ಶಿಕ್ಷಣ ಪ್ರೇಮಿ, ಸಮಾಜಮುಖಿ ನಾಯಕನಿಗೆ ಶುಭ ಹಾರೈಕೆ
By GS Bharath Gudibande
ಗುಡಿಬಂಡೆ : ಸುಮಾರು 5 ದಶಕಗಳಿಂದ ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರ ಸೇವೆ ಮಾಡಿ, ಲಕ್ಷಾಂತರ ವಿದ್ಯಾರ್ಥಿಗಳ ಜೀವನ ರೂಪಿಸಿ ಬೆಳಸುವಲ್ಲಿ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಕೆ.ವಿ.ಪಂಚಗಿರಿ ದತ್ತಿ ಅಧ್ಯಕ್ಷ ನವೀನ್ ಕಿರಣ್ ಹುಟ್ಟುಹಬ್ಬಕ್ಕೆ ಪರಿಸರ ವೇದಿಕೆಯ ಜಿಲ್ಲಾಧ್ಯಕ್ಷ ಡಾ.ಗುಂಪುಮರದ ಆನಂದ್ ಗಿಡ ನೆಡುವ ಮೂಲಕ ಶುಭಾಶಯ ಕೋರಿದರು.
ತಾಲೂಕಿನ ವಿದ್ಯಾಗಿರಿ ಬೆಟ್ಟದ ತಪ್ಪಲಿನಲ್ಲಿ ಶಿಕ್ಷಣ ಪ್ರೇಮಿ ಹಾಗೂ ಕೆ.ವಿ, ಪಂಚಗಿರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ನವೀನ್ ಕಿರಣ್ ರವರ ಹುಟ್ಟುಹಬವನ್ನು ತಾಲೂಕು ಪರಿಸರ ವೇದಿಕೆಯಿಂದ ಗಿಡನೆಡುವ ಮೂಲಕ ಆಚರಿಸಿ ಮಾತನಾಡಿದ ಅವರು; ನವೀನ್ ಕಿರಣ್ ಅಭಿಮಾನಿಗಳು ಹುಟ್ಟುಹಬ್ಬದ ಪ್ರಯುಕ್ತ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಾದ್ಯಂತ ಗಿಡಗಳನ್ನು ಹಾಕುತ್ತಿದ್ದಾರೆ ಹಾಗೂ ಚಿಕ್ಕಬಳ್ಳಾಪುರ ನಗರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೋಡಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿ ಸಮಾಜದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಪಪಂ ಮಾಜಿ ಅಧ್ಯಕ್ಷ ದ್ವಾರಕಾನಾಥ್ ನಾಯ್ಡು ಮಾತನಾಡಿ; ಇಂದಿನ ಜಾಗತಿಕ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಅವಶ್ಯಕತೆ ಇದೆ. ಹಾಗಾಗಿ ಎಲ್ಲರಿಗೂ ಶಿಕ್ಷಣ ದೊರೆಯಬೇಕು. ಎಲ್ಲ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಮಾಡಬೇಕು ಎಂಬ ದೂರದೃಷ್ಟಿಯದ ಲಕ್ಷಾಂತರ ವಿದ್ಯಾರ್ಥಿಗಳ ಸಾಧನೆ, ಜೀವನ, ಜ್ಞಾನ ರೂಪಿಸಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನವೀನ್ ಕಿರಣ್ ರವರಿಗೆ ಗುಡಿಬಂಡೆ ತಾಲೂಕಿನ ಜನತೆಯ ಪರವಾಗಿ ಶುಭಾಶಯ ತಿಳಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ, ಪಪಂ ಮಾಜಿ ಉಪಾಧ್ಯಕ್ಷ ರಾಜಣ್ಣ, ಪತ್ರಕರ್ತ ಸಂಘದ ಅಧ್ಯಕ್ಷ ಬಿ.ಮಂಜುನಾಥ್, ಪತ್ರಕರ್ತರಾದ ರಾಜಶೇಖರ್, ಪರಮೇಶ್, ಶ್ರೀನಾಥ್, ಪಿಪಿಹೆಚ್.ಎಸ್ ಶಿಕ್ಷಕ ನರಸಿಂಹಮೂರ್ತಿ, ಪರಿಸರ ಪ್ರೇಮಿ ಮಧು, ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.