• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಶಿಕ್ಷಣವನ್ನು ಶೀಲ ಸಂಪತ್ತು ಎಂದಿದ್ದರು ಸ್ವಾಮಿ ವಿವೇಕಾನಂದರು

cknewsnow desk by cknewsnow desk
January 12, 2022
in GUEST COLUMN, STATE
Reading Time: 2 mins read
0
ಶಿಕ್ಷಣವನ್ನು ಶೀಲ ಸಂಪತ್ತು ಎಂದಿದ್ದರು ಸ್ವಾಮಿ ವಿವೇಕಾನಂದರು
1.1k
VIEWS
FacebookTwitterWhatsuplinkedinEmail

ಇಂದು ವಿವೇಕಾನಂದರ ಜನ್ಮದಿನ

by Dr.Guruprasad Rao Hawaldar

ಆಧುನಿಕ ಕಾಲಘಟ್ಟದ ಭಾರತದಲ್ಲಿ ಶಿಕ್ಷಣದ ಕುರಿತು ಬಹಳ ಗಂಭೀರವಾಗಿ ಚಿಂತನೆ ನಡೆಸಿ ಅದನ್ನು ನಿರೂಪಿಸಿದವರಲ್ಲಿ ಸ್ವಾಮಿ ವಿವೇಕಾನಂದರು ಪ್ರಮುಖರು.

ವಿವೇಕಾನಂದರು ಶಿಕ್ಷಣದ ಉದ್ದೇಶ, ಅದರ ಪ್ರಕ್ರಿಯೆ, ಅದು ಉಂಟು ಮಾಡಬೇಕಾದ ಪರಿಣಾಮದ ಬಗ್ಗೆ ನಡೆಸಿದ ಚಿಂತನೆಗಳು ಆ ಕಾಲಕ್ಕೆ ಮಾತ್ರವಲ್ಲ, ಇಂದಿಗೂ ನಮ್ಮ ನಡುವಿನ ಬಹುಮುಖ್ಯ ಶಿಕ್ಷಣ ತಜ್ಞರು ನಡೆಸುವ ಚಿಂತನೆಗಳಿಗೆ ಬೀಜರೂಪದಂತಿದೆ.

ಭವ್ಯ ಭಾರತದ ಕನಸನ್ನು ಕಂಡಿದ್ದ ಸ್ವಾಮಿ ವಿವೇಕಾನಂದರು ಶಿಕ್ಷಣ ಮತ್ತು ಯುವಕರ ಬಗ್ಗೆ ತಮ್ಮದೇ ಆದ ವಿಶಿಷ್ಟ ನಿಲುವು ಹೊಂದಿದ್ದರು. ಸದಾ ಸಕಾರಾತ್ಮಕ ಚಿಂತನೆಗಳಿಂದ ಯುವಕರನ್ನು ಪ್ರೇರೇಪಿಸುತ್ತಿದ್ದ ಸ್ವಾಮೀಜಿ, ತಾವು ಹೋದಲೆಲ್ಲಾ ಶಿಕ್ಷಣದ ಬಗ್ಗೆ ಹೇಳುತ್ತಿದ್ದರು. ದೈಹಿಕ ಶಿಕ್ಷಣ, ಮಾನಸಿಕ ಶಿಕ್ಷಣ, ಧಾರ್ಮಿಕ ಶಿಕ್ಷಣ, ಮಹಿಳಾ ಶಿಕ್ಷಣ, ಮೌಲ್ಯಾಧಾರಿತ ಶಿಕ್ಷಣದ ಬಗ್ಗೆ ಅವರು ಮಾತನಾಡುತ್ತಿದ್ದರು.

ಸ್ವಾಮಿ ವಿವೇಕಾನಂದರೇ ಹೇಳುವಂತೆ ಶಿಕ್ಷಣವೆಂದರೆ ‘ಮಾನವೀಯತೆಯ ವಿಕಾಸ, ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ. ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ ಎಂದು ಹೇಳುತ್ತಿದ್ದ ಅವರು; ‘ಭಾರತದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣ ಒಂದೇ ಪರಿಹಾರ’ ಎಂದು ನಂಬಿದ್ದರು.

ಮಾನವ ಸಮಾಜದಲ್ಲಿ ಮನೆಮಾಡಿರುವ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ ಎಂಬುದು ವಿವೇಕಾನಂದರ ಅಭಿಮತ. ‘ಶಿಕ್ಷಣವು ಮಾನವನನ್ನು ಸೀಮಿತ ಸ್ತರದಿಂದ ಅಸೀಮ ಹಂತಕ್ಕೆ ಒಯ್ಯುವಂಥದ್ದು’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು.

