65 ಅಡಿ ಆಳದ ಕಿರು ಬಾವಿಯಲ್ಲಿ ಉಸಿರುಗಟ್ಟಿ ಸಾವು
by GS Bharath Gudibande
ಚಿಕ್ಕಬಳ್ಳಾಪುರ: ಬಾವಿಗೆ ಬಿದ್ದ ಮೊಬೈಲ್ ತೆಗೆಯಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಶಿಡ್ಲಘಟ್ಟ ತಾಲೂಕಿನ ಗುಡಿಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.
65 ಅಡಿ ಆಳದ ಕಿರು ಬಾವಿಯಲ್ಲಿ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಹೋಗಿ ಉಸಿರುಗಟ್ಟಿ ಅನೀಲ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದು, ಈ ಘಟನೆ ಎಲ್ಲರಿಗೂ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ.
ಯುವಕನ ರಕ್ಷಣೆಗೆ ರಾತ್ರಿಯಿಡಿ ಎನ್.ಡಿ.ಆರ್.ಎಫ್ ತಂಡ ಹಾಗೂ ಸ್ಥಳಿಯ ಪೊಲೀಸರು ಕಾರ್ಯಾಚರಣೆ ನಡೆಸಿ ಪೈಪ್ ಮೂಲಕ ಆಕ್ಸಿಜನ್ ಪೂರೈಕೆ ಮಾಡಿದರೂ ಯುವಕ ಬದುಕಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂರು ಅಡಿ ಅಗಲ 65 ಅಡಿ ಆಳದ ಬಾವಿಯಲ್ಲಿ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಅಗ್ಗ ಇಳಿಬಿಟ್ಟು ಕೆಳಗೆ ಇಳಿದಿದ್ದ ಯುವಕ, ಕೊನೆಗೆ ಅಲ್ಲಿಯೇ ಉಸಿರುಗಟ್ಟಿ ಬಾವಿಯಲ್ಲಿ ಕುಸಿದು ಬಿದ್ದಿದ್ದಾನೆ. ಸ್ಥಳೀಯರು ಆತನನ್ನು ಹುಡುಕಿಕೊಂಡು ಬಂದಾಗ ಬಾವಿಯಲ್ಲಿ ಕಾಣಿಸಿಕೊಂಡಿದ್ದಾನೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದರು ಕೂಡ ಸಫಲವಾಗಿರಲಿಲ್ಲ. ಕೊನೆಗೆ ರಾತ್ರಿ ಎನ್.ಡಿ.ಆರ್.ಎಪ್ ತಂಡ ಸ್ಥಳಕ್ಕೆ ಆಗಮಿಸಿ ರಕ್ಷಣಗೆ ಮುಂದಾಗಿತ್ತು. ಅಂತಿಮವಾಗಿ ಕೆಲ ಗಂಟೆಗಳ ಕಾರ್ಯಾಚರಣೆ ನಂತರ ಯುವಕನ ದೇಹವನ್ನು ಹೊರತೆಗೆಯಲಾಗಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.