• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಒಂಟಿ ಸಲಗದಂತೆ ಹೋರಾಡಿ ಗೆದ್ದ ಭಾರತ

cknewsnow desk by cknewsnow desk
December 16, 2021
in GUEST COLUMN, STATE
Reading Time: 3 mins read
0
ಒಂಟಿ ಸಲಗದಂತೆ ಹೋರಾಡಿ ಗೆದ್ದ ಭಾರತ
973
VIEWS
FacebookTwitterWhatsuplinkedinEmail

ವಿಜಯ ದಿವಸ ಮತ್ತು ಬಾಂಗ್ಲಾ ವಿಮೋಚನೆ

by Dr.Guru Prasad Rao Hawaldar

ಬಾಂಗ್ಲಾದೇಶ ವಿಮೋಚನೆಗಾಗಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆದ ಐತಿಹಾಸಿಕ ಸಮರದಲ್ಲಿ ಭಾರತ ವಿಜಯದ ಪತಾಕೆ ಹಾರಿಸಿ 51 ವರ್ಷ ಕಳೆದಿದೆ. 1971ರ ಡಿಸೆಂಬರ್ 3ರಂದು ಆರಂಭವಾದ ಇಂಡೋ-ಪಾಕ್‌  ಯುದ್ಧ 13 ದಿನಗಳವರೆಗೂ ನಡೆಯಿತು. ಬಳಿಕ ಭಾರತೀಯ ಸೇನೆಯ ಪ್ರಾಬಲ್ಯಕ್ಕೆ ಸೋತ ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶಕ್ಕೆ ಶರಣಾಯಿತು.

ಭಾರತ ತನ್ನ ಪಾರಂಪರಿಕ ವೈರಿಯನ್ನು ಬಗ್ಗು ಬಡಿದು, ಬಾಂಗ್ಲಾವನ್ನು ಅದರ ಕಪಿಮುಷ್ಠಿಯಿಂದ ಬಿಡಿಸಿ, ನವ ಬಾಂಗ್ಲಾದೇಶ ಉದಯವಾಗಲು ಕಾರಣವಾದ ದಿನ ‘ವಿಜಯ್ ದಿವಸ್’ಗೆ ಕಾರಣವಾಗಿದ್ದು ಭಾರತೀಯ 1971ರಲ್ಲಿ ಈ ದಿನದಂದು ಯುದ್ದವು ಅಂತ್ಯಗೊಂಡು ಪಾಕಿಸ್ತಾನದ ಸೈನ್ಯದ ಮುಖ್ಯಸ್ಥರಾದ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿಯು, ತನ್ನ 93,000 ಸೈನಿಕ ಪಡೆಯೊಂದಿಗೆ ಭಾರತೀಯ ಸೈನ್ಯ ಮತ್ತು ಮುಕ್ತಿ ಬಾಹಿಣಿಗೆ ಬೇಷರತ್ತಾದ ಶರಣಾಗತಿಯಾಯಿತು. ಭಾರತದಲ್ಲಿ ಈ ದಿನವನ್ನು ಯುದ್ದದಲ್ಲಿ ರಾಷ್ಟ್ರಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ‘ವಿಜಯ್ ದಿವಸ್’ ಎಂದು ಆಚರಿಸಲಾಗುತ್ತದೆ.

ಪಶ್ಚಿಮ ಪಾಕಿಸ್ತಾನದ (ಇಂದಿನ ಪಾಕಿಸ್ತಾನ) ಹಿಡಿತದಲ್ಲಿದ್ದ ಪೂರ್ವ ಪಾಕಿಸ್ತಾನವನ್ನು (ಇಂದಿನ ಬಾಂಗ್ಲದೇಶ) ಪಾಕಿಸ್ತಾನದ ದಬ್ಬಾಳಿಕೆಯಿಂದ ಹೊರತಂದು ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದು ಭಾರತ. ಇದಕ್ಕಾಗಿ ಭಾರತ ತನ್ನ ಹೆಮ್ಮೆಯ ನೂರಾರು ಸೈನಿಕರನ್ನು ಕಳೆದುಕೊಂಡಿತು. ಭಾರತೀಯ ಸೈನಿಕರ ಶೌರ್ಯ ಸಾಹಸದ ಮುಂದೆ ಪಾಕಿಸ್ತಾನ ಮಣ್ಣು ಮುಕ್ಕಿತು. ಬಾಂಗ್ಲಾಗೆ ವಿಮೋಚನೆ ನೀಡುವ ಮೂಲಕ ಭಾರತ ಪ್ರಪಂಚಕ್ಕೆ ತನ್ನ ಶಕ್ತಿಯನ್ನು ತೋರಿಸಿದರೆ, ಭಾರತದ ಅಮೂಲ್ಯ ಸಹಾಯದಿಂದ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಡಿಸೆಂಬರ್ 16ನ್ನು ಭಾರತ ತನ್ನ ವಿಜಯ ದಿವಸ್ ಎಂದು ಆಚರಿಸಿದರೆ, ಬಾಂಗ್ಲಾದೇಶ ಆ ದಿನವನ್ನು ಸ್ವಾತಂತ್ರ್ಯ ದಿನವಾಗಿ ಆಚರಿಸುತ್ತಿದೆ.