ಯಾವುದು ನಮ್ಮನ್ನು ಸರಿಯಾಗಿ ಅರಿತುಕೊಳ್ಳಲು ನೆರವಾಗುತ್ತದೆಯೋ, ಅದೇ ನಿಜವಾದ ಶಿಕ್ಷಣ. ಆದ್ದರಿಂದ, ಯಾವ ಪರಿಪೂರ್ಣ ಜ್ಞಾನದ ಮೂಲಕ ಆತ್ಮದ ಅಂತರಂಗದ ಬೆಳಕು ಸಂಪೂರ್ಣವಾಗಿ ಪ್ರಕಟ ಹೊಂದುವುದೋ ಅಂತಹ ಶಿಕ್ಷಣವನ್ನು ದೊರಕಿಸಿಕೊಡುವ ಶಿಕ್ಷಣವೇ ಶ್ರೇಷ್ಠ ಮಟ್ಟದ ಶಿಕ್ಷಣ.

‘ಶಿಕ್ಷಣವೆಂದರೆ ವ್ಯಕ್ತಿತ್ವ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣದ ಮೂಲಕ ಚಾರಿತ್ರ್ಯ ನಿರ್ಮಾಣ; ಚಾರಿತ್ರ್ಯ ನಿರ್ಮಾಣದಿಂದ ಮಾತ್ರವೇ ರಾಷ್ಟ್ರನಿರ್ಮಾಣ’ ಎಂಬ ಸ್ವಾಮಿ ವಿವೇಕಾನಂದರ ಅಭಿಪ್ರಾಯವು ಶಿಕ್ಷಣವು ಪ್ರಥಮತಃ ವ್ವಕ್ತಿಯ ಅಭ್ಯುದಯ ತದನಂತರ ಸಮಾಜ, ರಾಷ್ಟ್ರ ಹಾಗೂ ಅಂತಿಮವಾಗಿ ವಿಶ್ವದ ಶ್ರೇಯಸ್ಸಿಗೆ ಪ್ರೇರಕವಾಗುತ್ತದೆ ಎಂಬ ಸತ್ಯವನ್ನು ಸೂಚಿಸುತ್ತದೆ.

ಮಾನವ ಇತಿಹಾಸದ ಪ್ರಾರಂಭದ ಭಾಗದಲ್ಲಿ, ಶಿಕ್ಷಣದ ಕಲ್ಪನೆ ಜೀವನಕ್ಕೆ ಬೇಕಾದ ಕೆಲವು ಕುಶಲತೆಗಳನ್ನು ಮೈಗೂಡಿಸಿಕೊಳ್ಳುವ ಮಟ್ಟಕ್ಕೆ ಮಾತ್ರ ಸೀಮಿತವಾಗಿತ್ತು. ಅದು ಕ್ರಮೇಣ ವಿಕಸನಗೊಂಡು, ಮಾನವ-ನಿರ್ವಣ ಸಿದ್ಧಾಂತವಾಗಿ ರೂಪುಗೊಂಡಿತು. ಈ ಸಿದ್ಧಾಂತದಲ್ಲಿ ಮಾನವ ಜೀವಿತ ಮತ್ತು ಚೈತನ್ಯದ ವಿಕಾಸವೇ ಶಿಕ್ಷಣ ಎಂಬ ಅಂಶವೇ ಪ್ರಧಾನ. ಮಾನವಕುಲ ಆಲೋಚಿಸಿ ರುವ ಉನ್ನತ ಮಟ್ಟದ ಶೈಕ್ಷಣಿಕ ವಿಧಾನ ಇದಾಗಿದೆ.

