ಅಪಘಾತದಲ್ಲಿ ಗಾಯಗೊಂಡಿದ್ದ ಶ್ರೀಗಳು
ಚಿಕ್ಕಬಳ್ಳಾಪುರ: ಅಪಘಾತ ದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಸಿದ್ದನಗವಿ ಜ್ಞಾನಾನಂದಾಶ್ರಮದ ಶ್ರೀ ಶಿವಾತ್ಮನಂದ ಸರಸ್ವತಿ ಸ್ವಾಮೀಜಿ (59) ಅವರು ಚಿಕಿತ್ಸೆ ಫಲಿಸದೆ ಬುಧವಾರ ಇಹಲೋಕ ತ್ಯಜಿಸಿದ್ದಾರೆ.
ವೇದ, ಉಪನಿಷತ್, ಭಾಷ್ಯ ಗಳು ಸೇರಿದಂತೆ ಸಂಸ್ಕೃತ, ಕನ್ನಡ ಗ್ರಂಥಗಳ ಬಗ್ಗೆ ಆಳ ಪಾಂಡಿತ್ಯ ಹೊಂದಿದ್ದ ಶ್ರೀ ಗಳು ರಾಜ್ಯ, ಹೊರರಾಜ್ಯ ದೇಶ ವಿದೇಶಗಳಲ್ಲಿ ತಮ್ಮ ವಿದ್ವತ್ ಪೂರ್ಣ ಉಪನ್ಯಾಸ ಗಳಿಂದ ರಾಷ್ಟ್ರ ಸಂತರೆಂದು ಬಿರುದಾಂಕಿತ ರಾಗಿದ್ದರು.
ಕವಿ, ಲೇಖಕರು ಆಗಿದ್ದ ಶ್ರೀ ಗಳು ವಿಶ್ವಕರ್ಮ ಸಮಾಜಕ್ಕೆ ದಾರಿದೀಪ ವಾಗಿ, ಎಲ್ಲಾ ಸಮಾಜದ ವರಿಗೂ ಗುರುವಾಗಿ ಮಾರ್ಗದರ್ಶನ ಮಾಡುತ್ತಿದ್ದರು.
ವಿಶ್ವಕರ್ಮ ಸಮಾಜದ ಶಿವಾತ್ಮಾನಂದ ಸ್ವಾಮಿಗಳು ಅತ್ಯಂತ ಮೃದು ಸ್ವಭಾವ ಉಳ್ಳವರು, ಆಧ್ಯಾತ್ಮಿಕ ಚಿಂತನೆ ಉಳ್ಳವರು, ಅಗಾಧವಾದ ಜ್ಞಾನ ಹಾಗೂ ವೀರಬ್ರಹ್ಮೇಂದ್ರ ಸ್ವಾಮಿಯವರ ಜೀವನ ಚರಿತ್ರೆಯನ್ನು ಆಶ್ರಮದಲ್ಲಿ ತಿಳಿಸುತ್ತಿದ್ದರು.
ಶ್ರೀಗಳ ಅಗಲಿಕೆಯಿಂದ ವಿಶ್ವಕರ್ಮ ಸಮಾಜಕ್ಕೂ ಹಾಗೂ ಶಿಷ್ಯವೃಂದಕ್ಕೆ ತುಂಬಲಾರದ ನಷ್ಟ ಹಾಗು ನೋವುಂಟಾಗಿದೆ.
ಶ್ರೀ ಶಿವಾತ್ಮಾನಂದ ಸ್ವಾಮಿಗಳ ಆತ್ಮಕ್ಕೆ ಶಾಂತಿ ಸಿಗಲೆಂದು ವಿಶ್ವಕರ್ಮ ಉತ್ಸವ ಸಮಿತಿ ಪ್ರಾರ್ಥಿಸಿದೆ.
ಇಂತಹ ಶ್ರೇಷ್ಠ ಗುರುವಿನ ಅಗಲಿಕೆ ನಾಡಿಗೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅರೆಮಾದನಹಳ್ಳಿ ಶ್ರೀಗಳು, ಶ್ರೀ ರವಿ ಶಂಕರ್ ಗುರೂಜಿ ಸೇರಿದಂತೆ ನಾಡಿನ ಅನೇಕ ಗಣ್ಯರು ಶ್ರೀ ಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪೂಜ್ಯರ ಅಂತ್ಯ ಸಂಸ್ಕಾರವು ನಾಳೆ ಗುರುವಾರ ಬೆಳಗ್ಗೆ 9ಗಂಟೆಗೆ ಚಿಕ್ಕಬಳ್ಳಾಪುರದ ನಂದಿಯ ಸಿದ್ದನಗವಿ ಜ್ಞಾನಾನಂದಾಶ್ರಮದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಲಿದೆ.
ಕಾರಜೋಳ ಕಂಬನಿ
ವೇಧ ವೇದಾಂತಾಚಾರ್ಯ ಪರಿವಾಜಕ ಚಾರ್ಯ, ವಿಶ್ವಕರ್ಮರ ಯುಗಪುರುಷ. ಚಿಕ್ಕಬಳ್ಳಾಪುರದ ಜ್ಞಾನಾನಂದ ಆಶ್ರಮದ ಸಿದ್ದನಗವಿಯ ಪರಮಪೂಜ್ಯ ರಾಷ್ಟ್ರಸಂತ ಬಿರುದಾಂಕಿತ ಸಮಾಜದ ಏಕೈಕ ಯತಿವರ್ಯರಾದ ಶ್ರೀ ಶ್ರೀಶ್ರೀ ಶಿವಾತ್ಮಾನಂದ ಸರಸ್ವತಿ ವಿಧಿವಶರಾಗಿದ್ದಾರೆ. ಅವರ ಅಕಾಲಿಕ ನಿಧನದಿಂದ ಅನುಯಾಯಿಗಳಿಗೆ ಮತ್ತು ಭಕ್ತರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಮತ್ತು ಮೃತರ ಆತ್ಮಕೆ ಚಿರಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾನ್ಯ ಜಲಸಂಪನ್ಮೂಲ ಸಚಿವ ಗೋವಿಂದ_ಕಾರಜೋಳ ಅವರು ಶೋಕಿಸಿದ್ದಾರೆ.