• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಶ್ರೀ ಎಂ ಎಂಬ ಅಧುನಿಕ ಭಾರತದ ಸಂತ

cknewsnow desk by cknewsnow desk
November 21, 2021
in GUEST COLUMN
Reading Time: 2 mins read
0
ಶ್ರೀ ಎಂ ಎಂಬ ಅಧುನಿಕ ಭಾರತದ ಸಂತ
1.1k
VIEWS
FacebookTwitterWhatsuplinkedinEmail

ಶ್ರೀ ಎಂ ಅವರು ಭಾರತದ ಸಾತ್ವಿಕ ಶಕ್ತಿಯನ್ನು ಜಗತ್ತಿಗೆ ತೋರಿದ ಮಹಾಪುರುಷರಲ್ಲಿ ಒಬ್ಬರು. ತಮ್ಮ ವಿಚಾರ, ತತ್ತ್ವಗಳಿಂದ ಈಗ ಸಮಾಜದ ಆತ್ಮಸ್ಥೈರ್ಯವೇ ಆಗಿದ್ದಾರೆ. ಅಂಥವರ ಬಗ್ಗೆ ನಮ್ಮ ಅಂಕಣಕಾರ ಡಾ.ಗುರುಪ್ರಸಾದ್‌ ಹವಲ್ದಾರ್‌ ಒಂದು ಅರ್ಥಪೂರ್ಣ ಲೇಖನ ಬರೆದಿದ್ದಾರೆ.

ಅಧ್ಯಾತ್ಮ ಸಾಧಕರ ಪುಣ್ಯಭೂಮಿ ನಮ್ಮ ಭಾರತ. ಸಾವಿರಾರು ವರ್ಷಗಳಿಂದ ಅನೇಕ ಋಷಿಮುನಿಗಳು, ಯೋಗಿಗಳು, ಅವಧೂತರು, ಆಧ್ಯಾತ್ಮ ಸಾಧನೆಯಲ್ಲಿ ತೊಡಗಿ ಜನರನ್ನು, ಸಮುದಾಯಗಳನ್ನು, ಸಮಾಜವನ್ನು ಸ್ವಾಸ್ಥ್ಯ ಉನ್ನತಿಯಡೆಗೆ ಇಂದಿಗೂ ಕರೆದೊಯ್ಯುತ್ತಿದ್ದಾರೆ. ಅಂತಹವರಲ್ಲಿ ಶ್ರೀ ಎಂ ಒಬ್ಬರು.

ಶ್ರೀ ಎಂ ಅವರು ಹುಟ್ಟಿದ್ದು 1948ರಲ್ಲಿ, ಕೇರಳದ ತಿರುವಂತನಪುರ ಸಮೀಪದ ವಂಚಿಯೂರಿನಲ್ಲಿ. 9ನೇ ವಯಸ್ಸಿನಲ್ಲಿ ನಾಥ ಪಂಥ ಪರಂಪರೆಯ ಯೋಗಿ ಮಹೇಶ್ವರನಾಥ ಬಾಬಾಜಿ ಅವರ ದಾರ್ಶನಿಕ ಸ್ಪರ್ಶ ಪಡೆದ ಬಾಲಕ ಅಲಿ, 19ನೇ ವಯಸ್ಸಿನಲ್ಲಿ ಗುರುವನ್ನು ಹುಡುಕಿ ಹೊರಟಿದ್ದು ಹಿಮಾಲಯದ ಶಿಖರಗಳ ಕಡೆಗೆ.