ಸ್ವಾತಂತ್ರ್ಯಾ ನಂತರ ಅಖಂಡ ಭಾರತ, ಭಾರತ-ಪಾಕಿಸ್ತಾನ ಎಂದು ವಿಭಜನೆಯಾಯಿತು. ಮುಸ್ಲಿಮರು ಅಧಿಕವಿದ್ದ ಇಂದಿನ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಎಂದಾಯಿತು. ಪೂರ್ವ ಬಂಗಾಳ, ಪೂರ್ವ ಪಾಕಿಸ್ತಾನವಾಯಿತು. ಆದರೆ, ಸ್ವಾತಂತ್ರ್ಯಾ ನಂತರ ಪಶ್ಚಿಮ ಪಾಕಿಸ್ತಾನದಲ್ಲಿ ಅರಾಜಕತೆ, ಅನ್ಯಾಯ, ದೌರ್ಜನ್ಯ ಹೆಚ್ಚಾದವು. ಪಶ್ಚಿಮ ಪಾಕಿಸ್ತಾನದ ಬಿಗಿ ಹಿಡಿತ ಪೂರ್ವ ಪಾಕಿಸ್ತಾನದ ಮೇಲಿತ್ತು. 1951ರಿಂದ ಪ್ರತ್ಯೇಕ ಬಾಂಗ್ಲಾದೇಶ ಕೂಗು ಪ್ರಾರಂಭವಾಯಿತು. ಆದರೆ, ಇದಕ್ಕೆ ಪಶ್ಚಿಮ ಪಾಕಿಸ್ತಾನ ಸೊಪ್ಪು ಹಾಕಲಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಸ್ವತಂತ್ರ ಬಾಂಗ್ಲಾ ಕೂಗು ಹೆಚ್ಚಾಯಿತು.

ಬ್ರಿಟೀಷರಿಂದ ಸ್ವಾತಂತ್ರ್ಯ ಸಿಕ್ಕ ನಂತರ ಪಾಕಿಸ್ತಾನ ತನ್ನ ಮಿಲಿಟರಿ ಶಕ್ತಿಯನ್ನು ಹಾಗೂ ಬಹುತೇಕ ಅಧಿಕಾರವನ್ನು ತನಗೆ ಮಾತ್ರ ಸಿಮೀತವಾಗುವಂತೆ ಮಾಡಿಕೊಂಡಿತು. ಇದರಿಂದ ಪೂರ್ವ ಪಾಕಿಸ್ತಾನ ಕೇವಲ ಪಾಕಿಸ್ತಾನದ ಅಡಿಯಾಳಾಯಿತು.

ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲಾದೇಶ) ನಿರಂತರವಾಗಿ ನಡೆಯುತ್ತಿದ್ದ ಅತ್ಯಾಚಾರ, ಹಿಂಸಾಚಾರ, ಕೊಲೆ ಮತ್ತು ಕಲಹಗಳ ಪರಿಣಾಮ ಭಾರತದೊಳಗೆ ಒಂಬತ್ತು ಮಿಲಿಯನ್ ನಿರಾಶ್ರಿತರು ನುಸುಳುವಂತೆ ಮಾಡಿತು. ಮುಖ್ಯವಾಗಿ ಅಲ್ಪಸಂಖ್ಯಾತ ಹಿಂದೂ ಜನರನ್ನು ಗುರಿಯನ್ನಾಗಿರಿಸಿಕೊಂಡ, ಬೆಂಗಾಳಿಗಳ ಮೇಲೆ ಪಾಕಿಸ್ತಾನವು ವ್ಯಾಪಕ ಹತ್ಯಾಕಾಂಡ ನಡೆಸಿತ್ತು.

ಬಾಂಗ್ಲಾ ದೇಶದಾದ್ಯಂತ ಯಾವ ಕರುಣೆಯೂ ಇಲ್ಲದೆ ಕ್ರೌರ್ಯ ಮೆರೆದ ಪಾಕಿಸ್ತಾನದ ಜನರಲ್ ಟಿಕ್ಕಾ ಖಾನ್ ಸಾಲುಸಾಲು ಹತ್ಯೆಗಳನ್ನು ನಡೆಸಿದ. ಆತನಿಗೆ ‘ಬಂಗಾಳದ ಕಟುಕ’ ಎಂದೇ ಕರೆಯಲಾಯಿತು. ಇದೇ ವ್ಯಕ್ತಿ ಬಲೂಚಿಸ್ತಾನದಲ್ಲಿಯೂ ಭೀಕರ ಹತ್ಯಾಕಾಂಡ ನಡೆಸಿ ‘ಬಲೂಚಿಸ್ತಾನದ ಕಟುಕ’ ಎಂದು ಮತ್ತೊಂದು ಕುಖ್ಯಾತಿಯನ್ನು ಪಡೆದ.

