ ಮಾಡುತ್ತಿದ್ದಾರೋ ಅಂತಹ ಬ್ರಿಟಿಷರನ್ನೇ ಪೂರ್ಣ ನಂಬುವಂತಿಲ್ಲ.

ಕುದುರೆಗಳಿಗೆ ಆಹಾರ, ಗಾಯಗೊಂಡಲ್ಲಿ ಚಿಕಿತ್ಸೆಯ ವ್ಯವಸ್ಥೆಯಾಗಬೇಕಿತ್ತು. ಇಂತಹ ಸಂದರ್ಭಗಳಲ್ಲಿ ಕಾರ್ಮೆಲ್ ಪರ್ವತವೋ- ಅದು ಮಳೆಯಿಂದ ತೇವಗೊಂಡಿದ್ದ ಜೌಗು ನೆಲ, ಕಡಿದಾದ ಹಾದಿ, ಆಳವಾದ ಕಣಿವೆ, ದಟ್ಟಕತ್ತಲು, ಶತ್ರುವಿನ ನಿಖರವಾದ ನೆಲೆ ತಿಳಿದಿಲ್ಲ. ಈ ಎಲ್ಲ ಅನನುಕೂಲಗಳನ್ನು ಮೀರಿ ಮೈಸೂರಿನ ಸೇನೆ ಪರ್ವತವನ್ನೇರಿ ವೈರಿಗಳನ್ನು ಕೆಳಗಿಳಿಯದಂತೆ ಬಂಧಿಸಿದರು.

ಜೋಧ್‌ಪುರದ ಮೇಜರ್ ದಳಪತ್ ಸಿಂಗ್ ಶೇಖಾವತ್ ಈ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದರು. ತಮ್ಮ ನಾಯಕನ ಮರಣದಿಂದ ಕಂಗೆಡದೆ ಅದರ ಸೇಡನ್ನು ತೀರಿಸಲು ಇಮ್ಮಡಿ ಉತ್ಸಾಹದಿಂದ ಸೈನಿಕರು ಕಾದಾಡಿದರು. ಕಾರ್ಮೆಲ್ ಪರ್ವತದಲ್ಲಿದ್ದ ಶತ್ರು ಸೈನಿಕರಿಗೆ ನಸುಕಿನ ಆಕ್ರಮಣವು ಅಚ್ಚರಿ ಮತ್ತು ಆಘಾತವನ್ನುಂಟುಮಾಡಿತು. ಅದರಿಂದ ಸಾವರಿಸಿಕೊಂಡು ಪ್ರತ್ಯುತ್ತರ ನೀಡುವುದರೊಳಗೆ ಮೈಸೂರಿನ ಸೈನಿಕರು ಮೇಲುಗೈ ಸಾಧಿಸಿಯಾಗಿತ್ತು. ಅದರ ಸಂದೇಶ ರವಾನೆಯಾಗುತ್ತಲೇ ಮೈದಾನದಲ್ಲಿ ಸಿದ್ಧವಾಗಿದ್ದ ಜೋ‌‌ಧ್‌ಪುರದ ಸೇನೆ ಟರ್ಕಿ ಸೈನಿಕರನ್ನು ಆಕ್ರಮಿಸಿಕೊಂಡಿತು. ನಸುಕಿನ ಆಕ್ರಮಣವು ಟರ್ಕಿ ಸೇನೆಯ ಕಲ್ಪನೆಗೆ ನಿಲುಕದ್ದಾಗಿತ್ತು.

ಸೂರ್ಯೋದಯಕ್ಕೆ ಮುನ್ನ ಆರಂಭವಾದ ಯುದ್ಧವು ಮಧ್ಯಾಹ್ನ 3 ಗಂಟೆಗೆ ಭಾರತೀಯ ಸೈನಿಕರ ಗೆಲುವಿನೊಂದಿಗೆ ಮುಕ್ತಾಯಗೊಂಡಿತು. ಟರ್ಕಿ ಸಾಮ್ರಾಜ್ಯದ 400 ವರ್ಷಗಳ ಆಳ್ವಿಕೆಯು 15 ಗಂಟೆಗಳ ಅವಧಿಯಲ್ಲಿ ಅಂತ್ಯವಾಯಿತು, 500ಕ್ಕೂ ಹೆಚ್ಚು ಯೋಧರು ಹುತಾತ್ಮರಾದರು.