ಒಬ್ಬ ವ್ಯಕ್ತಿ, ಎಷ್ಟೇ ಕಷ್ಟಗಳನ್ನು ಎದುರಿಸಿದರು ಕೂಡ ಸರಿಯಾದ ದಾರಿಯಲ್ಲಿ ನಡೆಯಬೇಕು. ಈ ರೀತಿಯ ನಡೆಯಿಂದ ಮಾತ್ರ, ಜಗತ್ತಿನ ಸಂಕಟಗಳನ್ನು ದೂರ ಮಾಡಬಲ್ಲ ಸಮಾಜವನ್ನು ಕಟ್ಟುವುದು ಸಾಧ್ಯ. ಉತ್ತಮ ಸಮಾಜವನ್ನು ನಿರ್ಮಿಸದ ಶಿಕ್ಷಣವು, ಶಿಕ್ಷಣ ಎಂಬ ಹೆಸರಿನಿಂದ ಕರೆಯಲ್ಪಡುವುದಕ್ಕೆ ಯೋಗ್ಯವಲ್ಲ ಎಂಬ ನಿಖರವಾದ ಮಾತುಗಳು ಅವರ ಕಲ್ಪನೆಯ ಶಿಕ್ಷಣ ಹೇಗಿತ್ತು ಎಂಬುದಕ್ಕೆ ಮಾರ್ಗದರ್ಶಿ.

ಓದುವುದು, ಬರೆಯುವುದು ಮತ್ತು ಕೆಲವೊಂದು ಸಿದ್ಧಾಂತಗಳನ್ನು ಬಾಯಿಪಾಠ ಮಾಡುವುದು, ಬೇರೆಬೇರೆ ಸುಧಾರಕರ ತತ್ವಗಳನ್ನು ಉರು ಹೊಡೆಯುವುದು- ನಿಷ್ಪ್ರಯೋಜಕವಾದದ್ದು. ಸಮಾಜದ ಉದ್ಧಾರಕ್ಕೆ ಅವುಗಳನ್ನು ಅನುಷ್ಠಾನಗೊಳಿಸದಿದ್ದರೆ ಆ ಶಿಕ್ಷಣ ಒಂದು ಶುಷ್ಕ ಪಾಂಡಿತ್ಯ ಅಷ್ಟೇ. ರಾಷ್ಟ್ರವನ್ನು ಎತ್ತರಿಸುವುದಕ್ಕೆ ಹಾಗೂ ರಾಷ್ಟ್ರವನ್ನು ಅದರ ಪರಮ ವೈಭವದ ಉತ್ತುಂಗತೆಗೆ ಒಯ್ಯದೆ ಇದ್ದರೆ, ಇಡೀ ಶಿಕ್ಷಣದ ಉದ್ದೇಶ ವ್ಯರ್ಥವಾಗುವುದು.

ಹೊಸಹೊಸ ಭಾವನೆಗಳನ್ನು ಸ್ವಭಾವ ಸಹಜವಾಗಿಸಿಕೊಳ್ಳುವುದನ್ನು ಶಿಕ್ಷಣ ಎಂದು ಮನಗಂಡಿದ್ದ ಅವರು ಪ್ರತಿಯೊಬ್ಬ ವ್ಯಕ್ತಿಯೂ ಚಾರಿತ್ರ್ಯ್ಷಮತೆಯನ್ನು ನೀಡುವ ಶಿಕ್ಷಣ ಮತ್ತು ಧರ್ಮಕ್ಕೆ ಮೊರೆ ಹೋಗಬೇಕೆಂಬ ಅಭಿಪ್ರಾಯ ನೀಡುತ್ತಾರೆ. ‘ಉನ್ನತ ವಿಚಾರಗಳನ್ನು ವ್ಯಕ್ತಿಯೊಬ್ಬನಿಗೆ ನೀಡಿ ಆತನನ್ನು ಹುಲಿಯಾಗಿಸದಿದ್ದರೆ ಅವನು ಖಂಡಿತ ನರಿಯಾಗುತ್ತಾನೆ’ ಎಂದು ಸ್ವಾಮೀಜಿ ಎಚ್ಚರಿಸುತ್ತಾರೆ.

ಧರ್ಮ-ಸಂಸ್ಕೃತಿಗಳ ಅಧ್ಯಯನದ ಜೊತೆಗೆ ಪಾಶ್ಚಾತ್ಯ ವಿಜ್ಞಾನದ ಅಧ್ಯಯನಕ್ಕೆ ಸ್ವಾಮೀಜಿಯವರು ಒತ್ತು ನೀಡಲು ಕಾರಣ, ವಿಜ್ಞಾನ ವನ್ನು ಅಧ್ಯಯನಗೈಯ್ದು ಅಳವಡಿಸಿಕೊಳ್ಳುವುದರಿಂದ ಲೌಕಿಕ ಸಂಪತ್ತು ವೃದ್ಧಿಯಾಗುತ್ತದೆ ಎಂದು.

