ಆಸಿಸ್ ಮಾಜಿ ವಿಕೆಟ್ ಕೀಪರ್ ರಾಡ್ ಮಾರ್ಷ್ ನಿಧನರಾದ 12 ಗಂಟೆಗೆ ಅಗಲಿದ ಶೇನ್; ಶೋಕಸಾಗರದಲ್ಲಿ ಮುಳುಗಿದ ಕ್ರಿಕೆಟ್ ಜಗತ್ತು
ಬ್ಯಾಂಕಾಕ್: ಕ್ರಿಕೆಟ್ ಜಗತ್ತಿನ ಶೋಮ್ಯಾನ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಬೌಲರ್, ಜಗದ್ವಿಖ್ಯಾತ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ (52) ಇನ್ನಿಲ್ಲ.
ಅವರು ಹೃದಯಾಘಾತದಿಂದ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಥಾಯ್ಲೆಂಡ್ʼನ ಕೊಯಿಸುಯಿ ಎಂಬಲ್ಲಿರುವ ತಮ್ಮ ನಿವಾಸದಲ್ಲಿದ್ದ ಅವರು ಹೃದಯಾಘಾತಕ್ಕೆ ತುತ್ತಾಗಿದ್ದಾರೆ.
ವೈದ್ಯರು ತೀವ್ರ ತಪಾಸಣೆ ಹಾಗೂ ಚಿಕಿತ್ಸೆಗೆ ಒಳಪಡಿಸಿದರೂ ಅವರು ಬದಕುಲಿಲ್ಲ ಎಂದು ಆ ಮೂಲಗಳು ಹೇಳಿದ್ದು, ಅವರ ನಿಧನಕ್ಕೆ ಕ್ರಿಕೆಟ್ ಜಗತ್ತು ದಿಗ್ಭ್ರಮೆ ವ್ಯಕ್ತಪಡಿಸಿದೆ. ಕ್ರಿಕೆಟ್ ಜಗತ್ತಿನ ಶ್ರೇಷ್ಠ ವಿಕೆಟ್ ಕೀಪರ್ ಆಗಿದ್ದ ಶೇನ್ ಅಗಲಿಕೆಯಿಂದ ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಅಪರಿಮಿತ ಕ್ರೀಡಾಸ್ಫೂರ್ತಿಯುಳ್ಳವರಾಗಿದ್ದ ಶೇನ್, ಆಸ್ಟ್ರೇಲಿಯಾ ತಂಡದ ಆಸ್ತಿಯಾಗಿದ್ದರು. ಅಲ್ಲದೆ, ಐಪಿಎಲ್ ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ಪರವಾಗಿ ಆಡಿದ್ದರು ಹಾಗೂ ತಂಡದ ಕ್ಯಾಪ್ಟನ್ ಆಗಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದರು. ತಮ್ಮ 15 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಶೇನ್ 708 ಟೆಸ್ಟ್ ವಿಕೆಟ್ ಗಳನ್ನು ಪಡೆದಿದ್ದರು.
ದುಃಖದ ಸಂಗತಿ ಎಂದರೆ; ಆಸ್ಟ್ರೇಲಿಯಾ ಮಾಜಿ ಕ್ರಿಕೆಟ್ ಕೀಪರ್ ರಾಡ್ ಮಾರ್ಷ್ ಅವರು ಕ್ವೀನ್ ಲ್ಯಾಂಡ್ʼನಲ್ಲಿ ಶುಕ್ರವಾರ ಬೆಳಗ್ಗೆ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದರು. ಅದಾದ ಸರಿಯಾಗಿ 12 ಗಂಟೆಗಳಿಗೆ ಶೇನ್ ನಿಧನರಾಗಿದ್ದಾರೆ. ಅದೇ ಶೇನ್ ಮಾಡಿದ್ದ ಕೊನೆ ಟ್ವೀಟ್.
ಅಲ್ಲದೇ; ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಕ್ರೂರ ದಾಳಿಯನ್ನು ಶೇನ್ ಉಗ್ರ ಶಬ್ದಗಳಲ್ಲಿ ಖಂಡಿಸಿದ್ದರು.