• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಸಿಂಗಾಪುರದ ಬದಲಿಗೆ ಚರಂಡಿಯಾದ ಚಿಕ್ಕಬಳ್ಳಾಪುರ!

cknewsnow desk by cknewsnow desk
November 21, 2021
in EDITORS'S PICKS, STATE
Reading Time: 2 mins read
1
ಸಿಂಗಾಪುರದ ಬದಲಿಗೆ ಚರಂಡಿಯಾದ ಚಿಕ್ಕಬಳ್ಳಾಪುರ!
1.8k
VIEWS
FacebookTwitterWhatsuplinkedinEmail

  • ಚಿಕ್ಕಬಳ್ಳಾಪುರದಲ್ಲಿ ಉಸ್ತುವಾರಿ ಸಚಿವರ ರೈನ್ ರೌಂಡ್ಸ್
  • ಹಾಗೆ ಬಂದು ಹೀಗೆ ಮಾಯವಾದ ಡಾ.ಕೆ.ಸುಧಾಕರ್
  • ಫಿಲ್ಮಿ ಸ್ಟೈಲಿನಲ್ಲಿ ವೀಕ್ಷಣೆ; ಸಾಮಾನ್ಯರಿಗಿಲ್ಲ ದರ್ಶನ
  • ಜಲಪೀಡಿತ ಜಿಲ್ಲೆಯಲ್ಲಿ ಜನರ ನಿರಂತರ ಜಾಗರಣೆ

by M Krishnappa Chikkaballapura

ಚಿಕ್ಕಬಳ್ಳಾಪುರ: ಮೂರು ಹೊತ್ತು ಮುಖ್ಯಮಂತ್ರಿ ಸುತ್ತ ಸುತ್ತುವುದರಲ್ಲೇ ಬ್ಯುಸಿ ಇರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅಚ್ಚರಿ ಎಂಬಂತೆ ಶನಿವಾರ ಬೆಳಗ್ಗೆ ಮಳೆ-ನೆರೆ ಪೀಡಿತ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ಮಿಂಚಿನಂತೆ ಸಂಚರಿಸಿ ಮಾಯವಾದರು.

ಜಿಲ್ಲೆಯಲ್ಲಿ ಧಾರಾಕಾರ ಮಳೆ ಶುರುವಾದ ಮೇಲೆ ಜಿಲ್ಲೆಯ ಕಡೆ ಮೂರು ನಾಲ್ಕು ದಿನಕ್ಕೊಮ್ಮೆ ತಲೆ ಹಾಕುವ ಸಚಿವರು, ಇಂದು ಬೆಳಗ್ಗೆಯೇ ನಗರಸಭೆ ಅಧ್ಯಕ್ಷ ಆನಂದ್ ಬಾಬು ರೆಡ್ಡಿ, ಕೆಲ ಅಧಿಕಾರಿಗಳು, ಜನಪ್ರತಿನಿಧಿಗಳು, ತಮ್ಮ ಬೆಂಬಲಿಗ ಪಟಾಲಂ ಜತೆಯಲ್ಲಿ ಪ್ರತ್ಯಕ್ಷರಾದಾಗ ಜನರು ಚಕಿರಾದರಲ್ಲದೆ, ಶೂ ಹಾಕಿಕೊಂಡು ನೀರಿಗಿಳಿದು ಫಿಲ್ಮಿ ಸ್ಟೈಲಿನಲ್ಲಿ ನೆರೆಯನ್ನು ಪರಿಶೀಲನೆ ನಡೆಸಿದ ಮಂತ್ರಿಗಳನ್ನು ಕಂಡು ಅವಾಕ್ಕಾದರು.

ವಿಷಯ ಏನೆಂದರೆ; ಅವರ ಪರಿಶೀಲನೆ ಶಾಸ್ತ್ರವು ಬಿಬಿ ರಸ್ತೆಯಲ್ಲಿ ತಮ್ಮ ಸಂಬಂಧಿಕರೊಬ್ಬರು ಗುತ್ತಿಗೆ ಪಡೆದು ನಡೆಸುತ್ತಿರುವ ಕಳಪೆ ಕಾಮಗಾರಿಯ ವೀಕ್ಷಣೆಗೆ ಮಾತ್ರ ಸೀಮಿತವಾಯಿತು.

