• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home POLITICS

ಥೂ! ಅಸಹ್ಯ!! ಹಣಕ್ಕಾಗಿ ಮತ! ತಿರುಪತಿ ಲಡ್ಡು, ಕೈ ತುಂಬಾ ದುಡ್ಡು!!

cknewsnow desk by cknewsnow desk
December 8, 2021
in POLITICS, STATE
Reading Time: 1 min read
0
ಥೂ! ಅಸಹ್ಯ!! ಹಣಕ್ಕಾಗಿ ಮತ! ತಿರುಪತಿ ಲಡ್ಡು, ಕೈ ತುಂಬಾ ದುಡ್ಡು!!

ಬಾಗೇಪಲ್ಲಿ ಬಳಿ ಇರುವ ಪರಗೋಡು ಸಮೀಪದ ರಾಷ್ಟ್ರೀಯ ಪಕ್ಷ ಒಂದರ ಜಿಲ್ಲಾ ಅಧ್ಯಕ್ಷರ ತೋಟದಲ್ಲಿ ಹಣಕ್ಕಾಗಿ ಮತದಾರರ ಜಾತ್ರೆ.

3.3k
VIEWS
FacebookTwitterWhatsuplinkedinEmail

ಸ್ಥಳೀಯ ಸಂಸ್ಥೆಗಳ ಮತದಾರರಿಗೆ ಬಂಪರ್‌; ರಾಷ್ಟ್ರೀಯ ಪಕ್ಷ ಒಂದರ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರ ತೋಟದಲ್ಲಿ ಮತ ಖರೀದಿ

ಭಾರತರತ್ನರು ಸರ್.ಎಂ.ವಿಶ್ವೇಶ್ವರಯ್ಯ, ಪ್ರೊ.ಸಿ.ಎನ್.‌ಆರ್.ರಾವ್‌ ಜನಿಸಿದ ಜಿಲ್ಲೆಯಲ್ಲಿ ನಾಚಿಕೆಗೇಡಿನ ರಾಜಕೀಯ

ಆಣೆ, ಪ್ರಮಾಣದ ವಿಡಿಯೋ ವೈರಲ್‌

ಬೆಂಗಳೂರು/ಬಾಗೇಪಲ್ಲಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಹಣದ ಹೊಳೆಯೇ ಹರಿಯುತ್ತಿದ್ದು, ಈ ವಿಷಯದಲ್ಲಿ ಇತರೆ ಪಕ್ಷಗಳಿಗಿಂತ ಆಡಳಿತಾರೂಢ ಬಿಜೆಪಿ ಮುಂದಿದೆ.

ಕೆಲ ದಿನಗಳ ಹಿಂದೆ ಚಿಕ್ಕಬಳ್ಳಾಪುರದ ನಂದಿ ಸಮೀಪದ ದೇವಾಲಯ ಒಂದರಲ್ಲಿ ವರದಿ ಮಾಡಲು ಬಂದ  ಮಾಧ್ಯಮಗಳನ್ನು ಮನಸೋ ಇಚ್ಛೆ ನಿಂದಿಸಿ ಹೊರಗಿಟ್ಟು, ಖಾಕಿ ಸರ್ಪಗಾಲವಲು ನಡುವೆಯೇ ಜಿಲ್ಲೆಯ ʼಅನಭಿಶಕ್ತ ದೊರೆʼಯಾಗಿ ಮೆರೆಯುತ್ತಿರುವ ಮಹಾಶಯರು ಖುದ್ದು ತಾವೇ ಮತದಾರರಿಗೆ ತಿರುಪತಿ ಲಡ್ಡು, ಕೈತುಂಬಾ ದುಡ್ಡನ್ನು ಕೊಟ್ಟು ಕಳಿಸಿದ್ದರು. ಅಲ್ಲದೆ, ದೇವರ ಸನ್ನಿಧಿಯಲ್ಲಿ ದುಡ್ಡು, ಲಡ್ಡು ಪಡೆದವರಿಂದ ಅವರು ಪ್ರಮಾಣ ಮಾಡಿಸಿಕೊಂಡಿದ್ದ ಘಟನೆ ಮಾಸುವ ಮುನ್ನವೇ ಅದನ್ನು ಮೀರಿಸುವ ಹಣ ವಿತರಣೆಯ ಜಾತ್ರೆ ಇಂದು ಬಾಗೇಪಲ್ಲಿಯಲ್ಲಿ ನಡೆದಿದೆ.

