• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಕವಿಹೃದಯದ ರಾಜನೀತಿಜ್ಞ ವಾಜಪೇಯಿ

cknewsnow desk by cknewsnow desk
December 24, 2021
in GUEST COLUMN
Reading Time: 2 mins read
1
ಅಖಂಡ ಭಾರತದ ಅಷ್ಟದಿಕ್ಕುಗಳ ಆಮೂಲಾಗ್ರ ಅಭಿವೃದ್ಧಿಗೆ ಸುವರ್ಣ ಅಧ್ಯಾಯ ಬರೆದವರೇ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ

ವಾಜಪೇಯಿ

1k
VIEWS
FacebookTwitterWhatsuplinkedinEmail

ಅಟಲ್ ಜನ್ಮದಿನಕ್ಕೆ ಎಲ್.ಕೆ. ಅಡ್ವಾಣಿ ಅವರ ಅಕ್ಷರಪ್ರೇಮ

ಡಿ.25 ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಇಂದು ಅವರು ನಮ್ಮೊಂದಿಗಿದ್ದಿದ್ದರೆ 97ನೇ ವಸಂತಕ್ಕೆ ಕಾಲಿಡುತ್ತಿದ್ದರು. ಕಾಂಗ್ರೆಸ್ಸಿಗೆ ಪರ್ಯಾಯವಾಗಿ ದೇಶದಲ್ಲಿ ಇಂದು ಬೇರೂರಿರುವ ರಾಜಕಾರಣದ ಮೂಲಪುರುಷರಲ್ಲಿ ಅವರೂ ಒಬ್ಬರು. ಈ ವಿಚಾರದಲ್ಲಿ ಅವರು ಶಾಮಪ್ರಸಾದ್ ಮುಖರ್ಜಿ ಮತ್ತು ದೀನದಯಾಳ್ ಉಪಾಧ್ಯಾಯರ ಸಾಲಿನಲ್ಲಿ ನಿಲ್ಲುವ ಅಗ್ರ ಪಂಕ್ತಿಯ ದ್ರಷ್ಟಾರ. ಇದರ ಜತೆಗೆ ಅವರು ಬಿಜೆಪಿಯ `ಲೋಹಪುರುಷ’ ಲಾಲಕೃಷ್ಣ ಆಡ್ವಾಣಿಯವರ ಜತೆ 50 ವರ್ಷಗಳಿಗೂ ಹೆಚ್ಚು ಕಾಲ ಹೆಗಲು ಕೊಟ್ಟು ಬೆಳೆಸಿದ ರಾಜಕೀಯ ಸಂಸ್ಕೃತಿಗೆ ಇನ್ನೊಂದು ತೂಕವಿದೆ. ಈ ಸಂದರ್ಭದಲ್ಲಿ ಆಡ್ವಾಣಿಯವರು ತಮ್ಮ ಆತ್ಮಕತೆ My Country, My Life ನಲ್ಲಿ ತಮ್ಮ ಈ ದೀರ್ಘಕಾಲದ ಒಡನಾಡಿಯ ಬಗ್ಗೆ ಬರೆದಿರುವ ಅಧ್ಯಾಯದ ಸಾರಾಂಶವನ್ನು ಇಲ್ಲಿ CkNewsNowನ ಓದುಗರಿಗೆ ಕೊಡಲಾಗುತ್ತಿದೆ. ಇದು ಭಾರತದ ರಾಜಕಾರಣದ ಒಂದು ಆಪ್ತ ಅಧ್ಯಾಯವೂ ಹೌದು. ಹೆಸರಾಂತ ಅನುವಾದಕ ಬಿ.ಎಸ್. ಜಯಪ್ರಕಾಶ ನಾರಾಯಣ ಇದನ್ನು ನಮ್ಮ ಓದುಗರಿಗಾಗಿ ಇಲ್ಲಿ ಆಪ್ತವಾಗಿ ಕನ್ನಡೀಕರಿಸಿದ್ದಾರೆ.

ಆಡ್ವಾಣಿ ಮತ್ತು ವಾಜಪೇಯಿ

ನಾನೆಂದೂ ಸೋಲೊಪ್ಪಲಾರೆ; ನಾನೆಂದಿಗೂ ಸಿದ್ಧ ಹೊಸಹೊಸ ಸಮರಕ್ಕೆ; ಹಳೆಯದನ್ನೆಲ್ಲ ಅಳಿಸಿ, ಕಾಲದ ನೆತ್ತಿಯ ಮೇಲೆ ಹೊಸದನ್ನು ಬರೆವೆ ನಾನು; ನಾನೆಂದಿಗೂ ಹಾಡುವೆನು ಹೊಸ ಹಾಡೊಂದನು, ಹೊಸ ಹಾಡೊಂದನು!


-ಅಟಲ್ ಬಿಹಾರಿ ವಾಜಪೇಯಿ

ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಯಾರಾದರೊಬ್ಬರನ್ನು ನನ್ನ ವ್ಯಕ್ತಿತ್ವದ ಅವಿಭಾಜ್ಯ ಅಂಗವೆಂದು ಹೇಳುವುದಾದರೆ ಅದು ಅಟಲ್ ಬಿಹಾರಿ ವಾಜಪೇಯಿಯವರು ಮಾತ್ರವೇ! ಅವರು ಬಿಜೆಪಿಯಲ್ಲೂ ಸರಕಾರದ ಮಟ್ಟದಲ್ಲೂ ಐವತ್ತಕ್ಕೂ ಹೆಚ್ಚು ವರ್ಷಗಳ ದೀರ್ಘಕಾಲ ನನ್ನೊಂದಿಗೆ ಹೆಜ್ಜೆ ಹಾಕಿದವರಾಗಿದ್ದಾರೆ. ಹಾಗೆಯೇ, ಅವರ ನಾಯಕತ್ವವನ್ನು ನಾನು ಸದಾ ಒಪ್ಪಿಕೊಂಡಿದ್ದೆ. ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಇಬ್ಬರು ವ್ಯಕ್ತಿಗಳು ಹೀಗೆ ಅರ್ಧ ಶತಮಾನ ಕಾಲ ಗಟ್ಟಿಯಾಗಿ ಬೆಸೆದುಕೊಂಡಿರುವುದು ಅತ್ಯಂತ ಅನುಪಮವಾದ ವಿದ್ಯಮಾನವೆಂದು ರಾಜಕೀಯ ಪಂಡಿತರು ಬಣ್ಣಿಸಿದ್ದಾರೆ.