ಸುಮಾರು ನಲವತ್ತೈದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಚಿಕ್ಕಬಳ್ಳಾಪುರ ಜನರು ಕಂಗೆಟ್ಟಿದ್ದಾರೆ. ಪ್ರಭಾವಿಗಳು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪರಿಣಾಮ ಮಳೆ ನೀರು ಕಾಲುವೆಗಳ ಬದಲು ರಸ್ತೆಗಳಲ್ಲಿ ನದಿಯಂತೆ ಹರಿಯುತ್ತಿದೆ. ಚರಂಡಿ ನೀರು ಮನೆಗಳು ಮತ್ತು ತೋಟಗಳಿಗೆ ನುಗ್ಗಿ ನರಕವನ್ನೇ ಸೃಷ್ಠಿ ಮಾಡಿದೆ.

ಸದಾ ಬೆಂಗಳೂರಿನಲ್ಲಿ ಬ್ಯುಸಿ ಆಗಿರುವ ಸಚಿವರು, ಬೆಳಗ್ಗೆ ಇದ್ದಕ್ಕಿದಂತೆ ನಗರದಲ್ಲಿ ಕಾಣಿಸಿಕೊಂಡ ಕಾರಣವನ್ನು ಕೆದಕಿದಾಗ ಗೊತ್ತಾಗಿದ್ದು, ಸಂಜೆ 3 ಗಂಟೆಗೆ ಜಿಲ್ಲಾ ಕೇಂದ್ರದಲ್ಲಿ ಏರ್ಪಾಡಾಗಿದ್ದ ಬಿಜೆಪಿ ಜನಸ್ವರಾಜ್ಯ ಯಾತ್ರೆ ಎಂಬುದು. ಯಾತ್ರೆಯಲ್ಲಿ ಭಾಗವಹಿಸುವುದು ಹಾಗೂ ಆ ಕಾರ್ಯಕ್ರಮದ ಸಿದ್ಧತೆಗಳನ್ನು ಪೂರ್ವಭಾವಿಯಾಗಿ ಪರಿಶೀಲನೆ ಮಾಡುವ ʼಸದುದ್ದೇಶʼಕ್ಕೆ ಸಚಿವರು ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಸಿಟಿ ಸಂಚಾರ ಏರ್ಪಡಿಸಿಕೊಂಡಿದ್ದರು.

ವಿಧಾನಪರಿಷತ್ ಚುನಾವಣೆ ಹಾಗೂ ಪಕ್ಷ ಬಲವರ್ಧನೆ ಗುರಿಯೊಂದಿಗೆ ಚಿಕ್ಕಬಳ್ಳಾಪುರದಲ್ಲಿ ಇಂದು ನಡೆದ #ಜನಸ್ವರಾಜ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಲಾಯಿತು. ಜಿಲ್ಲೆಯಲ್ಲಿ ನೀರಾವರಿ, ಕೈಗಾರಿಕಾಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಬಿಜೆಪಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ತಿಳಿಸಲಾಯಿತು. (1/2)#JanSwaraj@BSBommai @blsanthosh pic.twitter.com/oPEQ7QedKg

— Dr Sudhakar K (Modi ka Parivar) (@DrSudhakar_) November 20, 2021
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಜನಸ್ವರಾಜ್ಯ ಯಾತ್ರೆ. ಈ ನೆಪದಲ್ಲಿ ನೆರೆ ವೀಕ್ಷಣೆ ತಥಂಗ.

ವಿಚಿತ್ರವೆಂದರೆ; ಯಾವುದೇ ದಿನ ಸಚಿವರು ಚಿಕ್ಕಬಳ್ಳಾಪುರಕ್ಕೆ ಬಂದರೂ ಸದಾ ಅವರ ಎಡಬಲದಲ್ಲಿ ಕಾಣಿಸಿಕೊಳ್ಳುವ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅವರಿಬಬರೂ  ನೆರೆ ಪರಿಶೀಲನೆ ವೇಳೆ ಕಾಣಿಸಲಿಲ್ಲ. ಜಿಲ್ಲಾಧಿಕಾರಿಗಳು ತಾಲೂಕುಗಳಿಗೆ ಭೇಟಿ ನೀಡಿದ್ದರೆ, ಎಸ್ಪಿ ಅವರ ಬಗ್ಗೆ ಮಾಹಿತಿ ಇರಲಿಲ್ಲ.

