ಎಲ್ಲಾ ಖಾಸಗಿ ಸಂಸ್ಥೆಗಳು ಸಾಮಾಜಿಕ ಕಾಳಜಿ ವಹಿಸಬೇಕು: ಶಾಸಕ ಅಖಂಡ ಶ್ರೀನಿವಾಸ್
By GS Bharath Gudibande
ಬೆಂಗಳೂರು: ಮುತ್ತೂಟ್ ಫೈನಾನ್ಸ್ ಸಂಸ್ಥೆಯ ಸಾಮಾಜಿಕ ಕಾಳಜಿಯನ್ನು ಇತರೆ ಸಂಸ್ಥೆಗಳೂ ಸಹ ಅಳವಡಿಸಿಕೊಂಡರೆ ಸಮಾಜಿಕ ಸುಧಾರಣೆಗೆ ಸಹಕಾರವಾಗುತ್ತದೆ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಲಹೆ ನೀಡಿದರು.
ಪುಲಿಕೇಶಿ ನಗರ ವಿಧಾನಸಭೆ ಕ್ಷೇತ್ರದ ಪೆರಿಯಾರ್ ನಗರ ಫುಟ್ಬಾಲ್ ಮೈದಾನದಲ್ಲಿ ಮುತ್ತೂಟ್ ಫೈನಾನ್ಸ್ ವತಿಯಿಂದ ಆಯೋಜಿಸಿದ್ದ ಬಡವರಿಗೆ ಸ್ವಯಂ ವ್ಯಾಪಾರ ಕಲ್ಪಿಸುವ ನಿಟ್ಟಿನಲ್ಲಿ ತಳ್ಳುವ ಗಾಡಿಗಳು ಹಾಗೂ ಬೀದಿ ಬದಿಯ ನಿರಾಶ್ರಿತರಿಗೆ ಬೆಡ್ ಶೀಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುತ್ತೂಟ್ ಫೈನಾನ್ಸ್ ಎಲ್ಲಾ ಫೈನಾನ್ಸ್ ಸಂಸ್ಥೆಗಳಂತೆ ಕೇವಲ ಲಾಭ ಗಳಿಸುವ ಸಂಸ್ಥೆಯಲ್ಲದೆ ಬಡವರ ಹಿತರಕ್ಷಣೆಗೆ ಮತ್ತು ಅಭಿವೃದ್ದಿಗೆ ಅನೇಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಾಮಾಜಿಕ ಸುಧಾರಣೆ ಮತ್ತು ಅಭಿವೃದ್ದಿಗೆ ಮುಂದಾಗಿದೆ. ಈ ಸಂಸ್ಥೆಯಂತೆಯೇ ಪ್ರತೀ ಖಾಸಗಿ ಸಂಸ್ಥೆಯು ಸಮಾಜಮುಖಿ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಮುತ್ತೂಟ್ ಫೈನಾನ್ಸ್ ಸಂಸ್ಥೆಯು ಕೊವಿಡ್ ಸಮಯದಲ್ಲಿ ಸಾರ್ವಜನಿಕರಿಗೆ ಆಸ್ಪತ್ರೆಗಳಿಗೆ, ಕೊವಿಡ್ ವಾರಿಯರ್ಸ್ ಗೆ ಕಿಟ್ ಸಹ ನೀಡಿದ್ದರು. ಈ ಕ್ಷೇತ್ರ ಅತ್ಯಂತ ಬಡವರು ಇರುವುದರಿಂದ ಅವರ ಸ್ವಯಂ ಉದ್ಯೊಗ ಕಲ್ಪಿಸುವನಿಟ್ಟಿನಲ್ಲಿ ತಳ್ಳುವ ಗಾಡಿ, ವೈಟ್ ಸ್ಕೇಲ್ ಯಂತ್ರ ಮತ್ತು ಆರಂಭಿಕ ಹೂಡಿಕೆಗೆ ಆರ್ಥಿಕ ನೆರವು ನೀಡುವುದರ ಮೂಲಕ ಬಡ ಕುಟುಂಬಗಳು ಹೊಸ ಜೀವನ ರೂಪಿಸಿಕೊಳ್ಳಲು ನೆರೆವು ನೀಡುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದರು.
ಡಿಜೆಹಳ್ಳಿ ಪೊಲೀಸ್ ಠಾಣೆಯ ಸಿಐ ಕಿರಣ್ ಕುಮಾರ್ ಮಾತನಾಡಿ, ಮುತ್ತೂಟ್ ಸಂಸ್ಥೆಯು ಬಡ ಮಕ್ಕಳ ವಿಧ್ಯಾಭ್ಯಾಸ, ಬಡ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ಸಹಕಾರ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು, ಇದರ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಮತ್ತೂಟ್ ಫೈನಾನ್ಸ್ ಲಿಮಿಟೆಡ್ ನ ಜನರಲ್ ಮ್ಯಾನೇಜರ್ ಜೆ.ಎಸ್.ಹಿರೇಮಠ್ ಮಾತನಾಡಿ; ಮುತ್ತೂಟ್ ಸಂಸ್ಥೆ ವತಿಯಿಂದ ಪುಲಿಕೇಶಿ ನಗರದ 20 ಕುಟುಂಬಗಳಿಗೆ 20 ತಳ್ಳುವ ಗಾಡಿಗಳು, ವೇಟ್ ಸ್ಕೇಲ್, ಆರಂಬಿಕ ಹೂಡಿಕೆಗೆ ಆರ್ಥಿಕ ನರೆವು ಮತ್ತು 500 ನಿರಾಶ್ರಿತರಿಗೆ ಕಂಬಳಿಗಳನ್ನು ವಿತರಸಲಾಗಿದೆ ಎಂದು ವಿವರಿಸಿದರು.
ಕಾರ್ಯಕ್ರದಲ್ಲಿ ಮುತ್ತೂಟ್ ಫೈನಾನ್ಸ್ ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಸುಬ್ರಮಣ್ಯ ಜೋಶಿ, ಮುಖ್ಯಸ್ಥ ಜೆ. ಸುನಿಲ್, ಹಿರಿಯ ವ್ಯವಸ್ಥಾಪಕ ಅಜಿತ್ ಕುಮಾರ್, ಪ್ರಾದೇಶಿಕ ನಿರ್ವಾಹಕ ಪುಣ್ಯಮೂರ್ತಿ, ವ್ಯವಸ್ಥಾಪಕ ಮಹೇಶ ಜಿ.ಆರ್. ಹಣಕಾಸು ಸಂಸ್ಥೆಯ ಸಂಯೋಜಕ ಧನುಷ್ ರಾಮರ್, ಆಕ್ಟ್ ಆಫ್ ಲವ್ ಎನ್‌ಜಿಒ ಪ್ರಧಾನ ಕಾರ್ಯದರ್ಶಿ ಇಮ್ಯಾನುಯೆಲ್, ಆಕ್ಟ್ ಆಫ್ ಲವ್‌ನ ಸಲಹೆಗಾರ ಪನೀರ್ ಸೆಲ್ವಂ ಮತ್ತು ಮುತ್ತೂಟ್ ಫೈನಾನ್ಸ್ ಲೋಕೇಶ್ ಕಾರ್ಯಕ್ರಮದ ಭಾಗವಾಗಿದ್ದರು.
Really it’s a great job. All the business PPL if follow the same thing entire India will be rich in each n every movement