• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಆಟ ಮುಗಿಸಿದ ಅಪ್ಪು, ಇನ್ನಿಬ್ಬರಿಗೆ ಬೆಳಕು

cknewsnow desk by cknewsnow desk
October 29, 2021
in GUEST COLUMN
Reading Time: 1 min read
0
ಆಟ ಮುಗಿಸಿದ ಅಪ್ಪು, ಇನ್ನಿಬ್ಬರಿಗೆ ಬೆಳಕು
1k
VIEWS
FacebookTwitterWhatsuplinkedinEmail

ಅಣ್ಣಾವ್ರರನ್ನು ಸೇರಿಕೊಂಡ ಅಪ್ಪು

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಇಹ ತ್ಯಜಿಸಿದ ನಂತರವೂ ನಮ್ಮನ್ನು ನೋಡಲಿದ್ದಾರೆ. ಹೌದು, ಅವರು ನೇತ್ರದಾನ ಮಾಡಿದ್ದಾರೆ. ನಮ್ಮಅಂಕಣಕಾರ ಡಾ.ಗುರುಪ್ರಸಾದ್‌ ಹವಲ್ದಾರ್‌ ಯುವರತ್ನನಿಗೆ ಅಕ್ಷರ ನಮನ ಸಲ್ಲಿಸಿದ್ದಾರೆ.

ಕರುನಾಡಿನ ಅಪ್ಪು ಅಭಿಮಾನಿ ಪಾಲಿನ ಪವರ್‌ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಇಹ ಲೋಕವನ್ನು ತ್ಯಜಿಸಿ ಬಾರದ ಲೋಕಕ್ಕೆ ತೆರಳಿದ್ದಾರೆ. ಒಲ್ಲದ ಮನಸ್ಸಿನಲ್ಲೇ ಈ ಕಹಿ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾದ ಸಂದರ್ಭ ಇದು. ಈ ವಿಚಾರವನ್ನು ಕರುನಾಡು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಅಪ್ಪು ಅಗಲಿಕೆ ಕರುನಾಡಿನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಅಪ್ಪು ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಮತ್ತೊಬ್ಬರ ಜೀವಕ್ಕೆ ಬೆಳಕಾಗಿದ್ದಾರೆ.

ಬಾಲ್ಯದಲ್ಲಿಯೇ ತಮ್ಮ ಅಭಿನಯದ ಛಾಪು ಪ್ರದರ್ಶಿಸಿದ್ದ ಪುನೀತ್ ರಾಜ್‌ಕುಮಾರ್, ‘ಅಪ್ಪು’ ಆಗಿ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಅಚ್ಚುಮೆಚ್ಚಿನ ನಟರಾದರು. ಹೆಸರಿನ ಮುಂದೆ ‘ರಾಜಕುಮಾರ’ ಎಂಬ ಕಿರೀಟವಿದ್ದರೂ ಅಣ್ಣಾವ್ರಂತೆಯೇ ಸರಳತೆಯನ್ನು ಮೈಗೂಡಿಸಿಕೊಂಡರು.

ಪುನೀತ್ ಸಿನಿಮಾಗಳಿಗೆ ಜನರ ಮನಸಿನಲ್ಲಿ ವಿಶೇಷ ಸ್ಥಾನವಿದೆ. ಏಕೆಂದರೆ ಅವರ ಚಿತ್ರಗಳು ಕುಟುಂಬ ಸಮೇತ ಕುಳಿತು ನೋಡುವಂತಹವು. ಉತ್ತಮ ಸಾಮಾಜಿಕ ಮೌಲ್ಯ ಹಾಗೂ ಅಂಶಗಳು ಇರುತ್ತಿದ್ದವು.

ಆರು ತಿಂಗಳ ಮಗುವಾಗಿರುವಾಗಲೇ 1976ರಲ್ಲಿ ‘ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಮಾ ಪರದೆ ಮೇಲೆ ಕಾಣಿಸಿಕೊಂಡವರು ಪುನೀತ್. 1977ರಲ್ಲಿ ಸನಾದಿ ಅಪ್ಪಣ್ಣ ಚಿತ್ರದಲ್ಲಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡಾಗ ಅವರಿಗೆ ಒಂದು ವರ್ಷ. 1978ರಲ್ಲಿ ‘ತಾಯಿಗೆ ತಕ್ಕ ಮಗ’, 1980ರಲ್ಲಿ ವಸಂತಗೀತ, 1981ರಲ್ಲಿ ಭೂಮಿಗೆ ಬಂದ ಭಗವಂತ ಮತ್ತು ಭಾಗ್ಯವಂತ, 1982ರಲ್ಲಿ ಹೊಸಬೆಳಕು ಮತ್ತು ಚಲಿಸುವ ಮೋಡಗಳು ಚಿತ್ರಗಳಲ್ಲಿ ಪುನೀತ್ ಅಭಿನಯಿಸಿದರು. ಚಲಿಸುವ ಮೋಡಗಳು ಚಿತ್ರಕ್ಕೆ ‘ಅತ್ಯುತ್ತಮ ಬಾಲನಟ’ ರಾಜ್ಯ ಪ್ರಶಸ್ತಿ ಬಂದಿತ್ತು.