ಬಿಬಿ ರೋಡಿಗೆ ಮಾತ್ರ ಸೀಮಿತ ಪರಿಶೀಲನೆ

ಸಚಿವ ಸುಧಾಕರ್ ಅವರ ಶನಿವಾರದ ನೆರೆ ತಪಾಸಣೆ ಶಾಸ್ತ್ರ ಬಿಬಿ ರಸ್ತೆಗೆ ಮಾತ್ರ ಸೀಮಿತವಾಯಿತು. ರಸ್ತೆಯ ಬಳಿ ಹರಿಯುತ್ತಿರುವ ರಾಜಕಾಲುವೆಯನ್ನು ವೀಕ್ಷಿಸಿದ ಅವರು, ಅಲ್ಲಿಂದಲೇ ಜಾಗ ಖಾಲಿ ಮಾಡಿದರು. ಅಲ್ಲದೇ, ಆ ರಸ್ತೆಯಲ್ಲಿನ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಬಳಿ ನಡೆಯುತ್ತಿರುವ ಕಾಮಗಾರಿ, ಅದು ಕಳಪೆ ಕಾಮಗಾರಿ ಎಂಬ ಕೂಗು ಇಂದು ನಿನ್ನೆಯದಲ್ಲ.

ನಗರದ ಕಂದವಾರ ಕೆರೆಯ ಮೂರು ಪ್ರಮುಖ ರಾಜಕಾಲುವೆಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು, ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಕೆಲ ದಿನಗಳ ಹಿಂದೆ ಜಿಲ್ಲಾಡಳಿತಕ್ಕೆ ಜನರು ಚಳಿ ಬಿಡಿಸಿದಾಗ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಎರಡು ರಾಜಕಾಲುವೆಗಳನ್ನು ಮಾತ್ರ ತೆರವುಗೊಳಿಸುವ ಕೆಲಸ ಮಾಡಿದ್ದರು. ರಾಜಕಾಲುವೆಯನ್ನು ಸಾಕಷ್ಟು ಒತ್ತುವರಿ ಮಾಡಿಕೊಂಡು ಬಿಬಿ ರಸ್ತೆಯಲ್ಲಿ ಪ್ರಭಾವಿಗಳು ಮನೆ, ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿಕೊಂಡಿರುವ ಪರಿಣಾಮ ಭಾರೀ ಮಳೆ ನೀರು ಬಿಬಿ ರಸ್ತೆಯಲ್ಲಿಯೇ ಹರಿಯುತ್ತಿದೆ.

ಲಕ್ಕಮ್ಮ ಚೌಲ್ಟ್ರಿ ಹಾಗೂ ಸರಕಾರಿ ಆಸ್ಪತ್ರೆ ಬಳಿ ರಾಜಕಾಲುವೆಯನ್ನು ಮುಚ್ಚಿಸಿರುವ ಪರಿಣಾಮ ಮಳೆ ನೀರೆಲ್ಲ 8, 9ನೇ ವಾರ್ಡುಗಳಲ್ಲಿನ ಮನೆಗಳಿಗೆ ನುಗ್ಗಿದೆ. ಕಳೆದ ನಾಲ್ಕು ದಿನಗಳಿಂದ ಜಾಗರಣೆ ಮಾಡುತ್ತಿರುವ ಎರಡೂ ಬಡಾವಣೆಗಳ ನಿವಾಸಿಗಳು, ಇಡೀ ರಾತ್ರಿಯೆಲ್ಲ ಮನೆಗೆ ನುಗ್ಗುವ ನೀರನ್ನೇ ಹೊರಚೆಲ್ಲುವ ಕೆಲಸದಲ್ಲಿ ನಿರತರಾಗಿದ್ದಾರೆ. ಜತೆಗೆ, ಶನಿಮಹಾತ್ಮ ಸ್ವಾಮಿ ದೇಗುಲ, ಭಾರತೀ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಆ ಪ್ರದೇಶಗಳೆಲ್ಲ ಜಲಾವೃತವಾಗಿದ್ದು, ಜನರು ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ಶಾಪ ಹಾಕುತ್ತಿದ್ದಾರೆ.