ಪರೀಕ್ಷೆ ಶುಲ್ಕ ಕಟ್ಟಲು ನೀಡಿದ್ದ ಹಣದಲ್ಲಿಯೇ ಹರಿದ್ವಾರ ತಲುಪಿದ ಮಮ್ತಾಜ್ ಅಲಿ, ನಾಥಪಂಥದ ಸಾಧುಗಳನ್ನು ಅರಸಿ, ಅವರ ಒಡನಾಡಿದರು. ಹರಿದ್ವಾರ, ಬದರೀನಾಥ್‌ದಲ್ಲಿ ಸಾಧುಗಳು, ಕಾಪಾಲಿಕರು, ಸಿದ್ಧರು, ತಾಂತ್ರಿಕರು, ಶಾಕ್ತರ ಸಂಸರ್ಗದಲ್ಲಿ ತಲ್ಲೀನರಾದರು. ಅಲ್ಲಿಂದ ಹೃಷಿಕೇಶದ ಡಿವೈನ್ ಲೈಫ್ ಸೊಸೈಟಿಗೆ ಸೇರಿಕೊಂಡ ಅವರು, ನಾಥಪಂಥದ ಅಧ್ಯಯನ ನಡೆಸಿ, ಸಿದ್ಧಸಾಧಕರ ವಿದ್ಯೆ ಕಲಿತರು. ಯೋಗ, ಉಪನಿಷತ್‌ಗಳ ಅಧ್ಯಯನ ಕೈಗೊಂಡರು. ಹಿಮಾಲಯದ ತಪ್ಪಲಿನ ‘ವ್ಯಾಸ ಗುಹೆ’ಯಲ್ಲಿ ನಾಥಪಂಥ ಪರಂಪರೆಯ ಸಾಧನೆಯನ್ನೂ ಮಾಡಿದರು.

ಹೀಗಿರುವಾಗಲೇ ತಾವು 9ನೇ ವಯಸ್ಸಿನಲ್ಲಿ ಕಂಡಿದ್ದ ಮಹೇಶ್ವರನಾಥ ಬಾಬಾಜಿ ಅವರ ದರ್ಶನವೂ ಆಯಿತು. ಮೂರೂವರೆ ವರ್ಷಗಳ ಕಾಲ ಮಹೇಶ್ವರನಾಥರ ಜತೆ ಬದುಕಿ, ಅವರು ಹೋದಲ್ಲೆಲ್ಲಾ ಅವರ ನಡೆಯನ್ನು ಹಿಂಬಾಲಿಸಿದ ಮಮ್ತಾಜ್, ಅವರ ಏಕೈಕ ಶಿಷ್ಯರಾದರು. ಕುಂಡಲಿನಿ ವಿದ್ಯೆ ಕರಗತ ಮಾಡಿಕೊಂಡರು.

ಮುಸ್ಲಿಂನಾಗಿ ಹುಟ್ಟಿ, ಭಾರತೀಯ ಅಧ್ಯಾತ್ಮಿಕ ಪರಂಪರೆಯ ಪ್ರಧಾನ ಧಾರೆಯಾಗಿರುವ ನಾಥಪಂಥದಲ್ಲಿ ಸಾಧನೆಯನ್ನೂ ಮಾಡಿದರು. ತಮ್ಮದು ನಾಥ ಪಂಥದ ಗುರುಪರಂಪರೆ ಎಂದು ಒಪ್ಪಿಕೊಳ್ಳುವ ಅವರು, ತಮ್ಮ ಹಿಂದಿನ ಜನ್ಮದ ಮಧುಕರನಾಥ ಈ ಜನ್ಮದ ಮುಮ್ತಾಜ್ ಅಲಿ ಹೆಸರಿನ ಮೊದಲಕ್ಷರ ‘ಎಂ’ ಎಂದು ಅಭಿಮಾನದಿಂದ ಗುರುತಿಸಿ ಕೊಂಡವರು. ಹಿಮಾಲಯದ ಹೆಸರಾಂತ ಸಂತ ನೀಮ್ ಕರೋಲಿ ಬಾಬಾ, ಲಕ್ಷ್ಮಣ ಜೋ ಸಾಂಗತ್ಯದಲ್ಲಿ ಬೆಳೆದವರು. ದಾರ್ಶನಿಕ ಜಿಡ್ಡು ಕೃಷ್ಣಮೂರ್ತಿ, ಕೋಲ್ಕೊತಾ, ಮುಂಬಯಿಯ ರಾಮಕೃಷ್ಣ ಮಿಷನ್, ಕೇರಳ-ಮಹಾರಾಷ್ಟ್ರದ ಸೂಫಿಸಂತರ ಜತೆ ದಶಕಗಳ ಕಾಲ ಇದ್ದು, ಅವರ ಅನುಭವ ಸಾರವನ್ನು ಮೈಗೂಡಿಸಿಕೊಂಡವರು.