ಮೈಸೂರು, ಜೋಧ್‌ಪುರ ಮತ್ತು ಹೈದರಾಬಾದ್‍ನ ಸೇನೆಯು ಅಶ್ವದಳದಿಂದ ಕೂಡಿತ್ತು. ಸೈನಿಕರ ಕೈಯಲ್ಲಿ ಪಾರಂಪರಿಕ ಆಯುಧಗಳಾದ ಈಟಿ ಮತ್ತು ಭರ್ಜಿ ಮಾತ್ರವೇ ಇತ್ತು. ಆದರೆ, ಎದುರಾಳಿ ಸೈನ್ಯವು ಆಧುನಿಕ ಫಿರಂಗಿ ತೋಪು ಮತ್ತು ಮಶಿನ್‍ಗನ್‍ಗಳಿಂದ ಕೂಡಿತ್ತು. ಆ ದಿನಗಳಲ್ಲಿ ಮೈಸೂರಿನ ಅರಸರ ಬಳಿ ಎರಡು ರೀತಿಯ ಸೇನಾ ತುಕಡಿಗಳಿದ್ದವು. ಮೈಸೂರು ಇಂಪೀರಿಯಲ್ ಸರ್ವೀಸ್ ಲ್ಯಾನ್ಸರ್ಸ್ (ಈಟಿ ರಾವುತರ ಪಡೆ) ಮತ್ತು ಮೈಸೂರು ಇಂಪೀರಿಯಲ್ ಸರ್ವೀಸ್ ಟ್ರಾನ್ಸ್‍ಪೋರ್ಟ್ ಕೋರ್ (ಇದರಲ್ಲಿ ಎತ್ತಿನಗಾಡಿಗಳು, ಕುದುರೆ ಗಾಡಿಗಳು, ತರಬೇತಿ ಪಡೆದ ಕುದುರೆಗಳು, ಹೇಸರ ಕತ್ತೆಗಳು ಮತ್ತು ಆಂಬುಲೆನ್ಸ್ ಗಾಡಿಗಳು ಇದ್ದವು) ಇದಲ್ಲದೆ ಮೈಸೂರು ಸಂಸ್ಥಾನವು ಭಾರತದ ಯುದ್ಧ ನಿಧಿಗೆ 50 ಲಕ್ಷ ರೂಪಾಯಿ ನೀಡಿತ್ತು. ಹೈಫಾ ಯುದ್ಧದಲ್ಲಿ ಮೈಸೂರು ಪಡೆಯ ನೇತೃತ್ವ ವಹಿಸಿದವರು ಕರ್ನಲ್ ದೇಶರಾಜ ಅರಸ್, ಕರ್ನಲ್ ಲಿಂಗರಾಜ ಅರಸ್ ಮತ್ತು ಕರ್ನಲ್ ಚಾಮರಾಜ ಅರಸ್. ಹೀಗೆ ಈಟಿ ರಾವುತರ ಅಶ್ವದಳವು ಆಧುನಿಕ ಮಶಿನ್‍ಗನ್‍ಗಳನ್ನು ಎದುರಿಸಿ ಜಯ ಸಾಧಿಸಿದ್ದು ಜಗತ್ತಿನ ಚರಿತ್ರೆಯಲ್ಲಿ ಗೆಲುವು ಇದೇ ಇರಬೇಕು.

