• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಪಾಳುಬಿದ್ದಿದೆ 900 ವರ್ಷಗಳ ಐತಿಹಾಸಿಕ ಶ್ರೀ ತಾಂಡವೇಶ್ವರ ದೇಗುಲ

cknewsnow desk by cknewsnow desk
October 29, 2021
in EDITORS'S PICKS, STATE
Reading Time: 5 mins read
0
ಪಾಳುಬಿದ್ದಿದೆ 900 ವರ್ಷಗಳ ಐತಿಹಾಸಿಕ ಶ್ರೀ ತಾಂಡವೇಶ್ವರ ದೇಗುಲ
1.6k
VIEWS
FacebookTwitterWhatsuplinkedinEmail

ಗತಿಸಿಹೋಗುತ್ತಿದೆ ಗುಡಿಬಂಡೆ ಗತವೈಭವ; ಕಾಲಗರ್ಭ ಸೇರುತ್ತಿರುವ 900 ವರ್ಷಗಳ ಐತಿಹಾಸಿಕ ದೇವಾಲಯ

By GS Bharath Gudibande

CkNewsNow Exclusive

ಗುಡಿಬಂಡೆ: ತಾಲೂಕು ಐತಿಹಾಸಿಕವಾಗಿ ತುಂಬಾ ಆಸಕ್ತಿದಾಯಕವಾಗಿದೆ. ಅನೇಕ ದೇವಾಲಯಗಳಿದ್ದು, ಒಂದೊಂದು ದೇವಾಲಯಕ್ಕೂ ಪ್ರತ್ಯೇಕವಾದ ವಿಶಿಷ್ಟ್ಯ ಐತಿಹ್ಯವಿದೆ. ತೆರೆಮರೆಯಲ್ಲಿ ಅವುಗಳ ಸತ್ಯವನ್ನು ಕಂಡುಹಿಡಿಯಲು ಅನೇಕ ಪ್ರಯತ್ನಗಳು ನಡೆದಿವೆ.

ಗುಡಿಬಂಡೆ ತಾಲೂಕಿನ ದೇವಾಲಯಗಳ ಮಾಹಿತಿ, ಇತಿಹಾಸ, ರಹಸ್ಯಗಳು ಎಲ್ಲರನ್ನೂ ಬೆರಗುಗೊಳಿಸುವಂತಿವೆ. ಏಕೆಂದರೆ, ಹಲವಾರು ಪುರಾಣ ಮತ್ತು ಇತಿಹಾಸ ಇಲ್ಲಿದೆ. ನಾವೆಲ್ಲರೂ ಪೂಜಿಸುವ ಶ್ರೀರಾಮಚಂದ್ರರು ಸ್ವತಃ ಇಲ್ಲಿ ಶಿವಲಿಂಗ ಪ್ರತಿಷ್ಠಾನೆ ಮಾಡಿದ್ದಾರೆ ಎನ್ನುವ ಪುರಾಣ ಕಥೆಯೂ ಇದೆ. ಹೀಗೆ ತಾಲೂಕಿನ ಇಂಚಿಂಚು ಹುಡುಕಿ ಮಾಹಿತಿ ಶೇಖರಣೆ ಮಾಡುವ ಕೆಲಸ ಪುರಾತತ್ವ ಇಲಾಖೆ ಮಾಡಲೇಬೇಕಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ಮುಜರಾಯಿ ಇಲಾಖೆ ದಿವ್ಯನಿರ್ಲಕ್ಷ್ಯ

ಪುಲಸಾನಿವೊಡ್ಡು ಗ್ರಾಮದಲ್ಲಿರುವ ಸುಮಾರು 900 ವರ್ಷಗಳ ಪುರಾತನ ದೇವಾಲಯವೆಂದು ಹೇಳಲಾಗುತ್ತಿರುವ ತಾಂಡವೇಶ್ವರ (ವೀರಗಲ್ಲು) ದೇವಾಲಯವು ಭೂಗರ್ಭದಲ್ಲಿ ಸೇರುವ ದುಸ್ಥಿತಿಯಲ್ಲಿದ್ದರೂ ಪುರಾತನ ದೇವಾಲಯಗಳನ್ನು ರಕ್ಷಿಸಬೇಕಾದ ಪುರಾತತ್ವ ಇಲಾಖೆ ಹಾಗೂ ಮುಜರಾಯಿ ಇಲಾಖೆಗಳು ನಿರ್ಲಕ್ಷ ವಹಿಸಿವೆ.

