• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಪುಸ್ತಕಗಳಿರಲವ್ವ ಮನೆ ತುಂಬಾ..

cknewsnow desk by cknewsnow desk
April 24, 2022
in EDITORS'S PICKS, GUEST COLUMN, STATE
Reading Time: 2 mins read
0
ಪುಸ್ತಕಗಳಿರಲವ್ವ ಮನೆ ತುಂಬಾ..

Photo by @CKPhotography

953
VIEWS
FacebookTwitterWhatsuplinkedinEmail

ಇಂದು ವಿಶ್ವ ಪುಸ್ತಕ ದಿನ

by Dr. Guruprasad Hawaladar

ಓದುವಿಕೆಯ ಅಭಿರುಚಿ ಹೆಚ್ಚಿಸಲು, ಪ್ರಕಾಶನಕ್ಕೆ ಉತ್ತೇಜನ ನೀಡಲು ಹಾಗೂ ಕೃತಿಸ್ವಾಮ್ಯಗಳ ಸಂರಕ್ಷಣೆಗಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಪುಸ್ತಕ ದಿನವನ್ನು ಆಚರಿಸಬೇಕೆಂಬ ಆಲೋಚನೆ Vicente Clavel Andres ಎಂಬ ಬರಹಗಾರನದ್ದು. 17ನೇ ಶತಮಾನದ ಪ್ರಖ್ಯಾತ ಸ್ಪೇನ್ ಬರಹಗಾರ Miguel de Cervantes ರನ್ನು ಗೌರವಿಸಬೇಕೆನ್ನುವ ಉದ್ದೇಶದಿಂದ ಅವರ ಜನ್ಮದಿನ(Oct-7) ಅಥವಾ ಮಡಿದ ದಿನ (Apr-23) ಅನ್ನು ಪುಸ್ತಕ ದಿನವನ್ನಾಗಿ ಆಚರಿಸಬೇಕೆಂದು ಸೂಚಿಸಿದ.

ಹಾಗಾಗಿ UNESCO ಎಪ್ರಿಲ್ 23 ಪ್ರಖ್ಯಾತ ನಾಟಕಗಾರ ವಿಲಿಯಂ ಶೇಕ್ಸ್‌ಪಿಯರ್ ಮರಣವನ್ನು ಹೊಂದಿದ ದಿನವಾದ ಕಾರಣ ಅಂದೇ ಪುಸ್ತಕ ದಿನಾಚರಣೆಯನ್ನು ಆಚರಿಸುವ ನಿರ್ಧಾರಕ್ಕೆ ಬಂತು. ಆ ಕಾರಣದಿಂದ UNESCO 1995 ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನ ಆಚರಿಸಲು ನಿರ್ಧರಿಸಲಾಯಿತು. ಈ ಬಾರಿ ನಾವು 26ನೇ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ ಆಚರಿಸುತ್ತಿದ್ದೇವೆ.

ಪುಸ್ತಕ ದಿನಾಚರಣೆ ಅಂಗವಾಗಿ ಪ್ರತಿವರ್ಷ ವಿಶ್ವದ ಒಂದು ನಗರವನ್ನು ವಿಶ್ವದ ಪುಸ್ತಕ ರಾಜಧಾನಿಯನ್ನಾಗಿ ಯುನೆಸ್ಕೊ ಘೋಷಿಸುತ್ತದೆ. ಈ ಬಾರಿ ಜಾರ್ಜಿಯ ದೇಶದ ಟಿಬಿಲಿಸಿ (Tbilisi) ರಾಜಧಾನಿ  ವಿಶ್ವದ ಪುಸ್ತಕ ರಾಜಧಾನಿ ಪಟ್ಟದ ಗೌರವ ಪಡೆದುಕೊಂಡಿದೆ.

ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನದ ಉದ್ದೇಶಗಳು ವಿಶ್ವ ಪುಸ್ತಕ ದಿನದಂದು ಪುಸ್ತಕ ಹಾಗೂ ಲೇಖಕ ಇಬ್ಬರಿಗೂ ಗೌರವ ಸಲ್ಲಿಸಲಾಗುತ್ತದೆ. ಜೊತೆಗೆ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಓದುವಿಕೆಯ ಮಾಧುರ್ಯವನ್ನು ತಿಳಿಸುವ ವಿವಿಧ ಚಟುವಟಿಕೆಗಳನ್ನು ಈ ದಿನದಂದು ಹಮ್ಮಿಕೊಳ್ಳಲಾಗುತ್ತದೆ.