ಯುದ್ಧದ ನಂತರ ಮೇಜರ್ ದಳಪತಿ ಸಿಂಗ್ ಶೇಖಾವತ್‍ರಿಗೆ ಬ್ರಿಟಿಷ್ ಸರ್ಕಾರವು (ಮರಣೋತ್ತರ) ‘ಹೀರೋ ಆಫ್ ಹೈಫಾ’ ಎಂಬ ಬಿರುದು ನೀಡಿ ಗೌರವಿಸಿತು. History of British Cavalry (ಬ್ರಿಟಿಷ್ ಅಶ್ವದಳ ಇತಿಹಾಸ) ಗ್ರಂಥದಲ್ಲಿ Marquess of Angleseyಯು ಹೈಫಾ ಯುದ್ಧದ ವರ್ಣನೆಯನ್ನು ಮಾಡಿದ್ದಾನೆ. Military Operation of Egypt and Palestine (Vol 2) ಪುಸ್ತಕದಲ್ಲೂ ಹೈಫಾ ಯುದ್ಧದ ಮಾಹಿತಿಯಿದೆ.

ಇಂದಿಗೂ ಪ್ರತಿ ವರ್ಷವೂ ಹೈಫಾ ನಗರ ಬಿಡುಗಡೆಯಾದ ಈ ದಿನವನ್ನು ‘ಹೈಫಾ ಡೇ’ ಆಚರಿಸುತ್ತಾರೆ. ಅಲ್ಲಿನ ಶಾಲಾ ಪಠ್ಯಪುಸ್ತಕಗಳಲ್ಲಿ ಈ ಯುದ್ಧದ ಉಲ್ಲೇಖವಿದೆ. ಆ ಯುದ್ಧದಲ್ಲಿ ತಮ್ಮ ದೇಶಕ್ಕಾಗಿ ಪ್ರಾಣ ನೀಡಿದ ಸೈನಿಕರ ಸ್ಮರಣಾರ್ಥ ಇಸ್ರೇಲ್ ಸರಕಾರ ಹೈಫಾ ಸ್ಮಾರಕ ನಿರ್ಮಿಸಿದೆ. ಅದೇ ರೀತಿ ಭಾರತ ದಿಲ್ಲಿಯ ತೀನ್‍ಮೂರ್ತಿ ಚೌಕವು ಹೈಫಾ ಸ್ಮಾರಕವೇ ಆಗಿದೆ. ಅದಕ್ಕೆ ಈಗ ತೀನ್‍ಮೂರ್ತಿ ಹೈಫಾ ಚೌಕ ಎಂದು ಮರುನಾಮಕರಣ ಮಾಡಲಾಗಿದೆ. ಜೋ‌ಧ್‌ಪುರದಲ್ಲಿ ತಮ್ಮ ನೆಲದ ಹೆಮ್ಮೆಯ ಪುತ್ರ ದಳಪತ್ ಸಿಂಗ್‍ರ ನೆನಪಿನಲ್ಲಿ ದಳಪತ್ ಮೆಮೋರಿಯಲ್ ನಿರ್ಮಾಣವಾಗಿದೆ. ಬೆಂಗಳೂರಿನ ದೂರದರ್ಶನ ಕೇಂದ್ರ ಕಚೇರಿಯ ಬಳಿ ಇರುವ ಕಲ್ಲುಕಂಬವು ಹೈಫಾ ಸ್ಮಾರಕವೇ ಆಗಿದೆ.

ಇಂದಿಗೂ ಇಸ್ರೇಲಿಗರಿಗೆ ಭಾರತೀಯರಂದರೆ ಪ್ರೀತಿ ಗೌರವ, ನಮ್ಮವರ ಸಾಹಸ ಇಸ್ರೇಲ್ʼನಂತಹ ದೇಶದ ಸ್ವಾತಂತ್ರಕ್ಕಾಗಿ ನಾಂದಿ ಹಾಡಿದ್ದು ವಿಶೇಷವಾಗಿದೆ.


ಡಾ.ಗುರುಪ್ರಸಾದ ಹವಲ್ದಾರ್

  • ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.
Tags: cknewsnowguest columnHaifaHaifa warIndian troopsisraelnewssecond world war
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

by cknewsnow desk
January 27, 2024
0

"ಒಬ್ಬರ ಜನನವು ಅವರ ಹಣೆಬರಹವನ್ನು ನಿಶ್ಚಯಿಸುವುದಿಲ್ಲ" ಎಂದ ಜನ ನಾಯಕ; ಅಪ್ಪಟ ಭಾರತರತ್ನ, ಮೀಸಲು ಕೊಟ್ಟು ಬದುಕು ಕಟ್ಟಿಕೊಟ್ಟ ಭಾರತದ ಭಾಗ್ಯವಿದಾತ

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

by cknewsnow desk
January 21, 2024
0

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ಶ್ರೀರಾಮಪ್ರಭುವೇ ಕ್ಷಮಿಸು! ನಿನ್ನ ಹೆಸರಿಟ್ಟುಕೊಂಡವರೆಲ್ಲ ನಿನ್ನವರಲ್ಲ!!