1970ರಲ್ಲಿ ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನದ ‘ಅನಾಮಿ ಲಿಗ್’ ಪಕ್ಷ 169 ಸ್ಥಾನಗಳ ಪೈಕಿ 167 ಸ್ಥಾನಗಳನ್ನು ಗೆದ್ದಿತು (ಪೂರ್ವ ಪಾಕಿಸ್ತಾನದಲ್ಲಿ ಒಟ್ಟು 319 ಸ್ಥಾನಗಳು ಇದ್ದವು). ಶೇಖ್ ಮುಜಿಬುರ್ ರೆಹಮಾನ್ (ಬಾಂಗ್ಲಾ ದೇಶದ ಇಂದಿನ ಪ್ರಧಾನಿ ಶೇಖ್ ಹಸೀನಾ ಅವರ ತಂದೆ) ನೇತೃತ್ವದ ಅವಾಮಿ ಲೀಗ್ ಸ್ವತಂತ್ರ ಬಾಂಗ್ಲಾ ಪರವಾಗಿತ್ತು. ಸಹಜವಾಗಿ ಅವರು ಪ್ರತ್ಯೇಕ ಬಾಂಗ್ಲಾ ಕೂಗನ್ನು ಪಾಕಿಸ್ತಾನದಲ್ಲಿ ಮೊಳಗಿಸಿದರು. ಆದರೆ, ಇದಕ್ಕೆ ಅಂದಿನ ಪಾಕಿಸ್ತಾನದ ಅಧ್ಯಕ್ಷ ಯಾಹ್ಯಾಖಾನ್ ಮತ್ತು ಪಿಪಿಪಿ ಅಧ್ಯಕ್ಷ ಜುಲ್ಪಿಕರ್‌  ಭುಟ್ಟೊ ತೀವ್ರ ವಿರೋಧ ವ್ಯಕ್ತಪಡಿಸಿ, ಪೂರ್ವ ಬಂಗಾಳಿಗರ ಮೇಲೆ ಕೆಂಡಕಾರತೊಡಗಿದರು.

1970ರ ಚಂಡಮಾರುತ

1970 ಬಾಂಗ್ಲಾ ಪಾಲಿಗೆ ಕರಾಳವಾದ ವರ್ಷವಾಗಿತ್ತು. ಆ ವರ್ಷ ಪೂರ್ವ ಪಾಕಿಸ್ತಾನದಲ್ಲಿ ಭೀಕರ ಚಂಡಮಾರುತ ಅಪ್ಪಳಿಸಿ ಲಕ್ಷಾಂತರ ಜನ ಸಾವನ್ನಪ್ಪಿದರು. ಕೋಟ್ಯಂತರ ಜನ ಮನೆಮಠಗಳನ್ನು ಕಳೆದುಕೊಂಡು ಬೀದಿಗೆ ಬಿದ್ದರು. ಆಡಳಿತ ಕೇಂದ್ರವಾಗಿದ್ದ ಪಾಕಿಸ್ತಾನ ಮಾತ್ರ ಇದಕ್ಕೂ ತನಗೂ ಸಂಬಂಧವಿಲ್ಲದಂತೆ ವರ್ತಿಸಿತು. ಇದು ಬಾಂಗ್ಲಾದವರಿಗೆ ಸ್ವತಂತ್ರ್ಯದ ಕಿಚ್ಚು ಹೆಚ್ಚಲು ಕಾರಣವಾಯಿತು. ಅಲ್ಲಿಯವರೆಗೂ ಒಳಗೊಳಗೆ ನಡೆಯುತ್ತಿದ್ದ ಪ್ರತ್ಯೇಕ ದೇಶದ ಕೂಗು, ಕಹಳೆಯಾಗಿ ಮಾರ್ಪಟ್ಟಿತು. ಪೂರ್ವ ಬಂಗಾಳದ ತುಂಬಾ ಭಿನ್ನಮತೀಯ ಚಟುವಟಿಕೆಗಳು ಪ್ರಾರಂಭವಾದವು. ಪಾಕಿಸ್ತಾನದ ವಿರುದ್ಧ ಪ್ರತಿಭಟನೆ, ಗಲಭೆ, ಗದ್ದಲ ಶುರುವಾದವು. ಇದನ್ನು ಹತ್ತಿಕ್ಕಲು ಪಾಕಿಸ್ತಾನ ದೊಡ್ಡ ಸೈನಿಕ ಪಡೆಯನ್ನು ಬಾಂಗ್ಲಾಕ್ಕೆ ಕಳಿಸಿತು. ಪಾಕಿಸ್ತಾನದ ಸೈನಿಕರ ಕ್ರೌರ್ಯ ಒಂದು ಕಡೆಯಾದರೆ, ಚಂಡಮಾರುತದ ಪರಿಣಾಮವಾಗಿ ಲಕ್ಷಾಂತರ ಜನ ನಿರಾಶ್ರೀತರಾಗಿ ಭಾರತದ ಕಡೆ ವಲಸೆ ಪ್ರಾರಂಭಿಸಿದರು.  ಆಗಿನ ಪೂರ್ವ ಪಾಕಿಸ್ತಾನದಿಂದ ಸುಮಾರು 10 ಲಕ್ಷ ನಿರಾಶ್ರಿತರು ಭಾರತಕ್ಕೆ ನುಸುಳಿದರು. ಅವರು ಭಾರತದಲ್ಲಿ ಅಭದ್ರತೆ ಸೃಷ್ಟಿಸುವುದರ ಜತೆಗೆ ದೇಶದ ಆರ್ಥಿಕ ಮುಗ್ಗಟ್ಟಿಗೂ ಕಾರಣರಾದರು.