ಯುನೆಸ್ಕೊ ನೀಡುವ ಸಹಿಷ್ಣುತೆಯ ಸೇವೆಯಲ್ಲಿ ಮಕ್ಕಳ ಮತ್ತು ಯುವಜನರ ಸಾಹಿತ್ಯ ಪುರಸ್ಕಾರವನ್ನು ಈ ದಿನದಂದು ಪ್ರಕಟಿಸಲಾಗುತ್ತದೆ. 1995ರಲ್ಲಿ ಪ್ಯಾರಿಸ್​ನಲ್ಲಿ ನಡೆದ ಯುನೆಸ್ಕೊ ಸಾಮಾನ್ಯ ಸಭೆಯಲ್ಲಿ ಏ. 23ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನವನ್ನು ಆಚರಿಸಲು ಘೋಷಿಸಿತು.

ಕೃತಿಸ್ವಾಮ್ಯ ಎಂದರೇನು?ಲೇಖಕ ಅಥವಾ ಬರಹಗಾರರಿಗೆ ಅವರು ರಚಿಸಿದ ಬರಹ ಅಥವಾ ಇನ್ನಾವುದೇ ಮಾಹಿತಿಯ ಮೇಲೆ ಕಾನೂನಾತ್ಮಕ ಹಕ್ಕು ನೀಡುವುದೇ ಕೃತಿಸ್ವಾಮ್ಯವಾಗಿದೆ. ತನ್ನ ಕೃತಿಯನ್ನು ಪ್ರಕಟಿಸಲು ಅಥವಾ ನಕಲು ಮಾಡಲು ಮತ್ತೊಬ್ಬರಿಗೆ ಅಧಿಕಾರ ನೀಡಲು ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಅಂದರೆ ಮೂಲತಃ ಇದು ಬೌದ್ಧಿಕ ಆಸ್ತಿ ಹಕ್ಕಾಗಿದೆ.

ಪುಸ್ತಕ ಹಾಗೂ ಕೃತಿಸ್ವಾಮ್ಯಗಳ ರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡುತ್ತಿರುವ ಯುನೆಸ್ಕೊ ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ವೈವಿಧ್ಯತೆಗಳಿಗೆ ಒತ್ತು ನೀಡುತ್ತಿದೆ. ಹಾಗೆಯೇ ಎಲ್ಲರಿಗೂ ಜ್ಞಾನದ ಸಮಾನ ಹಂಚಿಕೆಯಾಗುವಂತೆ ಶ್ರಮಿಸುತ್ತಿದೆ.

ಸೃಜನಾತ್ಮಕ ನಗರಗಳ ಜಾಲ ನಿರ್ಮಾಣ, ಸಾಕ್ಷರತೆಯ ಉತ್ತೇಜನ, ಮೊಬೈಲ್ ಮೂಲಕ ಕಲಿಕೆ ಮತ್ತು ವೈಜ್ಞಾನಿಕ ಹಾಗೂ ಶೈಕ್ಷಣಿಕ ಜ್ಞಾನ ಸಂಪನ್ಮೂಲಗಳು ಮುಕ್ತವಾಗಿ ಲಭ್ಯವಾಗುವಂತೆ ಮಾಡುವಲ್ಲಿ ಯುನೆಸ್ಕೊ ಪ್ರಮುಖ ಪಾತ್ರ ವಹಿಸಿದೆ.

ಸಾಹಿತ್ಯ ಕ್ಷೇತ್ರದ ಪ್ರಮುಖ ಪಾಲುದಾರರಾಗಿರುವ ಲೇಖಕ, ಪ್ರಕಾಶಕ, ಶಿಕ್ಷಕ, ಲೈಬ್ರರಿಯನ್, ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳು, ಮಾನವ ಹಕ್ಕು ಸ್ವಯಂ ಸೇವಾ ಸಂಸ್ಥೆಗಳು, ಸಮೂಹ ಮಾಧ್ಯಮ ಹೀಗೆ ಸಮಾನ ಮನಸ್ಕ ಎಲ್ಲರನ್ನೂ ಒಂದೇ ಜಾಗತಿಕ ವೇದಿಕೆಯಡಿ ತರುವುದು.