ವಾಜಪೇಯಿಯವರನ್ನು ನಾನು ಮೊಟ್ಟಮೊದಲಿಗೆ ಭೇಟಿಯಾಗಿದ್ದು 1952ರಲ್ಲಿ; ರಾಜಾಸ್ತಾನದ ಕೋಟಾದಲ್ಲಿ. ಆಗ ನಾನು ಅಲ್ಲಿ ಆರೆಸ್ಸೆಸ್ ಪ್ರಚಾರಕನಾಗಿದ್ದೆ. ಆ ಸಂದರ್ಭದಲ್ಲಿ ವಾಜಪೇಯಿಯವರು ಆಗತಾನೇ ಅಸ್ತಿತ್ವಕ್ಕೆ ಬಂದಿದ್ದ ಭಾರತೀಯ ಜನಸಂಘ’ವನ್ನು ಜನರ ನಡುವೆ ಪ್ರಚುರಗೊಳಿಸಲು ಡಾ.ಶಾಮಪ್ರಸಾದ್ ಮುಖರ್ಜಿಯವರೊಂದಿಗೆ ರೈಲಿನಲ್ಲಿ ಅಲ್ಲಿಗೆ ಬಂದಿದ್ದರು. ಅಂದಹಾಗೆ, ಇವರು ಆಗ ಮುಖರ್ಜಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಇಪ್ಪತ್ತೇಳೋ, ಇಪ್ಪತ್ತೆಂಟೋ ವರ್ಷದವರಾಗಿದ್ದ ವಾಜಪೇಯಿಯವರ ಈ ಚೊಚ್ಚಲ ಭೇಟಿಯ ಕೊನೆಯೆ ಹೊತ್ತಿಗೆ ನನಗೆ,ಈ ಮನುಷ್ಯನಲ್ಲಿ ಏನೋ ಒಂದು ಅಗಾಧ ಸಾಮರ್ಥ್ಯವಿದೆ. ನಾನು ಇವರನ್ನು ಪರಿಚಯ ಮಾಡಿಕೊಳ್ಳಬೇಕು!’ ಎನ್ನುವ ಭಾವನೆ ನನಗೆ ಬಂತು.


ಇಷ್ಟು ಹೊತ್ತಿಗಾಗಲೇ ನನಗೆ ವಾಜಪೇಯಿಯವರ ಹೆಸರು ಪರಿಚಿತವಾಗಿತ್ತು. ಏಕೆಂದರೆ, 1948ರಲ್ಲಿ ಸಂಘವು ಶುರು ಮಾಡಿದ ಪಾಂಚಜನ್ಯ’ ಪತ್ರಿಕೆಗೆ ಇವರೇ ಸಂಸ್ಥಾಪಕ ಸಂಪಾದಕರಾಗಿದ್ದರು, ಇದರಲ್ಲಿ ಅವರು ಬರೆಯುತ್ತಿದ್ದ ಶಕ್ತಿಶಾಲಿ ಸಂಪಾದಕೀಯಗಳು, ಭಾವಪೂರ್ಣವಾದ ಕವನಗಳು ಎಲ್ಲವನ್ನೂ ಒಬ್ಬ ಪ್ರಚಾರಕನಾಗಿ ನಾನೂ ಓದುತ್ತಲೇ ಇದ್ದೆ. ಇದೆಲ್ಲ ಆಗಿ ಒಂದಿಷ್ಟು ದಿನಗಳಾಗಿದ್ದವು. ಆಗ ವಾಜಪೇಯಿ ಒಬ್ಬರೇ ಒಂದು ರಾಜಕೀಯ ಪ್ರವಾಸಾರ್ಥವಾಗಿ ರಾಜಾಸ್ತಾನಕ್ಕೆ ಬಂದರು. ಆ ಪ್ರವಾಸವಿಡೀ ನಾನು ಅವರ ಜತೆಗಿದ್ದೆ. ಈ ಸಂದರ್ಭದಲ್ಲಿ ನನಗೆ ಅವರ ಪರಿಚಯ ಹೆಚ್ಚಿನ ರೀತಿಯಲ್ಲಾಯಿತು. ಆಗ ಅವರ ಅಸಾಧಾರಣ ವ್ಯಕ್ತಿತ್ವ, ಅಸಾಮಾನ್ಯವಾದ ವಾಗ್ಝರಿಗಳು ನನ್ನ ಅನುಭವಕ್ಕೆ ಬಂದವು. ಅವರು ತಮ್ಮ ಮಾತಿನ ಮೂಲಕ ಹತ್ತಾರು ಸಾವಿರ ಜನರನ್ನು ಹಾಗೆಯೇ ಸೂಜಿಗಲ್ಲಿನಂತೆ ಹಿಡಿದಿಟ್ಟುಕೊಳ್ಳುತ್ತಿದ್ದರು. ಹಿಂದಿ ಭಾಷೆಯ ಮೇಲಂತೂ ಅವರಿಗೆ ಪ್ರಚಂಡ ಹಿಡಿತವಿತ್ತು. ಇದರ ಜತೆಗೆ ಅವರಲ್ಲಿ ಅಪಾರವಾದ ವಿನೋದ ಪ್ರಜ್ಞೆಯೂ ಇತ್ತು. ವಾಜಪೇಯಿಯವರ ವ್ಯಕ್ತಿತ್ವದಲ್ಲಿದ್ದ ಈ ಗುಣಗಳು ನನ್ನ ಮೇಲೆ ಮೋಡಿ ಮಾಡಿದವು. ಆಗ ನನಗೆ, ``ಈ ವ್ಯಕ್ತಿಯನ್ನು ದೈವವೇ ನಮಗೆ ಕಳಿಸಿ ಕೊಟ್ಟಿದೆ. ಒಂದಿಲ್ಲೊಂದು ದಿನ ಭಾರತವನ್ನು ಮುನ್ನಡೆಸುವ ಶಕ್ತಿ ಇವರಲ್ಲಿದೆ!’’ ಎನ್ನಿಸಿತು.