1971ರ ಮಾರ್ಚ್‌ನಲ್ಲಿ ಪಾಕಿಸ್ತಾನ ಸೈನ್ಯ ಢಾಕಾದ ಮೇಲೆ ದಾಳಿ ಮಾಡಿ ಅನಾಮಿ ಲೀಗ್ ಮುಖಂಡರನ್ನು ಬಂಧಿಸಿತು. ಅಲ್ಲಿಂದ ಬಾಂಗ್ಲಾ ಹೋರಾಟ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿತು.

ಪಶ್ಚಿಮ ಪಾಕಿಸ್ತಾನ ಹಾಗೂ ಪೂರ್ವ ಪಾಕಿಸ್ತಾನದ ದಾಯಾದಿ ಜಗಳವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಭಾರತ, 1971ರ ಡಿಸೆಂಬರ್ʼನಲ್ಲಿ ಬಾಂಗ್ಲಾ ವಿಮೋಚನೆಗೆ ಸಹಾಯ ಮಾಡುವುದಾಗಿ ಘೋಷಣೆ ಮಾಡಿತು. ಇದಕ್ಕಾಗಿ ಭಾರತ ತನ್ನ ಈಶಾನ್ಯ ರಾಜ್ಯಗಳಲ್ಲಿ ಬಾಂಗ್ಲಾ ನಿರಾಶ್ರಿತರಿಗೆ ಕ್ಯಾಂಪ್ʼಗಳನ್ನು ತೆರೆಯಿತು. ಇದರ ನೇತೃತ್ವವನ್ನು ವಹಿಸಿಕೊಂಡಿದ್ದು ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ. ಭಾರತದ ಪೂರ್ವ ಗಡಿಯನ್ನು ನಿರಾಶ್ರಿತರ ಆಶ್ರಯಕ್ಕಾಗಿ ಸುರಕ್ಷಿತ ಸ್ಥಳವೆಂದು ಘೋಷಿಸಲಾಯಿತು. ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ, ಮೇಘಾಲಯ ಮತ್ತು ತ್ರಿಪುರ ಸರ್ಕಾರಗಳು ಗಡಿಯುದ್ದಕ್ಕೂ ನಿರಾಶ್ರಿತರ ಶಿಬಿರಗಳನ್ನು ಕಟ್ಟಿ ನಿಲ್ಲಿಸಿದವು. ಝೀಯಾ ಉರ್ ರೆಹಮಾನ್ ಮತ್ತು ಶೇಖ್ ಮುಜೀಬರ್ ರೆಹಮಾನ್ ಅವರು ಈ ಶಿಬಿರಗಳನ್ನು ಗೆರಿಲ್ಲಾ ತರಬೇತಿಗೆ ಬಳಸಿಕೊಂಡರು. ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಹಿಂಸಾಚಾರ, ಹತ್ಯಾಕಾಂಡ ಅನಾಹುತಗಳು ನಿಲ್ಲುವ ಲಕ್ಷಣ ಕಾಣಿಸಲಿಲ್ಲ. ಇದರಿಂದ ಭಾರತಕ್ಕೆ ನುಸುಳುತ್ತಿದ್ದ ನಿರಾಶ್ರಿತರ ಸಂಖ್ಯೆಯೂ ಹೆಚ್ಚುತ್ತಿತ್ತು. ಬಂದವರಿಗೆಲ್ಲ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ನೀಡುವ ಬದಲು ಆ ಹತ್ಯಾಕಾಂಡವನ್ನೇ ತಡೆಯುವ ಹೋರಾಟ ಸೂಕ್ತ ಎಂದು ಪ್ರಧಾನಿ ಇಂದಿರಾ ಗಾಂಧಿ ನಿರ್ಧರಿಸಿದರು.

1971ರ ಡಿಸೆಂಬರ್ ಸಮೀಪಿಸುತ್ತಿದ್ದಂತೆ ಭಾರತ ಸರ್ಕಾರ ದೊಡ್ಡ ಮಟ್ಟದ ಸೈನ್ಯದ ಜಮಾವಣೆಯನ್ನು ಪೂರ್ವದ ಗಡಿಯಲ್ಲಿ ಮಾಡಿತು. ಅಂದುಕೊಂಡಂತೆ ಪಾಕಿಸ್ತಾನ ಅಧ್ಯಕ್ಷ ಯಾಹ್ಯಾಖಾನ್, ಎರಡೂ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ, ಡಿಸೆಂಬರ್ 3ರಿಂದ ಭಾರತದೊಂದಿಗೆ ಯುದ್ಧಕ್ಕೆ ನಿಂತರು. ಡಿಸೆಂಬರ್ 3ರಂದು ಆಗ್ರಾ ಸೇರಿದಂತೆ ಭಾರತದ ಎಂಟು ವಾಯುನೆಲೆಗಳ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿತು. ಆದರೆ, ಇದನ್ನು ಭಾರತ ಅಷ್ಟೇ ಕ್ಷೀಪ್ರವಾಗಿ ಹಿಮ್ಮೆಟ್ಟಿಸಿ, ಪಾಕಿಸ್ತಾನಕ್ಕೆ ಸರಿಯಾದ ಏಟು ನೀಡಿತು. ಪ್ರತ್ಯೇಕ ಬಾಂಗ್ಲಾಕ್ಕೆ ಹೋರಾಟ ನಡೆಸುತ್ತಿದ್ದ, ಬಾಂಗ್ಲಾದ ಮುಕ್ತಿವಾಹಿನಿ ಸಶಸ್ತ್ರ ಪಡೆ ಭಾರತೀಯ ಸೇನೆಯನ್ನು ಕೂಡಿಕೊಂಡಿತು.

