ಮದುವೆ ಸಮಾರಂಭದಲ್ಲಿ ಭಾಗಿಯಾದ ವಿದ್ಯಾರ್ಥಿನಿಗೆ ಪಾಸಿಟಿವ್; ಜಾತ್ರೆಗೆ ಹೋಗಿ ಬಂದ ವಿದ್ಯಾರ್ಥಿಗೂ ಸೋಂಕು ಅಟ್ಯಾಕ್
By GS Bharath Gudibande
ಚಿಕ್ಕಬಳ್ಳಾಪುರ: ಒಮ್ರಿಕಾನ್ ಹೊಸ ರೂಪಾಂತರಿ ಕೋರೋನಾ ಆತಂಕದ ನಡುವೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿಗಳಿಗೆ ಕೋರೋನಾ ಪಾಸಿಟಿವ್ ದೃಢಪಟ್ಟಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಹೋಬಳಿಯ ಸರಕಾರಿ ಪ್ರೌಢ ಶಾಲೆಯ 15 ವರ್ಷದ 9ನೇ ತರಗತಿ ವಿದ್ಯಾರ್ಥಿನಿಗೆ ಕೋರೋನಾ ಪಾಸಿಟಿವ್ ಆಗಿದೆ.
ಕೋರೋನಾ ಪಾಸಿಟಿವ್ ವಿದ್ಯಾರ್ಥಿಯನ್ನು ಚಿಂತಾಮಣಿ ನಗರದ ತಾಲೂಕು ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ʼಗೆ ದಾಖಲಿಸಿಲಾಗಿದೆ. ತಂದೆಯ ಜತೆ ಜಾತ್ರೆಗೆ ಹೋಗಿ ಬಂದಿದ ನಂತರ ಜ್ವರ ಕಾಣಿಸಿಕೊಂಡಿದ್ದು ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು.
ಕೈವಾರ ಹೋಬಳಿಯ ಮತ್ತೊಂದು ಖಾಸಗಿ ಶಾಲೆಯ 10 ವರ್ಷದ 5ನೇ ತರಗತಿಯ ಬಾಲಕಿಗೆ ಕೋವಿಡ್ ಪಾಸಿಟಿವ್ ಧೃಡವಾಗಿದೆ. 5 ವರ್ಷದ ವಿದ್ಯಾರ್ಥಿನಿಗೆ ಪಾಸಿಟಿವ್ ಆದ ಹಿನ್ನಲೆ ಹಾಗೂ ಈ ವಿದ್ಯಾರ್ಥಿನಿಯ ಮನೆ ಹಾಗೂ ಅಕ್ಕಪಕ್ಕದ ನಿವಾಸಿಗಳಿಗೂ ಕೋರೋನಾ ಪಾಸಿಟಿವ್ ಆಗಿದ್ದು ಇದೇ ಗ್ರಾಮದಲ್ಲಿ ನಾಲ್ವರಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಹೀಗಾಗಿ ಈ ಗ್ರಾಮದಿಂದ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದ ಖಾಸಗಿ ಶಾಲೆಗೆ ಬರುವ ಇತರೆ 35 ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು, ಅವರೆಲ್ಲರ ವರದಿ ನೆಗಟಿವ್ ಬಂದಿದೆ ಎಂದು ತಿಳಿದುಬಂದಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ 25 ವಿದ್ಯಾರ್ಥಿಗಳು ಶಾಲೆಗ ಬರದಂತೆ ಸೂಚನೆ ನೀಡಿ ರಜೆ ಕೊಡಲಾಗಿದೆ.
ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್
ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಗೆ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಶಾಲೆಯ 9ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಶಾಲೆಯ 160 ಮಂದಿ ವಿದ್ಯಾರ್ಥಿಗಳಿದ್ದು, 4 ಮಂದಿ ಆರೋಗ್ಯ ಸಿಬ್ಬಂದಿ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡುತ್ತಿದ್ದಾರೆ. ಇವರ ರಿಪೋರ್ಟ್ ನಾಳೆ ಬರಲಿದೆ.
ಸದ್ಯ 9ನೇ ತರಗತಿಯ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ನಾಳೆ ರಿಪೋರ್ಟ್ ನಂತರ ಶಾಲೆಗೆ ರಜೆ ನೀಡಬೇಕಾ ಬೇಡವಾ ಎಂಬ ಬಗ್ಗೆ ತೀರ್ಮಾನಿಸಲಾಗುವುದು.
ಜಯರಾಮರೆಡ್ಡಿ. ಉಪ ನಿರ್ದೇಶಕ, ಶಿಕ್ಷಣ ಇಲಾಖೆ ಚಿಕ್ಕಬಳ್ಳಾಪುರ