• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ಬೆಂಗಳೂರು ಬಿಟಿಎಸ್‌ʼನಲ್ಲಿ ಚೇತನ್ ಭಗತ್ ಕಚಗುಳಿ

P K Channakrishna by P K Channakrishna
November 18, 2021
in NATION, STATE, TECH, WORLD
Reading Time: 1 min read
0
ಬೆಂಗಳೂರು ಬಿಟಿಎಸ್‌ʼನಲ್ಲಿ ಚೇತನ್ ಭಗತ್ ಕಚಗುಳಿ

ಸಚಿವ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಮತ್ತು ಲೇಖಕ ಚೇತನ್‌ ಭಗತ್.

943
VIEWS
FacebookTwitterWhatsuplinkedinEmail

ಸಾಟಿ ಇಲ್ಲದ ಸ್ಟಾರ್ಟಪ್ ಸಂಸ್ಕೃತಿಯ ತವರು ಬೆಂಗಳೂರು!‌

ಬೆಂಗಳೂರು: ಅಲ್ಲಿ ಉತ್ಸಾಹದ ಕಚಗುಳಿ ಇತ್ತು; ಬೆಂಗಳೂರಿನ ನವೋದ್ಯಮ ಸಂಸ್ಕೃತಿಯ ಬಗ್ಗೆ ರೋಮಾಂಚನವಿತ್ತು; ಇಲ್ಲಿನ ಉದ್ಯಮ ನಾಳೆ ಜಿಗಿಯುವ ದಿಗಂತದ ಬಗ್ಗೆ ಕುತೂಹಲವಿತ್ತು; ಇಲ್ಲಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಗಮನ ಸೆಳೆಯುವ ಪ್ರಯತ್ನವಿತ್ತು; ಜತೆಗೆ ಸಮಸ್ಯೆಗಳೇ ಹೇಗೆ ಹೊಸ ಉದ್ಯಮದ ಹುಟ್ಟಿಗೆ ಪ್ರೇರಣೆಯಾಗುತ್ತದೆಂಬ ತಮಾಷೆ ಇತ್ತು; ಯಶಸ್ವಿ ಹೂಡಿಕೆದಾರರಿಗೆ ಪ್ರಶ್ನೆಗಳಿದ್ದವು; ಪ್ರತಿಯಾಗಿ ಉತ್ತರಗಳು ಬರುತ್ತಿದ್ದವು; ಬೆಂಗಳೂರಿಗೂ ದೇಶದ ಉಳಿದ ನಗರಗಳಿಗೂ ಇರುವ ವ್ಯತ್ಯಾಸವೇನೆಂದು ಬೆಳಕು ಚೆಲ್ಲಲಾಗುತ್ತಿತ್ತು. ಇವೆಲ್ಲವನ್ನೂ ಚುಂಬಕಶಕ್ತಿಯಂತೆ ಹಿಡಿದಿಟ್ಟಿದ್ದಅಂಶ ಒಂದೇಒಂದು- ಅದು, ಬೆಂಗಳೂರು!

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಜನಪ್ರಿಯ ಲೇಖಕ ಮತ್ತು ಅಂಕಣಕಾರ ಚೇತನ್ ಭಗತ್ ಗುರುವಾರದಂದು ನಡೆಸಿಕೊಟ್ಟ `ಬೆಂಗಳೂರು ನೆಕ್ಸ್ಟ್’ ಸಮಾವೇಶ ಸಂವಾದದಲ್ಲಿದ್ದ ಲಹರಿಗಳಿವು. ಇದಕ್ಕೆ ತಕ್ಕಂತೆ ಚೇತನ್ ಭಗತ್ ಉದ್ದಿಮೆ, ಬದುಕಿನ ಸತ್ಯಗಳು, ಕನಸುಗಾರಿಕೆ, ಉದ್ಯಮಿಗಳು ಪಾಲಿಸುವ ಮೌ್ಲ್ಯಗಳು, ಯುವಜನರ ಸೆಳೆತ ಎಲ್ಲವುಗಳನ್ನೂ ನಡುನಡುವೆ ಹೇಳುತ್ತಿದ್ದರು; ಹಾಗೆಯೇ ಉದ್ಯಮಗಳ ಯಶೋಗಾಥೆಯನ್ನು ಹಂಚಿಕೊಳ್ಳುವಂತೆ ಸಭಾಂಗಣದಲ್ಲಿದ್ದ ಅನೇಕ ಉದ್ಯಮಿಗಳನ್ನು ಆಮಂತ್ರಿಸುತ್ತಿದ್ದರು.