ಇದು 44 ವರ್ಷಗಳ ನಂತರ ನಿಜವಾಯಿತು. ಶಾಮಪ್ರಸಾದ್ ಮುಖರ್ಜಿಯವರು ಭಾರತದ ಸಮಗ್ರತೆಯನ್ನು ಎತ್ತಿ ಹಿಡಿಯುವ ಮಹೋನ್ನತ ಉದ್ದೇಶದಿಂದ 1953ರಲ್ಲಿ ಕಾಶ್ಮೀರಕ್ಕೆ ನುಗ್ಗಿ, ಈ ರಾಜ್ಯಕ್ಕೆ ಕೊಟ್ಟಿದ್ದ ವಿಶೇಷಾಧಿಕಾರವನ್ನು ರದ್ದುಪಡಿಸಬೇಕೆಂಬ ಆಗ್ರಹದೊಂದಿಗೆ ಅಲ್ಲೇ ಹುತಾತ್ಮರಾದರು. ಮುಖರ್ಜಿಯವರ ನಂತರ ಜನಸಂಘದಲ್ಲಿ ಅಗ್ರಗಣ್ಯರೆನಿಸಿಕೊಂಡಿದ್ದು ಪಂಡಿತ್ ದೀನದಯಾಳ್ ಉಪಾಧ್ಯಾಯರು. ಅವರಿಗೆ ಕೂಡ ವಾಜಪೇಯಿಯವರ ಮೇಲೆ ಅಪಾರ ಅಭಿಮಾನವಿತ್ತು. ಹೀಗಾಗಿ, ಕೆಲವೇ ದಿನಗಳಲ್ಲಿ ಅವರು ಜನಸಂಘದಲ್ಲಿ ಅತ್ಯಂತ ವರ್ಚಸ್ವೀ ನಾಯಕರೆನಿಸಿಕೊಂಡರು. ಆ ದಿನಗಳಲ್ಲೇ ವಾಜಪೇಯಿಯವರು ರಾಷ್ಟ್ರೀಯ ಮಹತ್ತ್ವದ ವಿಚಾರಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ನಾಯಕರಿಗಿಂತ ಭಿನ್ನವಾದ ನಿಲುವುಗಳನ್ನು ಧೈರ್ಯವಾಗಿ ಹೇಳುತ್ತಿದ್ದರು. ಆಗಲೇ ಅವರು ಜನಸಮುದಾಯಗಳ ನಾಯಕನಾಗಿ ಹೊರಹೊಮ್ಮುವ ಲಕ್ಷಣಗಳನ್ನು ತೋರಿಸುತ್ತಿದ್ದರು. ಇಂತಹ ವ್ಯಕ್ತಿತ್ವದ ವಾಜಪೇಯಿ ಮೊಟ್ಟಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದು 1957ರಲ್ಲಿ. ಆಗ ದೀನದಯಾಳ್ ಉಪಾಧ್ಯಾಯರು ನನ್ನನ್ನು ರಾಜಾಸ್ತಾನದಿಂದ ದೆಹಲಿಗೆ ಕರೆಸಿಕೊಂಡು, ವಾಜಪೇಯಿಯವರ ಸಂಸದೀಯ ಕೆಲಸಗಳಲ್ಲಿ ಅವರಿಗೆ ಸಹಕರಿಸುವಂತೆ ಸೂಚಿಸಿದರು. ಇದು ನಮ್ಮಿಬ್ಬರ ಮೈತ್ರಿಯನ್ನು ಇನ್ನಷ್ಟು ಗಟ್ಟಿಯಾಗಿ ಬೆಸೆಯಿತು. ಅಲ್ಲಿಂದ ನಾವಿಬ್ಬರೂ ಮೊದಲು ಜನಸಂಘದ ಮತ್ತು ನಂತರ ಬಿಜೆಪಿಯ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲೂ ಜತೆಜತೆಯಾಗಿ ದುಡಿದೆವು. ಲೋಕಸಭೆಗೆ ಆರಿಸಿಬಂದ ವಾಜಪೇಯಿ ಸಹಜವಾಗಿಯೇ ಅಲ್ಲಿ ಜನಸಂಘದ ದನಿಯಾದರು.