ಇನ್ನೂ ನಲವತ್ತೈದು ದಿನ ಮಳೆ ಸುರಿದು ಜನ ಹೈರಾಣಾಗಿದ್ದರೂ ಕೆಲ ದಿನಗಳ ಹಿಂದೆಯಷ್ಟೇ ಕಾಳಜಿ ಕೇಂದ್ರಗಳನ್ನು ಜಿಲ್ಲಾಡಳಿತ ತೆರೆದಿದೆ. ಅಲ್ಲಿಯೂ ಕಳಪೆ ನಿರ್ವಹಣೆ ಎದ್ದು ಕಾಣುತ್ತಿದೆ. ನೀರು ನುಗ್ಗಿರುವ ನಗರದ ಬಹುತೇಕ ಪ್ರದೇಶಗಳಲ್ಲಿ ಇಂಥ ಕೇಂದ್ರಗಳನ್ನು ಸ್ಥಾಪಿಸಲಾಗಿಲ್ಲ. ಮಳೆ ಮತ್ತು ನೆರೆ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಮೊದಲ ಬಾರಿ ಶಾಸಕರಾಗಿ ಗೆದ್ದಾಗ ಸಚಿವ ಸುಧಾಕರ್‌ ಅವರು ಚಿಕ್ಕಬಳ್ಳಾಪುರವನ್ನು ಸಿಂಗಾಪುರ ಮಾಡುವುದಾಗಿ ಹೇಳಿದ್ದರು. ತಮ್ಮ ರಾಜಕೀಯ ಗುರು ಎಸ್.ಎಂ.ಕೃಷ್ಣ ಅವರು ಬೆಂಗಳೂರು ಮಹಾನಗರವನ್ನು ಸಿಂಗಾಪುರ ಮಾಡುತ್ತೇನೆ ಎಂದು ಹೇಳಿ ಜನರನ್ನು ನಂಬಿಸಿದಂತೆ ಸಚಿವರು ಕೂಡ ಜನರನ್ನು ನಂಬಿಸಿದ್ದರು. ಆದರೆ, ಇಂದು ಚಿಕ್ಕಬಳ್ಳಾಪುರ ನಗರ ಸಿಂಗಾಪುರ ಆಗುವುದಿರಲಿ ಚರಂಡಿಯಾಗಿ ಪರಿವರ್ತನೆಯಾಗಿದೆ. ಹಾದಿಬೀದಿಗಳಲ್ಲಿ ಕೊಳಚೆ ನೀರು, ಮಳೆ ನೀರು ಹರಿಯುತ್ತಿದೆ ಎಂದು ನಗರವಾಸಿಗಳು ಹೇಳುತ್ತಿದ್ದಾರೆ. ಆ ದೃಶ್ಯಗಳು ಜನರ ಕಣ್ಣಿಗೆ ರಾಚುತ್ತಿವೆ.

ಫೀಲ್ಮೀ ಸ್ಟೈಲಿನಲ್ಲಿ ನೆರೆ ವೀಕ್ಷಣೆ ಮಾಡಿದ ಸಚಿವ ಡಾ.ಕೆ.ಸುಧಾಕರ್.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ, ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಭಾಗಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿದೆ. ಇಂದು ಜಿಲ್ಲೆಗೆ ಬೇಟಿ ನೀಡಿ, ನೆರೆ ಪರಿಸ್ಥಿತಿಯನ್ನು ಪರಿಶೀಲಿಸಿ, ಜನರ ಸಮಸ್ಯೆಗಳನ್ನು ವಿಚಾರಿಸಿದೆ. ಅಧಿಕಾರಿಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. @BSBommai pic.twitter.com/0PrIrhADQc

— Dr Sudhakar K (Modi ka Parivar) (@DrSudhakar_) November 20, 2021
ಸಚಿವರ ಟ್ವಿಟರಿನಲ್ಲಿ ನೆರೆ ವೀಕ್ಷಣೆಯ ದೃಶ್ಯವೈಭವ.