ಶ್ರೀ ಎಂ ಅವರು ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ಸತ್ಸಂಗ ಫೌಂಡೇಷನ್ ಸ್ಥಾಪಿಸಿ ಬುಡಕಟ್ಟು ಪ್ರದೇಶದ ಮಕ್ಕಳಿಗೆ ಉಚಿತವಾಗಿ ಶಾಲೆ, ಜೊತೆಗೆ ಸಾಮಾಜಿಕ ಚಟುವಟಿಕೆಗಳು ಕೈಗೊಂಡರು, ಕೋಮು ಸೌಹಾರ್ದತೆಗೆ ಧಕ್ಕೆ ಬಂದಾಗ ಅಂತಹ ಸ್ಥಳಕ್ಕೆ ಸ್ವಯಂಸೇವಕರು ಜತೆ ತೆರಳಿ ಶಾಂತಿ ಸ್ಥಾಪಿಸುವ ಕೈಂಕರ್ಯವನ್ನು ಕೈಗೊಳ್ಳುವುದು, ಒಟ್ಟಿನಲ್ಲಿ ಮಾನವೀಯತೆ, ಮಾನವತ್ವ ದೊಡ್ಡದು ಎನ್ನುವ ಸಂದೇಶ ಬೀರುವ ಪ್ರಯತ್ನ ಮಾಡುತ್ತಾ ಸದ್ಯ ಮದನಪಲ್ಲಿಯಲ್ಲಿ ನೆಲೆಸಿದ್ದಾರೆ.

ಸತ್‌ ಅಂದರೆ ಸತ್ಯ. ಸಂಗ ಅಂದರೆ ಗುಂಪು. ಕೆಲವು ಜನರು ಸೇರಿಕೊಂಡು ರಚಿಸಿರುವುದೇ ಒಂದು ಗುಂಪು. ಸತ್ಯದ ಶೋಧನೆ ನಡೆಯುತ್ತಿದೆ. ಅದುವೇ ಸತ್ಸಂಗ. ಅದು ಯಾವುದೇ ಮಾರ್ಗದಲ್ಲಿ ಇರಬಹುದು. ಜತೆಗೆ, ‘ಮಾನವ’ ಸೇವೆಗಳನ್ನು ಕೈಗೊಳ್ಳುತ್ತಾ ಜಗತ್ತಿನಾದ್ಯಂತ ಇದಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.

ಭಾರತೀಯ ಋಷಿ ಪರಂಪರೆಯ ಕೊಡುಗೆ ಕುರಿತು ‘ವಿಸ್‌ಡಮ್ ಆಫ್ ಋಷೀಸ್’,

(Wisdom of the Rishis: The Three Upanishads (Ishavasya, Keno, Mandukya). Trans. Kamal Aswami. Satsang Communications, 2002.)

ವೇದಾಂತ, ಭಗವದ್ಗೀತೆ, ಉಪನಿಷತ್‌ಗಳ ಸಾರವನ್ನು ವಿವರಿಸುವ ‘ಜ್ಯುವೆಲ್ ಆಫ್ ಲೋಟಸ್’

(Jewel in the Lotus: Deeper Aspects of Hinduism. Magenta Press, 2011)

The Little Guide to Greater Glory and a Happier Life. Magenta Press, 2014.

The Upanishads: Katha – Prashna – Mundaka. Magenta Press, 2017.

Shunya. Westland by Amazon, 2018.

On Meditation : Finding Infinite Bliss and Power Within. Penguin Random House India, 2019.

