• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಶಿಕ್ಷಣ ನೀತಿ ಬಗ್ಗೆ ಅಲ್ಪಸಂಖ್ಯಾತರಿಗೆ ಅನುಮಾನ ಬೇಡ

cknewsnow desk by cknewsnow desk
October 12, 2021
in STATE
Reading Time: 1 min read
0
ಶಿಕ್ಷಣ ನೀತಿ ಬಗ್ಗೆ ಅಲ್ಪಸಂಖ್ಯಾತರಿಗೆ ಅನುಮಾನ ಬೇಡ
935
VIEWS
FacebookTwitterWhatsuplinkedinEmail

ಯಾವ ಸೌಲಭ್ಯವೂ ಕಡಿತ ಆಗಲ್ಲಎಂದ ಸಚಿವ ಡಾ.ಅಶ್ವತ್ಥನಾರಾಯಣ

ಬೆಂಗಳೂರು: “ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ-2020) ಬಗ್ಗೆ ಅಲ್ಪಸಂಖ್ಯಾತ ಸಮುದಾಯದವರಿಗೆ ಯಾವುದೇ ಅನುಮಾನವಾಗಲಿ, ಆತಂಕವಾಗಲಿ ಬೇಡ. ಇದು ಯಾರ ಹಕ್ಕುಗಳನ್ನಾಗಲಿ, ಸೌಲಭ್ಯಗಳನ್ನಾಗಲಿ ಕಸಿದು ಕೊಳ್ಳುವುದಿಲ್ಲ. ಎಲ್ಲ ಸಮುದಾಯಗಳ ಮಕ್ಕಳ ಉಜ್ವಲ ಭವಿಷ್ಯವೇ ಎನ್ಇಪಿಯ ಗುರಿಯಾಗಿದೆ’’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಎನ್ಇಪಿ ಕುರಿತು ಮುಸ್ಲಿಂ ಸಮುದಾಯದ ಪ್ರತಿನಿಧಿಗಳೊಂದಿಗೆ ನಡೆದ ಸಂವಾದ ಸಭೆಯಲ್ಲಿ ಅವರು ಈ ಭರವಸೆ ನೀಡಿದರು.

ಸಭೆಯಲ್ಲಿ ಸಮುದಾಯದ ಧರ್ಮಗುರುಗಳು, ನಿವೃತ್ತ ಐಎಎಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಪ್ರಾಧ್ಯಾಪಕರು, ಎನ್.ಜಿಒ ಪ್ರತಿನಿಧಿಗಳು, ವಿದ್ಯಾರ್ಥಿ ಪ್ರತಿನಿಧಿಗಳು ಮುಂತಾದವರು ಪಾಲ್ಗೊಂಡಿದ್ದರು.

Met representatives from the minority education institutions and discussed #NEP2020 implementation.

We spoke at length various aspects of the NEP, its inclusiveness, flexibility and benefits of holistic learning it offers to students.@BJP4Karnataka pic.twitter.com/ASsYsghnyi

— Dr. C.N. Ashwath Narayan (ಮೋದಿ ಅವರ ಪರಿವಾರ) (@drashwathcn) October 12, 2021

ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾದ ಪ್ರೊ.ತಿಮ್ಮೇಗೌಡರು ಮೊದಲಿಗೆ ಅಲ್ಪಸಂಖ್ಯಾತ ಪ್ರತಿನಿಧಿಗಳಿಗೆ ಎನ್ಇಪಿ ಕುರಿತು ಸ್ಥೂಲವಾಗಿ ವಿವರಿಸಿದರು. ನಂತರ ಚಾಲನೆ ಪಡೆದ ಸಂವಾದದಲ್ಲಿ ಸಚಿವರು ಎಲ್ಲ ಪ್ರಶ್ನೆ ಮತ್ತು ಅನುಮಾನಗಳಿಗೆ ಕಿವಿಯಾಗಿ, ಸುಮಾರು ಒಂದು ಗಂಟೆ ಕಾಲ ವಸ್ತುನಿಷ್ಠ ಉತ್ತರಗಳನ್ನು ನೀಡಿದರು.