ಮೊದಲಿಗೆ ಚೇತನ್ ಭಗತ್ ಅವರಿಗೆ ಬೆಂಗಳೂರೊಂದರಲ್ಲೇ 36 ಯೂನಿಕಾರ್ನ್ ಸ್ಥಾನಮಾನದ ಕಂಪನಿಗಳಿರುವ ಬಗ್ಗೆ ರೋಮಾಂಚನವಿತ್ತು. ಇದು ಅಲ್ಲೇ ಪ್ರಶ್ನೆಯಾಗಿ ರೂಪಾಂತರ ಹೊಂದಿತು. ಇದಕ್ಕೆ ರಾಜ್ಯ ಸ್ಟಾರ್ಟಪ್ ವಿಷನ್ ಗ್ರೂಪಿನ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಉತ್ತರಿಸಿದರು.

`ಕರ್ನಾಟಕ ಇವತ್ತು ನವೋದ್ಯಮಕ್ಕೆ ಇನ್ನೊಂದು ಹೆಸರಾಗಿದೆ. ಇದರ ಶ್ರೇಯಸ್ಸು ಶೇ.90ರಷ್ಟು ನಮ್ಮ ರಾಜ್ಯದ ಸುಸಂಸ್ಖೃತಿಗೆ ಸಲ್ಲಬೇಕು. ಇಲ್ಲಿ ಯಾವ ಪಕ್ಷದ ಸರಕಾರ ಬಂದರೂ ಉದ್ಯಮಸ್ನೇಹಿಯಾಗಿರುತ್ತದೆ. ವಿಷನ್ ಗ್ರೂಪ್ ಗಳನ್ನು ಸ್ಥಾಪಿಸಿದವರಲ್ಲಿ ನಮ್ಮವರೇ ಮೊದಲಿಗರು. ಇಡೀ ದೇಶದಲ್ಲಿ ಇಂತಹ ಇನ್ನೊಂದು ನಗರವಿಲ್ಲ,’ ಎನ್ನುವುದು ಅವರ ಉತ್ತರವಾಗಿತ್ತು.

ಇದಕ್ಕೆ ವೇದಿಕೆಯ ಮೇಲಿದ್ದ ಉದ್ಯಮಿಗಳಾದ ಸುಜಿತ್ ಕುಮಾರ್, ಹರ್ಷಿಲ್ ಮಾಥೂರ್ ದನಿಗೂಡಿಸಿದರು. ಜತೆಗೆ ಬೆಂಗಳೂರಿನಲ್ಲಿ ಇಂತಹ ಸ್ಟಾರ್ಟಪ್-ಸ್ನೇಹಿ ವಾತಾವರಣ ಇರುವುದನ್ನು ಕಂಡೇ ತಾವಿಬ್ಬರೂ ದೂರದ ದೆಹಲಿ ಮತ್ತು ಜೈಪುರಗಳಿಂದ ಇಲ್ಲಿಗೆ ಕಂಪನಿಗಳನ್ನು ಸ್ಥಳಾಂತರಿಸಿದ್ದಾಗಿ ಹೇಳಿದರು. ಪಕ್ಕದಲ್ಲಿದ್ದ ಕಿಂಡ್ರೆಲ್ ಕಂಪನಿಯ ಲಿಂಗರಾಜ ಸಾಹುಕಾರ್ ಕೂಡ 19 ಸಾವಿರ ಉದ್ಯೋಗಿಗಳಿರುವ ತಮ್ಮ ಕಂಪನಿಯನ್ನು ಸ್ಟಾರ್ಟಪ್ ಎಂದೇ ಆರಂಭಿಸಿರುವುದಾಗಿ ಗುಟ್ಟು ಬಿಟ್ಟುಕೊಟ್ಟರು.

ಆಗ ಹುಬ್ಬೇರಿಸುವ ಸರದಿ ಚೇತನ್ ಭಗತ್ ಅವರದಾಗಿತ್ತು! ಕೂಡಲೇ ಅವರು ಮುಂಬೈನಲ್ಲಿ ಸಿನಿಮಾ ಸಂಸ್ಕೃತಿ ಇದೆ; ಅಲ್ಲಿ ಎಲ್ಲರೂ `ಇಲ್ಲಿ ಶಾರುಖ್ ಖಾನ್ ಮನೆ ಇದೆ, ಅಲ್ಲಿ ಸಲ್ಮಾನ್ ಖಾನ್ ಮನೆ ಇದೆ’ ಎಂದು ಮಾತಾಡುತ್ತಿರುತ್ತಾರೆ. ಹಾಗೆಯೇ ಬೆಂಗಳೂರಿನಲ್ಲಿ ಉದ್ಯಮಸಂಸ್ಕೃತಿ ಇದೆ. ಇಲ್ಲಿನ ಜನ `ಇದು ಇನ್ಫೋಸಿಸ್ ನಾರಾಯಣಮೂರ್ತಿಗಳ ಮನೆ, ಅದು ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಂಜಿ ಮನೆ ಇದೆ ಅಂತ ಹೇಳ್ತಾರೆ. ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದ ಟ್ಯಾಕ್ಸಿ ಚಾಲಕ ಕೂಡ ಇಲ್ಲಿನ ಯಾವುದೋ ಒಂದು ಯೂನಿಕಾರ್ನ್ ಕಂಪನಿಗೆ ಕೆಲಸ ಮಾಡ್ತಾ ಇದ್ದವನೇ!’ ಎಂದು ಉದ್ಗರಿಸಿದರು.