ಈವರೆಗೂ ಯಾರು ಗಮನಿಸದ ಹಾಗೂ ನಿರಂತರವಾಗಿ ನಿರ್ಲಕ್ಷಿಸಲ್ಪಟ್ಟ ಈ ದೇವಾಲಯ ಈಗ ಅನಾಥವಾಗಿದೆ. ನಾಗರೀಕ ಸಮಾಜ ತಲೆತಗ್ಗಿಸುವಂತಿದೆ ಹಾಗೂ ಸರಕಾರ ಮತ್ತು ಆಡಳಿತಗಳ ಆತ್ಮಪ್ರಜ್ಞೆಯನ್ನು ಪ್ರಶ್ನಿಸುವಂತಿದೆ. ಅನರ್ಘ್ಯ ಪ್ರಾಚ್ಯ ಪರಂಪರೆಯನ್ನು ರಕ್ಷಿಸಬೇಕಾದ ಇಲಾಖೆಗಳೆಲ್ಲ ಗಡತ್ತಾಗಿ ಗೊರಕೆ ಹೊಡೆಯುತ್ತಿವೆ ಮಾತ್ರವಲ್ಲದೆ, ತಾಲೂಕು ಮತ್ತು ಜಿಲ್ಲಾಡಳಿತಗಳು ಕಣ್ಣಿದ್ದೂ ಕುರುಡಾಗಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಚೋಳರು ಕಟ್ಟಿಸಿದ ದೇವಾಲಯ

ಚೋಳರ ರಾಜವಂಶಕ್ಕೆ ಸೇರಿರಬಹುದೆಂದು ಹೇಳಲಾಗಿರುವ ಈ ದೇವಾಲಯದ ಕಣಕಣದಲ್ಲೂ ಕಲಾವೈಭವ ಅಡಕವಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರದೇಶಗಳನ್ನು ಆಳ್ವಿಕೆ ಮಾಡಿರುವ ಚೋಳರಸರು ಅನೇಕ ದೇಗುಲಗಳನ್ನು ಕಟ್ಟಿಸಿದ್ದಾರೆ. ಅವೆಲ್ಲ ಅವನತಿಯ ಹಾದಿಯಲ್ಲಿದ್ದು, ಈ ತಾಂಡವೇಶ್ವರ ದೇವಾಲಯವೂ ಯಾರಿಗೂ ಬೇಡದ ಸ್ಥಿತಿಯಲ್ಲಿದೆ. ತಾಂಡವೇಶ್ವರ ಎಂದರೆ ನಟರಾಜ ಸ್ವಾಮಿಯಂತೆ ಅಥವಾ ರುದ್ರತಾಂಡವರೂಪಿ ಭಂಗಿಯಲ್ಲಿ ಆ ಪರಮ ಶಿವನು ನಾಟ್ಯರೂಪದಲ್ಲಿದ್ದನ್ನು ಎನ್ನಲಾಗಿದೆ. ಆದರೆ, ಅಲ್ಲಿ ಮೂಲ ದೇವರ ಮೂರ್ತಿಯೇ ಇಲ್ಲದಾಗಿದೆ.

ಬೇಲೂರು, ಹಳೆಬೀಡು ಹಾಗೂ ಆಂಧ್ರ ಪ್ರದೇಶದ ಲೇಪಾಕ್ಷಿ ದೇವಾಲಯಗಳನ್ನು ಹೋಲುವ ರೀತಿಯಲ್ಲಿರುವ ತಾಂಡವೇಶ್ವರ ದೇವಾಲಯದಲ್ಲಿ ಲೇಪಾಕ್ಷಿ ದೇವಾಲಯದಲ್ಲಿರುವಂತೆ ನಿರ್ಮಿಸಲಾಗಿದ್ದು, ಶಿಲಾಬಾಲಕೆಯರ ಕೆತ್ತನೆಗಳಿವೆ. ವಿವಿಧ ದೇವತೆಗಳ ವಿಶೇಷ ರಚನೆಗಳನ್ನು ಒಳಗೊಂಡಿರುವ ಈ ದೇವಾಲಯವು ಈಗ ಸಂಪೂರ್ಣವಾಗಿ ಶಿಥಿಲವಾಗಿದ್ದು, ಇನ್ನೇನು ಕಾಲಗರ್ಭದಲ್ಲಿ ಸೇರುವ ಶೋಚನೀಯ ಸ್ಥಿತಿಯಲ್ಲಿದೆ. ಸಂಬಂಧಪಟ್ಟ ಯಾವ ಇಲಾಖೆಗಳು ಈ ದೇಗುಲದತ್ತ ಕಣ್ಣು ಹಾಯಿಸಿಲ್ಲ ಎನ್ನುವುದು ಪುಲಸಾನಿವೊಡ್ಡು ಗ್ರಾಮಸ್ಥರ ಆಕ್ರೋಶ.