ಆರಂಭದಲ್ಲಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಸನಾವುಲ್ಲಾ, ಎನ್ಇಪಿ-2020 ನೀತಿಯು ಸಂವಿಧಾನವು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಹೇಳಿರುವ ಆಶಯಗಳಿಗೆ ವಿರುದ್ಧವಾಗಿರುವಂತಿದೆ ಎಂದು ಸಂದೇಹ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ನಿಮ್ಮ ಹಿತರಕ್ಷಣೆಗೆಂದು ಸಂವಿಧಾನದಲ್ಲಿರುವ 28, 29 ಮತ್ತು 30ನೇ ವಿಧಿಗಳು ಎಂದಿನಂತೆಯೇ ಇರಲಿವೆ. ಅವುಗಳನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ಎನ್ಇಪಿ ವಿಶೇಷವಾಗಿ, ಶಿಕ್ಷಣದಲ್ಲಿ ಹಿಂದುಳಿದಿರುವ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಜನಾಂಗದವರು ಹಾಗೂ ಬುಡಕಟ್ಟು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ತುಂಬಾ ಒತ್ತು ಕೊಟ್ಟಿದೆ. ಹೀಗಾಗಿ ಯಾವುದೇ ಆಧಾರರಹಿತ ಅನುಮಾನಗಳನ್ನು ಇಟ್ಟುಕೊಳ್ಳಬೇಡಿ,’’ ಎಂದು ಮನವರಿಕೆ ಮಾಡಿಕೊಟ್ಟರು.

ಇದಾದ ಮೇಲೆ ಕೆಲವರು ಎನ್ಇಪಿಯಿಂದಾಗಿ ಈಗ ತಮಗೆ ಸಿಗುತ್ತಿರುವ ಸ್ಕಾಲರ್ಶಿಪ್, ಮೀಸಲು ಇತ್ಯಾದಿಗಳು ಇನ್ನಿಲ್ಲವಾಗಬಹುದು ಎಂದು ಸಂದೇಹಪಟ್ಟರು.

ಆಗ ಸಚಿವರು, “ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಜಾರಿಗೆ ಬರುತ್ತಿರುವ ಮೂರನೇ ಎನ್ಇಪಿ ಇದಾಗಿದೆ. ಹಿಂದೆ ಎರಡೂ ಸಲ ಎನ್ಇಪಿ ಬಗ್ಗೆ ಒಂದೇ ಒಂದು ಸಂವಾದವೂ ನಡೆದಿಲ್ಲ. ಇದೇ ಮೊದಲ ಬಾರಿಗೆ ಎನ್ಇಪಿ ಜಾರಿ ಕುರಿತು ಎಲ್ಲರೊಂದಿಗೂ ಮುಕ್ತವಾದ ಸಂವಾದಗಳನ್ನು ನಾವು ನಡೆಸುತ್ತಿದ್ದೇವೆ. ಎನ್ಇಪಿ ನಿಮ್ಮ ಸವಲತ್ತುಗಳನ್ನಾಗಲಿ, ಹಕ್ಕುಗಳನ್ನಾಗಲಿ ಕಿತ್ತುಕೊಳ್ಳುವುದಿಲ್ಲ. ಎನ್ಇಪಿ ಮತ್ತು ಉಳಿದ ವಿಷಯಗಳನ್ನು ಅನಗತ್ಯವಾಗಿ ತಳುಕು ಹಾಕಿಕೊಂಡು, ಗೊಂದಲಕ್ಕೆ ಒಳಗಾಗಬೇಡಿ,’’ ಎಂದು ಸ್ಪಷ್ಟಪಡಿಸಿದರು.

“ಶಿಕ್ಷಣ ಕ್ಷೇತ್ರದಲ್ಲಿ ಸಮಸ್ಯೆಗಳಿಲ್ಲ ಎಂದಲ್ಲ. ಆದರೆ, ಅವುಗಳನ್ನು ಬಗೆಹರಿಸಿಕೊಳ್ಳಬೇಕೇ ವಿನಾ ಸುಮ್ಮನೆ ಕೂರಬಾರದು. ನಮ್ಮ ಸರಕಾರವು ಸುಧಾರಣೆಗಳಲ್ಲಿ ನಂಬಿಕೆ ಇಟ್ಟುಕೊಂಡಿದೆ. ಪರಸ್ಪರ ನಂಬಿಕೆಯಿದ್ದರೆ ಮಾತ್ರ ನಾವು ಅಭಿವೃದ್ಧಿಯನ್ನು ಸಾಧಿಸಬಹುದು. ಇದಕ್ಕೆ ಇಂದಿನ ಈ ಸಭೆಯೇ ಸಾಕ್ಷಿ’’ ಎಂದು ಸಚಿವರು ಹೇಳಿದಾಗ, ಎದುರಿದ್ದವರ ಮುಖದಲ್ಲಿ ನಿರಾಳತೆ ಕಾಣಿಸಿಕೊಂಡಿತು.

