ಬಂಕರ್ʼಗಳಲ್ಲಿ ಅಡಗಿ ಕುಳಿತ ಜನ
ಕೀವ್: ರಷ್ಯಾ ಆಕ್ರಮಣದಿಂದ ಉಕ್ರೇನ್ ಜರ್ಝರಿತವಾಗಿದೆ. 2ನೇ ದಿನವೂ ದಾಳಿ, ಪ್ರತಿದಾಳಿ ಮುಂದುವರೆದಿದೆ. ಈ ವರೆಗೂ ಸೇನಾ ಸಿಬ್ಬಂದಿ ಮತ್ತು ನಾಗರಿಕರು ಸೇರಿ 137ಕ್ಕೂ ಹೆಚ್ಚು ಮಂದಿ ಮೃತ ಪಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ ಕೂಡ ಹಲವು ಪ್ರದೇಶಗಳಲ್ಲಿ ಸ್ಫೋಟದ ಸದ್ದುಗಳು ಕೇಳಿ ಬಂದಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ.
10 ಮಿಲಿಟರಿ ಅಕಾರಿಗಳು ಸೇರಿದಂತೆ 137 ವೀರರು ಕೊಲ್ಲಲ್ಪಟ್ಟಿದ್ದು, 316 ಜನರು ಗಾಯಗೊಂಡಿದ್ದಾರೆ. ಹೊಸದಾಗಿ ಜನವಸತಿ ಪ್ರದೇಶದ ಮೇಲೂ ಬಾಂಬ್ ದಾಳಿಯಾಗಿದೆ. ಜನ ಭಯಭೀತರಾಗಿ ಮೆಟ್ರೋ ನಿಲ್ದಾಣಗಳ ನೆಲ ಮಹಡಿಗಳಲ್ಲಿ ಅಡಗಿ ಕುಳಿತಿದ್ದಾರೆ.
ಶುಕ್ರವಾರ ರಾಜಧಾನಿ ಕೀವ್ ನ ಹೊರವಲಯದಲ್ಲಿ ಆಕ್ರಮಣ ತೀವ್ರಗೊಂಡಿದೆ. ಮೂರು ಕಡೆಯಿಂದ ರಷ್ಯಾ ಸೇನಾ ಪಡೆಗಳು ಮತ್ತು ಟ್ಯಾಂಕರ್ ಗಳು ದಾಳಿ ನಡೆಸುತ್ತಿರುವುದರಿಂದ ಉಕ್ರೇನ್ ನಲುಗಿ ಹೋಗಿದೆ.
ಈ ನಡುವೆಯೂ ಬೆಳಗಾಗುವ ಮೊದಲು ಕೈವ್ ನಲ್ಲಿ ಸ್ಫೋಟಗಳು ಸದ್ದು ಮಾಡಿವೆ. ದಿನದ ಹೋರಾಟದಲ್ಲಿ ಆದರೆ 100ಕ್ಕೂ ಹೆಚ್ಚು ನಾಗರೀಕರು ಸಾವನ್ನಪ್ಪಿದ್ದಾರೆ.
ಶುಕ್ರವಾರ ಮುಂಜಾನೆ ಉಕ್ರೇನ್ ರಾಜಧಾನಿ ಕೈವ್ ನಲ್ಲಿ ರಷ್ಯಾದ ಪಡೆಗಳ ದಾಳಿಯಲ್ಲಿ ಹಲವು ಸ್ಫೋಟಗಳು ಕೇಳಿ ಬಂದಿವೆ ಎಂದು ವರದಿಯಾಗಿದೆ. ಉಕ್ರೇನ್ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದ ನಿಯಂತ್ರಣವನ್ನು ಕಳೆದುಕೊಂಡಿದೆ.
ಹಲವು ನಗರಗಳು ಹಾಗೂ ಮಿಲಿಟರಿ ನೆಲೆಗಳ ಮೇಲೆ ವಾಯುದಾಳಿ ಮುಂದುವರೆದಿದೆ. ಉಕ್ರೇನ್ ಅಧ್ಯಕ್ಷರು ಅಂತರರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.