ಬಾಗೇಪಲ್ಲಿ ಸಮೀಪದ ಪರಗೋಡು ಬಳಿ ಇರುವ ರಾಷ್ಟ್ರೀಯ ಪಕ್ಷ ಒಂದರ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಿಗೆ ಸೇರಿದ ಫಾರಂ ಹೌಸಿನಲ್ಲಿ ಬೆಳಗಿನಿಂದಲೇ ಹಣದ ವಿತರಣೆ ಜಾತ್ರೆ ನಡೆಯುತಲ್ಲದೆ, ಹಣ ಪಡೆದ ಗ್ರಾಮ ಪಂಚಾಯಿತಿ ಸದಸ್ಯರು, ಸದಸ್ಯೆಯರು ಇನ್ನಿತರೆ ಸ್ಥಳೀಯ ಸಂಸ್ಥೆಗಳ ಮತದಾರರಿಂದ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ಫೋಟೋ ಮೇಲೆ ಕೈ ಇರಿಸಿ ಪ್ರಮಾಣ ಮಾಡಿಸಲಾಗಿದೆ.

ಸದಸ್ಯರಾಗಿ ಆಯ್ಕೆಯಾದ ವೇಳೆ ನೀಡಿದ್ದ ಪ್ರಮಾಣ ಪತ್ರವನ್ನು ಪರಿಶೀಲಿಸಿದ ಮುಖಂಡರು, ಅವರು ಮತದಾರರೆಂದು ಖಾತ್ರಿಪಡಿಸಿಕೊಂಡು ತಲಾ 75 ಸಾವಿರ ರೂಪಾಯಿ, ತಿರುಪತಿ ಲಡ್ಡು ಮಾತ್ರವಲ್ಲದೆ, ಶ್ರೀ ವೆಂಕಟರಮಣಸ್ವಾಮಿ ದೇವರ ಫೋಟೋ ಸಹ ನೀಡಲಾಗಿದೆ. ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಬೇಕೆಂದು ಆಣೆ, ಪ್ರಮಾಣ ಮಾಡಿಸಿಕೊಳ್ಳಲಾಗಿದೆ.

ಅಲ್ಲಿಗೆ ಆಗಮಿಸಿದ್ದ ಸದಸ್ಯರಿಗೆ ಬಾಗೇಪಲ್ಲಿ ತಾಲೂಕಿನ ಆ ಪಕ್ಷದ ಅಧ್ಯಕ್ಷರು 75 ಸಾವಿರ ನಗದು,ಪ್ರಸಾದ ಮತ್ತು ದೇವರ ಫೋಟೋ ನೀಡಿ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಲು ಸದಸ್ಯರಿಂದ ಆಣೆ ಪ್ರಮಾಣ ಮಾಡಿಸುತ್ತಿರುವ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

#ಹಣಕ್ಕಾಗಿ_ಮತ
ತಿರುಪತಿ ಲಡ್ಡು, ಕೈ ತುಂಬಾ ದುಡ್ಡು!
ಸ್ಥಳಿಯ ಸಂಸ್ಥೆ ಮತದಾರರಿಗೆ ಬಂಪರ್!!