ಇಷ್ಟರ ಮಧ್ಯೆ 1968ರಲ್ಲಿ ದೀನದಯಾಳರು ಉತ್ತರಪ್ರದೇಶದ ಮೊಘಲ್ ಸರಾಯ್ ನಲ್ಲಿ ನಿಗೂಢವಾಗಿ ನಿಧನ ಹೊಂದಿದರು. ಇದಾದ ಬಳಿಕವಂತೂ ವಾಜಪೇಯಿಯವರೇ ಜನಸಂಘದ ಚುಕ್ಕಾಣಿಯನ್ನೂ ಹಿಡಿಯಬೇಕಾಗಿ ಬಂತು. ಆ ಕಾಲಮಾನವಂತೂ ಜನಸಂಘದ ಪಾಲಿಗೆ ತುಂಬಾ ಕಷ್ಟದ ದಿನಗಳಾಗಿದ್ದವು. ಅದನ್ನೆಲ್ಲ ಮೆಟ್ಟಿ ನಿಂತ ವಾಜಪೇಯಿ, ನೋಡನೋಡುತ್ತಿದ್ದಂತೆಯೇ ದೇಶವಾಸಿಗಳ ಪಾಲಿಗೆ ಭರವಸೆಯ ಕಿರಣವಾಗಿ ಹೊರಹೊಮ್ಮಿದರು.ಅಂಧೇರೇ ಮೇ ಏಕ್ ಚಿಂಗಾರಿ, ಅಟಲ್ ಬಿಹಾರಿ ಅಟಲ್ ಬಿಹಾರಿ!’ (ಕಗ್ಗತ್ತಲಿನಲ್ಲಿ ಕಾಣುತ್ತಿರುವ ಕಿರಣ ಈ ಅಟಲ್ ಬಿಹಾರಿ) ಎನ್ನುವ ಘೋಷಣೆ ಹುಟ್ಟಿಕೊಂಡಿದ್ದು ಆ ದಿನಗಳಲ್ಲೇ!


ಹೀಗಿದ್ದಾಗ, ಅಂದರೆ 1973ರಲ್ಲಿ ಅವರು ನಮ್ಮ ಪಕ್ಷದ ಸಂಘಟನೆಯ ಕೆಲಸವನ್ನು ನನಗೆ ವಹಿಸಿದರು. ಆಗ ನನ್ನ ಬೆಂಬಲಕ್ಕೆ ವಾಜಪೇಯಿಯವರ ಜತೆಗೆ ನಾನಾಜಿ ದೇಶಮುಖ್, ಕುಶಭಾವು ಠಾಕ್ರೆ, ಸುಂದರ್ ಸಿಂಗ್ ಭಂಡಾರಿ ಮುಂತಾದವರಿದ್ದರು. ನನ್ನ ರಾಜಕೀಯ ಜೀವನದಲ್ಲಿ ಆ ದಿನಗಳು ನಿಜಕ್ಕೂ ಈಗಲೂ ಅಚ್ಚಹಸುರಾಗಿವೆ. ಇದಾಗಿ ಎರಡು ವರ್ಷಕ್ಕೆ ಇಂದಿರಾ ಗಾಂಧಿ ದೇಶದ ಮೇಲೆ ಎಮರ್ಜೆನ್ಸಿಯನ್ನು ಹೇರಿದರು. ಅಷ್ಟು ಹೊತ್ತಿಗಾಗಲೇ ನಮ್ಮ ಪಕ್ಷವು ಅತ್ಯಂತ ಪ್ರಬಲ ಮತ್ತು ಸಂಘಟಿತ ಪಕ್ಷವೆಂದು ಹೆಸರು ಮಾಡಿತ್ತು; ಜತೆಗೆ ಲೋಕನಾಯಕ ಜಯಪ್ರಕಾಶ ನಾರಾಯಣರ ಮೆಚ್ಚುಗೆಗೂ ಪಾತ್ರವಾಗಿತ್ತು. ಆ ದಿನಗಳಲ್ಲಿ ನಾನು ಮತ್ತು ವಾಜಪೇಯಿ ಇಬ್ಬರೂ ಜನತಾ ಪಕ್ಷವನ್ನು ಹುಟ್ಟುಹಾಕಲು ಅಹರ್ನಿಶಿ ಶ್ರಮಿಸಿದೆವು. ದುರಂತವೆಂದರೆ, ಮೊರಾರ್ಜಿ ದೇಸಾಯಿಯವರ ನೇತೃತ್ವದಲ್ಲಿ ಜನತಾ ಸರಕಾರ ಅಸ್ತಿತ್ವಕ್ಕೆ ಬಂದ ಎರಡು ವರ್ಷಗಳಲ್ಲೇ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಭುಗಿಲೆದ್ದವು. ಆಗ ನಾವಿಬ್ಬರೂ ಪಕ್ಷದಲ್ಲಿ ಒಗ್ಗಟ್ಟನ್ನು ಮೂಡಿಸಲು ಇನ್ನಿಲ್ಲದಂತೆ ಕಷ್ಟಪಟ್ಟೆವು. ಬೇಸರದ ಸಂಗತಿಯೆಂರೆ, ನಮ್ಮಿಬ್ಬರನ್ನೇ ಆಗ ಪಕ್ಷದಿಂದ ಉಚ್ಚಾಟಿಸಲಾಯಿತು!

ಅಟಲ್ ಸೋತಿದ್ದರು!


