ಸರಕಾರದ ಅವೈಜ್ಞಾನಿಕ ಧೋರಣೆಗೆ 9,000ಕ್ಕೂ ಹೆಚ್ಚು ಉಪನ್ಯಾಸಕರು ಬೀದಿ ಪಾಲಾಗಿದ್ದಾರೆ
ಗುಡಿಬಂಡೆ: ಸರಕಾರ ಈಗ ಆಯ್ಕೆ ಮಾಡಿರುವ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಿ 2020-21ರಲ್ಲಿ ಕೆಲಸ ಮಾಡಿದ ಅತಿಥಿ ಉಪನ್ಯಾಸಕರನ್ನೇ ಸೇವೆಯಲ್ಲಿ ಮುಂದುವರಿಸಬೇಕು ಎಂದು ಅತಿಥಿ ಉಪನ್ಯಾಸಕರು ಪ್ರಾಂಶುಪಾಲರಿಗೆ ಮನವಿ ಮಾಡಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲಸ ಕಳೆದುಕೊಂಡ ಅತಿಥಿ ಉಪನ್ಯಾಸಕರು ಮನವಿ ಪತ್ರ ನೀಡಿದ ನಂತರ ಉಪನ್ಯಾಸಕ ಜಿ.ಎಸ್.ಭರತ್ ಮಾತನಾಡಿದರು.
“ಸರಕಾರ ಅತಿಥಿ ಉಪನ್ಯಾಸಕರನ್ನು ಜೀವಂತವಾಗಿ ಉಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಹಲವು ವರ್ಷಗಳಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಅವಕಾಶ ನೀಡದೇ, ಏಕಾಎಕಿ ಅವೈಜ್ಞಾನಿಕ ಮಾನದಂಡಗಳಿಂದ ಸುಮಾರು 9 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಹೊರಗೆ ಉಳಿದಿದ್ದಾರೆ, ಹೀಗಿರುವಾಗ ಸರಕಾರ 6ರಿಂದ 10 ವರ್ಷಗಳ ಕಾಲ ಅವರಿಂದ ಯಾಕೆ ಕೆಲಸ ಮಾಡಿಸಿಕೊಳ್ಳಬೇಕು?” ಎಂದು ಪ್ರಶ್ನೆ ಮಾಡಿದರು.
ನಂತರ ಅತಿಥಿ ಉಪನ್ಯಾಸಕಿ ಉಮಾ ಮಾತನಾಡಿ; “ರಾಜ್ಯದಲ್ಲಿ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, 1.80 ಲಕ್ಷ ವಿದ್ಯಾರ್ಥಿಗಳು ಪ್ರಸ್ತುತ ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಕಾಯಂ ಉಪನ್ಯಾಸಕರು ಇಲ್ಲದಿರುವುದರಿಂದ 2002 ಅಥಿತಿ ಉಪನ್ಯಾಸಕರನ್ನು ಎಲ್ಲಾ ವಿಷಯಗಳಿಗೂ ಆಯ್ಕೆ ಮಾಡಲು ಆಯಾಯ ಕಾಲೇಜು ಹಂತದಲ್ಲಿ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಿ ವಿದ್ಯಾರ್ಹತೆ ಆಧಾರದಲ್ಲಿ ಆಯ್ಕೆಯಾಗಿ 6 ವರ್ಷದಿಂದ ಕನಿಷ್ಠ ವೇತನಕ್ಕೆ ಕೆಲಸ ಮಾಡಿದ್ದೆವು. ಆದರೆ ಇಂದು ಏಕಾಎಕಿ ಹೊಸಬರನ್ನು ಆಯ್ಕೆ ಮಾಡಿ ನಮ್ಮನ್ನು ಕೈಬಿಟ್ಟಿರುವುದು ಶೋಚನೀಯ. ಈ ಕೂಡಲೇ ಸರಕಾರ ಎಚ್ಚೆತ್ತುಕೊಳ್ಳಬೇಕು ರಾಜ್ಯಾದ್ಯಾಂತ ಅತಿಥಿ ಉಪನ್ಯಾಸಕರಿಗೆ ನ್ಯಾಯ ನೀಡಬೇಕು, ಏಕಾಎಕಿ ಉಪನ್ಯಾಸಕರನ್ನು ಬೀದಿಗೆ ತಂದಿರುವುದು ಉತ್ತಮವಲ್ಲ, ನಮ್ಮನ್ನು ನಂಬಿಕೊಂಡು ನಮ್ಮ ಕುಟುಂಬಸ್ಥರೆಲ್ಲ ಜೀವನ ಮಾಡುತ್ತಿದ್ದೇವೆ ಆದರೆ ಈಗ ರಾಜ್ಯದಲ್ಲಿ ಅನೇಕ ಅತಿಥಿ ಉಪನ್ಯಾಸಕರ ಕಟುಂಬಗಳು ಸಹ ಬೀದಿಗೆ ಬರುವಂತೆ ಸರಕಾರ ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ರಾಧಾ, ಪ್ರಕಾಶ್ ಒಂಟೆ, ರಮೇಶ್ ರೆಡ್ಡಿ, ಉಮಾ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ಈ ಸುದ್ದಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
Government had played with guest lecturers. Please give justice to all guest lecturers. Pass the order of continuity as which has been done since these years. Continue all guest lecturers by giving 8/10 hrs workload as like earlier. Otherwise most of the families can’t even survive. So many people have dependent on this work only. Some people used to work in different different colleges under university along with that they use to work here so for such people it won’t affect as themselves got their names in the list. What about other people they weren’t working anywhere apart from this work. They kept serving only for GFGC college ivag idu antorige jasthi affect agirodu. Please let them get their work back. Give justice for guest lecturers 2020-21