  • ಇಂದಿರಾ ಗಾಂಧಿ

ಪಾಕಿಸ್ತಾನದಿಂದ ದಾಳಿ ಆರಂಭ

1971ರ ಡಿಸೆಂಬರ್ 3ರಂದು ಪಾಕಿಸ್ತಾನದ ವಾಯುಪಡೆಯು (ಪಿಎಎಫ್) ಭಾರತ-ಪಾಕ್ ಗಡಿಯಿಂದ 480 ಕಿ.ಮೀ. ದೂರದ ಆಗ್ರಾದಲ್ಲಿರುವ ಭಾರತದ ವಾಯುನೆಲೆ ಸೇರಿದಂತೆ ವಾಯವ್ಯ ಭಾಗದ 11 ವಾಯುನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಪಾಕಿಸ್ತಾನವು ಸಂಜೆ 5.40ರ ವೇಳೆಗೆ ನಡೆಸಿದ ದಾಳಿಯು 1971ರ ಇಂಡೋ ಪಾಕ್ ಯುದ್ಧಕ್ಕೆ ಅಧಿಕೃತ ನಾಂದಿ ಹಾಡಿತು. ಭಾರತೀಯ ವಾಯುನೆಲೆಯನ್ನು ವಶಪಡಿಸಿಕೊಳ್ಳಲು ಯಾಹ್ಯಾಖಾನ್ ನೇತೃತ್ವದಲ್ಲಿ ಪಾಕ್ ದಾಳಿ ನಡೆಸಿತ್ತು. 1967ರಲ್ಲಿ ಇಸ್ರೇಲ್ ಅನುಸರಿಸಿದ ತಂತ್ರ ಅನುಸರಿಸಿದರೆ ಭಾರತದ ಪ್ರಬಲ ವಾಯುಪಡೆಯನ್ನು ಮೊದಲು ನಾಶಪಡಿಸಬಹುದು ಎನ್ನುವುದು ಪಾಕ್ ಸಂಚಾಗಿತ್ತು. ಆದರೆ ಮೊದಲೇ ಜಾಗೃತಗೊಂಡಿದ್ದ ಭಾರತ ಅದಕ್ಕೆ ತಕ್ಕ ಉತ್ತರ ನೀಡಿತು. ದಾಳಿಯ ಮಾಹಿತಿ ದೊರಕುತ್ತಿದ್ದಂತೆಯೇ ಭಾರತೀಯ ಸೇನಾ ಪಡೆಗಳಿಗೆ ಸನ್ನದ್ಧರಾಗುವಂತೆ ಇಂದಿರಾ ಗಾಂಧಿ ಸೂಚನೆ ನೀಡಿದರು.

ಪಾಕಿಸ್ತಾನಕ್ಕೆ ಲಂಕಾ ನೆರವು

ಭಾರತದ ಪಶ್ಚಿಮ ಭಾಗದ ಗಡಿಯಲ್ಲಿನ ಅನೇಕ ಸ್ಥಳಗಳ ಮೇಲೆ ಪಾಕಿಸ್ತಾನ ಸೇನೆ ದಾಳಿ ನಡೆಸಿತು. ಆದರೆ ಭಾರತೀಯ ಸೇನೆಯು ಎದುರಾಳಿಗಳನ್ನು ಸಮರ್ಥವಾಗಿ ಬಗ್ಗುಬಡಿಯಿತು. ಆಗ್ರಾದ ಮೇಲೆ ದಾಳಿ ನಡೆದಾಗ ತಾಜ್ ಮಹಲ್‌ʼಗೆ ಧಕ್ಕೆಯಾಗದಂತೆ ತಡೆಯಲು ಅದನ್ನು ಎಲೆಗಳು ಹಾಗೂ ಮರದ ಕೊಂಬೆಗಳಿಂದ ಮುಚ್ಚಲಾಯಿತು. ಅದರ ಅಮೃತಶಿಲೆ ಕೆಡದಂತೆ ಗೋಣಿ ಚೀಲಗಳನ್ನು ಹಾಸಲಾಗಿತ್ತು.