1983ರಲ್ಲಿ ಭಕ್ತ ಪ್ತಹ್ಲಾದ ಮತ್ತು ಎರಡು ನಕ್ಷತ್ರಗಳು (ಅತ್ಯುತ್ತಮ ಬಾಲನಟ- ರಾಜ್ಯಪ್ರಶಸ್ತಿ) ಸಿನಿಮಾಗಳಲ್ಲಿ ಮಾಸ್ಟರ್ ಲೋಹಿತ್ ಮಿಂಚಿದರು. 1984ರಲ್ಲಿ ‘ಯಾರಿವನು’ ಚಿತ್ರದಲ್ಲಿ ನಟಿಸಿದರು. 1985ರಲ್ಲಿ ತೆರೆಕಂಡ ‘ಬೆಟ್ಟದ ಹೂವು’ ಪುನೀತ್ ಸಿನಿಮಾ ಜರ್ನಿಯಲ್ಲಿ ಮರೆಯಲಾಗದ ಸಿನಿಮಾ ಎನ್ನಬಹುದು. ಅದುವರೆಗಿನ ಸಿನಿಮಾಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರ ಜತೆಗೇ ಅಭಿನಯಿಸಿದ್ದರು. ಇದು ರಾಜ್‌ಕುಮಾರ್ ನಟಿಸದೆ ಇದ್ದ ಸಿನಿಮಾ. ಈ ಚಿತ್ರಕ್ಕಾಗಿ ಪುನೀತ್ ರಾಷ್ಟ್ರ ಪ್ರಶಸ್ತಿ ಪಡೆದರು. ಅದುವರೆಗೂ ‘ಮಾಸ್ಟರ್ ಲೋಹಿತ್’ ಆಗಿದ್ದ ಅವರು ಈ ಸಿನಿಮಾದಿಂದ ‘ಮಾಸ್ಟರ್ ಪುನೀತ್’ ಆದರು.

1988ರಲ್ಲಿ ಅವರು ಶಿವರಾಜ್‌ಕುಮಾರ್ ಜತೆ ಮೊದಲ ಬಾರಿ ‘ಶಿವ ಮೆಚ್ಚಿದ ಕಣ್ಣಪ್ಪ’ದಲ್ಲಿ ನಟಿಸಿದರು. ರಾಜ್‌ಕುಮಾರ್ ಅವರೊಂದಿಗೆ ಪುನೀತ್ ನಟಿಸಿದ ಕೊನೆಯ ಸಿನಿಮಾ 1989ರಲ್ಲಿ ತೆರೆ ಕಂಡ ‘ಪರಶುರಾಮ್’. ಪುನೀತ್ ಬಾಲನಟರಾಗಿ ನಟಿಸಿದ ಕೊನೆಯ ಸಿನಿಮಾ ಕೂಡ ಇದು. ಇದರ ನಂತರ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಬದುಕು ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು. ಅಲ್ಲಿಂದ ಸುಮಾರು 13 ವರ್ಷ ಪುನೀತ್ ಮತ್ತು ಸಿನಿಮಾ ನಡುವೆ ಸುದೀರ್ಘ ಅಂತರ ಉಂಟಾಯಿತು.