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಮಂದಿರಕ್ಕೆ ಅಂಕುರಾರ್ಪಣೆ ಆಗಿದ್ದು ಹೇಗೆ?

by cknewsnow desk
January 19, 2024
0

ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

by cknewsnow desk
December 28, 2023
0

ನಿಜದ ಜಾಡು ಹಿಡಿದು ಹೊರಟ ನಿಡುಮಾಮಿಡಿ ಶ್ರೀಗಳ ಹೋರಾಟಕ್ಕೆ 33 ವರ್ಷ

ಅಖಂಡ ಭಾರತದ ಅಷ್ಟದಿಕ್ಕುಗಳ ಆಮೂಲಾಗ್ರ ಅಭಿವೃದ್ಧಿಗೆ ಸುವರ್ಣ ಅಧ್ಯಾಯ ಬರೆದವರೇ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ

ಅಟಲ್ ಎಂದರೆ ಅಜಾತಶತ್ರು

by cknewsnow desk
December 25, 2023
0

ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ, ಉತ್ತಮ ಆಡಳಿತ ದಿನ by Dr.Gurupeasad Hawaldar ಜಾಗತಿಕ ಮಟ್ಟದ ಶ್ರೇಷ್ಠ ನಾಯಕರ ಸಾಲಿನಲ್ಲಿ ಗೌರವಿಸಲ್ಪಡುವ  ನಿಸ್ವಾರ್ಥ ರಾಜಕಾರಣಿ,...

ಶಿಕ್ಷಣ, ಶಿಕ್ಷಕ ಮತ್ತು ಬದಲಾವಣೆ; ನೂತನ ಶಿಕ್ಷಣ ನೀತಿಯ ಹೊತ್ತಿನಲ್ಲಿ ಓಶೋ ಜೋಶ್..

ಓಶೋ: ಬೆರಗು, ಬೆಡಗು ಮತ್ತು ವಿಸ್ಮಯ

by cknewsnow desk
December 11, 2023
0

ಇಂದು ಓಶೋ ಜನ್ಮದಿನ

Next Post
ತಾತ ಆದ ಸಂಭ್ರಮದಲ್ಲಿ ಮಾಜಿ ಸಿಎಂ ಹೆಚ್‌ಡಿಕೆ

ತಾತ ಆದ ಸಂಭ್ರಮದಲ್ಲಿ ಮಾಜಿ ಸಿಎಂ ಹೆಚ್‌ಡಿಕೆ

Leave a Reply Cancel reply

Your email address will not be published. Required fields are marked *

Recommended

ನವೆಂಬರ್ 16ರಿಂದ ಶಬರಿಮಲೆ ಮಂಡಲೋತ್ಸವ; ಕೋವಿಡ್ ನೆಗೆಟೀವ್ ಪತ್ರ ಇದ್ದರೆ ಮಾತ್ರ ಅಯ್ಯಪ್ಪ ದರ್ಶನ

ಈ ವರ್ಷ ಶಬರಿಮಲೆಗೆ ಹೊರಟಿದ್ದೀರಾ..? ಹಾಗಾದರೆ, ಈ ಸುದ್ದಿ ಓದಿ

3 years ago
ರಥಸಪ್ತಮಿ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ಸೂರ್ಯ ನಮಸ್ಕಾರ, ಯೋಗ ಕಾರ್ಯಕ್ರಮ

ರಥಸಪ್ತಮಿ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ಸೂರ್ಯ ನಮಸ್ಕಾರ, ಯೋಗ ಕಾರ್ಯಕ್ರಮ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