ಆಕಾರಕ್ಕೆ ಹಾನಿಯಾಗಿದೆ

ಈಗಾಗಲೇ ದೇವಾಲಯದ ಕಂಬಗಳು ಮುರಿದಿವೆ. ಗರ್ಭಗುಡಿಯಲ್ಲಿರುವ ವಿಗ್ರಹಗಳು ಅರ್ಧಂಬರ್ಧ ಭೂಮಿಯಲ್ಲಿ ಸೇರಿವೆ. ಗರ್ಭಗುಡಿಯ ಗೋಡೆಗಳು ಉರುಳಿದ್ದು ದೇವಾಲಯವು ಸಂಪೂರ್ಣವಾಗಿ ಗಿಡಮರಗಳಲ್ಲಿ ಮರೆಯಾಗಿದೆ. ದೇವಾಲಯಕ್ಕೆ ಸಂಬಂಧಿಸಿದ ಶಾಸನಗಳು ಅಳಿಸಿ ಹೋಗಿವೆ. ಗ್ರಾಮಸ್ಥರು ಮಾತ್ರ ಈ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದೆ ಎಂದು ಹೇಳುತ್ತಾರೆ. ಆದರೆ, ವಾಸ್ತವಕ್ಕೆ ಮುಜರಾಯಿ ಸೇರಿ ಯಾಚ ಇಲಾಖೆಯೂ ಇತ್ತ  ಗಮನ ನೀಡುತ್ತಿಲ್ಲ. ಸಂಬಂಧಪಟ್ಟ ಇತರೆ ಯಾವುದೇ ಇಲಾಖೆಗಳು ರಕ್ಷಣೆ ಮಾಡುತ್ತಿಲ್ಲ. ಕನ್ನಡ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳನ್ನು ಜಿಲ್ಲೆಯಲ್ಲಿ ಹುಡಕಬೇಕು.

ದೇವಾಲಯದ ಇತಿಹಾಸ

ಸ್ಥಳಿಯರು ಹಾಗೂ ಇತಿಹಾಸ ಸಂಶೋಧಕರ ಪ್ರಕಾರ ಈ ಸ್ಥಳಕ್ಕೆ ಸುಮಾರು 900 ವರ್ಷಗಳ ಇತಿಹಾಸವಿದ್ದು, ಕ್ರಿಶ.11 ಮತ್ತು 12ನೇ ಶತಮಾನಗಳಲ್ಲಿ ಈ ಪ್ರಾಂತ್ಯವನ್ನು ಆಳಿದ ಚೋಳ ದೊರೆಗಳು ಈ ದೇಗುಲವನ್ನು ಕಟ್ಟಿಸಿದ್ದರು ಎನ್ನುವ ಮಾತಿದೆ. ಆದರೆ ಇತಿಹಾಸಕಾರರು, ವಿಜಯನಗರ ಅರಸರ ಕಾಲದಲ್ಲಿ ಈ ದೇಗುಲ ನಿರ್ಮಾಣವಾಗಿದೆ ಎನ್ನುತ್ತಾರೆ. ಆ ಕಾಲಘಟ್ಟದ ಓರ್ವ ಅರಸ ಲೇಪಾಕ್ಷಿಯಲ್ಲಿ ತಾಂಡವೇಶ್ವರ ದೇಗುಲ ಕಟ್ಟಿಸಿದ್ದಾನೆ. ಅಲ್ಲಿನ ದೇವಸ್ಥಾನದ ದೈವೀಕಾರ್ಯಗಳಿಗೆ ರಂಗಸಾನಿ ಎಂಬ “ಸಾನಿ” (ದೇವದಾಸಿ) ಪರಂಪರೆಯ ಮಹಿಳೆಯನ್ನು ನೇಮಕ ಮಾಡಲಾಗಿತ್ತು. ತನ್ನನ್ನು ತಾನು ದೇವರ ಸೇವೆಗೆ ಸಮರ್ಪಿಸಿಕೊಂಡು ಬಹಳ ಮುತುವರ್ಜಿಯಿಂದ ದೇವರ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುತ್ತಾಳೆ. ದೇವಸ್ಥಾನದ ಶುಚಿತ್ವ, ದೇವರ ಅಲಂಕಾರಕ್ಕೆ ಹೂವು ಹಣ್ಣು ಹಂಪಲು, ಎಲೆಗಳ ಸಂಗ್ರಹಣೆ, ದೇವಸ್ಥಾನದ ವಿಶೇಷ ಸಭೆ, ಸಮಾರಂಭಗಳಲ್ಲಿ ನೃತ್ಯ ಇವೆಲ್ಲಾ ಈಕೆಯ ಜವಾಬ್ದಾರಿಗೆ ಒಳಪಟ್ಟಿರುತ್ತವೆ ಎನ್ನುವ ಮಾಹಿತಿ ಇದೆ.