ಇಷ್ಟೆಲ್ಲ ಆದಮೇಲೆ ನಾನು ಮತ್ತು ವಾಜಪೇಯಿ ಇಬ್ಬರೂ ಸುಮ್ಮನೇನೂ ಕೂರಲಿಲ್ಲ. ಬದಲಿಗೆ, ನಮ್ಮ ಹಳೆಯ ಸಹೋದ್ಯೋಗಿಗಳನ್ನು ಸೇರಿಸಿಕೊಂಡು 1980ರಲ್ಲಿ ಬಿಜೆಪಿಯನ್ನು ಹುಟ್ಟು ಹಾಕಿದೆವು. ಇದಾದ ಬಳಿಕ, 1984ರಲ್ಲಿ ಇಂದಿರಾ ಗಾಂಧಿಯವರನ್ನು ಅವರ ಅಂಗರಕ್ಷಕರೇ ಗುಂಡಿಟ್ಟು ಕೊಂದರು. ಇದರ ಬೆನ್ನಲ್ಲೇ ದೇಶದಲ್ಲಿ ಮಹಾಚುನಾವಣೆ ನಡೆಯಿತು. ಇಂದಿರಾ ಕಗ್ಗೊಲೆಯಿಂದ ಸೃಷ್ಟಿಯಾದ ಅನುಕಂಪದ ಭಾರೀ ಲಾಭ ಪಡೆದ ಕಾಂಗ್ರೆಸ್ ಪಕ್ಷವು ಆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತು. ಬಿಜೆಪಿ ಎದುರಿಸಿದ ಆ ಮೊಟ್ಟಮೊದಲ ಚುನಾವಣೆಯಲ್ಲಿ ನಮಗೆ ಸಿಕ್ಕಿದ್ದು ಬರೀ ಎರಡು ಕ್ಷೇತ್ರಗಳಷ್ಟೇ! ಆಶ್ಚರ್ಯವೆಂದರೆ, ಆ ಚುನಾವಣೆಯಲ್ಲಿ ವಾಜಪೇಯಿ ಕೂಡ ಗ್ವಾಲಿಯರ್ ಕ್ಷೇತ್ರದಲ್ಲಿ ಸೋಲುಂಡರು.


ಇದಾದಮೇಲೆ ಬಿಜೆಪಿಯ ಬತ್ತಳಿಕೆ ಸೇರಿದ್ದೆಂದರೆ ಅಯೋಧ್ಯಾ ಚಳವಳಿ; ಇದಾಗಿದ್ದು 1986ರಲ್ಲಿ. ಆಶ್ಚರ್ಯವೆಂದರೆ, ಈ ಅವಧಿಯಲ್ಲಿ ವಾಜಪೇಯಿ ಅಷ್ಟೇನೂ ಸಕ್ರಿಯರಾಗಿರಲಿಲ್ಲ. ರಾಮ ಮಂದಿರದ ವಿಚಾರವನ್ನು ಪಕ್ಷವು ಕೈಗೆತ್ತಿಕೊಳ್ಳುವ ಬಗ್ಗೆ ಅವರ ನಿಲುವುಗಳು ಬೇರೆಯೇ ಆಗಿದ್ದವು. ಆದರೆ, ಪಕ್ಷದ ಆದೇಶದಂತೆ ನಾನು 10 ಸಾವಿರ ಕಿಲೋಮೀಟರ್ ಉದ್ದದ ರಾಮ ರಥಯಾತ್ರೆ ನಡೆಸಿದೆ. ಸುದ್ದಿ ಮಾಧ್ಯಮಗಳು ನನ್ನನ್ನು ಖಟ್ಟರ್ ಹಿಂದೂವಾದಿ’ ಎಂದೂ, ವಾಜಪೇಯಿಯವರನ್ನುಉದಾರವಾದಿ ಹಿಂದೂವಾದಿ’ ಎಂದೂ ಬಿಂಬಿಸತೊಡಗಿದ್ದು ಆಗಲೇ. ನಿಜ ಹೇಳಬೇಕೆಂದರೆ, ನಮ್ಮಿಬ್ಬರ ವ್ಯಕ್ತಿತ್ವಗಳು ಈ ಹಣೆಪಟ್ಟಿಗಳಿಗೆ ತದ್ವಿರುದ್ಧವಾಗಿದ್ದವು!


