7.250 ಅತಿಥಿ ಉಪನ್ಯಾಸಕರನ್ನು ಮರು ನೇಮಕ ಮಾಡಿಕೊಳ್ಳಿ
ಬೆಂಗಳೂರು: ಗೌರವಧನ ಪರಿಷ್ಕರಣೆ ಹಾಗೂ ಕಾರ್ಯಭಾರ ಹೆಚ್ಚಳದ ನೆಪದಲ್ಲಿ ಒಟ್ಟು 14,500 ಅತಿಥಿ ಉಪನ್ಯಾಸಕರ ಪೈಕಿ 7.250 ಅತಿಥಿ ಉಪನ್ಯಾಸಕರನ್ನು ಉದ್ಯೋಗದಿಂದ ತೆಗೆಯುವುದು ಬೇಡ. ಅವರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಪತ್ರ ಬರೆದಿರುವ ಗೌಡರು; ಉನ್ನತ ಶಿಕ್ಷಣ ಇಲಾಖೆಯ ಆದೇಶದ ಅನ್ವಯ 14,500 ಅತಿಥಿ ಉಪನ್ಯಾಸಕರು ಇದ್ದು, ಈ ಪೈಕಿ 7.250 ಜನಕ್ಕೆ ಮಾತ್ರ ಅನುಕೂಲವಾಗುತ್ತಿದ್ದು, ಉಳಿದ 7.250 ಉಪನ್ಯಾಸಕರಿಗೆ ಉದ್ಯೋಗ ನಷ್ಟವಾಗಿದೆ. ಈ ಆದೇಶವನ್ನು ವಾಪಸ್ ಪಡೆದು ಅಷ್ಟೂ ಅತಿಥಿ ಉಪನ್ಯಾಸಕರನ್ನು ಮರಳಿ ಉದ್ಯೋಗಕ್ಕೆ ಸೇರಿಸಿಕೊಳ್ಳಬೇಕು ಎಂದು 2019-2020ರ ಆದೇಶವನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ, ಅತಿಥಿ ಉಪನ್ಯಾಸಕರ ಮನವಿಯನ್ನು ಪರಿಶೀಲಿಸಿ ಆಯಾಯ ಕಾಲೇಜುಗಳಲ್ಲೇ ಅವರ ಸೇವೆಯನ್ನು ಮುಂದುವರಿಸಬೇಕು ಎಂದು ಮಾಜಿ ಪ್ರಧಾನಿಗಳು ಸಚಿವರನ್ನು ಕೋರಿದ್ದಾರೆ.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ನಮ್ಮ ಮಾಜಿ ಪ್ರಧಾನಿಗಳಿಗೆ ಗುರುಗಳ ಬಗ್ಗೆ ಗೌರವ ಗುರು ಗಳಿದ್ದರೆ ಗುರಿ ಮುಟ್ಟುತ್ತೇವೆ ಎನ್ನುವ ವಿಷಯ ಈ ಸರ್ಕಾರಕ್ಕೆ ಗೊತ್ತಿಲ್ಲ ಆದ್ದರಿಂದಲೇ ಗುರುಗಳ ಸ್ಥಾನಮಾನಕ್ಕೆ ಅಗೌರವ ಆಗದಂತೆ ನೋಡಿಕೊಳ್ಳಿ ಎಂದು ಪತ್ರ ಬರೆದಿರುವುದು ಸಂತೋಷದ ಸುದ್ದಿ ಮುಂದೆ ಅತಿಥಿ ಶಿಕ್ಷಕರು ನಮ್ಮ ಮಾಜಿ ಪ್ರಧಾನ ಮಂತ್ರಿಗಳ ಮನೆಮುಂದೆ ನ್ಯಾಯ ಕೇಳಲು ಬಂದರೂ ಬರಬಹುದು ಅಂತಹ ಸನ್ನಿವೇಶಗಳು ಬಂದಾಗ ಮಾಜಿ ಪ್ರಧಾನಿಗಳು ಅತಿಥಿ ಶಿಕ್ಷಕರಿಗೆ ಮುಲಾಜಿಲ್ಲದೆ ಸಹಾಯಹಸ್ತ ನೀಡೇ ನೀಡುತ್ತಾರೆ.