ಡಿಸೆಂಬರ್ 4-5ರ ರಾತ್ರಿ ಭಾರತದ ನೌಕಾಪಡೆ ಕರಾಚಿ ಬಂದರಿನ ಮೇಲೆ ದಾಳಿ ನಡೆಸಿತು. ಪಾಕಿಸ್ತಾನದ ಪಿಎನ್ಎಸ್ ಖೈಬರ್ ಮತ್ತು ಪಿಎನ್ಎಸ್ ಮುಹಾಫಿಜ್ ನೌಕೆಗಳು ಸಂಪೂರ್ಣ ನಾಶವಾದರೆ, ಪಿಎನ್ಎಸ್ ಷಾಜಹಾನ್ ಬಹುತೇಕ ಹಾನಿಗೊಳಲಾಗಿತ್ತು.‌ ಪಾಕಿಸ್ತಾನದ ಯುದ್ಧ ವಿಮಾನಕ್ಕೆ ಕೊಲಂಬೋದ ಭಂಡಾರನಾಯಕೆ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿಕೊಳ್ಳಲು ಅವಕಾಶ ನೀಡುವ ಮೂಲಕ ಶ್ರೀಲಂಕಾವು ಪಾಕಿಸ್ತಾನಕ್ಕೆ ಸಹಾಯ ಮಾಡಿತ್ತು. ಮಾತ್ರವಲ್ಲ, ಡಿಸೆಂಬರ್ 9ರಂದು ಅಮೆರಿಕದ ಅಧ್ಯಕ್ಷ ನಿಕ್ಸನ್, ಭಾರತಕ್ಕೆ ಬೆದರಿಕೆಯೊಡ್ಡಲು ಬಂಗಾಳ ಕೊಲ್ಲಿಗೆ ತಮ್ಮ ಯುದ್ಧ ವಿಮಾನ ಕಳುಹಿಸಲು ನಿರ್ಧರಿಸಿದ್ದರು. ಭಾರತವನ್ನು ನಾಲ್ಕೂ ದಿಕ್ಕುಗಳಿಂದ ಸುತ್ತವರಿದು ಅದು ಪೂರ್ವ ಪಾಕಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಒತ್ತಡ ಹೇರುವುದು ಅವರ ಉದ್ದೇಶವಾಗಿತ್ತು.

ಚೀನಾಕ್ಕೆ ಕುಮ್ಮಕ್ಕು ನೀಡಿದ ಅಮೆರಿಕ

ಬಾಂಗ್ಲಾ ದೇಶದ ಬಗ್ಗೆ ಅನುಕಂಪ ವ್ಯಕ್ತಪಡಿಸಿದ ಸೋವಿಯತ್ ರಷ್ಯಾ, ಭಾರತದ ವಿರುದ್ಧ ಅಮೆರಿಕ ಅಥವಾ ಚೀನಾ ಹಸ್ತಕ್ಷೇಪ ಮಾಡಿದರೆ, ಭಾರತದ ಪರವಾಗಿ ನಿಲ್ಲಬೇಕಾಗುತ್ತದೆ ಎಂದು ತಿಳಿಸಿತು. ಪಾಕಿಸ್ತಾನದ ದೀರ್ಘಕಾಲದ ಮಿತ್ರ ಚೀನಾವು ಭಾರತದ ಜತೆಗಿನ ತನ್ನ ಗಡಿಯಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜನೆ ಮಾಡುವಂತೆ ಅಮೆರಿಕವು ಚೀನಾಕ್ಕೆ ಉತ್ತೇಜನ ನೀಡಿತು. ಆದರೆ ಭಾರತ-ಚೀನಾ ಗಡಿಯಲ್ಲಿ ಸೂಕ್ತ ನೆಲೆ ದೊರಕದ ಕಾರಣ ಚೀನಾ, ಕೂಡಲೇ ಕದನ ವಿರಾಮ ಘೋಷಿಸುವಂತೆ ಒತ್ತಾಯಿಸಿತು. ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಬೆಂಬಲ ಪಾಕಿಸ್ತಾನಕ್ಕಿತ್ತು. ಪಾಕಿಸ್ತಾನದ ಮೇಲೆ ಯುದ್ಧ ಮಾಡದಂತೆ ಭಾರತಕ್ಕೆ ಎಚ್ಚರಿಕೆ ನೀಡಿ ವಿಶ್ವಸಂಸ್ಥೆ ನಿರ್ಣಯವನ್ನೂ ಕೈಗೊಂಡಿತು. ಆದರೆ ನೆರೆಯ ಬಾಂಗ್ಲಾದಲ್ಲಿ ನಡೆದ ಘಟನಾವಳಿಗಳು ಅನಿವಾರ್ಯವಾಗಿ ಭಾರತವು ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆಗೆ ನಾಂದಿ ಹಾಡಿದವು. ಯಾವ ಅಂತಾರಾಷ್ಟ್ರೀಯ ಒತ್ತಡವೂ ಇದನ್ನು ತಡೆಯಲು ಸಾಧ್ಯವಾಗಲಿಲ್ಲ.

ಐಎನ್ಎಸ್ ವಿಕ್ರಾಂತ್ ಸಮುದ್ರ ಮಾರ್ಗದ ಮೂಲಕ ಯುದ್ಧ ಬಾಂಬರ್‌ʼಗಳ ಮೂಲಕ ಚಿತ್ತಗಾಂಗ್ ಮತ್ತು ಕಾಕ್ಸ್ ಬಜಾರ್ ಸೇರಿದಂತೆ ಪೂರ್ವ ಪಾಕಿಸ್ತಾನದ ಅನೇಕ ಕರಾವಳಿ ಪಟ್ಟಣಗಳ ಮೇಲೆ ದಾಳಿ ನಡೆಸಿತು. ಇದಕ್ಕೆ ಪ್ರತಿ ದಾಳಿ ನಡೆಸಲು ಪಾಕಿಸ್ತಾನವು ತನ್ನ ಪಿಎನ್ಎಸ್ ಘಾಜಿ ಸಬ್ಮೆರಿನ್ ಅನ್ನು ರವಾನಿಸಿತು. ಆದರೆ ಅದು ವಿಶಾಖಪಟ್ಟಣಂ ಕರಾವಳಿಯಲ್ಲಿ ನಿಗೂಢ ರೀತಿಯಲ್ಲಿ ಮುಳುಗಿತು.