ಇಷ್ಟರ ಮಧ್ಯೆ ಹವಾಲಾ ಹಗರಣದಲ್ಲಿ ನನ್ನ ವಿರುದ್ಧ ಆರೋಪ ಕೇಳಿಬಂತು. ಆಗ ನಾನು, ಈ ಆರೋಪದಿಂದ ನಾನು ವಿಮುಕ್ತನಾಗುವವರೆಗೂ ಲೋಕಸಭೆಗೆ ಕಾಲಿಡುವುದಿಲ್ಲ!’ ಎಂದು ಘೋಷಿಸಿದೆ. ಈ ಮಾತಿಗೆ ತಕ್ಕಂತೆ ನಾನು 1996 ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿಲ್ಲ. ಆಗ ವಾಜಪೇಯಿಯವರು ತಾವು ಸಾಂಪ್ರದಾಯಿಕವಾಗಿ ಪ್ರತಿನಿಧಿಸುತ್ತಿದ್ದ ಲಖನೌ ಕ್ಷೇತ್ರದ ಜತೆಗೆ ನನ್ನ ಅಚ್ಚುಮೆಚ್ಚಿನ ಗಾಂಧೀನಗರ ಕ್ಷೇತ್ರದಿಂದಲೂ ಕಣಕ್ಕಿಳಿದರು. ನನ್ನ ಬಗ್ಗೆ ಅವರು ತೋರಿಸಿದ ಈ ನಂಬಿಕೆ ಮತ್ತು ನನ್ನೊಂದಿಗೆ ಅವರು ಬಲವಾಗಿ ನಿಂತಿದ್ದು ನನ್ನನ್ನು ಗಾಢವಾಗಿ ತಟ್ಟಿದವು. ಅವರ ಈ ನಡೆಯು ಪಕ್ಷಕ್ಕೆ ಪ್ರಚಂಡ ಶಕ್ತಿಯನ್ನು ತಂದುಕೊಟ್ಟಿತಲ್ಲದೆ, ಪಕ್ಷದ ಉನ್ನತ ಸ್ತರದಲ್ಲಿರುವ ಒಗ್ಗಟ್ಟು ಎಷ್ಟೊಂದು ಅಭೇದ್ಯವಾಗಿದೆ ಎನ್ನುವುದನ್ನು ತೋರಿಸಿ ಕೊಟ್ಟಿತು. ಇದಕ್ಕೆ ಒಂದು ವರ್ಷ ಮೊದಲು, ಅಂದರೆ 1995ರಲ್ಲಿ ಬಾಂಬೆಯಲ್ಲಿ ನಮ್ಮ ಪಕ್ಷದ ಮಹಾಧಿವೇಶನ ನಡೆಯಿತು. ಆಗ ನಾನು ಪಕ್ಷದ ಅಧ್ಯಕ್ಷ. ಅಲ್ಲಿ ನಾನು ಯಾರ ಸಲಹೆಯನ್ನೂ ಕೇಳದೆ, ನನ್ನ ಆತ್ಮಸಾಕ್ಷಿಗೆ ಓಗೊಟ್ಟು,ವಾಜಪೇಯಿಯವರೇ ನಮ್ಮ ಪ್ರಧಾನಿ ಅಭ್ಯರ್ಥಿ!’ ಎಂದು ಘೋಷಿಸಿದೆ. ಇದರಿಂದ ನಮ್ಮ ಪಕ್ಷ ಚಕಿತಗೊಂಡಿತು. 1998ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿಯೂ ನಾನು ಮತ್ತು ವಾಜಪೇಯಿ ಇಬ್ಬರೂ ಪಕ್ಷದ ಹಲವು ನಾಯಕರೊಂದಿಗೆ ಜತೆಗೂಡಿ ಕೆಲಸ ಮಾಡಿದೆವು. ಆ ಸರಕಾರದಲ್ಲಿ ನಾನು ಗೃಹ ಸಚಿವನಾದೆ; ನಂತರ, 2002ರಲ್ಲಿ ಅವರು ನನ್ನನ್ನು ಉಪಪ್ರಧಾನಿ ಎಂದು ಘೋಷಿಸಿದರು. ಇದೇ ವರ್ಷ ನಡೆದ ರಾಷ್ಟ್ರಪತಿಗಳ ಚುನಾವಣೆಯಲ್ಲಿ ಡಾ.ಅಬ್ದುಲ್ ಕಲಾಂ ಅವರನ್ನು ನಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸುವಲ್ಲಿಯೂ ನಾವಿಬ್ಬರೂ ಗಹನವಾಗಿ ಚರ್ಚಿಸಿ, ಆ ತೀರ್ಮಾನವನ್ನು ಕೈಗೊಂಡಿದ್ದೆವು.

ರಾಜಕಾರಣ ಮತ್ತು ಗೆಳೆತನ


ರಾಜಕಾರಣದಲ್ಲಿ ದೀರ್ಘಾವಧಿಯ ಗೆಳೆತನ ಅಷ್ಟೊಂದು ಸುಲಭವಲ್ಲ. ಇದು ಉಳಿಯಬೇಕೆಂದರೆ ಮೂರು ಅಂಶಗಳು ಆಧಾರಪ್ರಾಯವಾಗಿವೆ. ಅವೆಂದರೆ- ಪರಸ್ಪರ ನಂಬಿಕೆ, ಗೌರವ ಮತ್ತು ಕೆಲವು ಗುರಿಗಳಿಗೋಸ್ಕರ ಇರಬೇಕಾದ ಬದ್ಧತೆ. ನಾವಿಬ್ಬರೂ ಸಮಾನ ಸಿದ್ಧಾಂತ, ಆದರ್ಶಗಳು ಮತ್ತು ಮೌಲ್ಯಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದ ಗೆಳೆಯರಾಗಿದ್ದೆವು. ದೇಶ ಮೊದಲು, ಆಮೇಲೆ ಪಕ್ಷ, ಕಟ್ಟಕಡೆಯದಾಗಿ ವೈಯಕ್ತಿಕತೆ’ ಎನ್ನುವುದೇ ನಮ್ಮಿಬ್ಬರಿಗೂ ಜನಸಂಘ ಮತ್ತು ಬಿಜೆಪಿ ಕಲಿಸಿದ ಸಂಸ್ಕೃತಿಯಾಗಿದೆ. ಒಂದು ಮಾತನ್ನಂತೂ ನಾನು ಅತ್ಯಂತ ಪ್ರಾಮಾಣಿಕತೆಯಿಂದ ಹೇಳಬಲ್ಲೆ. ಅದೇನೆಂದರೆ, ವಾಜಪೇಯಿಯವರು ನನಗಿಂತ ಹಿರಿಯರೆಂಬುದನ್ನೂ ಅವರೇ ನನ್ನ ನಾಯಕರೆಂಬುದನ್ನೂ ನಾನು ಯಾವಾಗಲೂ ಶಿರಸಾ ಪಾಲಿಸಿಕೊಂಡು ಬರುತ್ತಿದ್ದೆ. ವಾಜಪೇಯಿಯವರೂ ಅಷ್ಟೆ, ಯಾವ ವಿಚಾರಗಳಿಗೆ ಸಂಬಂಧಿಸಿದಂತೆ ನನ್ನ ಚಿಂತನಾಲಹರಿ ಏನೆಂಬುದನ್ನು ತಕ್ಷಣ ಗ್ರಹಿಸಿ, ಅದಕ್ಕೆ ತಕ್ಕಂತೆ ಸ್ಪಂದಿಸುತ್ತಿದ್ದರು. ಅಂತಹ ವೈಶಾಲ್ಯ ನಿಜವಾದ ಅರ್ಥದಲ್ಲಿ ಅವರಿಗಿತ್ತು. ಅಂದಮಾತ್ರಕ್ಕೆ, ನನಗೂ ವಾಜಪೇಯಿಯವರಿಗೂ ಭಿನ್ನಾಭಿಪ್ರಾಯಗಳೇ ಇರಲಿಲ್ಲವೆಂದಲ್ಲ. ಉದಾಹರಣೆಗೆ ಹೇಳಬೇಕೆಂದರೆ, ನಮ್ಮ ಪಕ್ಷವು ರಾಮ ಮಂದಿರ ಆಂದೋಲನದಲ್ಲಿ ನೇರವಾಗಿ ಪಾಲ್ಗೊಳ್ಳಬೇಕು ಎನ್ನುವುದನ್ನು ಅವರು ಒಪ್ಪಿರಲಿಲ್ಲ; ಹಾಗೆಯೇ, 2002ರಲ್ಲಿ ಗುಜರಾತಿನಲ್ಲಿ ಕೋಮುಗಲಭೆಗಳಾದಾಗ ಆಗ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ರಾಜೀನಾಮೆಯನ್ನು ಪಡೆಯಬೇಕೆನ್ನುವುದು ಅವರ ಚಿಂತನೆಯಾಗಿತ್ತು. ಆದರೆ, ಇದಕ್ಕೆ ನಾನು ಒಪ್ಪಲಿಲ್ಲ. ನನ್ನ ಈ ತರ್ಕ ಸರಿಯಾಗಿತ್ತು ಎನ್ನುವುದು ನಂತರದ ದಿನಗಳಲ್ಲಿ ಸಾಬೀತಾಯಿತು.ವಾಜಪೇಯಿಯವರು ಚಿಕ್ಕಂದಿನಿಂದಲೇ ರಾಷ್ಟ್ರೀಯವಾದಿಯೂ ಹಿಂದೂ ಸ್ವಾಭಿಮಾನಿಯೂ ಆಗಿದ್ದ ಅಪೂರ್ವ ವ್ಯಕ್ತಿಗಳಾಗಿದ್ದರು. ಈ ಸಂದರ್ಭದಲ್ಲಿ ಅವರು ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗಲೇ ಬರೆದಭೂ-ಭಾಗ್ ನಹೀಂ, ಶತ್-ಶತ್ ಮಾನವ್ ಕೀ ಹೃದಯ್ ಜೀತನೇ ಕಾ ನಿಶ್ಚಯ್/ ಹಿಂದೂ ತನು-ಮನ್, ಹಿಂದೂ ಜೀವನ್, ರಾಗ್-ರಾಗ್ ಹಿಂದೂ ಮೇರಾ ಪರಿಚಯ್’ ಎನ್ನುವ ಕವನದ ಸಾಲುಗಳು ನೆನಪಾಗುತ್ತಿದೆ. ಇಷ್ಟೊಂದು ಪ್ರಖರವಾದ ಇನ್ನೊಂದು ರಾಷ್ಟ್ರೀಯವಾದಿ ಮತ್ತು ಹಿಂದೂ ಅಸ್ಮಿತೆಯನ್ನು ಪ್ರತಿಪಾದಿಸುವಂತಹ ಕವನವನ್ನು ನಾನು ಈವರೆಗೂ ಓದಿಲ್ಲ.