ರಾಷ್ಟ್ರೀಯ ಪಕ್ಷ ಒಂದರ ಚಿಕ್ಕಬಳ್ಳಾಪುರ ಜಿಲ್ಲಾಅಧ್ಯಕ್ಷರ ತೋಟದಲ್ಲಿ ಮತ ಖರೀದಿಯ ಒಂದು ವಿಡಿಯೋ. ಹೇಳುವುದು ರಾಷ್ಟ್ರಭಕ್ತಿ, ಮಾಡುವುದು ಇಂಥ ಕೆಲಸ. ಈ ಚುನಾವಣೆ ಬೇಕಾ? ಹೀಗೆ ಗೆದ್ದು ಹೋಗುವವರ ವಿಧಾನ ಪರಿಷತ್ ಅಗತ್ಯ ಇದೆಯಾ? ಯೋಚಿಸಿ. pic.twitter.com/15ZnQj7bgC

— cknewsnow.com (@cknewsnow) December 8, 2021

ಹೀಗೆ ಪ್ರಮಾಣ ಮಾಡಿಸಿರುವ ವಿಡಿಯೋ ಮತ್ತು ಫೋಟೋಗಳು ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಜಿಲ್ಲೆಯಲ್ಲಿ ಚುನಾವಣೆ ನಡೆಯುತ್ತಿರುವ ವೈನಕ್ಕೆ ಜನರು ಆಕ್ರೋಶಭರಿತವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.

ಈ ಬಗ್ಗೆ ಸಿಕೆನ್ಯೂಸ್‌ ನೌ ಜತೆ ಮಾತನಾಡಿದ ಹಿರಿಯ ಬುದ್ಧಿಜೀವಿ ಒಬ್ಬರು; “ಚಿಕ್ಕಬಳ್ಳಾಪುರ ಎಂದರೆ ಜ್ಞಾನಕ್ಕೆ, ಶ್ರಮಕ್ಕೆ ಹೆಸರುವಾಸಿಯಾದ ಜಿಲ್ಲೆ. ಅವಿಭಜಿತ ಕೋಲಾರ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿ ಆಗಿತ್ತು. ರಾಜ್ಯದ ಇಬ್ಬರು ಭಾರತರತ್ನರಾದ ಸರ್.ಎಂ.ವಿಶ್ವೇಶ್ವರಯ್ಯ, ಪ್ರೊ.ಸಿ.ಎನ್.‌ಆರ್.ರಾವ್‌ ಅವರನ್ನು ದೇಶಕ್ಕೆ ಕೊಟ್ಟ ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಹಣಕ್ಕೆ ಮತ ಮಾರಿಕೊಳ್ಳುತ್ತಿರುವುದು ಹಾಗೂ ರಾಷ್ಟ್ರಭಕ್ತಿಯ ಗುತ್ತಿಗೆ ಪಡೆದಂತೆ ವರ್ತಿಸುವ ಪಕ್ಷದ ನಾಯಕರು ನಾಚಿಕೆ ಇಲ್ಲದೆ ಮತಗಳನ್ನು ದೇವರ ಹೆಸರಿನಲ್ಲಿ ಖರೀದಿ ಮಾಡುತ್ತಿರುವುದು ದೇಶಕ್ಕೆ ಮಾಡುತ್ತಿರುವ ಅಪಚಾರ” ಎಂದು ಹೇಳಿದ್ದಾರೆ.

ಅಲ್ಲದೆ, ಜನರು ಶ್ರದ್ಧಾಕೇಂದ್ರಗಳೆಂದು ನಂಬಿರುವ ದೇವಾಲಯಗಳನ್ನೇ ಹಣ ವಿತರಣೆಯ ಅಡ್ಡೆಗಳನ್ನಾಗಿ ಮಾಡಿಕೊಂಡಿರುವ ಆ ಪಕ್ಷ ನಾಯಕರು ಕ್ಷಮಾರ್ಹರಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ.