  • ಅನನ್ಯ ಶಿಲ್ಪಕಲಾ ಸಂಪತ್ತಿನ ತಾಂಡವೇಶ್ವರ ಸ್ವಾಮಿ ದೇಗುಲದ ಅವಶೇಷಗಳ ಚಿತ್ರಗಳ ಸ್ಲೈಡ್‌ ಶೋ..

ರಂಗಸಾನಿಯ ತಂಗಿಯಾದ ಪೂಲಸಾನಿಯ ಮೂಲ ಹೆಸರು ಹನುಮಕ್ಕ. ಈಕೆ ಲೇಪಾಕ್ಷಿಯಿಂದ ಒಂದು ತಾಂಡವೇಶ್ವರ ಸ್ವಾಮಿಯ ಲಿಂಗವನ್ನು ಬುಟ್ಟಿಯಲ್ಲಿಟ್ಟುಕೊಂಡು ಹೊತ್ತು ತಂದು ಈಗಿನ ಗುಡಿಬಂಡೆಯ ಪಟ್ಟಣದೆಡೆಗೆ ಹೊರಟಿರುತ್ತಾಳೆ. ದಾರಿಯ ಮಧ್ಯೆ ಈ ಹಂಪಸಂದ್ರ ಬಳಿಯ ಜಾಗವು ಪ್ರಶಸ್ತ್ಯವಾಗಿ ಆಕೆಗೆ ಕಾಣುತ್ತದೆ. ಈ ಜಾಗದಲ್ಲಿಯೇ ಲಿಂಗವನ್ನು ಪ್ರತಿಷ್ಠಾಪಿಸಿ, ಮಾಧವ ವರ್ಮನ ಸಹಾಯದಿಂದ ಒಂದು ಭವ್ಯ ದೇವಸ್ಥಾನವನ್ನು ಕಟ್ಟಿಸುತ್ತಾಳೆ. ಇದರ ಜತೆಗೆ ಇಲ್ಲಿ ನೀರಿನ ಸೌಲಭ್ಯಕ್ಕೆ ಎರಡು ಕುಂಟೆಗಳನ್ನು ಸಹ ಕಟ್ಟಿಸಿ, ಗೋಣಿ ಮರವೊಂದನ್ನು ನೆಟ್ಟು, ಬಂಡೆಯ ಮೇಲೆ ಶಾಸನವನ್ನು ಬರೆಸುತ್ತಾಳೆ. ಹೀಗೆ ಈ ಪ್ರದೇಶವನ್ನು ಅಭಿವೃದ್ದಿ ಮಾಡಿದ್ದಕ್ಕಾಗಿ ಈ ಗ್ರಾಮಕ್ಕೆ ʼಪೂಲಸಾನಿವೊಡ್ಡುʼ ಎಂಬ ಹೆಸರು ಬಂದಿದೆ ಎಂಬುದು ಹಿರಿಯರು ಹಾಗೂ ಇತಿಹಾಸ ಸಂಶೋಧಕರು ಹೇಳುವ ಮಾತು.