ಇಂತಹ ಒಬ್ಬ ದ್ರಷ್ಟಾರ ನನ್ನ ಮಿತ್ರರಾಗಿದ್ದರು, ನಾವಿಬ್ಬರೂ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಜತೆಜತೆಯಾಗಿ ಹೆಜ್ಜೆ ಇಟ್ಟೆವು ಎನ್ನುವುದು ಪದಗಳಲ್ಲಿ ಹೇಳಲಾಗದ ಒಂದು ಅಸದಳ ಸಂಗತಿ. ಒಂದೇ ಮಾತಿನಲ್ಲಿ ವಾಜಪೇಯಿಯವರನ್ನು ಬಣ್ಣಿಸುವುದಾದರೆ, ಅವರನ್ನು `ಕವಿಹೃದಯದಿಂದ ಕೂಡಿದ್ದ ರಾಜನೀತಿಜ್ಞ’ ಎನ್ನಬೇಕು.


ಬಿ ಎಸ್ ಜಯಪ್ರಕಾಶ ನಾರಾಯಣ

ಜೆಪಿ ಎಂದೇ ಹೆಸರಾಗಿರುವ ಬಿ ಎಸ್ ಜಯಪ್ರಕಾಶ ನಾರಾಯಣ ಕನ್ನಡ ಪ್ರಖರ ಬರಹಗಾರರಲ್ಲಿ ಒಬ್ಬರು. ಜತೆಗೆ ಅತ್ಯುತ್ತಮ ಅನುವಾದಕ. ನಾನು ಮಲಾಲಾ, ಸುಸ್ವರಲಕ್ಷ್ಮಿ ಸುಬ್ಬುಲಕ್ಷ್ಮಿ, ಪರ್ವಕಾಲದ ಪುರುಷೋತ್ತಮ ಪಿವಿಎನ್, ಶಿಕ್ಷಣ ಕ್ರಾಂತಿಗೆ ಆಹ್ವಾನ, ಗಂಡು ಜೀವ ಹೆಣ್ಣು ಭಾವ, ಸಾವರ್ಕರ್; ಹಿಂದುತ್ವ ಜನಕನ ನಿಜಕತೆ ಇತ್ಯಾದಿ ಕೃತಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ.