ಇನ್ನೊಂದೆಡೆ, ಜಿಲ್ಲೆಗೆ ಚುನಾವಣಾ ವೀಕ್ಷಕರಾಗಿ ನೇಕಮಗೊಂಡಿರುವ ಅಧಿಕಾರಿಗಳು, ಇತರೆ ಚುನಾವಣೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

ತಿರುಪತಿ ಲಡ್ಡು ಜತೆ 75,000 ರೂ. ಹಣವನ್ನು ಮತದಾರರಿಗೆ ನೀಡಲಾಗಿದೆ ಎಂದು ಸಿಕೆನ್ಯೂಸ್‌ ನೌ ವೆಬ್‌ತಾಣಕ್ಕೆ ಮಾಹಿತಿ ಸಿಕ್ಕಿದೆ. ಅಲ್ಲದೆ, ತಿರುಪತಿ ವೆಂಕಟರಮಣ ಸ್ವಾಮಿಯ ಮೇಲೆ ಆಣೆ ಮಾಡಿ, ಇಂಥದ್ದೇ ಸೀರಿಯಲ್‌ ನಂಬರಿನ ಅಭ್ಯರ್ಥಿಗೇ ಮತ ಹಾಕಬೇಕು ಎಂದು ತಾಕೀತು ಮಾಡಲಾಗಿದೆ.

ಹಣಕ್ಕಾಗಿ ಮತ ಮಾರಿಕೊಳ್ಳಲು ಬಂದಿದ್ದ ಸ್ಥಳೀಯ ಸಂಸ್ಥೆಗಳ ಮತದಾರರು ಜಾತ್ರೆಯೋಪಾದಿಯಲ್ಲಿ ಆ ತೋಟದಲ್ಲಿ ಸೇರಿದ್ದರು. ಮಹಿಳಾ ಮತದಾರರು ತಮ್ಮ ಪತಿರಾಯರ ಜತೆ ಬಂದು ನಗುನಗುತ್ತಲೇ ದುಡ್ಡು, ಲಡ್ಡು ಸ್ವೀಕರಿಸಿ, ಪ್ರಮಾಣ ಮಾಡಿ ಪುನೀತರಾದರು. ಇಷ್ಟೆಲ್ಲ ನಡೆಯುತ್ತಿದ್ದರೂ ತಾಲೂಕು ಪೊಲೀಸರಾಗಲಿ ಅಥವಾ ಚುನಾವಣಾ ವೀಕ್ಷಕರಾಗಲಿ ಅತ್ತ ಸುಳಿಯಲಿಲ್ಲ. ಆದರೆ, ಹಣ, ಪ್ರಮಾಣದ ವಿಡಯೋಗಳು ಭಾರೀ ಪ್ರಮಾಣದಲ್ಲಿ ವೈರಲ್‌ ಆಗುತ್ತಿವೆ.

Tags: bagepallichikkaballapuracknewsnowkarnatakakolarmlc electionnewsPoliticsvote for salevote purchase
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಗುಡಿಬಂಡೆ ಅರಣ್ಯದ 284 ಎಕರೆ ನುಂಗಿದ ಗೌರಿಬಿದನೂರು ಕಂದಾಯ ಇಲಾಖೆ

ಸಿಕೆನ್ಯೂಸ್ ನೌ ಬಿಗ್ ಇಂಪ್ಯಾಕ್ಟ್; ಗುಡಿಬಂಡೆ ಅರಣ್ಯದ 284 ಎಕರೆ ಸೇಫ್‌

Leave a Reply Cancel reply

Your email address will not be published. Required fields are marked *

Recommended

ಗುಡಿಬಂಡೆ: ಎಲ್ಲೋಡಿನಲ್ಲಿ ಎರಡು ಚಿರತೆಗಳ 20ಕ್ಕೂ ಹೆಚ್ಚು ಕುರಿ ಬಲಿ

ಗುಡಿಬಂಡೆ: ಎಲ್ಲೋಡಿನಲ್ಲಿ ಎರಡು ಚಿರತೆಗಳ 20ಕ್ಕೂ ಹೆಚ್ಚು ಕುರಿ ಬಲಿ

4 years ago
ಎಲ್ಲೋಡು ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ; ಕೂರ್ಮಗಿರಿಯಲ್ಲಿ ಭಕ್ತರ ಜಾತ್ರೆ

ಎಲ್ಲೋಡು ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ; ಕೂರ್ಮಗಿರಿಯಲ್ಲಿ ಭಕ್ತರ ಜಾತ್ರೆ

4 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