  • ಭಾರತ ಸೇನೆಯ ಎದುರು ಶರಣಾಗತಿ ಪತ್ರಕ್ಕೆ ಸಹಿ ಹಾಕಿದ ಪಾಕ್‌ ಸೇನಾಧಿಕಾರಿ.

ಭಾರತ-ಪಾಕಿಸ್ತಾನಕ್ಕೆ ತೀವ್ರ ನಷ್ಟ

ಡಿಸೆಂಬರ್ 9ರಂದು ಭಾರತದ ಐಎನ್ಎಸ್ ಖುಕ್ರಿಯನ್ನು ಪಾಕಿಸ್ತಾನದ ಪಿಎನ್ಎಸ್ ಹ್ಯಾಂಗೋರ್ ಅರೇಬಿಯನ್ ಸಮುದ್ರದಲ್ಲಿ ಮುಳುಗುವಂತೆ ಮಾಡಿತು. ಇದು ಭಾರತಕ್ಕಾದ ಬಹುದೊಡ್ಡ ನಷ್ಟ. ಇದರಿಂದ 18 ಅಧಿಕಾರಿಗಳು ಮತ್ತು 176 ನಾವಿಕರು ಮೃತಪಟ್ಟರು.‌

1971ರ ಯುದ್ಧದಲ್ಲಿ ಪಾಕಿಸ್ತಾದ ನೌಕಾಪಡೆ ತನ್ನ ಮೂರನೇ ಒಂದರಷ್ಟು ಶಕ್ತಿಯನ್ನು ಕಳೆದುಕೊಂಡಿತು. ಭಾರತವು ತನ್ನ ಕ್ಷಿಪ್ರ ಮತ್ತು ಅಚ್ಚರಿಯ ದಾಳಿಗಳ ಮೂಲಕ ಪಾಕಿಸ್ತಾನದ ಪಡೆಗಳ ಗೋಡೆಯನ್ನು ಭೇದಿಸಿತು. ಈ ಯುದ್ಧ ಸುಮಾರು 13 ದಿನಗಳವರೆಗೆ ಮುಂದುವರಿಯಿತು. ಇದರಿಂದ ಪಾಕಿಸ್ತಾನವು ಅಪಾರ ಪ್ರಮಾಣದಲ್ಲಿ ತನ್ನ ನಾಗರಿಕರನ್ನು ಹಾಗೂ ಸೈನಿಕರನ್ನು ಕಳೆದುಕೊಂಡಿತು. ಕೊನೆಗೆ ಡಿಸೆಂಬರ್ 16ರಂದು ಪಾಕಿಸ್ತಾನದ ಸೇನೆಯ ಮುಖ್ಯಸ್ಥ ಜನರಲ್ ಅಮಿರ್ ಅಬ್ದುಲ್ಲಾ ಖಾನ್ ನಿಯಾಜಿ ನೇತೃತ್ವದ 93,000 ಸೈನಿಕರ ಪಡೆಯು ಪೂರ್ವ ಪಾಕಿಸ್ತಾನದಲ್ಲಿ ಭಾರತೀಯ ಸೇನೆ ಮತ್ತು ಮುಕ್ತಿಬಾಹಿನಿ ಜಂಟಿ ಪಡೆಗೆ ಶರಣಾಯಿತು.

ಶರಣಾಗತಿಯ ಪತ್ರಕ್ಕೆ ಢಾಕಾದ ರಾಮ್ನಾ ರೇಸ್ ಕೋರ್ಸ್‌ʼನಲ್ಲಿ ಪಾಕಿಸ್ತಾನ ಸಹಿ ಹಾಕಿತು. ಪಾಕಿಸ್ತಾನದ ಸೈನಿಕರು ಮತ್ತು ಅವರ ಪರವಾಗಿದ್ದ ಪೂರ್ವ ಪಾಕಿಸ್ತಾನದ ನಾಗರಿಕರನ್ನು ಭಾರತ ಯುದ್ಧ ಕೈದಿಗಳನ್ನಾಗಿ ತನ್ನ ವಶಕ್ಕೆ ಪಡೆದುಕೊಂಡಿತು.

ಶಿಮ್ಲಾ ಒಪ್ಪಂದಕ್ಕೆ ಸಹಿ

ಯುದ್ಧದ ಸೋಲಿಗೆ ಕಾರಣಗಳನ್ನು ಅರಿಯಲು ರಚಿಸಲಾದ ಹಮೂದರ್ ರಹಮಾನ್ ಆಯೋಗವು, ಪಾಕಿಸ್ತಾನಿ ಜನರಲ್‌ʼಗಳ ಮೇಲೆ ದೋಷಾರೋಪ ಮಾಡಿತು. ಕರ್ತವ್ಯ ನಿರ್ಲಕ್ಷ್ಯ, ಯುದ್ಧ ಅಪರಾಧ, ಸ್ಮಗ್ಲಿಂಗ್ ಮುಂತಾದವುಗಳಲ್ಲಿ ತೊಡಗಿಕೊಂಡಿದ್ದರು ಎಂದು ಅದು ಆರೋಪಿಸಿತು.