”ವಿದ್ಯಾಭ್ಯಾಸವೆಂದರೆ ತಲೆಯಲ್ಲಿ ತುಂಬಿಕೊಂಡ ವಿಷಯಗಳ ಮೊತ್ತವಲ್ಲ. ಅದು ಅಲ್ಲಿ ಒಂದಿನಿತೂ ಜೀರ್ಣವಾಗದೇ ದಿಕ್ಕುಗೆಟ್ಟು ಓಡುತ್ತಿರುವುದು. ಜೀವನವನ್ನು ಕಟ್ಟುವಂತಹ, ಪುರುಷ ಸಿಂಹರನ್ನು ಸೃಷ್ಟಿಸುವಂತಹ, ಶೀಲ ಸಂಪತ್ತನ್ನು ನಿರ್ಮಾಣ ಮಾಡುವಂತಹ ವಿಚಾರಗಳನ್ನು ಗ್ರಹಿಸುವಂತಹ ವಿದ್ಯಾಭ್ಯಾಸ ನಮಗೆ ಬೇಕು,” ಎನ್ನುತ್ತಾರೆ.

ಆದರೆ ಕೇವಲ ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ಮೆದುಳಿಗೆ ತುಂಬುವುದು ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯ ಆದ್ಯತೆಯಾಗಿದೆ. ಹೀಗೆ ತುಂಬಿಕೊಂಡ ಮಾಹಿತಿಗಳು ಜೀರ್ಣವಾಗದೆ ಹೋಗುವುದರಿಂದ ವ್ಯಕ್ತಿಯಲ್ಲಿ ಕಲಿಕೆಯ ಪ್ರಕ್ರಿಯೆ ಉತ್ಸಾಹದಾಯಕವಾದ ಸಂಗತಿಯಾಗಿಲ್ಲ. ಯಾವ ಶಿಕ್ಷಣವನ್ನು ಪಡೆಯುವುದರಿಂದ ವ್ಯಕ್ತಿ ತನ್ನ ಜೀವನವನ್ನು ತಾನೇ ಕಟ್ಟಿಕೊಳ್ಳಬಹುದೋ, ಸಾಧನೆಯ ಪಥದಲ್ಲಿ ಸಿಂಹ ಸಾಹಸಿಕರನ್ನಾಗಿಸಬಹುದೊ, ವ್ಯಕ್ತಿಯನ್ನು ಶೀಲಸಂಪನ್ನನೂ, ಚಾರಿತ್ರ್ಯವಂತರನ್ನಾಗಿಯೂ ಮಾಡಬಹುದೊ ಅದು ನಿಜವಾದ ಶಿಕ್ಷಣ ಎಂಬ ವಿವೇಕಾನಂದರ ಉಕ್ತಿ ನಮ್ಮ ಮುಂದಿದ್ದರೂ ನಾವು ಮಾತ್ರ ಪ್ರತಿವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಕೇವಲ ಪ್ರಮಾಣ ಪತ್ರಗಳನ್ನು ಮಾತ್ರ ಹೊಂದಿರುವ ನಿರುಪಯುಕ್ತ ಪದವೀಧರರನ್ನು ತಯಾರಿಸುತ್ತಲೇ ಇದ್ದೇವೆ.

ಭಾರತದಾದ್ಯಂತ ಕಾಲ್ನಡಿಗೆಯಲ್ಲಿ ಸಂಚರಿಸಿ ದೇಶದ ಸ್ಥಿತಿಗತಿಗಳನ್ನು ಅಧ್ಯಯನ ಮಾಡುವಲ್ಲಿ ವಿವೇಕಾನಂದರು ಯಶಸ್ವಿಯಾದರು. ಪಾಶ್ಚಾತ್ಯ ಆಡಳಿತವೂ ಭಾರತದ ಆರ್ಥಿಕ ದುಃಸ್ಥಿತಿಗೆ ಕಾರಣವಾಗಿದ್ದಿತು. ಬಡವರು ಎಷ್ಟೇ ಶ್ರಮಜೀವಿಗಳಾದರೂ ಆರ್ಥಿಕವಾಗಿ ಮೇಲೇರದಂತೆ ಮಾಡುತ್ತಿದ್ದ ದಲ್ಲಾಳಿಗಳ ಕುಟಿಲ ತಂತ್ರಗಳನ್ನು ಅವರು ಗುರುತಿಸಿದ್ದರು.

