• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಮಕ್ಕಳ ಪಾಲಿನ ಕಾಮಧೇನು ಗುಡಿಬಂಡೆ ಶ್ರೀ ಬಾಲಾಂಜನೇಯ ಸ್ವಾಮಿ

P K Channakrishna by P K Channakrishna
October 16, 2021
in CHIKKABALLAPUR, STATE
Reading Time: 2 mins read
0
ಮಕ್ಕಳ ಪಾಲಿನ ಕಾಮಧೇನು ಗುಡಿಬಂಡೆ ಶ್ರೀ ಬಾಲಾಂಜನೇಯ ಸ್ವಾಮಿ

ಗುಡಿಬಂಡೆ ಹೃದಯ ಭಾಗದಲ್ಲಿರುವ ಶ್ರೀ ಬಾಲಾಂಜನೇಯ ಸ್ವಾಮಿ ದೇಗುಲ.

1.3k
VIEWS
FacebookTwitterWhatsuplinkedinEmail

ಪಟ್ಟಣದಲ್ಲಿ ಮೊದಲು ವಿದ್ಯುತ್‌ ಸಂಪರ್ಕ ಪಡೆದ ದೇವಾಲಯ; ಹೃದಯ ಭಾಗದಲ್ಲಿರುವ ಹನುಮನ ಕುರಿತ ಅಚ್ಚರಿಯ ಸಂಗತಿಗಳು

By GS Bharath Gudibande

ಗುಡಿಬಂಡೆ: ಇಲ್ಲಿನ ಶ್ರೀ ಬಾಲಾಂಜನೇಯ ಸ್ವಾಮಿ ಕಷ್ಟದಲ್ಲಿರುವ ಭಕ್ತಾಧಿಗಳು ಹಾಗೂ ಆಪತ್ತಿನಲ್ಲಿರುವ ಮಕ್ಕಳನ್ನು ಕಾಯುವ ದೈವವಾಗಿದ್ದು, ಸಮಸ್ಯೆಗಳ ಪರಿಹಾರಕ್ಕೆ ಬೇಡಿಕೊಂಡರೆ ಎಲ್ಲ ಕಾರ್ಯಗಳು ಸಿದ್ಧಿಸಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.

ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಬಾಲಾಂಜನೇಯ ಸ್ವಾಮಿ ದೇಗುಲದಲ್ಲಿ ಪ್ರತೀ ಶನಿವಾರ ವಿಶೇಷ ಪೂಜೆ, ಇತ್ಯಾದಿ ಕೈಂಕರ್ಯಗಳು ನಡೆಯುತ್ತವೆ. ತೆಂಗಿನ ಕಾಯಿ ಇಟ್ಟು ಸಂಕಲ್ಪ ಮಾಡಿಕೊಂಡು ಶ್ರೀ ಬಾಲಾಂಜನೇಯ ಸ್ವಾಮಿಯನ್ನು ಜಪಿಸಿ, ಅಭಿಷೇಕ ಮಾಡಿಸಿದರೆ ಕಾರ್ಯ ಸಿದ್ಧಿಸಿ ಜಯವಾಗುತ್ತದೆ ಎಂಬುದು ಭಕ್ತರ ನಂಬಿಕೆ.




  • ಶ್ರೀ ಬಾಲಾಂಜನೇಯ ಸ್ವಾಮಿ

ಐತಿಹಾಸಿಕ ದೇವಾಲಯ

ಪಟ್ಟಣದ ಮುಖ್ಯರಸ್ತೆಯಲ್ಲಿರುವ ಈ ದೇವಾಲಯ ಸ್ಥಳೀಯರಿಗೆ ಮಾತ್ರವಲ್ಲದೆ, ಇಡೀ ತಾಲೂಕಿನ ಎಲ್ಲ ಜನರ ಶ್ರದ್ಧಾ ಕೇಂದ್ರವಾಗಿದೆ.

ಶತಮಾನಗಳ ಹಿಂದೆ ಗುಡಿಬಂಡೆಯನ್ನು ಆಳಿದ ಪಾಳೇಗಾರರ ಕಾಲದಲ್ಲಿ ಈ ಪ್ರಾಂತ್ಯವು ಸಂಪೂರ್ಣ ಅರಣ್ಯದಿಂದ ಆವರಿಸಿತ್ತು. ಜನರು ಈ ಭಾಗದಲ್ಲಿ ಸಂಚರಿಸಲು ತುಂಬಾ ಭಯಪಡುತ್ತಿದ್ದರಂತೆ. ಕ್ರೂರ ಮೃಗಗಳು ಇದ್ದವಂತೆ. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಾಳೇಗಾರರು ಅಲ್ಲಿ ವೃತ್ತಾಕಾರಾದ ಜಾಗ, ರಸ್ತೆ ಮಾಡಿ ಶ್ರೀ ಬಾಲಾಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿ, ಜನರಿಗೆ ಧೈರ್ಯ ತುಂಬಿದ್ದರಂತೆ. ಆಗಿನಿಂದಲೇ ದೇವರಿಗೆ ವಿಶೇಷ ಪೂಜೆ ನಡೆಯುತ್ತಂತೆ.

