ಭಾನುವಾರವೂ ಜನರಿಗೆ ಶಾಕ್ ಕೊಟ್ಟ ಕೇಂದ್ರ ಸರಕಾರ
ನವದೆಹಲಿ: ರಜಾದಿನ ಭಾನುವಾರ ಕೂಡಾ ಪೆಟ್ರೋಲ್ ದರ ಲೀಟರ್‍ಗೆ 50 ಪೈಸೆ ಮತ್ತು ಡೀಸೆಲ್ 55 ಪೈಸೆ ಏರಿಕೆಯಾಗಿದ್ದು ವಾಹನ ಸವಾರರಿಗೆ ಬರೆ ಎಳೆದಂತಾಗಿದೆ.
ದೈನಂದಿನ ಬೆಲೆ ಪರಿಷ್ಕರಣೆ ನಂತರ ಒಂದು ವಾರದೊಳಗೆ ಪ್ರತಿ ಲೀಟರ್ 3.70-3.75 ರೂ ದರ ಹೆಚ್ಚಳವಾದಂತಾಗಿದೆ.
ದೇಶಾದ್ಯಂತ ದರ ಹೆಚ್ಚಳವಾಗಿದ್ದು ,ದೆಹಲಿಯಲ್ಲಿ ಪೆಟ್ರೋಲ್ ದರ ಈ ಹಿಂದೆ 98.61 ರೂಇದ್ದುದು ಈಗ 99.11 ರೂಗೆ ಮುಟ್ಟಿದೆ. ಸ್ಥಳೀಯ ತೆರಿಗೆಯನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ದರ ಬದಲಾಗುತ್ತದೆ.
ಕಳೆದ ಮಾರ್ಚ್ 22 ರಂದು ದರ ಪರಿಷ್ಕರಣೆ ಆರಂಭವಾಗಿದ್ದು ಸತತ ಐದನೇ ದಿನ ಹೆಚ್ಚಳವಾಗಿದೆ. ಹಿಂದಿನ ಎಲ್ಲಾ ನಾಲ್ಕು ಸಂದರ್ಭಗಳಲ್ಲಿ, ಬೆಲೆಗಳನ್ನು ಲೀಟರ್‍ಗೆ 80 ಪೈಸೆಗಳಷ್ಟು ಹೆಚ್ಚಿಸಲಾಗಿದೆ, ಅದರೆ ಈಗ 50 ಪೈಸೆ ಏರಿಕೆಯಾಗಿದೆ.
ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಬೆಲೆ ಏರಿಕೆಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಸಾಮಾನ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಸಾಮಾನ್ಯ ಜನರ ಮೇಲೆ ಬರೆ ಎಳೆದಂತಾಗಿದೆ ಎಂದು ಟೀಕಿಸಿವೆ.