ಕಳೆದ ವರ್ಷ ಕೋವಿಡ್​-19 ವಿರುದ್ಧ ಇಡೀ ಜಗತ್ತು ಹೋರಾಡುತ್ತಿರುವ ಸಮಯದಲ್ಲಿ, ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಶಾಲೆ-ಕಾಲೇಜುಗಳು ಸ್ಥಗಿತಗೊಂಡಂತಹ ಸಂದರ್ಭದಲ್ಲಿ ಇ-ಬುಕ್​ ಹಾಗೂ ಇ-ಲರ್ನಿಂಗ್​ನತ್ತ ವಿದ್ಯಾರ್ಥಿಗಳು ಗಮನಹರಿಸಿದರು. ಸಂಶೋಧಕರು ಸಹ ತಮ್ಮ ಜರ್ನಲ್​ಗಳನ್ನು ಆನ್ಲೈನ್​ ಮೂಲಕ ಪ್ರಕಟಿಸುತ್ತಿದ್ದಾರೆ. ಡಿಜಿಟಲ್​ ಲೈಬ್ರರಿಗಳು ಹಾಗೂ ಪ್ರಕಾಶಕರು ಸಹ ಆದಷ್ಟೂ ಹೆಚ್ಚು ಮಾಹಿತಿಯನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತಿದ್ದಾರೆ. ವಿಶ್ವಾಸಾರ್ಹ ಆನ್ಲೈನ್​ ಮಾಹಿತಿಗೆ ಇನ್ನಿಲ್ಲದ ಬೇಡಿಕೆ ಬಂದಿದ್ದು, ಉತ್ತಮ ಗುಣಮಟ್ಟದ ಇ-ಬುಕ್ಸ್​, ಜರ್ನಲ್​ಗಳು ಹಾಗೂ ಶೈಕ್ಷಣಿಕ ಪಠ್ಯದ ಪ್ರಕಟಣೆಗೆ ನಾಂದಿ ಹಾಡಿದೆ.

ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ (NDLI)ಐಐಟಿ ಖರಗ್​ಪುರ್​ನಲ್ಲಿ ಪ್ರಧಾನ ಕಚೇರಿ ಹೊಂದಿರುವ ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದೇಶದ ಅತಿ ದೊಡ್ಡ ಆನ್ಲೈನ್​ ಕಲಿಕಾ ಪ್ಲಾಟ್​ಫಾರ್ಮ್ ಆಗಿದೆ. 48 ಮಿಲಿಯನ್​ ಇ-ಬುಕ್​ಗಳು ಹಾಗೂ ವಿವಿಧ ಕ್ಷೇತ್ರದ ಜ್ಞಾನ ಭಂಡಾರವನ್ನು ಹೊಂದಿರುವ ಈ ಪೋರ್ಟಲ್​ಗೆ ನಿತ್ಯ ಸುಮಾರು 3 ಮಿಲಿಯನ್​ ಓದುಗರು ಭೇಟಿ ನೀಡುತ್ತಾರೆ.

ಯುನೆಸ್ಕೊ ಸೃಜನಾತ್ಮಕ ನಗರಗಳ ಜಾಲ (United Nation’s Creative Cities Network) ಸುಸ್ಥಿರ ನಗರ ಅಭಿವೃದ್ಧಿಗಾಗಿ ಸೃಜನಾತ್ಮಕ ಪಾತ್ರ ವಹಿಸುತ್ತಿರುವ ಜಾಗತಿಕ ನಗರಗಳ ಮಧ್ಯೆ ಸಹಕಾರ ಏರ್ಪಡಿಸುವ ದೃಷ್ಟಿಯಿಂದ 2004ರಲ್ಲಿ ಯುನೆಸ್ಕೊ ಸೃಜನಾತ್ಮಕ ನಗರಗಳ ಜಾಲ ಆರಂಭಿಸಲಾಯಿತು. ಸೃಜನಾತ್ಮಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಸುಸ್ಥಿರ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಿಶ್ವದ 246 ನಗರಗಳು ಈ ಜಾಲದಲ್ಲಿವೆ.