ಹೀಗೆ ನೂರಾರು ವರ್ಷಗಳಿಂದ ಗುಡಿಬಂಡೆ ಜನರ ಪಾಲಿನ ಆರಾಧ್ಯ ದೈವವಾಗಿರುವ ಶ್ರೀ ಬಾಲಾಂಜನೇಯ ಸ್ವಾಮಿ, ಭಕ್ತರ ಪಾಲಿಗೆ ಕಾಮಧೇನುವಾಗಿ ಅವರ ಕಷ್ಟಗಳನ್ನು ದೂರ ಮಾಡುತ್ತಾ ಪೊರೆಯುತ್ತಿದ್ದಾನೆ ಎಂದು ಸ್ಥಳೀಯರು ಹೇಳುತ್ತಾರೆ.

ಶ್ರೀ ಬಾಲಾಂಜನೇಯ ಸ್ವಾಮಿ ದೇವಾಲಯವು ಬಹಳ ಪ್ರಸಿದ್ದಿಯನ್ನು ಪಡೆದಿದ್ದು ಪಟ್ಟಣಕ್ಕೆ ಬರುವ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಈ ದೇವಾಲಯದ ಸುತ್ತ ಒಂದು ಪ್ರದಕ್ಷಿಣಿ ಹಾಕಿ ನಂತರ ಬಸ್ ನಿಲ್ದಾಣಕ್ಕೆ ಹೋಗುತ್ತವೆ. ಇದು ಗುಡಿಬಂಡೆ ಪಟ್ಟಣದಲ್ಲಿ ಬಸ್ ಸಂಚಾರ ಆರಂಭವಾದಾಗಿನಿಂದ ನಡೆದುಕೊಂಡು ಬರುತ್ತಿರುವ ಪರಂಪರೆ.

ಇನ್ನೇನು ವಿಶೇಷಗಳಿವೆ?

ಸುಮಾರು 20 ವರ್ಷಗಳ ಹಿಂದೆ ಶ್ರೀರಾಮನವಮಿ ಹಬ್ಬದ ಸಂದರ್ಭದಲ್ಲಿ ಶ್ರೀ ಬಾಲಾಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಸಾವಿರಾರು ಭಕ್ತಾಧಿಗಳಿಗೆ ಟೀವಿ ಪರದೆಯಲ್ಲಿ ಎನ್.ಟಿ.ರಾಮಾರಾವ್‌ ನಟಿಸಿರುವ ತೆಲುಗಿನ ʼಲವಕುಶʼ ಸಿನಿಮಾವನ್ನು ತೊರಿಸುತ್ತಿದ್ದಾಗ ಗೌರಿಬಿದನೂರು ಕಡೆಯಿಂದ ಬರುತ್ತಿದ್ದ ಲಾರಿಗೆ ಬ್ರೇಕ್ ಹಿಡಿಯದೆ ಜೋರಾಗಿ ಬಂದು ದೇವಾಲಯ ಹಾಗೂ ಭಕ್ತಾಧಿಗಳನ್ನು ತಪ್ಪಿಸಿ ಪಕ್ಕದ ಕಟ್ಟಡಕ್ಕೆ ಡಿಕ್ಕಿ ಹೊಡೆದಿತ್ತು. ಆದರೆ ಯಾರಿಗೂ ಯಾವುದೇ ಪ್ರಾಣಾಪಾಯವಾಗಲಿಲ್ಲ. ಎಲ್ಲರನ್ನೂ  ಶ್ರೀ ಬಾಲಾಂಜನೇಯ ಸ್ವಾಮಿ ರಕ್ಷಿಸಿದ್ದಾನೆಂದು ಇಲ್ಲಿನ ಜನರ ನಂಬಿಕೆ.