1972ರಲ್ಲಿ ಭಾರತ-ಪಾಕಿಸ್ತಾನ ನಡುವೆ ಶಿಮ್ಲಾ ಒಪ್ಪಂದ ಏರ್ಪಟ್ಟಿತು. ಭಾರತವು ಪಾಕಿಸ್ತಾನದಿಂದ ವಶಪಡಿಸಿಕೊಂಡಿದ್ದ ಕೆಲ ಪ್ರದೇಶಗಳನ್ನು ಬಿಟ್ಟುಕೊಟ್ಟಿತು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಬಾಂಗ್ಲಾ ದೇಶವನ್ನು ಸ್ವತಂತ್ರ ದೇಶವೆಂದು ಪರಿಗಣಿಸಿತು. ಅಂದಿನ ಸೇನಾ ಮುಖ್ಯಸ್ಥ ಜಗಜೀತ್ ಸಿಂಗ್ ಅರೋರಾ ನೇತೃತ್ವದಲ್ಲಿ ಕ್ಷೀಪ್ರವಾಗಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನ ವಿಧಿಯಿಲ್ಲದೇ ಭಾರತದ ಮುಂದೆ ಮಂಡಿಯೂರಿ ಬಾಂಗ್ಲಾ ವಿಮೋಚನೆಗೆ ಬದ್ದ ಎಂದು ಘೋಷಿಸಿತು.

1971ರ ಡಿಸೆಂಬರ್ 3ರಂದು ಆರಂಭವಾದ ಇಂಡೋ-ಪಾಕ್ ಯುದ್ಧ 13 ದಿನಗಳವರೆಗೂ ನಡೆಯಿತು. ಬಳಿಕ ಭಾರತೀಯ ಸೇನೆಯ ಪ್ರಾಬಲ್ಯಕ್ಕೆ ಸೋತ ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶಕ್ಕೆ ಶರಣಾಯಿತು.‌ ಭಾರತದ 11 ವಾಯುನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸುವುದರೊಂದಿಗೆ ಈ ಯುದ್ಧ ಆರಂಭವಾಯಿತು. ಪೂರ್ವ ಪಾಕಿಸ್ತಾನದಲ್ಲಿನ ಬಂಗಾಳಿ ಜನರ ಮೇಲೆ ಪಾಕಿಸ್ತಾನ ನಡೆಸುತ್ತಿದ್ದ ಹತ್ಯಾಕಾಂಡವನ್ನು ನಿಲ್ಲಿಸಲು ನಡೆದ ಈ ಯುದ್ಧದಲ್ಲಿ ಭಾರತ ಮತ್ತು ಪಾಕಿಸ್ತಾನಗಳು 3,800ಕ್ಕೂ ಅಧಿಕ ಸೈನಿಕರನ್ನು ಕಳೆದುಕೊಂಡವು. ಆದರೆ ಪಾಕಿಸ್ತಾನ ಭಾರತದಿಂದ ಮರೆಯದ ಪಾಠ ಕಲಿತು ತನ್ನ ಸಾವಿರಾರು ಸೈನಿಕರನ್ನು ಕಳೆದುಕೊಂಡಿತು.


ಡಾ.ಗುರುಪ್ರಸಾದ ಹವಲ್ದಾರ್

  • ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.

Tags: 1971americaBangladeshchinacknewsnowguest columnIndia Pakistan warindo pak warpresident NixonsrilankaVijay Diwas
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಸೋಶಿಯಲ್‌ ಮೀಡಿಯಾ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಲು ಕಮಲ ಪಾಳೆಯ ಮಾಸ್ಟರ್‌ ಪ್ಲ್ಯಾನ್‌; ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಮೇಲೂ ಕಣ್ಣು

ಬಿಜೆಪಿಗೆ ಹೊರಗಿನಿಂದ ಬಂದವರು ಪಕ್ಷದಲ್ಲಿ ಬಹಳ ದಿನ ಇರಲ್ಲ

Leave a Reply Cancel reply

Your email address will not be published. Required fields are marked *

Recommended

ರಾಜರಾಜೇಶ್ವರಿ ನಗರದಲ್ಲಿ ಹೆಚ್ಚಿದ ರಗಳೆ; ಕಾಂಗ್ರೆಸ್‌ ಮತದಾರರ ಚೀಟಿ ಸಂಗ್ರಹಿಸುತ್ತಿದೆ ಎಂದು ನೇರ ಆರೋಪ ಮಾಡಿದ ಬಿಜೆಪಿ

ಬಿಜೆಪಿ ಸಚಿವರಿಗೆ ಕಪ್ಪು ಬಾವುಟ

3 years ago
62 ಗಂಟೆಗಳ ನಂತರ ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ ಗೌಡರ ಮೃತದೇಹ ಪತ್ತೆ

62 ಗಂಟೆಗಳ ನಂತರ ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ ಗೌಡರ ಮೃತದೇಹ ಪತ್ತೆ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