ಪುನೀತ ನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಘೋಷಣೆ
ಬೆಂಗಳೂರು: ಅಕ್ಟೋಬರ್ ೨೯ರಂದು ಹೃದಯಾಘಾತದಿಂದ ವಿಧಿವಶರಾದ ಪವರ್ʼಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ʼಕರ್ನಾಟಕ ರತ್ನʼ ಪ್ರಶಸ್ತಿ ಘೋಷಿಸಿ ಗೌರವಿಸಲಾಗಿದೆ.
ಬೆಂಗಳೂರು ಅರಮನೆ ಮೈದಾನದಲ್ಲಿ ಇಂದು ನಡೆದ ʼಪುನೀತ ನಮನʼ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ಅವರಿಗೆ ಮರಣೋತ್ತರ ʼಕರ್ನಾಟಕ ರತ್ನʼ ಪ್ರಶಸ್ತಿ ಘೋಷಿಸಿದರು.
ಅಲ್ಲದೆ; ಡಾ.ರಾಜಕುಮಾರ್ ಅವರಿಗೆ ಸ್ಮಾರಕ ನಿರ್ಮಿಸಿದಂತೆ ಪುನೀತ್ ಅವರಿಗೂ ಸ್ಮಾರಕ ನಿರ್ಮಿಸುವುದಾಗಿ ಅವರು ಇದೇ ವೇಳೆ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ; ಪುನೀತ್ ಅವರು ಅಜರಾಮರರಾಗಿದ್ದಾರೆ. ತಮ್ಮ ಸರಳತೆ ಸಜ್ಜನಿಕೆ ಮೂಲಕ ಅವರು ಇತಿಹಾಸದ ಪುಟಗಳಲ್ಲಿ ಸೇರಿದ್ದಾರೆ ಎಂದರು.