ಸೇರಿದಂತೆ ಹತ್ತಾರು ಪುಸ್ತಕ ಬರೆದಿದ್ದಾರೆ. ಅಲ್ಲದೇ ಶ್ರೀ ಎಂ ರ ಆತ್ಮಚರಿತ್ರೆಯಾದ ‘ಹಿಮಾಲಯದ ಗುರುವಿನ ಗರಡಿಯಲ್ಲಿ’ (Apprenticed to a Himalayan Master. Magenta Press, 2010.)ಎಂಬ ಕೃತಿ ಆಧ್ಯಾತ್ಮಿಕತೆ ಸಾಧನೆಯಲ್ಲಿ ಇರುವವರಿಗೆ  ಪಥ  ತೊರುವದಾಗಿದೆ, ಅದರ ಮುಂದುವರಿದ ಭಾಗವಾದ   ‘ಪಯಣ ನಿರಂತರ’ (The Journey Continues: A sequel to Apprenticed to a Himalayan Master. Magenta Press, 2017.) ಎಂಬ ಕೃತಿಯು  ಕನ್ನಡಕ್ಕೆ ಅನುವಾದಗೊಂಡು ಜನಪ್ರಿಯವಾಗಿದೆ.

‘ಶ್ರೀ ಎಂ’ ವರು ದೇಶದಲ್ಲಿ  ಶಾಂತಿ, ಕೋಮು ಸೌಹಾರ್ದ, ಸಹಿಷ್ಣುತೆಗಾಗಿ  ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮಹಾಯಾತ್ರೆಯನ್ನು  2016 ಜ.12 ಸ್ವಾಮಿ ವಿವೇಕಾನಂದರ ಜಯಂತಿಯಂದು ‘ಭರವಸೆಯ ನಡಿಗೆ’ ಎಂಬ ಮಹಾ ಯಾತ್ರೆ ಪ್ರಾರಂಬಿಸಿ11 ರಾಜ್ಯಗಳು 86 ಜಿಲ್ಲೆಗಳಲ್ಲಿ ಕ್ರಮಿಸಿದ ಐತಿಹಾಸಿಕ ಮಹಾ ಪಾದಯಾತ್ರೆ  ಕನ್ಯಾಕುಮಾರಿಯ ಝಿರೊ ಪಾಯಿಂಟ್‌ನಿಂದ   ಕೈಗೊಂಡು   500 ದಿನಗಳ ಕಾಲ 7500 ಕಿ.ಮೀ ಸುದೀರ್ಘ ಯಾನವು ಕಾಶ್ಮೀರ ದ ಶ್ರೀನಗರ ತಲುಪಿ ಜನರ ಮನಗೆದ್ದರು.