ಸಚಿವರು ಬರ್ತಾರೆ, ಹೋಗ್ತಾರೆ! ಪ್ರಯೋಜನವಿಲ್ಲ!!

ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ತಮ್ಮ ಬೆಂಬಲಿಗರು, ಉನ್ನತ ಅಧಿಕಾರಿಗಳಿಗೆ ಮಾತ್ರ ದರುಶನ ಭಾಗ್ಯ ನೀಡುತ್ತಾರೆಯೇ ಹೊರತು ಶ್ರೀಸಾಮಾನ್ಯರ ಪಾಲಿಗೆ ಅವರು ಗಗನಕುಸುಮವೇ ಆಗಿದ್ದಾರೆ ಎನ್ನುವುದು ಚಿಕ್ಕಬಳ್ಳಾಪುರ ಜನರ ಆರೋಪ.

ಸಚಿವರು ಚಿಕ್ಕಬಳ್ಳಾಪುರಕ್ಕೆ ಬರುತ್ತಾರೆಂದರೆ, ಎಲ್ಲಿಗಾದರೂ ಭೇಟಿ ಕೊಡುತ್ತಾರೆ ಎಂದರೆ ಅವರ ಬೆಂಬಲಿಗ ಪಟಾಲಂ ಪ್ರತ್ಯಕ್ಷವಾಗಿಬಿಡುತ್ತದೆ. ಪರಿಣಾಮವಾಗಿ ಸಚಿವರಿಗೆ ಕಷ್ಟಗಳನ್ನು ಹೇಳಿಕೊಳ್ಳಲು ಸಾಮಾನ್ಯ ಜನರಿಗೆ ಸಾಧ್ಯವಾಗುತ್ತಿಲ್ಲ. ಆ ಪಟಾಲಮ್ಮಿನ ಅಬೇಧ್ಯ ಕೋಟೆಯನ್ನು ಬೇಧಿಸಿ ಹೋಗಿ ಸಚಿವರನ್ನು ದರ್ಶನ ಮಾಡುವ ಭಾಗ್ಯ ಅವರಿಗೆ ಮತ ಹಾಕಿದ ಜನರಿಗೆ ಸಿಗುತ್ತಿಲ್ಲ. ಎದರು ನಿಂತು ಸಚಿವರಿಗೆ ಕಷ್ಟ ಹೇಳಿಕೊಳ್ಳುವುದಿರಲಿ, ಅವರನ್ನು ಹತ್ತಿರದಿಂದ ನೋಡುವುದೂ ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಮುಖಂಡರೇ ಸಿಕೆನ್ಯೂಸ್ ನೌ ಬಳಿ ಅಲವತ್ತುಕೊಳ್ಳುತ್ತಿದ್ದಾರೆ.

ಇನ್ನು ಚಿಕ್ಕಬಳ್ಳಾಪುರಕ್ಕೆ ಕೇವಲ ಅಧಿಕೃತ ಕಾರ್ಯಕ್ರಮಗಳಿಗೆ ಮಾತ್ರ ಸಚಿವ ಸುಧಾಕರ್ ಬರುತ್ತಾರಾದರೂ, ಪಟಾಲಮ್ಮುಗಳ ಕೋಟೆ, ಪೊಲೀಸರ ಹವಾ, ಝೀರೋ ಟ್ರಾಫಿಕ್ ಹಂಗಾಮಾದಿಂದ ಜನರಿಗೆ ಅವರು ಲಭ್ಯವಾಗುತ್ತಿಲ್ಲ. ನಮ್ಮ ಕೆಲಸ ಮಾಡಿಕೊಡದ, ಕನಿಷ್ಠ ಅಹವಾಲನ್ನೂ ಆಲಿಸದ ಇಂಥ ಶಾಸಕ, ಸಚಿವರು ಏತಕ್ಕೆ ಬೇಕು? ಎಂದು ಜನರು ಕೇಳುತ್ತಿದ್ದಾರೆ. ಒಟ್ಟಾರೆಯಾಗಿ ಉಸ್ತುವಾರಿ ಸಚಿವರ ವರ್ತನೆಗೆ ಜನರು ರೋಸಿ ಹೋಗಿದ್ದಾರೆ.

