ವಾಯುಪಡೆ ಹೆಲಿಕಾಪ್ಟರ್ ಕಾರ್ಯಾಚರಣೆ
ಚಿಕ್ಕಬಳ್ಳಾಪುರ: ಭಾನುವಾರ ಬ್ರಹ್ಮಗಿರಿ ಮೂಲಕ ನಂದಿಬೆಟ್ಟಕ್ಕೆ ಟ್ರೆಕ್ಕಿಂಗ್ʼಗೆ ಹೊರಟು ಪ್ರಪಾತಕ್ಕೆ ಬಿದ್ದು ಪ್ರಾಣಾಪಾಯದಲ್ಲಿದ್ದ ಯುವಕನನ್ನು ವಾಯುಪಡೆ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿರು ರೋಚಕ ದೃಶ್ಯಗಳು ಇಲ್ಲಿವೆ.
ಪ್ರಾಣಾಪಾಯದಿಂದ ಪಾರಾದ ಈ ಯುವಕನ ಹೆಸರು ನಿಶಾಂಕ್. ಈಗ ಬೆಂಗಳೂರಿನ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾನೆ. ಈತ ಮೂಲತಃ ದೆಹಲಿ ಮೂಲದವ.
ನಿನ್ನೆ; ಅಂದರೆ ಫೆಬ್ರವರಿ 20ರ ಸಂಜೆ 4.15ರ ಸುಮಾರಿಗೆ ಯಲಹಂಕದಲ್ಲಿರುವ ಭಾರತೀಯ ವಾಯುಪಡೆಗೆ ಮನವಿ ಮಾಡಿದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು, ಕೂಡಲೇ ಧಾವಿಸಿ ಬಂದು ಯುವಕನನ್ನು ರಕ್ಷಣೆ ಮಾಡುವಂತೆ ಕೋರಿದ್ದರು.
ತಕ್ಷಣವೇ MI70 ಹೆಲಿಕಾಪ್ಟರ್ ಮೂಲಕ ಸ್ಥಳಕ್ಕೆ ಧಾವಿಸಿದ ವಾಯುಪಡೆಯ ರಕ್ಷಣಾ ತಂಡ, ಸ್ಥಳೀಯ ಪೊಲೀಸರ ನೆರವಿನಿಂದ ನಿಶಾಂಕ್ ಸಿಲುಕಿಕೊಂಡಿರುವ ಜಾಗವನ್ನು ಪತ್ತೆ ಮಾಡಿತು. ಆದರೆ, ಆತನಿದ್ದ ಜಾಗಕ್ಕೆ ಹೆಲಿಕಾಪ್ಟರ್ ಅನ್ನು ಇಳಿಸುವುದು ಕಷ್ಟವಾಗಿತ್ತು.
ಇಲ್ಲಿ ನೆರವಿಗೆ ಬಂದಿದ್ದೇ ಹೆಲಿಕಾಪ್ಟರ್ ಪೈಲಟ್ ಹಾಗೂ ವಾಯುಪಡೆ ರಕ್ಷಣಾ ತಂಡದ ಕಾರ್ಯಕ್ಷಮತೆ. ಸುಮಾರು 250ರಿಂದ 300 ಅಡಿ ಆಳದ ಪ್ರಪಾತಕ್ಕೆ ಬಿದ್ದು ಚಲಿಸಲಾಗದ ಸ್ಥಿತಿಯಲ್ಲಿದ್ದ ನಿಶಾಂಕ್ʼರನ್ನು ರಕ್ಷಣಾ ತಂಡ ಹಗ್ಗದ ಸಹಾಯದಿಂದ ಮೇಲೆತ್ತಲು ಯಶಸ್ವಿಯಾಯಿತು. ಬಳಿಕ ಸಂಜೆ 6 ಗಂಟೆ ಹೊತ್ತಿಗೆ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಕಾರ್ಯಾಚರಣೆ ದೃಶ್ಯಗಳನ್ನು ಭಾರತೀಯ ವಾಯುಪಡೆ ತನ್ನ ಟ್ವಿಟರ್ ಖಾತೆ ಹಂಚಿಕೊಂಡಿದೆ.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