ಕೋವಿಡ್ ಮೃತರ ಕುಟುಂಬಗಳಿಗೆ, ಮಳೆ ಸಂತ್ರಸ್ತರಿಗೆ ಪರಿಹಾರ ವಿತರಣೆ
by GS Bharath Gudibande
ಗುಡಿಬಂಡೆ: ಸುಮಾರು ಒಂದೂವರೆ ವರ್ಷದ ನಂತರ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲು ಸಚಿವ ಡಾ.ಕೆ ಸುಧಾಕರ್ ಅವರು ಗುಡಿಬಂಡೆಗೆ ಆಗಮಿಸಲಿದ್ದಾರೆ.
ಸಚಿವರ ಭೇಟಿ ಹಿನ್ನೆಲೆಯಲ್ಲಿ ನಾಳೆ (ಡಿ.18) ಪಟ್ಟಣದ ಗಾಯತ್ರಿ ಪ್ರಸಾದ್ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಿರಲು ತಹಸೀಲ್ದಾರ್ ಆದೇಶ ಮಾಡಿದ್ದಾರೆ.
ತಾಲೂಕಿನಲ್ಲಿ ಸೋಂಕಿಗೆ 23 ಜನ ಬಲಿ
ಮೊದಲ ಮತ್ತು ಎರಡನೇ ಅಲೆಯಲ್ಲಿ ಕೋವಿಡ್ ಸೋಂಕಿಗೆ ಮೃತರಾದ ಕುಟುಂಬಗಳಿಗೆ ಪರಿಹಾರವನ್ನು ನಾಳೆ ಸಚಿವ ಡಾ.ಕೆ ಸುಧಾಕರ್ ಅವರು ನೀಡಲಿದ್ದಾರೆ. ಪರಿಹಾರಕ್ಕಾಗಿ ನೊಂದ ಜನರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
104 ಮನೆಗಳಿಗೆ ಹಾನಿ
ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿದ ಭಾರೀ ಮಳೆಗೆ ತಾಲೂಕಿನಲ್ಲಿ 104 ಮನೆಗಳಿಗೆ ಹಾನಿಯಾಗಿದೆ. ಕೆಲವರಿಗೆ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ಈಗ ಎಲ್ಲಾ ಫಲಾನುಭವಿಗಳಿಗೆ ಪರಿಹಾರವನ್ನು ನೀಡಲಿದ್ದಾರೆ ಸಚಿವರು.
ಡಿ.18ರಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಫಲಾನುಭವಿಗಳು ಹಾಗೂ ಕೋವಿಡ್-19 ಸೋಂಕಿನಿಂದ ಮೃತರಾದ ಕುಟುಂಬದ ಸಂಬಂಧಿಕರಿಗೆ ಪರಿಹಾರವನ್ನು ನೀಡಲು ಗುಡಿಬಂಡೆಗೆ ಆಗಮಿಲಿದ್ದಾರೆ. ಹಾಗಾಗಿ ಕಾರ್ಯಕ್ರಮದಲ್ಲಿ ಎಲ್ಲಾ ಅಧಿಕಾರಿಗಳು ಹಾಜರಿರಬೇಕು ಎಂದು ಸೂಚನೆ ನೀಡಲಾಗಿದೆ.
ಸಿಬ್ಗತ್ ವುಲ್ಲಾ, ತಹಸೀಲ್ದಾರ್, ಗುಡಿಬಂಡೆ
ಆಗಲಿ ಸಂತೋಷ ತಂದಿದೆ.ಈಗಲಿದರೂ ಕೊರೋನದಿಂದ
ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುತ್ತಿರುವುದು
ನಿಜಕ್ಕೂ ಒಳ್ಳೆಯ ಕಾರ್ಯಕ್ರಮವಾಗಿದೆ.ಅದೇ ರೀತಿ ಅತಿವೃಷ್ಟಿ ಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವ ಕ್ರಮ ಶ್ಲಾಘನೀಯ ವಾಗಿದೆ