ಸುತ್ತಮುತ್ತಲೂ ಹೂವು, ಎಲೆ, ಹಣ್ಣು-ಹಂಪಲು, ದವಸ ಧಾನ್ಯಗಳನ್ನು ಸಂಗ್ರಹಿಸಿ ಅತ್ತ ತನ್ನ ಅಕ್ಕನಿದ್ದ ಲೇಪಾಕ್ಷಿಗೂ ಮತ್ತು ಈ ದೇವಸ್ಥಾನದ ಸೇವೆಗೂ ಬಳಸುತ್ತಿದ್ದರು. ಇದೇ ಸಂದರ್ಭದಲ್ಲಿ ಗುಡಿಬಂಡೆ ಪ್ರದೇಶಕ್ಕೆ ಸಂಬಂಧಿಸಿದ ಅಲ್ಲಿನ ಸ್ಥಳೀಯ ಮುಖಂಡನೊಬ್ಬ ಆಕೆಯನ್ನು ಕಂಡು ಮೋಹಗೊಂಡು ಆಕೆಯ ಸಂಗಕ್ಕಾಗಿ ಪರಿತಪಿಸುತ್ತಾನೆ. ಅದನ್ನು ತಿರಸ್ಕರಿಸುವ ಹನುಮಕ್ಕ ತಾನು ಕೇವಲ ದೇವರ ಸೇವಕಿ, ಅಂದರೆ ತಾಂಡವೇಶ್ವರನ ಸೇವೆಗೆ ಮಾತ್ರ ಮೀಸಲಾದವಳು ಎಂದು ತಿಳಿಸುತ್ತಾಳೆ. ಇದರಿಂದ ಕೋಪಗೊಂಡು ಆತ ಈಕೆ ಒಮ್ಮೆ ಲೇಪಾಕ್ಷಿಗೆ ಹೋಗಿದ್ದ ಸಮಯದಲ್ಲಿ ತಾಂಡವೇಶ್ವರ ಲಿಂಗವನ್ನು ಕಿತ್ತು ಕೆರೆಯಲ್ಲಿ ಹಾಕಿಸಿಬಿಡುತ್ತಾನೆ. ಲೇಪಾಕ್ಷಿಯಿಂದ ಮರಳಿದ ಸಾನಿ ಹನುಮಕ್ಕ ತನ್ನ  ಪ್ರಾಣಪ್ರಿಯನಾದ ತಾಂಡವೇಶ್ವರನನ್ನು ಕಾಣದೇ ಅದೇ ವೇದನೆಯಿಂದ ಆ ಜಾಗ ತೊರೆದು ಬಿಡುತ್ತಾಳೆ.

ನಂತರ ಒಮ್ಮೆ ಭೀಕರ ಕಾಯಿಲೆಗಳು ಅಲ್ಲಿನ ಗ್ರಾಮವನ್ನು ಮುತ್ತಿ ಸ್ಥಳೀಯ ಮುಖಂಡ  ಘೋರ ಸಾವು ಕಾಣುತ್ತಾನೆ. ಅದನ್ನು ಕಣ್ಣಾರೆ ಕಂಡ ಪೂಲಸಾನಿ ನಂತರ  ತಾಂಡವೇಶ್ವರನ ನೆನಪಿನಲ್ಲಿ ತನ್ನ ಅಂತಿಮ ಜೀವನ ಮುಗಿಸುತ್ತಾಳೆ ಎಂಬುದು ಇಲ್ಲಿನ ಐತಿಹಾಸಿಕ ಕಥನವಾಗಿದೆ.