ಅಂದಿನಿಂದ ಈ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿ ಕಷ್ಟಗಳು ದೂರವಾಗುತ್ತವೆ, ಮನೆಯತ್ತ ದುಷ್ಟಶಕ್ತಿಗಳು ಸುಳಿಯುವುದಿಲ್ಲ, ಚಿಕ್ಕ ಮಕ್ಕಳು ಚಂಡಿ ಹಿಡಿದರೆ ಈ ದೇವಸ್ಥಾನಕ್ಕೆ ಬೇಟಿ ನೀಡಿ ದರ್ಶನ ಪಡೆದುಕೊಳ್ಳುವುದರಿಂದ ಮಕ್ಕಳಲ್ಲಿರುವ ತೊಂದರೆ ಹಾಗೂ ಕಷ್ಟಗಳಿಗೆ ಶ್ರೀ ಬಾಲಾಂಜನೇಯ ಸ್ವಾಮಿಯ ಅಭಯ ಸಿಗುತ್ತದೆ. ಈ ಬಾಲಾಂಜನೇಯನನ್ನು ಪ್ರಾರ್ಥಿಸುವುದರಿಂದ ಮಕ್ಕಳಿಗೆ ದೈರ್ಯ ಬರುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಪ್ರತಿನಿತ್ಯ ಇಲ್ಲಿನ ಜನ ನೂರಾರು ಸಂಖ್ಯೆಯಲ್ಲಿ ಬಂದು ಪೂಜೆ ಮಾಡಿಸುತ್ತಾರೆ.

ವಿಶೇಷ ಪೂಜೆಗಳು

ಶ್ರೀ ಬಾಲಾಂಜನೇಯ ಸ್ವಾಮಿ ಸನ್ನಿಧಾನದಲ್ಲಿ ಪ್ರತೀ ವರ್ಷ ಹನುಮ ಜಯಂತಿ ವಿಜೃಂಭಣೆಯಿಂದ ನಡೆಯುತ್ತದೆ. ಶ್ರೀ ರಾಮನವಮಿ, ಶಿವರಾತ್ರಿ, ಕೊನೆಯ ಕಾರ್ತಿಕ ಸೋಮವಾರದ ಸಂದರ್ಭದಲ್ಲಿ ದೇವಾಲಯದಲ್ಲಿ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಪ್ರವಚನ, ಭಜನೆಗಳು ನಡೆಯುತ್ತವೆ. ನೂರಾರು ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ಇನ್ನು; ಪ್ರತಿದಿನ ಪೂಜೆ, ಪ್ರತೀ ಶನಿವಾರ ವಿಶೇಷ ಪೂಜೆ, ಹುಣ್ಣಿಮೆಯಂದು ವಿಶೇಷ ಪೂಜೆಗಳು ಇರುತ್ತವೆ.

ಉಳಿದಂತೆ ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿಲ್ಲ. ಭಕ್ತಾಧಿಗಳೇ ದೇವಸ್ಥಾನದ ಅಭಿವೃದ್ದಿಯನ್ನು ಮಾಡಿದ್ದು, ಪಟ್ಟಣದ ಜನರು ಅಗತ್ಯ ಸಂದರ್ಭಗಳಲ್ಲಿ ದೇಗುಲಕ್ಕೆ ಕಾಣಿಕೆಗಳನ್ನು ಸಮರ್ಪಿಸುತ್ತಿದ್ದಾರೆ.

ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ನೀಡುತ್ತಾ ಭಕ್ತರ ಆರಾಧ್ಯದೈವವಾಗಿರುವ ಶ್ರೀ ಬಾಲಾಂಜನೇಯ ಸ್ವಾಮಿ ದರ್ಶನಕ್ಕೆ ಶನಿವಾರ, ಹುಣ್ಣಿಮೆ ಹಾಗೂ ಅಮಾವಾಸ್ಯೆ ದಿನಗಳಲ್ಲಿ ಹೆಚ್ಚು ಭಕ್ತರು ಆಗಮಿಸುತ್ತಾರೆ. ಭಗವಂತನ ದರ್ಶನದಿಂದ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿ ಭಕ್ತರು ಖುಷಿಯಾಗಿದ್ದಾರೆ ಎಂದು ಅರ್ಚಕರು ಹೇಳುತ್ತಾರೆ.