ಭರ್ಜರಿ ಎಂಟ್ರಿ ಕೊಟ್ಟ ‘ಅಪ್ಪು’ 2002ರ ಏಪ್ರಿಲ್‌ನಲ್ಲಿ ಪುರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಚಿತ್ರದ ಮೂಲಕ ಪುನೀತ್ ಸಿನಿಮಾ ರಂಗಕ್ಕೆ ರೀ ಎಂಟ್ರಿ ನೀಡಿದರು. ಈ ಬಾರಿ ಅವರು ನಾಯಕನಟನಾಗಿ ಕಾಲಿಟ್ಟರು.ಅಭಿಮಾನಿಗಳ ಪಾಲಿನ ಪ್ರೀತಿಯ ‘ಪವರ್ ಸ್ಟಾರ್’ ಆದರು, ‘ಅಭಿ’, ‘ವೀರ ಕನ್ನಡಿಗ’, ‘ಮೌರ್ಯ’, ‘ಆಕಾಶ್’, ‘ನಮ್ಮ ಬಸವ’, ‘ಅಜಯ್’, ‘ಅರಸು’, ‘ಮಿಲನ’ ಹೀಗೆ ಸಾಲು ಸಾಲು ಹಿಟ್‌ಗಳು ಚಿತ್ರಗಳು. ‘ಬಿಂದಾಸ್’, ‘ವಂಶಿ’, ‘ರಾಜ್ ದಿ ಶೋ ಮ್ಯಾನ್’, ‘ರಾಮ್’ ಸಿನಿಮಾಗಳದ್ದು ಒಂದು ತೂಕವಾದರೆ, ಪುನೀತ್ ಇಮೇಜ್‌ಅನ್ನು ಬದಲಿಸಿದ್ದು, 2010ರಲ್ಲಿ ತೆರೆ ಕಂಡ ದುನಿಯಾ ಸೂರಿ ನಿರ್ದೇಶನದ ‘ಜಾಕಿ’ ಚಿತ್ರ. ಅದೇ ಸಮಯದಲ್ಲಿ ಅವರ ವಿಭಿನ್ನ ಇಮೇಜ್‌ನ ‘ಪೃಥ್ವಿ’ ಕೂಡ ಜನಮನ್ನಣೆ ಗಳಿಸಿತು.

ಹುಡುಗರು’ ಚಿತ್ರದಲ್ಲಿ ಬಹುತಾರಾಗಣದಲ್ಲಿಯೂ ನಟಿಸಿದರು. ‘ಪರಮಾತ್ಮ’ದಂತಹ ವಿಭಿನ್ನ ಪಾತ್ರದಲ್ಲಿ ಸೈ ಎನಿಸಿಕೊಂಡರು. ‘ಅಣ್ಣಾ ಬಾಂಡ್’, ‘ಯಾರೇ ಕೂಗಾಡಲಿ’ ಚಿತ್ರಗಳು ಆಕ್ಷನ್ ಮತ್ತು ಸಾಮಾಜಿಕ ಮೌಲ್ಯದ ಎರಡು ಅಂಶಗಳನ್ನು ಬಿಂಬಿಸಿದವು. ‘ನಿನ್ನಿಂದಲೇ’ ಪುನೀತ್ ಅಭಿಮಾನಿಗಳಿಗೆ ಬೇಸರ ಮೂಡಿಸಿದರೆ, ‘ಪವರ್’ ಮತ್ತೆ ಹುರುಪು ತಂದುಕೊಟ್ಟಿತು. ‘ಮೈತ್ರಿ’ಯಲ್ಲಿ ಮೋಹನ್ ಲಾಲ್ ಜತೆ ನಟಿಸಿದರು ಮತ್ತು ರಾಜಕುಮಾರ, ಯುವ ರತ್ನ ಚಿತ್ರ ಗಳು ಅಭಿಮಾನಿಗಳಿಗೆ ಭರ್ಜರಿ ಮನೋರಂಜನೆ ಕೌಟುಂಬಿಕ ಮೌಲ್ಯಗಳನ್ನು ತಿಳಿಸುವಂತಹ ಚಿತ್ರ ವಾಗಿದ್ದವು.

ಸಿನಿಮಾಗಳ ಜತೆಗೆ ಕಿರುತೆರೆ ಶೋಗಳಲ್ಲಿಯೂ ಪುನೀತ್ ಜನರಿಗೆ ಹತ್ತಿರವಾಗಿದ್ದಾರು. ತಮ್ಮ ಸಿನಿಮಾಗಳಲ್ಲದೆ ಬೇರೆ ನಾಯಕರ ಸಿನಿಮಾಗಳಲ್ಲಿಯೂ ಹಾಡಿದ್ದಾರೆ. ಅವರು ಬಾಲನಟನಾಗಿ ಹಾಡಿದ್ದ ‘ಬಾನದಾರಿಯಲ್ಲಿ ಸೂರ್ಯ’, ‘ಕಾಣದಂತೆ ಮಾಯವಾದನು’, ‘ಕಣ್ಣಿಗೆ ಕಾಣುವ ದೇವರು’ ಎಂದಿಗೂ ಎವರ್‌ಗ್ರೀನ್ ಹಾಡುಗಳೆನಿಸಿವೆ.