The unicorns from #Bengaluru have given hope to 1.4 billion people. This is truly inspiring!’
– @chetan_bhagat
Indian Author

Click here https://t.co/U0TXDoXfzY to catch #chetanbhagat in conversation with some of the biggest #unicorns in the country!#BTS2021 pic.twitter.com/hy84Rn02Su

— BengaluruTechSummit (@blrtechsummit) November 18, 2021

ಸಚಿವರಿಗೂ ಪ್ರಶ್ನೆ ಹಾಕಿದ ಚೇತನ್ ಭಗತ್!

ಸಭಿಕರ ಮಧ್ಯೆ ಇದ್ದ ಐಟಿ ಸಚಿವ ಅಶ್ವತ್ಥನಾರಾಯಣ ಅವರತ್ತಲೂ ಚೇತನ್ ಭಗತ್ ಪ್ರಶ್ನೆಗಳನ್ನೆಸೆದರು. ಇದಕ್ಕೆ ಉತ್ತರಿಸಿದ ಸಚಿವರು, `ಹಣ ಸರಿಯಾದವರ ಬಳಿ ಇರಬೇಕು. ಆಗ ಅದು ಬೆಳೆಯುತ್ತ ಹೋಗುತ್ತದೆ. ಅಂಥವರನ್ನು ನಮ್ಮ ಸರಕಾರ ಗುರುತಿಸಿ, ಪುರಸ್ಕರಿಸುತ್ತಿದೆ. ಇದು ನಮ್ಮ ಕರ್ತವ್ಯ. ಇಂಥವರಿಂದ ರಾಜ್ಯ ಪ್ರಗತಿ ಸಾಧಿಸುತ್ತದೆ. ನೂತನ ಶಿಕ್ಷಣ ನೀತಿಯಲ್ಲಿ ನಾವು ನಾವೀನ್ಯತೆ, ಕೌಶಲ್ಯ ಪೂರೈಕೆ ಮತ್ತು ಗುಣಮಟ್ಟದ ಬೋಧನೆಗೆ ಒತ್ತು ಕೊಟ್ಟಿದ್ದೇವೆ. ಇವೆಲ್ಲದರ ಹಿಂದೆ ಪ್ರಧಾನಿ ಮೋದಿಯವರ ಒತ್ತಾಸೆ, ದೂರದೃಷ್ಟಿ ಕೂಡ ಇವೆ,’ ಎಂದರು.

ಜತೆಗೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಸಿಲಿಕಾನ್ ಸಿಟಿಯಲ್ಲಿ ಕೂಡ ಬಿಟಿಎಸ್ ನಂತಹ ಕಾರ್ಯಕ್ರಮವನ್ನು ನಡೆಸುವ ಮಹತ್ವಾಕಾಂಕ್ಷೆ ತಮಗಿದೆ ಎಂದು ಅವರು ಹೇಳಿದರು. ಇದರ ಬೆನ್ನಲ್ಲೇ ಪ್ರಶಾಂತ್ ಪ್ರಕಾಶ್, `ಕರ್ನಾಟಕದಲ್ಲಿರುವ ಉದ್ಯಮಿಗಳು ಕೆರೆಯ ನೀರನು ಕೆರೆಗೆ ಚೆಲ್ಲುವ ಸಂಸ್ಕೃತಿಯವರು,’ ಎನ್ನುತ್ತ, ಎದುರಲ್ಲೇ ಆಸೀನರಾಗಿದ್ದ ಉದ್ಯಮಿ ಕ್ರಿಸ್ ಗೋಪಾಲಕೃಷ್ಣನ್ ಅವರ ಮಾದರಿ ಹಾದಿಯನ್ನು ಉಲ್ಲೇಖಿಸಿದರು.

ಚೇತನ್ ಭಗತ್ ನಡೆಸಿಕೊಟ್ಟ ಆಪ್ತ ಶೈಲಿಯ ಸಂವಾದಕ್ಕೆ ಸಭಾಂಗಣದಲ್ಲಿದ್ದವರೆಲ್ಲ ಕಿವಿ ತೆರೆದಿದ್ದರು; ನಡುನಡುವೆ ಚಪ್ಪಾಳೆಯ ಮಳೆ  ಬೀಳುತ್ತಿತ್ತು; ವೇದಿಕೆಯ ಮೇಲಿದ್ದ ಉದ್ಯಮಿಗಳು ಬೆಂಗಳೂರಿನ ಹಿತಕರ ಹವೆಯನ್ನು ಹೊಗಳಿದ್ದಕ್ಕೆ ತಕ್ಕಂತೆ ಹೊರಗಡೆಯೂ ವರ್ಷಧಾರೆ ಸುರಿಯುತ್ತಿತ್ತು.