Tags: AtalAtal Bihari Vajpayeebirth anniversarybjpFriendshipindialk advani
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

by cknewsnow desk
January 27, 2024
0

"ಒಬ್ಬರ ಜನನವು ಅವರ ಹಣೆಬರಹವನ್ನು ನಿಶ್ಚಯಿಸುವುದಿಲ್ಲ" ಎಂದ ಜನ ನಾಯಕ; ಅಪ್ಪಟ ಭಾರತರತ್ನ, ಮೀಸಲು ಕೊಟ್ಟು ಬದುಕು ಕಟ್ಟಿಕೊಟ್ಟ ಭಾರತದ ಭಾಗ್ಯವಿದಾತ

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

by cknewsnow desk
January 21, 2024
0

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ಶ್ರೀರಾಮಪ್ರಭುವೇ ಕ್ಷಮಿಸು! ನಿನ್ನ ಹೆಸರಿಟ್ಟುಕೊಂಡವರೆಲ್ಲ ನಿನ್ನವರಲ್ಲ!!

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಮಂದಿರಕ್ಕೆ ಅಂಕುರಾರ್ಪಣೆ ಆಗಿದ್ದು ಹೇಗೆ?

by cknewsnow desk
January 19, 2024
0

ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

by cknewsnow desk
December 28, 2023
0

ನಿಜದ ಜಾಡು ಹಿಡಿದು ಹೊರಟ ನಿಡುಮಾಮಿಡಿ ಶ್ರೀಗಳ ಹೋರಾಟಕ್ಕೆ 33 ವರ್ಷ

ಅಖಂಡ ಭಾರತದ ಅಷ್ಟದಿಕ್ಕುಗಳ ಆಮೂಲಾಗ್ರ ಅಭಿವೃದ್ಧಿಗೆ ಸುವರ್ಣ ಅಧ್ಯಾಯ ಬರೆದವರೇ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ

ಅಟಲ್ ಎಂದರೆ ಅಜಾತಶತ್ರು

by cknewsnow desk
December 25, 2023
0

ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ, ಉತ್ತಮ ಆಡಳಿತ ದಿನ by Dr.Gurupeasad Hawaldar ಜಾಗತಿಕ ಮಟ್ಟದ ಶ್ರೇಷ್ಠ ನಾಯಕರ ಸಾಲಿನಲ್ಲಿ ಗೌರವಿಸಲ್ಪಡುವ  ನಿಸ್ವಾರ್ಥ ರಾಜಕಾರಣಿ,...

ಶಿಕ್ಷಣ, ಶಿಕ್ಷಕ ಮತ್ತು ಬದಲಾವಣೆ; ನೂತನ ಶಿಕ್ಷಣ ನೀತಿಯ ಹೊತ್ತಿನಲ್ಲಿ ಓಶೋ ಜೋಶ್..

ಓಶೋ: ಬೆರಗು, ಬೆಡಗು ಮತ್ತು ವಿಸ್ಮಯ

by cknewsnow desk
December 11, 2023
0

ಇಂದು ಓಶೋ ಜನ್ಮದಿನ

Next Post
ಡಿಕೆಶಿ ಮನೆಯಲ್ಲಿ ಸಿಕ್ಕಿದ್ದೇನು? ಸಿಬಿಐ ಹೇಳಿದ್ದೇನು? ಕೆಪಿಸಿಸಿ ಸಾರಥಿ ದೂರಿದ್ದೇನು? ಬೈ ಎಲೆಕ್ಷನ್ ವೇಳೆ ಇದೆಲ್ಲ ಏನು?

ಮೋದಿ ಸ್ಟೈಲ್‌ ಕಾಪಿ ಮಾಡಿದ ಡಿಕೆಶಿ!!

Comments 1

  1. VENKATESH MANU says:
    3 years ago

    ರಾಜಕೀಯ ಧುರೀಣ ಎಲ್.ಕೆ. ಅದ್ವಾನಿ ಅವರೇ ಮಾತನಾಡುತ್ತಿರುವಷ್ಟು ಆಪ್ತವಾಗಿದೆ ಲೇಖಕ -ಅನುವಾದಕ ಬಿ.ಎಸ್. ಜಯಪ್ರಕಾಶ ನಾರಾಯಣ ಅವರ ಬರಹ. ಅದ್ವಾನಿ ಅವರು ಜನಮಾನಸದಲ್ಲಿಯ ಕೆಲವು ಪೂರ್ವಗ್ರಹಗಳನ್ನು ನಿವಾರಿಸುವಲ್ಲಿ ಈ ಬರಹ ಸಹಕಾರಿಯಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವದ ಎತ್ತರವನ್ನೂ ದರ್ಶಿಸುತ್ತದೆ. ದೇಶ ಮೊದಲು, ಪಕ್ಷ ನಂತರ, ಆಮೇಲೆ ವೈಯಕ್ತಿಕತೆ ಎನ್ನುವ ಮೂಲಮಂತ್ರದ ಅಗತ್ಯ ಹಾಗೂ ಇಂದಿನ ಅನಿವಾರ್ಯತೆಯನ್ನು ಮನದಟ್ಟಾಗಿಸುತ್ತದೆ ಈ ಲೇಖನ. ಪ್ರಕಟಣೆಗೆ ಧನ್ಯವಾದಗಳು.

    Reply

Leave a Reply Cancel reply

Your email address will not be published. Required fields are marked *

Recommended

40 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ, 40 ತಿಂಗಳಲ್ಲಿ ಪೂರ್ಣಗೊಳಿಸಲು ಚಿಂತನೆ: ನರೇಂದ್ರ ಮೋದಿ

40 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ, 40 ತಿಂಗಳಲ್ಲಿ ಪೂರ್ಣಗೊಳಿಸಲು ಚಿಂತನೆ: ನರೇಂದ್ರ ಮೋದಿ

3 years ago
TATA ತೆಕ್ಕೆಗೆ ಕೋಲಾರದ ಐಫೋನ್‌ ಘಟಕ

TATA ತೆಕ್ಕೆಗೆ ಕೋಲಾರದ ಐಫೋನ್‌ ಘಟಕ

2 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