ಅಧ್ಯಾತ್ಮಕ್ಕೆ ಗಡಿಗಳಿಲ್ಲ. ಧರ್ಮದ ಮಿತಿಯೂ ಅದಕ್ಕಿಲ್ಲ. ಧರ್ಮದ ಜತೆ ಅಧ್ಯಾತ್ಮವನ್ನು ಹೋಲಿಸುವುದು ಸರಿ ಅಲ್ಲ. ಧರ್ಮಕ್ಕೆ ಇದು ಅನ್ವಯಿಸುವುದೇ ಇಲ್ಲ. ಯಾವುದೇ ಧರ್ಮದವರು ಅಧ್ಯಾತ್ಮವನ್ನು ಪಾಲಿಸಬಹುದು. ಮಾನವನ ಉದ್ಧಾರಕ್ಕೆ ಅಧ್ಯಾತ್ಮ ಇದೆ. ಜಾತಿ ಹಂಗೂ ಅದಕ್ಕಿಲ್ಲ. ಶಾಂತಿ ಮತ್ತು ಸೌಹಾರ್ದತೆಗಾಗಿ ಆಧ್ಯಾತ್ಮ.ನೈತಿಕತೆ ಜೀವನ ಸಾಧನೆಗೆ ಆಧ್ಯಾತ್ಮವೇ ಮಾರ್ಗ. ಸತ್ಯದ ಮಾರ್ಗದಲ್ಲಿ ಜೀವನ ಸಾಗಿಸಲು, ಇನ್ನೊಬ್ಬರ ಜತೆ ಉತ್ತಮ ಬಾಂಧವ್ಯ ಹೊಂದುವುದೇ ಅಧ್ಯಾತ್ಮ. ಇಂತಹ ಮಾರ್ಗ ಅನುಸರಿಸಲು ಇಂದಿನ ಯುವಕರು ಉತ್ಸುಕರಾಗಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾಗಿದೆ ಅಷ್ಟೇ. ಯುವಕರಿಂದ ದೊರೆಯುತ್ತಿರುವ ಪ್ರತಿಕ್ರಿಯೆ ಅದ್ಭುತ. ಅವರಲ್ಲಿ ಸೃಜನಶೀಲ ಯೋಜನೆಗಳಿವೆ. ಗುರು ಯಾವಾಗಲು ಸದಾ ಶಿಷ್ಯನ ಜತೆ ಸರಳ ರೀತಿಯಲ್ಲಿ ಮಾತನಾಡುತ್ತಿರಬೇಕು. ಗುರು ಮತ್ತು ಶಿಷ್ಯನ ನಡುವೆ ಅಂತರ ಇರಬಾರದು. ಅದು ಕುಳಿತುಕೊಳ್ಳುವ ಜಾಗವೇ ಇರಬಹುದು. ಆಗ ಉತ್ತಮ ಸಂಪರ್ಕ ಮತ್ತು ಬೋಧನೆ ಸಾಧ್ಯ.

ಈ ಬಾರಿ ನಡೆದ ಕುಂಭಮೇಳದಲ್ಲಿ ಅಪ್ಪಟ ವೈಷ್ಣವ ಅನುಯಾಯಿಯಂತೆ ಹಣೆಗೆ ಯು ಆಕಾರದ ಗಂಧದ ತಿಲಕ ಹಚ್ಚಿ, ಸನ್ಯಾಸಿಗಳು ಧರಿಸುವ ತಿಳಿ ಬಣ್ಣದ ಕುರ್ತಾ ಧರಿಸಿ ಅಗ್ನಿಕುಂಡದ ಮುಂದೆ ಕುಳಿತ ಹೋಮ ಮಾಡಿದರು, ಅಲ್ಲದೇ ಬೈರಾಗಿ ಕ್ಯಾಂಪ್‌ʼಗಳಿಗೆ ತೆರಳಿ ಉಪನಿಷತ್ ಸೂತ್ರ, ಭಗವದ್ಗೀತ, ವೇದಾಂತದ ಬಗ್ಗೆ ತಮ್ಮ ಸ್ವ ಅನುಭವವನ್ನೂ ಸೇರಿಸಿ  ಪ್ರವಚನವನ್ನು ನೀಡಿದ್ದರು.

ಕುಂಭಮೇಳದಲ್ಲಿ ಇವರು ಇವರದ್ದೇ ಆದ ಅಖಾಡ, ಯೋಗ ಧಾಮ, ಸಾಧು ಸೇವಾ ಮಾಡುವುದರೊಂದಿಗೆ ಭಜನೆಯನ್ನೂ ಮಾಡಿದರು. ದೇವರು ಬೇರೆ ಬೇರೆ ನಾಮಗಳಿಂದ ಕರೆಯಲ್ಪಡುತ್ತಾನೆ ಅಷ್ಟೆ. ಅಲ್ಲಾ, ಕ್ರೈಸ್ಟ್, ಕೃಷ್ಣ ಮತ್ತು ಹಲವು ನಾಮ. ಈ ಭಿನ್ನ ಹೆಸರುಗಳ ಹೊರತಾಗಿ ದೇವರು ಒಬ್ಬನೇ. ಒಮ್ಮೆ ಈ ಜ್ಞಾನ ಪಡೆದರೆ ಎಲ್ಲರೂ ಹುಡುಕುವುದು ಇದೇ ಜ್ಞಾನ ಎಂಬುದು ಅರಿವಾಗುತ್ತದೆ ಎನ್ನುತ್ತಾರೆ.