ಫೋಟೋಗಾಗಿ ಪರಿಶೀಲನೆ

ಚಿಕ್ಕಬಳ್ಳಾಪುರದ ಪರಿಸ್ಥಿತಿ ಅಕ್ಷರಶಃ ನರಕವಾಗಿದೆ. ಕೆಲ ಬಡಾವಣೆಗಳಲ್ಲಿ ಮನೆಗಳಿಗೆ ಹೊರಗಿನ ಸಂಪರ್ಕವೇ ಇಲ್ಲವಾಗಿದೆ. ಒಂದು ಕಡೆ ಭಾರೀ ಮಳೆ ಬೀಳುತ್ತಿದ್ದರೆ, ಇನ್ನೊಂದೆಡೆ ಬೆಂಗಳೂರು ನೀರು ಜಿಲ್ಲೆಯ ಕೆರೆಗಳಿಗೆ ಭಾರೀ ಪ್ರಮಾಣದಲ್ಲಿ ಹರಿದುಬರುತ್ತಿದೆ. ಬೆಂಗಳೂರು ನೀರನ್ನು ಮಳೆ ನಿಲ್ಲುವ ತನಕ ನಿಲ್ಲಿಸುವ ಕೆಲಸವನ್ನು ಸಣ್ಣ ನೀರಾವರಿ ಇಲಾಖೆ, ಬೆಂಗಳೂರು ಜಲಮಂಡಳಿ ಮಾಡಿಲ್ಲ. ಜಿಲ್ಲಾಡಳಿತವಂತೂ ಈ ಬಗ್ಗೆ ಯೋಚನೆಯನ್ನೇ ಮಾಡಿಲ್ಲ. ಅದು ಪೂರ್ಣ ವಿಫಲವಾಗಿದೆ. ಇನ್ನು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಯಂತೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ತಹಸೀಲ್ದಾರ್‌ ಅವರು ರಾಜಕಾಲುವೆಗಳನ್ನು ಒತ್ತುವರಿ ಮಾಡಿರುವುದನ್ನು ಪತ್ತೆ ಹಚ್ಚಿ ಸಮಗ್ರ ವರದಿಯನ್ನು ಸಲ್ಲಿಸಿದ್ದರೂ ಅದರ ಆಧಾರದ ಮೇಲೆ ಕ್ರಮ ವಹಿಸುವ ಧೈರ್ಯವನ್ನು ಜಿಲ್ಲಾಧಿಕಾರಿ ಮಾಡಿಲ್ಲ. ಶನಿವಾರ ಸಚಿವರು ನಡೆಸಿದ ನೆರೆ ಪರಿಶೀಲನೆ ಕೇವಲ ಫೋಟೋಗಳಿಗಾಗಿ. ನಗರದಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳನ್ನು ಅವರ ಆಪ್ತರು, ಸಂಬಂಧಿಕರೇ ಮಾಡುತ್ತಿದ್ದಾರೆ. ಅನೇಕ ಬೇನಾಮಿಗಳು ಗುತ್ತಿಗೆದಾರರ ಅವತಾರ ಎತ್ತಿದ್ದಾರೆ ಎನ್ನುತ್ತಾರೆ ಹಿರಿಯ ವಕೀಲ ಹಾಗೂ ಕಾಂಗ್ರೆಸ್‌ ಪಕ್ಷದ ಮುಖಂಡ ನಾರಾಯಣ ಸ್ವಾಮಿ ಅವರು. ಅವರು ಸಿಕೆನ್ಯೂಸ್ ನೌ ಜತೆ ಮಾತನಾಡಿದರು.

ಚಿಕ್ಕಬಳ್ಳಾಪುರ ನಗರದಲ್ಲಿ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಮಾಡಿಲ್ಲ. ಕೆಲ ಚರಂಡಿ ನಿರ್ಮಾಣ ಕಾಮಗಾರಿಗಳು ತೆವಳುತ್ತಾ ಸಾಗಿವೆ. ರಾಜಕಾಲುವೆಗಳ ಒತ್ತುವರಿಯನ್ನು ತೆರವು ಮಾಡಿಲ್ಲ. ನಿರಂತರವಾಗಿ ಮಳೆ ಬೀಳುತ್ತಿದ್ದರೂ ಈ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಒಂದು ವೇಳೆ ಸಕಾಲಕ್ಕೆ ಕ್ರಮ ಕೈಗೊಂಡಿದ್ದಿದ್ದರೆ ಇಷ್ಟು ಅನಾಹುತ ಉಂಟಾಗುತ್ತಿರಲಿಲ್ಲ. ಜನರು ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ.