ಕಂಬಗಳ ಮೇಲೆ ನೃತ್ಯ ಚಿತ್ರಗಳು

ಪುಲಸಾನಿವೊಡ್ಡು ಗ್ರಾಮದಲ್ಲಿರುವ ದೇವಸ್ಥಾನದ ಕಂಬಗಳ ಮೇಲೆ ಪೂಲಸಾನಿ ಹನುಮಕ್ಕ ಹಾಗೂ ಅಕ್ಕ ರಂಗಸಾನಿಯವರ ವಿವಿಧ ಬಗೆಯ ನೃತ್ಯ ಶೈಲಿಯ ಭಂಗಿಗಳನ್ನು ಕಾಣಬಹುದು. ಚೋಳರ ರಾಜ ಲಾಂಛನಗಳಾದ ಚಾಮರ-ಛತ್ರಿ, ನವಿಲುಗಳು, ನೃತ್ಯ, ಲತಾ ಬಳ್ಳಿಗಳ ಸೊಬಗು, ಕಂಬಗಳ ಮೇಲುಭಾಗದಲ್ಲಿ ಸಿಂಹಗಳ ಚಿತ್ರ, ವಿವಿಧ ಪ್ರಾಣಿಗಳ ಚಿತ್ರಗಳು, ಅಂಗಸೇವೆ-ರಂಗಸೇವೆಗಳ ಚಿತ್ರಗಳು ಇವೆಲ್ಲವನ್ನು ಇಂದಿಗೂ ಇವೆ.

ದೇಗುಲದ ಧ್ವಾರದಲ್ಲಿ ಹೂಗಳನ್ನು ಚೆಲ್ಲುತ್ತಾ ನಿಂತು ಸ್ವಾಗತಿಸುತ್ತಿರುವ ರಂಗಸಾನಿ, ಪುಲಸಾನಿಯವರ ಉಬ್ಬುಶಿಲ್ಪಗಳಂತೂ ಬೇಲೂರು ಶಿಲಾ ಬಾಲಿಕೆಯರಿಗಿಂತ ಕಲಾತ್ಮಕವಾಗಿವೆ. ಇವೆಲ್ಲಾ ಗತವೈಭವದ ಸಾಕ್ಷಿಗಳಾಗಿ, ಮೂಕವೇದನೆ ಅನುಭವಿಸುತ್ತಾ  ಪುಲಸಾನಿವೊಡ್ಡುವಿನ ಕಥೆ ಹೇಳುತ್ತಿವೆ.

ದೇವಾಲಯ ರಕ್ಷಿಸುವವರು ಯಾರು?

ದುರದೃಷ್ಟದ ವಿಚಾರವೆಂದರೆ, ಇಷ್ಟು ಅನನ್ಯ ಇತಿಹಾಸವಿರುವ ಈ ಪೂಲಸಾನಿ ಹನುಮಕ್ಕ ನಿರ್ಮಿಸಿದಂತಹ ಸುಂದರ ದೇವಾಲಯ ಎಂದು ಸ್ಥಳೀಯ ರಾಜಕೀಯ ನಾಯಕರ, ಸ್ಥಳೀಯ ಮುಖಂಡರ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಮುಜರಾಯಿ ಇಲಾಖೆಯವರ ಅಥವಾ ಪುರಾತತ್ವ ಇಲಾಖೆಯವರ ಗಮನಕ್ಕೂ ಬಾರದೇ ಮೂಕವಾಗಿ ರೋಧಿಸುತ್ತಾ ಈಗಲೋ ಆಗಲೋ ಮರೆಯಾಗಿಬಿಡುವ ಹಂತದಲ್ಲಿದೆ.

  • ಪಾಳುಬಿದ್ದಿರುವ ಅನನ್ಯ ದೇಗುಲ.

ಪಕ್ಕದಲ್ಲೇ ಬೆಳೆಸಿದ್ದ ಬೃಹತ್ ಗಾತ್ರದ ಗೋಣಿ ಮರವು ದೇಗುಲದ ಒಂದು ಪಾರ್ಶ್ವದಲ್ಲಿ  ಬಿದ್ದು ಇಡೀ ದೇವಸ್ಥಾನವನ್ನೇ ಹಾಳುಗೆಡವಿದೆ. ಸುತ್ತಲಿನ ಗೋಡೆಗಳು ಕದಲಿ ಬೀಳುವ ಹಂತದಲ್ಲಿವೆ. ಮೂಲ ತಾಂಡವೇಶ್ವರ ಲಿಂಗವಿಲ್ಲದೆ ಆ ಜಾಗದಲ್ಲಿ ವೀರಗಲ್ಲುಗಳನ್ನು ತಂದು ಇಡಲಾಗಿದೆ. ಇಂತಹ ಸುಂದರ ಕಲಾ ದೇವಾಲಯಗಳು ಒಮ್ಮೆ ಗತಿಸಿಹೋದರೆ ಮತ್ತೆ ಮರು ನಿರ್ಮಿಸಲು ಸಾದ್ಯವೇ? ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳ ಎಚ್ಚರಗೊಳ್ಳಲಿ, ಇತ್ತ ಗಮನ ಹರಿಸಿ ಗತವೈಭವಗಳ ಉಳಿವಿಗೆ ಗಮನ ನೀಡಿಲಿ ಜನರ ಮನವಿಯಾಗಿದೆ.