‘ಎಂ’ ಅಂದರೆ ಮನುಷ್ಯ, ಮಾನವತಾವಾದ. ಒಬ್ಬ ವ್ಯಕ್ತಿ ಕ್ರೈಸ್ತ ಧರ್ಮದಲ್ಲಿ ಜನಿಸಿ ಹಿಂದೂಗಳ ಮನೆಯಲ್ಲಿ ಬೆಳೆದರೆ ಆತನನ್ನು ಹರಿಕೃಷ್ಣ ಎಂದು ಕರೆಯಲಾಗುತ್ತದೆ. ಇಲ್ಲಿ ಕೇವಲ ಹೆಸರು ಮುಖ್ಯವಾಗುವುದಿಲ್ಲ. ಆತನ ನಡೆ, ಗುಣಧರ್ಮ ಮುಖ್ಯವಾಗುತ್ತದೆ. ಅಂತಿಮವಾಗಿ ನಾವೆಲ್ಲ ಮನುಷ್ಯರು. ಮನುಷ್ಯತ್ವದ ಮಹತ್ವ ಅರಿತುಕೊಂಡು ನಡೆದರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು.

ಅಂತರ್ಗತವಾಗಿ ವ್ಯಕ್ತಿ, ಜಾತಿ, ಧರ್ಮದ ಮಧ್ಯೆ ಸೌಹಾರ್ದ, ಪರಸ್ಪರ ಅರ್ಥೈಸಿಕೊಳ್ಳುವಿಕೆ ಸಾಧ್ಯವಾದರೆ ಎಲ್ಲರೂ ಅವರ ಧರ್ಮ, ಜಾತಿಯ ಆಚರಣೆ ಇಟ್ಟುಕೊಂಡೇ ಪರಿಸ್ಪರ ಸಾಮರಸ್ಯ ಸಹಬಾಳ್ವೆ ನಡೆಸಬಹುದು ಎಂಬುದೇ ಶ್ರೀ ಎಂ ಅವರ ವಾಕ್ಯ.


ಡಾ.ಗುರುಪ್ರಸಾದ ಹವಲ್ದಾರ್

  • ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.

Tags: andra pradeshcknewsnowindiakarnatakakeralaMahavatar Babajinewsspiritual gurusri m
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

by cknewsnow desk
January 27, 2024
0

"ಒಬ್ಬರ ಜನನವು ಅವರ ಹಣೆಬರಹವನ್ನು ನಿಶ್ಚಯಿಸುವುದಿಲ್ಲ" ಎಂದ ಜನ ನಾಯಕ; ಅಪ್ಪಟ ಭಾರತರತ್ನ, ಮೀಸಲು ಕೊಟ್ಟು ಬದುಕು ಕಟ್ಟಿಕೊಟ್ಟ ಭಾರತದ ಭಾಗ್ಯವಿದಾತ

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

by cknewsnow desk
January 21, 2024
0

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ಶ್ರೀರಾಮಪ್ರಭುವೇ ಕ್ಷಮಿಸು! ನಿನ್ನ ಹೆಸರಿಟ್ಟುಕೊಂಡವರೆಲ್ಲ ನಿನ್ನವರಲ್ಲ!!