ಬಾಲನಟನಾಗಿದ್ದರಿಂದ ನಾಯಕನಟನಾಗಿ ಇದುವರೆಗೂ ಪುನೀತ್ ನಟಿಸಿರುವ ಸಿನಿಮಾಗಳ ಸಂಖ್ಯೆ ಸುಮಾರು 44ಕ್ಕೂ ಹೆಚ್ಚು,ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 90ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಆಕ್ಷನ್, ಮೆಲೋಡ್ರಾಮಾ, ಸಸ್ಪೆನ್ಸ್ ಹೀಗೆ ವಿಭಿನ್ನ ಬಗೆಯ ಸಿನಿಮಾಗಳಲ್ಲಿ ನಟಿಸಿರುವ ಕೆಲವೇ ಸಮಕಾಲೀನ ನಟರಲ್ಲಿ ಪುನೀತ್ ಒಬ್ಬರು.

ನಿರ್ಮಾಪಕರಾಗಿ ಪುನೀತ್ ತಮ್ಮದೇ ಆದ ನಿರ್ಮಾಣ ಸಂಸ್ಥೆ ಇದ್ದರೂ, ಪ್ರಯೋಗಾತ್ಮಕ ಹಾಗೂ ಕಂಟೆಂಟ್ ಆಧಾರಿತ ಸಿನಿಮಾಗಳಿಂದ ಗುರುತಿಸಿಕೊಳ್ಳಲೆಂದೇ ‘ಪಿಆರ್‌ಕೆ ಪ್ರೊಡಕ್ಷನ್ಸ್’ ಆರಂಭಿಸಿದ್ದರು. ಈ ಮೂಲಕ ವಿಭಿನ್ನ ಸಿನಿಮಾಗಳನ್ನು ಮಾಡುವ ತಮ್ಮ ಬಹುಕಾಲದ ಕನಸನ್ನು ಈಡೇರಿಸಿಕೊಂಡಿದ್ದರು. ಇದರ ಮೊದಲ ಪ್ರಯತ್ನ ‘ಕವಲುದಾರಿ’ ಅಪಾರ ಮನ್ನಣೆ ಗಳಿಸಿತ್ತು. ‘ಮಾಯಾಬಜಾರ್ 2016’ ಸಿನಿಮಾ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ. ‘ಲಾ’ ಹಾಗೂ ಪ್ರೆಂಚ್ ಬಿರಿಯಾನಿ ಮತ್ತೊಂದು ಚಿತ್ರ ನಿರ್ಮಿಸಿದ್ದಾರೆ
ಅವರ ಹೋಮ್-ಪ್ರೊಡಕ್ಷನ್ಸ್ ಹೊರತುಪಡಿಸಿ ಇತರ ಹಾಡುಗಳಿಗೆ ಅವರ ಸಂಭಾವನೆಯನ್ನು ಚಾರಿಟಿಗಳಿಗೆ ನೀಡುತ್ತಿದ್ದರು. ಅನೇಕ ಸಮಾಜಿಕ ಕಾರ್ಯಗಳಲ್ಲಿ, ಸರ್ಕಾರಿ ಇಲಾಖೆಗಳ ಅನೇಕ ಯೋಜನೆಗಳಿಗೆ ಉಚಿತವಾಗಿ ರಾಯಭಾರಿಯಾಗಿದ್ದರು.

ಪುನೀತ್‌ರಾಜ್‌ಕುಮಾರ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂದಾಗ, ಅವ್ರು ಚಿಕಿತ್ಸೆ ಪಡೆದು ಹೊರ ಬರುತ್ತಾರೆ ಅನ್ನೋ ನಿರೀಕ್ಷೆ ಇತ್ತು. ಹಂಬಲ ಇತ್ತು. ಆದ್ರೆ ಯಾರ ಪ್ರಾರ್ಥನೆಯೂ ಆ ದೇವರಿಗೆ ಕೇಳಲಿಲ್ಲ ಎನಿಸುತ್ತೆ. ಅಪ್ಪು ಎಲ್ಲರ ಹಂಬವನ್ನೂ ಸುಳ್ಳು ಮಾಡಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕೇವಲ 46ನೇ ವಯಸ್ಸಿಗೆ ಪುನೀತ್ ರಾಜ್‌ಕುಮಾರ್‌ ಪತ್ನಿ, ಪುತ್ರಿಯನ್ನು ಅಸಂಖ್ಯಾತ ಅಭಿಮಾನಿಗಳನ್ನು ಅಗಲಿ ತಮ್ಮ ಜೀವನ ಯಾನವನ್ನು ಮುಗಿಸಿ ಹೋಗಿದ್ದಾರೆ.

ಅಪ್ಪು ಮತ್ತೆ ಕರುನಾಡಿನಲ್ಲಿ ಹುಟ್ಟಿಬನ್ನಿ.


