ಅ. 21ರಿಂದ 25 ರವರೆಗೂ 5 ದಿನಗಳ ದೇವತಾ ಕಾರ್ಯಕ್ಕೆ ಭರದ ಸಿದ್ಧತೆ
By GS Bharath Gudibande
ಗುಡಿಬಂಡೆ: ಶ್ರೀ ಆದಿಶ ಕ್ತ್ಯಾತ್ಮಕ ತ್ರಿಮತಾಂಶ ಏಕತಾ ಪೀಠದಲ್ಲಿ ನೆಲೆಸಿರುವ ಜಗನ್ಮಾತೆ ಗಾಯತ್ರಿದೇವಿ ಸನ್ನಿಧಿಯಲ್ಲಿ ಶ್ರೀ ಪ್ಲವನಾಮ ಸಂವತ್ಸರ ಅಶ್ವಯುಜು ಬಹುಳಾ ಪಾಡ್ಯಮಿ ಗುರುವಾರದಿಂದ ಸೋಮವಾರದವರೆಗೆ (ಅಕ್ಟೋಬರ್ 21ರಿಂಂ 25) 33ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಬಗ್ಗೆ ಸಿಕೆನ್ಯೂಸ್ ನೌ ಗೆ ಮಾಹಿತಿ ನೀಡಿದ ಎಂದು ತ್ರಿಮತಾಚಾರ್ಯ ಗಾಯತ್ರಿ ಮಂದಿರದ ಮುಖ್ಯಸ್ಥರಾದ ಸ.ನಾ ನಾಗೇಂದ್ರ ಸ್ವಾಮಿ ಅವರು; ಪಟ್ಟಣದ ಶ್ರೀ ಗಾಯತ್ರಿ ಪ್ರಸಾದ ಭವನದಲ್ಲಿ 5 ದಿನಗಳ 33ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ವೇ.ಬ್ರ.ಶ್ರೀ ಮಂಕಾಲ ಸದಾಶಿವಶರ್ಮ ಹಾಗೂ ವೇ.ಬ್ರ.ಶ್ರೀ ಮಂಕಾಲ ಶ್ರೀಹರಿಶರ್ಮ ಮತ್ತು ಭಕ್ತಾದಿಗಳ ನೇತೃತ್ವದಲ್ಲಿ ಹೋಮ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೇವಾ ಕೈಂಕರ್ಯಗಳೊಂದಿಗೆ ಸರ್ವಜ್ಞನರ, ಗುರುಹಿರಿಯರ ಸಹಕಾರದಿಂದ ಪ್ರತಿ ವರ್ಷ ನೆರವೇರಿಸಲಾಗುತ್ತದೆ ಎಂದು ತಿಳಿಸಿದರು.
ವಾರ್ಷಿಕೋತ್ಸವದ ವಿಶೇಷತೆ
ಕೊರೋನ ಮಹಾವ್ಯಾಧಿಯ ಅನಿವಾರ್ಯ ಸಂದರ್ಭದಲ್ಲಿ ನಿಗಧಿತ ಜೇಷ್ಠ ಮಾಸಕ್ಕೆ ಬದಲಾಗಿ ಕಳೆದ ವರ್ಷದಂತೆ ಈ ವರ್ಷವೂ ವಿಶೇಷವಾಗಿ “ಶ್ರೀ ಗಾಯತ್ರಿ ಭಜೇಹಂ” ಎಂಬ ಘೋಷ ವಾಕ್ಯದೊಂದಿಗೆ ದೇಗುಲದ ವತಿಯಿಂದ ಲೋಕಕಲ್ಯಾಣ್ಯಾರ್ಥವಾಗಿ ಭಕ್ತಾದಿಗಳ ಸಹಕಾರದಿಂದ ನಡೆಯಲಿದೆ ಎಂದು ಅವರು ಹೇಳಿದರು.
ವಿಶ್ವಧ್ಯಾನ ಮಂದಿರ ನಿರ್ಮಿಸಲು ಸಂಕಲ್ಪ
ಪಟ್ಟಣದ ಸುರಸದ್ಮಗಿರಿ ಬೆಟ್ಟದ ತಪ್ಪಲಿನ ಉದ್ದೇಶಿತ ಪವಿತ್ರ ಸ್ಥಳದಲ್ಲಿ ಶ್ರೀ ಚಕ್ರದ ಆಕೃತಿಯಲ್ಲಿ ಭವ್ಯ ಮಂದಿರ ನಿರ್ಮಿಸಿ ಮಾತೆ ಗಾಯತ್ರಿದೇವಿಗೆ ಸಮರ್ಪಿಸಲು ಹಾಗೂ ಸರ್ವಧರ್ಮ ಸಮನ್ವಯತೆಯ ಪ್ರತೀಕವಾಗಿ ವಿಶ್ವಧ್ಯಾನ ಮಂದಿರ ನಿರ್ಮಿಸಲು ಸಂಕಲ್ಪ ಮಾಡಲಾಗಿದೆ ಎಂದು ನಾಗೇಂದ್ರ ಅವರು ತಿಳಿಸಿದರು.
ಗ್ರಾಮದೇವರಿಗೆ ವಿಶೇಷ ಪೂಜೆ ಹಾಗೂ ಮಡಲಕ್ಕಿ
ಗುಡಿಬಂಡೆ ತಾಲೂಕಿನ ಗ್ರಾಮ ದೇವತೆಗಳಿಗೆ ತ್ರಿಮತಾಚಾರ್ಯ ಗಾಯತ್ರಿ ಮಂದಿರದ ವಾರ್ಷಿಕೋತ್ಸವದಲ್ಲಿ, ವಿಶೇಷ ಪೂಜೆ ಹಾಗೂ ಮಡಲಕ್ಕಿ ಕಾರ್ಯಕ್ರಮ ನಡೆಯಲಿದೆ ಎಂದು ಸ.ನಾ. ನಾಗೇಂದ್ರ ಸ್ವಾಮಿ ಅವರು ಮಾಹಿತಿ ನೀಡಿದರು.
33ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಮಹತ್ಕಾರ್ಯಕ್ಕೆ ಸಾಕ್ಷಿಯಾಗಲಿದ್ದು; ವಿಶ್ವಧ್ಯಾನ ಮಂದಿರ, ಮಹಾ ಸಂಕಲ್ಪ, ಮಹಾಯಾಗ, ಅಭಿಷೇಕ, ಹಾಗೂ ಎಲ್ಲಾ ಗ್ರಾಮದೇವತೆಗಳ ಪೂಜೆ, ಮಡಲಕ್ಕಿ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.
ಸ.ನಾ ನಾಗೇಂದ್ರ ಸ್ವಾಮಿ, ತ್ರಿಮತಾಚಾರ್ಯ ಗಾಯತ್ರಿ ಮಂದಿರದ ಮುಖ್ಯಸ್ಥರು, ಗುಡಿಬಂಡೆ