ಕೃಷಿಕರಲ್ಲಿ, ಕಾರ್ವಿುಕ ವರ್ಗದಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಸರ್ವಪ್ರಯತ್ನಗೈದರು. ”ಜನಸಾಮಾನ್ಯರ ಬೆವರು, ಪರಿಶ್ರಮದಿಂದ ಬದುಕಿನಲ್ಲಿ ಮೇಲೇರಿ ಬಂದ ನಂತರ ಅವರನ್ನು ನಿರ್ಲಕ್ಷಿಸುವ ವಿದ್ಯಾವಂತರು ಎನಿಸಿಕೊಂಡವರನ್ನು ನಾನು ದೇಶದ್ರೋಹಿಗಳೆಂದೇ ಪರಿಗಣಿಸುತ್ತೇನೆ” ಎಂದು ಸಮಾಜದ ವಿದ್ಯಾವಂತರನ್ನು ಛೇಡಿಸುತ್ತಾರೆ. ವಿದ್ಯಾವಂತರ ಮತ್ತು ಶ್ರೀಮಂತರ ಅವಿವೇಕವನ್ನು ಕಂಡು, “Give light to the poor, more light to the rich. Give light to uneducated and more light to educated” ಎನ್ನುತ್ತಾರೆ.

ಭಾರತೀಯರಿಗೆ ವ್ಯವಸಾಯವನ್ನು ಒಂದು ಉದ್ಯೋಗವಾಗಿ ರೂಪಿಸಿಕೊಳ್ಳಬೇಕೆಂದು ಸ್ವಾಮೀಜಿ ಕರೆ ಇತ್ತಿದ್ದಾರೆ. ಅವರು ನೀಡುವ ಭರವಸೆ ಅದ್ಭುತವಾಗಿದೆ- ”ಭಾರತೀಯ ಪ್ರಾಚೀನ ಋಷಿಗಳು ಕೃಷಿಕರಾಗಿದ್ದರು. ಆಧುನಿಕ ಜಗತ್ತಿನಲ್ಲಿ ಅಮೆರಿಕ ವ್ಯವಸಾಯವನ್ನು ಪ್ರಗತಿಪಥದಲ್ಲಿ ಒಯ್ದಿರುವುದು ಗಮನೀಯ ಅಂಶ. ಆಧುನಿಕ ಭಾರತವು ಕೃಷಿ ವಿಜ್ಞಾನವನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿ ವ್ಯವಸಾಯದಲ್ಲಿ ಅಳವಡಿಸಬೇಕು. ಅವೈಜ್ಞಾನಿಕ ಪದ್ಧತಿಗಳಿಂದ ಕೃಷಿ ಉತ್ಪಾದನೆ ಕ್ಷೀಣಿಸುತ್ತಿದೆ. ಗ್ರಾಮೀಣ ಜನತೆ ಹಳ್ಳಿಗಾಡಿನ ಉತ್ತಮ ಪರಿಸರದಲ್ಲಿ ವ್ಯವಸಾಯವನ್ನು ಕೈಗೊಂಡು ಆರೋಗ್ಯದಿಂದ ನೆಮ್ಮದಿಯಿಂದ ಬದುಕಲು ಸಾಧ್ಯ” ಎಂದಿದ್ದಾರೆ.

ವ್ಯವಸಾಯ ಕ್ಷೇತ್ರವನ್ನು ನಿರ್ಲಕ್ಷಿಸದಂತೆ ಜನಸಾಮಾನ್ಯರನ್ನು ಕೋರಿದ ಸ್ವಾಮೀಜಿ, ವಿಜ್ಞಾನದ ಅಧ್ಯಯನದಿಂದ ರಾಷ್ಟ್ರದ ಔದ್ಯೋಗಿಕ ಕ್ಷೇತ್ರವನ್ನು ಬೆಳೆಸಿ ಲೌಕಿಕ ಸಂಪತ್ತನ್ನು ಗಳಿಸಬಹುದೆಂದು ತಿಳಿವಳಿಕೆ ನೀಡಿದರು. ಅಮೆರಿಕ ಪ್ರವಾಸ ಸಂದರ್ಭದಲ್ಲಿ ಹಡಗಿನಲ್ಲಿ ಭೇಟಿಯಾದ ಶ್ರೀಮಂತರಾದ ಜೆಮ್ ಶೇಠ್​ಜೀ ಟಾಟಾರವರಿಗೆ ಭಾರತದಲ್ಲಿ ಕೈಗಾರಿಕೆ ಉದ್ದಿಮೆಯನ್ನು ಮತ್ತು ವಿಜ್ಞಾನ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಮನವಿ ಮಾಡಿದರು.