ಡಾ.ಗುರುಪ್ರಸಾದ ಹವಲ್ದಾರ್

  • ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.

Tags: cknewsnowkannada actorkannada cinemakarnatakano morepower starpunith rajkumar
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

by cknewsnow desk
January 27, 2024
0

"ಒಬ್ಬರ ಜನನವು ಅವರ ಹಣೆಬರಹವನ್ನು ನಿಶ್ಚಯಿಸುವುದಿಲ್ಲ" ಎಂದ ಜನ ನಾಯಕ; ಅಪ್ಪಟ ಭಾರತರತ್ನ, ಮೀಸಲು ಕೊಟ್ಟು ಬದುಕು ಕಟ್ಟಿಕೊಟ್ಟ ಭಾರತದ ಭಾಗ್ಯವಿದಾತ

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

by cknewsnow desk
January 21, 2024
0

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ಶ್ರೀರಾಮಪ್ರಭುವೇ ಕ್ಷಮಿಸು! ನಿನ್ನ ಹೆಸರಿಟ್ಟುಕೊಂಡವರೆಲ್ಲ ನಿನ್ನವರಲ್ಲ!!

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಮಂದಿರಕ್ಕೆ ಅಂಕುರಾರ್ಪಣೆ ಆಗಿದ್ದು ಹೇಗೆ?

by cknewsnow desk
January 19, 2024
0

ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

by cknewsnow desk
December 28, 2023
0

ನಿಜದ ಜಾಡು ಹಿಡಿದು ಹೊರಟ ನಿಡುಮಾಮಿಡಿ ಶ್ರೀಗಳ ಹೋರಾಟಕ್ಕೆ 33 ವರ್ಷ

ಅಖಂಡ ಭಾರತದ ಅಷ್ಟದಿಕ್ಕುಗಳ ಆಮೂಲಾಗ್ರ ಅಭಿವೃದ್ಧಿಗೆ ಸುವರ್ಣ ಅಧ್ಯಾಯ ಬರೆದವರೇ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ

ಅಟಲ್ ಎಂದರೆ ಅಜಾತಶತ್ರು

by cknewsnow desk
December 25, 2023
0

ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ, ಉತ್ತಮ ಆಡಳಿತ ದಿನ by Dr.Gurupeasad Hawaldar ಜಾಗತಿಕ ಮಟ್ಟದ ಶ್ರೇಷ್ಠ ನಾಯಕರ ಸಾಲಿನಲ್ಲಿ ಗೌರವಿಸಲ್ಪಡುವ  ನಿಸ್ವಾರ್ಥ ರಾಜಕಾರಣಿ,...

ಶಿಕ್ಷಣ, ಶಿಕ್ಷಕ ಮತ್ತು ಬದಲಾವಣೆ; ನೂತನ ಶಿಕ್ಷಣ ನೀತಿಯ ಹೊತ್ತಿನಲ್ಲಿ ಓಶೋ ಜೋಶ್..

ಓಶೋ: ಬೆರಗು, ಬೆಡಗು ಮತ್ತು ವಿಸ್ಮಯ

by cknewsnow desk
December 11, 2023
0

ಇಂದು ಓಶೋ ಜನ್ಮದಿನ

Next Post
ಅಪ್ಪು ಇನ್ನು ನೆನಪು

ಅಪ್ಪು ಇನ್ನು ನೆನಪು

Leave a Reply Cancel reply

Your email address will not be published. Required fields are marked *

Recommended

ಆಡಳಿತ ಪಕ್ಷಕ್ಕೆ ಬಿತ್ತಾ ಕೋವಿಡ್‌ ಹೊಡೆತ!! ಸಿಎಂ ತವರು ಶಿವಮೊಗ್ಗ ಜಿಲ್ಲೆಯಲ್ಲೇ ಮುಗ್ಗರಿಸಿದ ಬಿಜೆಪಿ, ಬಳ್ಳಾರಿಯಲ್ಲೂ ಕಾಂಗ್ರೆಸ್‌; ಮಡಿಕೇರಿಯಲ್ಲಿ ಮಾತ್ರ ಅರಳಿದ ಕಮಲ

17 ಅಭ್ಯರ್ಥಿಗಳ ಕಾಂಗ್ರೆಸ್ ಪಟ್ಟಿ; ಎಂ.ಎಲ್.ಅನಿಲ್ ಕುಮಾರ್‌ಗೆ ಕೋಲಾರ-ಚಿಕ್ಕಬಳ್ಳಾಪುರ ಟಿಕೆಟ್

3 years ago
ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ

1 year ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