ಎಸ್.ಎಂ.ಮುನಿಯಪ್ಪ, ಮಾಜಿ ಶಾಸಕ

ಚಿಕ್ಕಬಳ್ಳಾಪುರದಲ್ಲಿ ಇಷ್ಟೊಂದು ಅವ್ಯವಸ್ಥೆ ಆಗಲು ನಗರಸಭೆಯ ಎಂಜಿನಿಯರುಗಳು ನಡೆಸುತ್ತಿರುವ ಅವೈಜ್ಞಾನಿಕ ಕಾಮಗಾರಿಗಳೇ ಕಾರಣ. ಕಳಪೆ ಮತ್ತು ಅಸಮರ್ಪಕ ಕಾಮಗಾರಿ ಹಾಗೂ ಯೋಜನೆಗಳಿಂದ ನಗರವನ್ನು ನಗರಸಭೆ ನರಕವನ್ನಾಗಿ ಮಾಡಿದೆ. ನಾಲ್ಕು ವಾರ್ಡುಗಳಿಂದ ಬರುವ ನೀರು ಹೋಗಲು ಕೇವಲ ಒಂದು ಅಡಿ ಚರಂಡಿ ಮಾಡಲಾಗಿದೆ. ಇದು ಯಾವ ಸೀಮೆಯ ಕಾಮಗಾರಿ?

ಮಟಮಪ್ಪ, ನಗರಸಭೆ ಸದಸ್ಯ

Tags: chikkaballapuracknewsnowdr k sudhakarheavy floodsheavy rainhn valley waterlakes breaknews
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಕೆರೆಗಳಿಗೆ ಎಳ್ಳೂನೀರು, ಪರರ ಪಾಲಾಗುತ್ತಿದೆ ಮಳೆನೀರು

ಕೆರೆಗಳಿಗೆ ಎಳ್ಳೂನೀರು, ಪರರ ಪಾಲಾಗುತ್ತಿದೆ ಮಳೆನೀರು

Comments 1

  1. Pingback: 45 ದಿನ ಮಳೆಗೆ ತತ್ತರಿಸಿದ್ದ ಚಿಕ್ಕಬಳ್ಳಾಪುರಕ್ಕೆ ಜಸ್ಟ್‌ 20 ನಿಮಿಷ ಭೇಟಿ ಕೊಟ್ಟ ಮುಖ್ಯಮಂತ್ರಿ! - cknewsnow

Leave a Reply Cancel reply

Your email address will not be published. Required fields are marked *

Recommended

ದಾಖಲೆ ಸಲ್ಲಿಸಲು ಪೂರೈಕೆ ಕಂಪನಿಗಳ ಮೀನಾ-ಮೇಷ; ತಯಾರಿಕೆ ಕಂಪನಿಗಳಿಂದಲೇ ನೇರವಾಗಿ ವ್ಯಾಕ್ಸಿನ್  ಖರೀದಿಗೆ ಮುಂದಾದ ಸರಕಾರ

ಕಾಲೇಜು ವಿದ್ಯಾರ್ಥಿಗಳಿಗೆ ಜುಲೈ ತಿಂಗಳಲ್ಲಿ ಲಸಿಕೆ: ಶೀಘ್ರ ತರಗತಿಗಳ ಆರಂಭಕ್ಕೆ ಚಿಂತನೆ ಎಂದ ಡಿಸಿಎಂ

5 years ago
ಯಡಿಯೂರಪ್ಪ ಅವರಿಂದ ಎಷ್ಟು ಸೂಟ್ ಕೇಸ್ ತೆಗೆದುಕೊಂಡಿರಿ ಸಿದ್ದರಾಮಯ್ಯ?

ಮೇಲ್ಮನೆ ಚುನಾವಣೆ ಮೈತ್ರಿ ವಿಚಾರ, ಭಾನುವಾರದೊಳಗೆ ನಿರ್ಧಾರ

4 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