ವಿವೇಕಾನಂದರು ಭಾರತೀಯರಿಗೆ ಶಿಕ್ಷಣದ ಮೂಲಕವೇ ಪ್ರಗತಿಪಥದತ್ತ ಸಾಗಲು ಸಾಧ್ಯ ಎಂದು ನಂಬಿದ್ದರು.  ಕೌಶಲ್ಯರಹಿತರಿಗೆ ಕೃಷಿ ಮತ್ತು ಕೈಗಾರಿಕಾ ಕೌಶಲ್ಯಗಳನ್ನು ಕಲಿಸುವ ಮತ್ತು ಆರೋಗ್ಯಕರ ಶಿಕ್ಷಣವನ್ನು ನೀಡುವ ಅವಶ್ಯಕತೆಯಿದೆ ಎಂದು ಹೇಳಿದ್ದರು. ಇಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ- 2020 ಉದ್ದೇಶವೇ ಇದೇ ಆಗಿದೆ.

ಜಾತ್ಯತೀತ ಶಿಕ್ಷಣವು ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯನ್ನು ಉನ್ನತೀಕರಿಸುತ್ತದೆ ಮತ್ತು ಆತ್ಮದ ಜ್ಞಾನ, ಅಂದರೆ ಸ್ವಯಂ-ಅನ್ವೇಷಣೆಯು ಜನರಲ್ಲಿ ನಂಬಿಕೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ನಂಬಿದ್ದರು.

ನಮ್ಮ ದೇಶವನ್ನು ಈ ದೇಶದ ಆಧ್ಯಾತ್ಮಿಕ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವ ಅಗತ್ಯದ ಪ್ರಾಮುಖ್ಯತೆಯನ್ನು ಘಂಟಾಘೋಷವಾಗಿ ಹೇಳಿದ್ದರು. ಸಮಾಜದ ಎಲ್ಲಾ ವರ್ಗ, ಪಂಗಡಗಳಿಗೂ ಶಿಕ್ಷಣ ಒದಗಿಸಬೇಕು ಎಂದು ಅವರ ಆಶಯವಾಗಿತ್ತು. ರಾಷ್ಟ್ರವನ್ನು ಶಕ್ತಿಶಾಲಿಯಾಗಿಸುವ ಒಂದೇ ಒಂದು ಮಾರ್ಗವೆಂದರೆ ಅದು ಶಿಕ್ಷಣದ ಮೂಲಕ ಮಾತ್ರ ಎಂಬುದನ್ನು ಪ್ರತಿಪಾದಿಸಿದ್ದರು.


ಡಾ.ಗುರುಪ್ರಸಾದ ಹವಲ್ದಾರ್

  • ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.
Tags: birth anniversaryeducationindiaphilosophersaintswami vivekanandavivekananda
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಲಾಕ್‌ಡೌನ್‌ ಇಲ್ಲ;  ರಾಜ್ಯದಲ್ಲಿ ವೀಕೆಂಡ್‌ನಲ್ಲಿ  ಟೈಟ್ ನೈಟ್ ಕರ್ಫ್ಯೂ ಮಾತ್ರ, ಶ್ರೀರಾಮನವಮಿ ಮುಗಿದ ಮೇಲೆ ಬುಧವಾರ  ರಾತ್ರಿಯಿಂದಲೇ ಹದಿನಾಲ್ಕು ದಿನ 144 ಸೆಕ್ಷನ್ ಜಾರಿ

ನಿಯಂತ್ರಣಕ್ಕೆ ಬಾರದ ಓಮಿಕ್ರಾನ್;‌ ಗ್ಯಾರಂಟಿ ಲಾಕ್‌ಡೌನ್‌

Leave a Reply Cancel reply

Your email address will not be published. Required fields are marked *

Recommended

ಅನುದಾನ ರಹಿತ ಕಾಲೇಜು ಉಪನ್ಯಾಸಕರಿಗೂ 10,000 ರೂ. ಪ್ಯಾಕೇಜ್‌ ಘೋಷಿಸಿ

ಅನುದಾನ ರಹಿತ ಕಾಲೇಜು ಉಪನ್ಯಾಸಕರಿಗೂ 10,000 ರೂ. ಪ್ಯಾಕೇಜ್‌ ಘೋಷಿಸಿ

4 years ago
ಅಮಾನವೀಯತೆಗೆ ಸೋತ ಭಾರತ!

ಅಮಾನವೀಯತೆಗೆ ಸೋತ ಭಾರತ!

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