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಮಂದಿರಕ್ಕೆ ಅಂಕುರಾರ್ಪಣೆ ಆಗಿದ್ದು ಹೇಗೆ?

by cknewsnow desk
January 19, 2024
0

ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

by cknewsnow desk
December 28, 2023
0

ನಿಜದ ಜಾಡು ಹಿಡಿದು ಹೊರಟ ನಿಡುಮಾಮಿಡಿ ಶ್ರೀಗಳ ಹೋರಾಟಕ್ಕೆ 33 ವರ್ಷ

ಅಖಂಡ ಭಾರತದ ಅಷ್ಟದಿಕ್ಕುಗಳ ಆಮೂಲಾಗ್ರ ಅಭಿವೃದ್ಧಿಗೆ ಸುವರ್ಣ ಅಧ್ಯಾಯ ಬರೆದವರೇ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ

ಅಟಲ್ ಎಂದರೆ ಅಜಾತಶತ್ರು

by cknewsnow desk
December 25, 2023
0

ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ, ಉತ್ತಮ ಆಡಳಿತ ದಿನ by Dr.Gurupeasad Hawaldar ಜಾಗತಿಕ ಮಟ್ಟದ ಶ್ರೇಷ್ಠ ನಾಯಕರ ಸಾಲಿನಲ್ಲಿ ಗೌರವಿಸಲ್ಪಡುವ  ನಿಸ್ವಾರ್ಥ ರಾಜಕಾರಣಿ,...

ಶಿಕ್ಷಣ, ಶಿಕ್ಷಕ ಮತ್ತು ಬದಲಾವಣೆ; ನೂತನ ಶಿಕ್ಷಣ ನೀತಿಯ ಹೊತ್ತಿನಲ್ಲಿ ಓಶೋ ಜೋಶ್..

ಓಶೋ: ಬೆರಗು, ಬೆಡಗು ಮತ್ತು ವಿಸ್ಮಯ

by cknewsnow desk
December 11, 2023
0

ಇಂದು ಓಶೋ ಜನ್ಮದಿನ

Next Post
ಪುಲಿಕೇಶಿ ನಗರದಲ್ಲಿ ಬಡವರಿಗೆ ಮುತ್ತೂಟ್ ಆಸರೆ

ಪುಲಿಕೇಶಿ ನಗರದಲ್ಲಿ ಬಡವರಿಗೆ ಮುತ್ತೂಟ್ ಆಸರೆ

Leave a Reply Cancel reply

Your email address will not be published. Required fields are marked *

Recommended

ಹೆಚ್.ಎನ್.ವ್ಯಾಲಿ, ಕೆ.ಸಿ.ವ್ಯಾಲಿ ನೀರಿನ 3ನೇ ಹಂತ ಸಂಸ್ಕರಣೆ; ರಾಜ್ಯಪಾಲರ ಮೊರೆ ಹೋದ ಶಾಶ್ವತ ನೀರಾವರಿ ಹೋರಾಟ ಸಮಿತಿ

ಹೆಚ್.ಎನ್.ವ್ಯಾಲಿ, ಕೆ.ಸಿ.ವ್ಯಾಲಿ ನೀರಿನ 3ನೇ ಹಂತ ಸಂಸ್ಕರಣೆ; ರಾಜ್ಯಪಾಲರ ಮೊರೆ ಹೋದ ಶಾಶ್ವತ ನೀರಾವರಿ ಹೋರಾಟ ಸಮಿತಿ

1 year ago
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಮಾಂಜನೇಯ ಹತ್ಯೆ ಪ್ರಕರಣ: 7 ಆರೋಪಗಳ ಬಂಧನ; ಕೊಲೆ ಕಾರಣ ರಿವೀಲ್‌ ಮಾಡಿದ ಚಿಕ್ಕಬಳ್ಳಾಪುರ ಜಿಲ್ಲೆ ಎಸ್‌ಪಿ ಮಿಥುನ್‌ ಕುಮಾರ್

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಮಾಂಜನೇಯ ಹತ್ಯೆ ಪ್ರಕರಣ: 7 ಆರೋಪಗಳ ಬಂಧನ; ಕೊಲೆ ಕಾರಣ ರಿವೀಲ್‌ ಮಾಡಿದ ಚಿಕ್ಕಬಳ್ಳಾಪುರ ಜಿಲ್ಲೆ ಎಸ್‌ಪಿ ಮಿಥುನ್‌ ಕುಮಾರ್

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