ಶುದ್ಧ ಜಲಕ್ಕಾಗಿ ಜಲಚರಗಳನ್ನು ಸಂರಕ್ಷಿಸುವ ಯೋಜನೆಯಡಿ ವಿವಿಧ ಕಾರ್ಯಕ್ರಮಗಳ ಆಯೋಜನೆ
By GS Bharath Gudibande
ಗುಡಿಬಂಡೆ : ಜಿಲ್ಲೆಯಾದ್ಯಂತ 67ನೇ ವನ್ಯಜೀವಿ ಸಪ್ತಾಹ ಆಚರಣೆ ಅಂಗವಾಗಿ ಅರಣ್ಯ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೋಮವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿ ತಾಲೂಕು ಪ್ರಾದೇಶಿಕ ಅರಣ್ಯ ಇಲಾಖೆ 67ನೇ ಸಪ್ತಾಹ ಕಾರ್ಯಕ್ರವನ್ನು ಶುದ್ಧ ಜಲಕ್ಕಾಗಿ ಜಲಚರಗಳನ್ನು ಸಂರಕ್ಷಿಸೋಣ ಅಭಿಯಾನದಡಿ ಶಾಲಾ ಮಕ್ಕಳು ಜಾಥಾ ಮಾಡುವ ಮೂಲಕ ಅರಿವು ಮೂಡಿಸಿದರು.
ವಿವಿಧ ಕಾರ್ಯಕ್ರಮಗಳ ವಿವರ
ವನ್ಯಜೀವಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ 7 ದಿನಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ,
1) ದಿನಾಂಕ 4-7-2021 ರಂದು ಸರಕಾರಿ ಬಾಲಕರ ಹಾಗೂ ಬಾಲಕಿಯರ ಪ್ರೌಡಶಾಲೆ ಸಹಕಾರದಲ್ಲಿ ಸಂಪದ್ಭರಿತ ಅರಣ್ಯ & ವನ್ಯಜೀವಿಗಳ ಸಂರಕ್ಷಣೆ ಕುರಿತು ಜಾಥ ಬೆಳಗ್ಗೆ 10.30ಕ್ಕೆ ಚಾಲನೆ.
2) ಸರಕಾರಿ ಬಾಲಕರ ಮತ್ತು ಬಾಲಕಿಯರ ಪ್ರೌಡಶಾಲೆ ಹಾಗೂ ಅರವಿಂದ ಪ್ರೌಡಶಾಲೆ ಗುಡಿಬಂಡೆ ಸಹಕಾರದಲ್ಲಿ ಚಿತ್ರಕಲಾ ಸ್ಪರ್ಧೆ, ಪ್ರಬಂಧ, ರಸ ಪ್ರಶ್ನೆ ಕಾರ್ಯಕ್ರಮಗಳನ್ನು ತಾಲೂಕು ಹಂತದಲ್ಲಿ ಹಮ್ಮಿಕೊಳ್ಳಲಾಗಿದೆ.
3)ತಾಲೂಕಿನ ಸರಕಾರಿ ಪ್ರೌಡಶಾಲೆ ಎಲ್ಲೋಡು ಸಹಕಾರದಲ್ಲಿ “ಪ್ರಕೃತಿ ನಡೆಗೆ” ಶ್ರೀ ಆದಿನಾರಾಯಣಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕಾರ್ಯಕ್ರಮ ಬೆಳಗ್ಗೆ 7-30 ಕ್ಕೆ ಚಾಲನೆ.
4)ಸರಕಾರಿ ಬಾಲಕರ ಮತ್ತು ಬಾಲಕಿಯರ ಪ್ರೌಡಶಾಲೆ ಸಹಕಾರದಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಕುರಿತು ಚಲನ ಚಿತ್ರ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಕೆನ್ಯೂಸ್ ನೌ ಗೆ ಅರಣ್ಯ ಇಲಾಖೆ ಮಾಹಿತಿ ನೀಡಿದರು.
ಕಾಡು ಉಳಿಸಿ ವನ್ಯಜೀವಿಗಳನ್ನು ರಕ್ಷಿಸಿ, ಕಾಡಿದ್ದರೆ ನಾಡು, ನಾಡಿದ್ದರೆ ನಾವು ಹಾಗಾಗಿ ವನ್ಯಜೀವಿಗಳನ್ನು ರಕ್ಷಿಸುವಲ್ಲಿ ಪ್ರತಿಯೊಬ್ಬ ಪಾತ್ರ ಬಹಳ ಮತ್ವದ್ದಾಗಿದೆ, ಶಿಕ್ಷಣದ ಜೊತೆಗೆ ಅರಣ್ಯ, ವನ್ಯಜೀವಿಗಳ ರಕ್ಷಣೆ ಬಗ್ಗೆ ಉತ್ತಮ ಪಾತ್ರ ನಿರ್ವಹಿಸಬೇಕಾಗಿದೆ ಇಂದಿನ ಮಕ್ಕಳಿಗೆ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಶ್ಲಾಘನೀಯ.
ಎನ್.ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ.
ವನ್ಯಜೀವಿಗಳ ಬಗ್ಗೆ ಪ್ರತಿಯೊಬ್ಬರು ಮಾಹಿತಿ ಪಡೆದು ಅವುಗಳನ್ನು ಉಳಿಸಿ ರಕ್ಷಿಸುವಲ್ಲಿ ಹೆಚ್ಚಿನ ಗಮನ ನೀಡಬೇಕು ಹಾಗೂ ತಾಪಮಾನ ಏರಿಕೆಯಿಂದ ಪ್ರಣಿಗಳ ಸಾವು, ಅರಣ್ಯ ನಾಶ ಮುಂತಾದ ಸಮಸ್ಯೆಗಳನ್ನು ನಿವಾರಿಸಲು ಪ್ರತಿಯೊಬ್ಬ ಪ್ರಜೆಯೂ ಸಹಕರಿಸಬೇಕು ಹಾಗಾಗಿ ಎಲ್ಲರೂ ಕೈ ಜೋಡಿಸಿ ತಮ್ಮ ಕೊಡುಗೆಯನ್ನು ನೀಡಬೇಕು.
ಹುಲುಗಪ್ಪ, ತಾಲೂಕು ವಲಯ ಅರಣ್ಯ ರಕ್ಷಕ ಗುಡಿಬಂಡೆ.