ಎನ್ಇಪಿ ಕೇವಲ ಬಿಜೆಪಿಯ ಕಾರ್ಯಕ್ರಮವಲ್ಲ. ಇದಕ್ಕೆ ಅಂತಿಮರೂಪ ಕೊಡುವ ಮುನ್ನ 3 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಸ್ವೀಕರಿಸಲಾಗಿದೆ. ಹಿಂದಿನ ಕಾಂಗ್ರೆಸ್ ಸರಕಾರ, ಬಳಿಕ ಬಂದ ಸಮ್ಮಿಶ್ರ ಸರಕಾರಗಳು ಕೂಡ ಸಲಹೆ ನೀಡಿವೆ. ಅವುಗಳನ್ನೂ ಇದರಲ್ಲಿ ಅಳವಡಿಸಿಕೊಳ್ಳಲಾಗಿದೆ. ಶಿಕ್ಷಣ ವ್ಯವಸ್ಥೆ ಸರಿಯಾದರೆ ಮಾತ್ರ ಇಡೀ ಸಮಾಜ ಸರಿಯಾಗುತ್ತದೆ. ಎನ್ಇಪಿ ಯನ್ನು ಅತ್ಯಂತ ಪಾರದರ್ಶಕವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಲವಲವಿಕೆಯಿಂದ ನಡೆದ ಸಂವಾದಕ್ಕೆ ತೆರೆ ಬಿದ್ದಾಗ, ಅಲ್ಪಸಂಖ್ಯಾತರ ಮೊಗದಲ್ಲಿ ಸಮಾಧಾನ ಮನೆಮಾಡಿತ್ತು; ಎನ್ಇಪಿ ಬಗ್ಗೆ ಅವರಲ್ಲಿದ್ದ ಆತಂಕ ಕರಗಿತ್ತು.

ಸಂವಾದದಲ್ಲಿ ಧರ್ಮಗುರುಗಳಾದ ಮೌಲಾನ ಶಬೀರ್ ಅಹ್ಮದ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ, ನಿವೃತ್ತ ಐಎಎಸ್ ಅಧಿಕಾರಿ ಅಜೀಜುಲ್ಲಾ ಬೇಗ್, ನಿವೃತ್ತ ಡಿಸಿಪಿ ಜಿ.ಎ.ಬಾವಾ, ಪ್ರೊ.ನೂರುದ್ದೀನ್, ಪ್ರೊ.ಶಾಕಿರಾ ಖಾನುಂ, ಪತ್ರಕರ್ತ ಎಂ.ಎ.ಸಿರಾಜ್, ಬೆಂವಿವಿ ಸಿಂಡಿಕೇಟ್ ಮಾಜಿ ಸದಸ್ಯ ಆಘಾ ಸುಲ್ತಾನ್, ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಮುಖ್ಯಸ್ಥ ಶಾವೀಜ್ ಅಹ್ಮದ್ ಮುಂತಾದವರು ಭಾಗವಹಿಸಿದ್ದರು.

Tags: Bengalurucknewsnowdr cn ashwath narayanMuslimsnep2020. new education policynews
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ವರ್ಷಕ್ಕೆ 5 ಲಕ್ಷ ವಿದ್ಯಾರ್ಥಿಗಳಿಗೆ ಕೌಶಲ್ಯ ಗುರಿ

ವರ್ಷಕ್ಕೆ 5 ಲಕ್ಷ ವಿದ್ಯಾರ್ಥಿಗಳಿಗೆ ಕೌಶಲ್ಯ ಗುರಿ

Leave a Reply Cancel reply

Your email address will not be published. Required fields are marked *

Recommended

ಕಾವೇರಿ ಬಗ್ಗೆ ಕರ್ನಾಟಕ-ತಮಿಳುನಾಡು ಜಗಳ ಆಡುವುದು ಬೇಡ: ಸ್ಟಾಲಿನ್‌ಗೆ ಬುದ್ಧಿ ಹೇಳಿದ ಎಚ್‌ಡಿಕೆ

ಕಾವೇರಿ ಬಗ್ಗೆ ಕರ್ನಾಟಕ-ತಮಿಳುನಾಡು ಜಗಳ ಆಡುವುದು ಬೇಡ: ಸ್ಟಾಲಿನ್‌ಗೆ ಬುದ್ಧಿ ಹೇಳಿದ ಎಚ್‌ಡಿಕೆ

4 years ago
ಬಾಗೇಪಲ್ಲಿ ಸರಕಾರಿ ಆಹಾರ ಗೋದಾಮುಗಳಲ್ಲಿ ಮುಕ್ಕಿಮುಕ್ಕಿ ತಿನ್ನುತ್ತಿದ್ದ ʼಹೆಗ್ಗಣʼಗಳು:  ರಾಗಿ ಖರೀದಿಯಲ್ಲಿ ಖತರ್ನಾಕ್‌ ವಂಚನೆ

ಬಾಗೇಪಲ್ಲಿ ಸರಕಾರಿ ಆಹಾರ ಗೋದಾಮುಗಳಲ್ಲಿ ಮುಕ್ಕಿಮುಕ್ಕಿ ತಿನ್ನುತ್ತಿದ್ದ ʼಹೆಗ್ಗಣʼಗಳು: ರಾಗಿ ಖರೀದಿಯಲ್ಲಿ ಖತರ್ನಾಕ್‌ ವಂಚನೆ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