ಮತ್ತೆ ಮೆಲ್ಲಗೆ ರಾಜಾಹುಲಿಗೆ ಚುಚ್ಚಿದ ಹಳ್ಳಿಹಕ್ಕಿ
ಮೈಸೂರು: ಮಗ ಮಾಡಿದ ಭ್ರಷ್ಟಾಚಾರದ ಕಾರಣದಿಂದ ಬಿಎಸ್ ಯಡಿಯೂರಪ್ಪ ಮುಖ್ಯ ಮಂತ್ರಿ ಸ್ಥಾನದಿಂದ ಕೆಳಗೆ ಇಳಿದರು ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ಮಾಜಿ ಸಿಎಂ ಬಿಎಸ್ ವೈ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ ವಿಚಾರ ಸಂಬಂಧ ಹೆಚ್. ವಿಶ್ವನಾಥ್ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನಾನು ಹಿಂದೆ ಮಾಡಿದ ಆರೋಪಗಳು ಈ ದಾಳಿ ಮೂಲಕ ಸತ್ಯವಾಗಿದೆ. ವಿಜಯೇಂದ್ರ ಮಾಡಿದ ಮಹಾ ಭ್ರಷ್ಟಾಚಾರಕ್ಕೆ ಈ ದಾಳಿ ಇನ್ನೊಂದು ಸಾಕ್ಷಿ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿದಿದ್ದು ವಯಸ್ಸಿನ ಕಾರಣಕ್ಕೆ ಅಲ್ಲ. ಅವರ ಮಗನ ಭ್ರಷ್ಟಾಚಾರದಿಂದ ಕೆಳಗಿಳಿದರು ಎಂದು ಹೇಳಿದರು.
ಈ ದಾಳಿ ಪರೋಕ್ಷವಾಗಿ ವಿಜಯೇಂದ್ರ ಮೇಲೆ ಆದ ದಾಳಿಯಾಗಿದೆ. ತಂದೆಯ ಪೆನ್, ನಾಲಿಗೆ ಎಲ್ಲವನ್ನೂ ಕಿತ್ತುಕೊಂಡು ತಂದೆಯ ಮರ್ಯಾದೆಯನ್ನು ಕಳೆದು ಪಕ್ಷದ ಮರ್ಯಾದೆಯನ್ನೂ ಕಳೆದರು ಎಂದು ವಿಶ್ವನಾಥ್ ಹೇಳಿದರು.