ಬೆಂಗಳೂರಿನಲ್ಲಿ ಈಗ ಶತಕೋಟಿ ಡಾಲರ್ ವಹಿವಾಟು ನಡೆಸುವ ಯೂನಿಕಾರ್ನ್ ಕಂಪನಿಗಳು ಸದ್ದು ಮಾಡುತ್ತಿವೆ. ಇನ್ನು ಒಂದೆರಡು ವರ್ಷಗಳಲ್ಲಿ ಇಲ್ಲಿ 10 ಶತಕೋಟಿ ಡಾಲರ್ ವಹಿವಾಟು ನಡೆಸುವ ಡೆಕಾಕಾರ್ನ್ ಕಂಪನಿಗಳು ರಾರಾಜಿಸಲಿವೆ.

-ಪ್ರಶಾಂತ್ ಪ್ರಕಾಶ್, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ

2013ರಲ್ಲಿ ನಾನು ಜೈಪುರದಿಂದ ಬೆಂಗಳೂರಿಗೆ ಬಂದೆ. ಅದಕ್ಕೂ ಮುನ್ನ ನಾನು ಈ ನಗರವನ್ನೇ ನೋಡಿರಲಿಲ್ಲ. ಕರ್ನಾಟಕದಲ್ಲಿ ಎಲ್ಲ ಕೆಲಸಗಳೂ ಕ್ಷಿಪ್ರ ಗತಿಯಲ್ಲಿ ಆಗುತ್ತವೆ. ನಾನೀಗ ಸರಕಾರದ ಫಿನ್ಟೆಕ್ ಕಾರ್ಯಪಡೆಯ ಮುಖ್ಯಸ್ಥನಾಗಿದ್ದೇನೆ.

-ಹರ್ಷಿಲ್ ಮಾಥೂರ್, ಸಂಸ್ಥಾಪಕ, ರೇಜರ್ ಪೇ

Tags: Bengalurubengaluru tech summitblr tech summitBTS2021chetan bhagathdr cn ashwath narayanDrivingTheNextkarnataka
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
10 ತಿಂಗಳಲ್ಲಿ ಸೃಷ್ಟಿಯಾದ ಕೋವ್ಯಾಕ್ಸಿನ್ ಅಭಿವೃದ್ಧಿಯ ಯಶೋಗಾಥೆ

10 ತಿಂಗಳಲ್ಲಿ ಸೃಷ್ಟಿಯಾದ ಕೋವ್ಯಾಕ್ಸಿನ್ ಅಭಿವೃದ್ಧಿಯ ಯಶೋಗಾಥೆ

Leave a Reply Cancel reply

Your email address will not be published. Required fields are marked *

Recommended

ಜೆಡಿಎಸ್‌ನಿಂದ ಕೋಲಾರ ಶಾಸಕ ಶ್ರೀನಿವಾಸ ಗೌಡ, ಗುಬ್ಬಿ ಶ್ರೀನಿವಾಸ್‌ ಉಚ್ಚಾಟನೆ; ನಾಳೆ ಸ್ಪೀಕರ್‌ಗೆ ದೂರು

ಜೆಡಿಎಸ್‌ನಿಂದ ಕೋಲಾರ ಶಾಸಕ ಶ್ರೀನಿವಾಸ ಗೌಡ, ಗುಬ್ಬಿ ಶ್ರೀನಿವಾಸ್‌ ಉಚ್ಚಾಟನೆ; ನಾಳೆ ಸ್ಪೀಕರ್‌ಗೆ ದೂರು

3 years ago
ಚಿಕ್ಕಬಳ್ಳಾಪುರಕ್ಕೆ ಚೀಯರ್ಸ್ ;‌ ಡಾ.ಸುಧಾಕರ್ʼಗೆ ವೈದ್ಯಶಿಕ್ಷಣ ಜತೆಗೆ ಆರೋಗ್ಯ ಖಾತೆ

ರಾಜ್ಯದಲ್ಲಿ 60 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ: ಸಿಬ್ಬಂದಿ ಕೊರತೆಯಿಂದ ನಾಲ್ಕು ದಿನ ಕೋವಿಡ್‌ ವ್ಯಾಕ್ಸಿನೇಶನ್‌ ಇಲ್ಲ ಎಂದು ಸಚಿವ ಡಾ.ಕೆ.ಸುಧಾಕರ್

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