ಎಲ್ಲದೆ ಪುಲಸಾನಿವೊಡ್ಡು?

ಗುಡಿಬಂಡೆ ಪಟ್ಟಣಕ್ಕೆ ಹತ್ತು ಕಿ.ಮೀ. ದೂರದಲ್ಲಿರುವ ಹಂಪಸಂದ್ರಕ್ಕೆ ಒಂದು ಕಿ.ಮೀ ದೂರದಲ್ಲಿದೆ ಈ ದೇಗುಲ. ಈ ಐತಿಹಾಸಿಕ ದೇವಾಲಯ ಗ್ರಾಮದ ರಸ್ತೆ ಪಕ್ಕದಲ್ಲಿದೆ. ಸುಸ್ಥಿತಿಯಲ್ಲಿದ್ದಾಗ ಸ್ಥಳೀಯರು ಹೋಗಿ ಪೂಜೆ ಮಾಡುತ್ತಿದ್ದರು. ಪಾಳುಬಿದ್ದ ಮೇಲೆ ಜನ ಹೋಗುವುದನ್ನು ಬಿಟ್ಟರು. ಇತಿಹಾಸಕಾರರ ಕಣ್ಣಿಗೂ ಈ ದೇಗುಲ ಬಿದ್ದಿಲ್ಲದಿರುವುದು ದುರದೃಷ್ಟಕರ. ಈಗಾಗಲೇ ಅನೇಕ ಐತಿಹಾಸಿಕ ತಾಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಗುಡಿಬಂಡೆಗೆ ಈ ದೇಗುಲವು ಖಂಡಿತ ಒಂದು ಹೆಮ್ಮೆಯ ಗರಿಯಾಗಲಿದೆ. ಮುಂದಿನ ಸಂಶೋಧನೆಗೆ ಪೂರಕವಾಗಲಿದೆ.


ಯಾರು ಏನಂತಾರೆ?

ಪುಲಸಾನಿವೊಡ್ಡು ಗ್ರಾಮಕ್ಕೆ ನಾನು ಬೇಟಿ ಮಾಡಿದ್ದೆ. ಪುರಾತನ ಕಾಲದ ದೇವಲಯದ ದೃಶ್ಯ ಕಾಣುತ್ತದೆ. ಅದು ಸಂಪೂರ್ಣ ಅಳಿವಿನ ಅಂಚಿನಲ್ಲಿದೆ. ಗರ್ಭ ಗುಡಿಯಲ್ಲಿ ಈಗಲೂ ವಿಗ್ರಹಗಳಿವೆ. ಅವುಗಳ ಮೇಲೆ ಬರೆದಿರುವ ಅಕ್ಷರಗಳನ್ನು ಕಾಣಬಹುದು, ಇಂತಹ ಐತಿಹಾಸಿಕ ಸ್ಥಳಗಳು ತಾಲೂಕಿನಲ್ಲಿ ಹೆಚ್ಚಾಗಿವೆ. ಅವುಗಳ ಮಾಹಿತಿ ಪಡೆದು ಅಭಿವೃದ್ಧಿಗೆ ಮುಂದಾಗಬೇಕು. ಐತಿಹಾಸಿಕ ಹಿನ್ನಲೆ ಇರುವ ದೇವಾಲಯಗಳನ್ನು ಗುರುತಿಸಿ ಸರಕಾರ ಹಳೇ ದೇವಾಲಯಗಳ ಜೀರ್ಣೋದ್ದಾರ ಮಾಡಲು ಸಮಿತಿ ರಚಿಸಿ ಅಭಿವೃದ್ಧಿಗೆ ಮುಂದಾಗಬೇಕು.

ವಿ.ಲಕ್ಷ್ಮೀನಾರಾಯಣ, ಜಂಟಿ ಕಾರ್ಯದರ್ಶಿ ಮಾಜಿ ಸೈನಿಕರ ಸಂಘ ಚಿಕ್ಕಬಳ್ಳಾಪುರ ಜಿಲ್ಲೆ.