  • ದೇವಸ್ಥಾನದ ಅರ್ಚಕ ರಾಮಕೃಷ್ಣಪ್ಪ

ಶತಮಾನಗಳ ಹಿಂದೆ ಪಾಳೇಗಾರರ ಸಂದರ್ಭದಲ್ಲಿ ಶ್ರೀ ಬಾಲಾಂಜನೇಯ ಸ್ವಾಮಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಗುಡಿಬಂಡೆ ವಿದ್ಯುತ್‌ ಸಂಪರ್ಕ ನೀಡಿದಾಗ ಮೊದಲು ಸಂಪರ್ಕ ನೀಡಿದ್ದೇ ಈ ದೇಗುಲಕ್ಕೆ. ಇಂದಿಗೂ ಸಹ ಸ್ಥಳೀಯ ಮಂಡಲ ಪಂಚಾಯಿತಿಯಿಂದಲೇ ವಿದ್ಯುತ್‌ ಪಾವತಿ ಮಾಡುತ್ತಾರೆ. ಸಿಂಗಲಾಚಾರ್ ಎಂಬ ತಹಶೀಲ್ದಾರ್‌ ಒಬ್ಬರ ಅರಿಕೆ ಈಡೇರಿರುವುದರಿಂದ ಅವರು ಶ್ರೀ ಬಾಲಾಂಜನೇಯ ಸ್ವಾಮಿ ದೇವರಿಗೆ ಮುಖವಾಡ ಮಾಡಿಸಿದ್ದಾರೆ. ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಿ ದೇವಾಸ್ಥಾನವನ್ನು ಅಭಿವೃದ್ದಿಪಡಿಸಬೇಕು ಎಂಬುದು ನಮ್ಮ ಮನವಿಯಾಗಿದೆ.

ರಾಮಕೃಷ್ಣಪ್ಪ, ದೇವಸ್ಥಾನದ ಅರ್ಚಕ

ನನಗೆ ಶ್ರೀ ಬಾಲಾಂಜನೇಯ ಸ್ವಾಮಿ ದೇವರ ಬಗ್ಗೆ ಅಪಾರ ನಂಬಿಕೆ ಇದೆ. ಇಲ್ಲಿ ನಡೆಯುವ ಭಜನೆಯಲ್ಲಿ 20  ನಿಮಿಷಗಳ ಕಾಲ ಭಾಗಹಿಸುತ್ತಿದ್ದಾಗ ನನಗೆ ತುಂಬಾ ಧೈರ್ಯ ಬಂತು. ನನ್ನ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ನಾನೀಗ ಸಂತೋಷದಿಂದ ಇದ್ದೇನೆ.

ಎನ್.ಎಸ್.ಅರುಣ್ ಕುಮಾರ್, ಭಕ್ತ, ಗುಡಿಬಂಡೆ

Tags: chikkaballapuracknewsnowgudibandehistorical templehistorykarnatakanewssri balanjaneya swamy templetemples of Karnataka
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ವೆಂಟಿಲೇಟರ್ ಲಭ್ಯತೆ 10 ಪಟ್ಟು ಹೆಚ್ಚಿಸಲು ಕ್ರಮ, ವಿದೇಶದಿಂದಲೂ ರೆಮ್ಡಿಸಿವಿರ್ ಆಮದು ಮಾಡಿಕೊಳ್ಳಲು ಮುಂದಾದ ರಾಜ್ಯ ಸರಕಾರ, ಕೇಂದ್ರ ಅನುಮತಿಗೆ ವೇಯ್ಟಿಂಗ್

ಮಳೆ ಹಾನಿ ಪರಿಹಾರ; ಕೂಡಲೇ ಪ್ರಸ್ತಾವನೆ ಸಲ್ಲಿಸಲು ಸಚಿವ ಡಾ.ಕೆ.ಸುಧಾಕರ್ ಸೂಚನೆ

Leave a Reply Cancel reply

Your email address will not be published. Required fields are marked *

Recommended

ಬಾಂಬ್ ಇಟ್ಟ ಕಿರಾತಕ ಹೇಗಿದ್ದ? ಮಹತ್ವದ ಮಾಹಿತಿ ಕೊಟ್ಟ ಮುಖ್ಯಮಂತ್ರಿ

ಬಾಂಬ್ ಇಟ್ಟ ಕಿರಾತಕ ಹೇಗಿದ್ದ? ಮಹತ್ವದ ಮಾಹಿತಿ ಕೊಟ್ಟ ಮುಖ್ಯಮಂತ್ರಿ

2 years ago
ಅಧಿಕಾರದ ಕುರ್ಚಿಗೆ ವಿದಾಯ ಹೇಳಲು ಸಿದ್ಧರಾದರಾ ʼಬಲಶಾಲಿʼ ಯಡಿಯೂರಪ್ಪ! ಟೆಂಪಲ್‌ ರನ್‌ ಶುರುವಿಟ್ಟುಕೊಂಡ ಪುತ್ರ ವಿಜಯೇಂದ್ರ: ಹಾಗಾದರೆ, NEXT ಸಿಎಂ ಯಾರಪ್ಪ?

ಕೊರೊನ ಲಸಿಕೆ ಅಕ್ರಮ ಮಾರಾಟ ಮಾಡಿದರೆ ಜೈಲೇ ಗತಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ ವಾರ್ನಿಂಗ್

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