ತಾಂಡವೇಶ್ವರ ದೇಗುಲ ನಿರ್ಮಾಣದ ಬಗ್ಗೆ ಸಂಶೋಧನೆ ಆಗಬೇಕು. ಈ ದೇಗುಲವನ್ನು ಚೋಳರು ಕಟ್ಟಿಸಿದರಾ ಅಥವಾ ವಿಜಯ ನಗರ ಅರಸರು ನಿರ್ಮಿಸಿದರಾ ಎನ್ನುವ ಬಗ್ಗೆ ಅಧ್ಯಯನ ನಡೆಸಬೇಕಿದೆ. ದೇಗುಲದ ನಿರ್ಮಾಣದ ಚಹರೆ ವಿಜಯನಗರ ಕಲಾ ಪ್ರಕಾರವನ್ನೇ ಹೋಲುವುದರಿಂದ ಹಂಪಸಂದ್ರದ ತಾಂಡವೇಶ್ವರ ದೇಗುಲವನ್ನು ನಿರ್ಮಿಸಿರಬಹುದು.

ಸ.ನ.ನಾಗೇಂದ್ರ, ಇತಿಹಾಸಕಾರ, ಗುಡಿಬಂಡೆ

ಗುಡಿಬಂಡೆ ತಾಲೂಕಿನಲ್ಲಿ ಬಗೆದಷ್ಟು ಐತಿಹಾಸಿಕ ಮಾಹಿತಿ ಲಭ್ಯವಾಗುತ್ತಿದೆ. ಪುರಾತನ ದೇವಾಲಯ, ಕಲ್ಯಾಣಿ ಭಾವಿಗಳನ್ನು ಸಂರಕ್ಷಿಸಿ ಸ್ಮಾರಕಗಳ ನಿರ್ಮಾಣಕ್ಕೆ ಮುಂದಾಗಬೇಕು. ಮಿನಿ ಹಂಪಿಯಂತೆ ಅಭಿವೃದ್ಧಿ ಮಾಡಲು ಸರಕಾರ ಮುಂದಾಗಬೇಕು.  ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.

ಅರ್ಶಿತ, ಗುಡಿಬಂಡೆ ನಿವಾಸಿ

Tags: chikkaballapuracknewsnowCulturegudibandehampasandraheritagehistorical templehistorykarnatakanews
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಆಟ ಮುಗಿಸಿದ ಅಪ್ಪು, ಇನ್ನಿಬ್ಬರಿಗೆ ಬೆಳಕು

ಆಟ ಮುಗಿಸಿದ ಅಪ್ಪು, ಇನ್ನಿಬ್ಬರಿಗೆ ಬೆಳಕು

Leave a Reply Cancel reply

Your email address will not be published. Required fields are marked *

Recommended

ಬಾಂಬ್ ಇಟ್ಟ ಕಿರಾತಕ ಹೇಗಿದ್ದ? ಮಹತ್ವದ ಮಾಹಿತಿ ಕೊಟ್ಟ ಮುಖ್ಯಮಂತ್ರಿ

ಬಾಂಬ್ ಇಟ್ಟ ಕಿರಾತಕ ಹೇಗಿದ್ದ? ಮಹತ್ವದ ಮಾಹಿತಿ ಕೊಟ್ಟ ಮುಖ್ಯಮಂತ್ರಿ

2 years ago
ಅಧಿಕಾರದ ಕುರ್ಚಿಗೆ ವಿದಾಯ ಹೇಳಲು ಸಿದ್ಧರಾದರಾ ʼಬಲಶಾಲಿʼ ಯಡಿಯೂರಪ್ಪ! ಟೆಂಪಲ್‌ ರನ್‌ ಶುರುವಿಟ್ಟುಕೊಂಡ ಪುತ್ರ ವಿಜಯೇಂದ್ರ: ಹಾಗಾದರೆ, NEXT ಸಿಎಂ ಯಾರಪ್ಪ?

ಕೊರೊನ ಲಸಿಕೆ ಅಕ್ರಮ ಮಾರಾಟ ಮಾಡಿದರೆ ಜೈಲೇ ಗತಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ ವಾರ್ನಿಂಗ್

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