ಕನ್ನಡ ಪುಸ್ತಕದ ವಿಚಾರಕ್ಕೆ ಬಂದರೆ ಕ್ರಿ ಪೂ 2000 ವರ್ಷಗಳ ಹಿಂದಿನಿಂದಲೂ  ಹುಲ್ಲಿನ ಹಾಳೆ , ತಾಳೆಗರಿ  ಅಥವಾ ಬಿದಿರು ಪಟ್ಟೆಗಳ ಮೇಲೆ ತಮ್ಮ ಕಾವ್ಯವನ್ನು ಬರೆದು ರಾಜನ ಆಸ್ಥಾನದಲ್ಲಿ  ವಾಚಿಸುತ್ತಿದ್ದರು. ಆದಿ ಕವಿ ಪಂಪ, ರನ್ನ, ಕುಮಾರವ್ಯಾಸನಿಂದ  ಕುವೆಂಪು,  ಬೇಂದ್ರೆ, ಅಡಿಗ ಕಾರಂತ, ಮಾಸ್ತಿ, ಕಂಬಾರ, ಕಾರ್ನಾಡ್, ಭೈರಪ್ಪ ಮುಂತಾದ ಅನೇಕ ಸಾಹಿತಿಗಳು ತಮ್ಮ ಸಾಹಿತ್ಯ ಸುಧೆಯನ್ನು ಹರಿಸಿದ್ದಾರೆ. ಸುಮಾರು ಇಲ್ಲಿಯವರೆಗೆ   ಸಾವಿರಾರು ಕನ್ನಡ ಪುಸ್ತಕಗಳು ಪ್ರಕಟವಾಗಿ ಓದುಗರ ಮನ ತಣಿಸಿಸಿವೆ.

ಅದರೆ ಡಿಜಿಟಲ್ ಮಾದ್ಯಮದಿಂದಾಗಿ ಕನ್ನಡದಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳುವವರ ಮಧ್ಯೆ ಕನ್ನಡ ಪುಸ್ತಕ‌ಗಳ  ಸಂಖ್ಯೆ ಮತ್ತು ಖರೀದಿಸಿ ಓದುವವರು ಹೆಚ್ಚುತ್ತಿದೆ.

ಇಂದು ಪುಸ್ತಕಗಳು ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್  ಕಿಂಡಲ್ ಗಳ ಮೂಲಕ  ಇ- ಪುಸ್ತಕ ರೂಪದಲ್ಲಿ, ಪಿಡಿಎಫ್ ಫೈಲ್‌ಗಳಾಗಿ, ಅನೇಕ ಓದುಗರಿಗೆ ತಲುಪುತ್ತಿವೆ. ಜೊತೆಗೆ ಆನ್ಲೈನ್ ಮೂಲಕ  ಪುಸ್ತಕಗಳನ್ನು  ಖರೀದಿಸಬಹುದು. ಪುಸ್ತಕ ಪ್ರಕಟನೆಯ ಕುರಿತಂತೆ ಕನ್ನಡದಲ್ಲಿ ಯಾವುದೇ ರೀತಿಯ ಶೈಕ್ಷಣಿಕ ಕೋರ್ಸುಗಳು ಇಲ್ಲದಿದ್ದರೂ ತಮಗಿರುವ ಸೀಮಿತ ಜ್ಞಾನದಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ತಂತ್ರಜ್ಞಾನದ ಹೆಚ್ಚು ಬಳಕೆಯಿಂದಾಗಿ

ಹಿಂದೆಂದಿಗಿಂತಲೂ  ಇಂದು ಮನುಷ್ಯ ಏಕಾಂಗಿತನಕ್ಕೆ, ಮಾನಸಿಕಕ್ಕೆ ಒಳಗಾಗುತ್ತಿದ್ದಾನೆ. ಇದಕ್ಕೆ ಪರಿಹಾರವೆಂದರೆ ಪುಸ್ತಕಗಳನ್ನು ಓದುವುದುಹಿಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ.

ಪುಸ್ತಕ ಓದುವುದರ ಮೂಲಕ ವಿಶ್ವ ಜ್ಞಾನ ಪಡೆಯುವುದು ಹಾಗೂ ಕ್ರಿಯಾಶೀಲತೆಯನ್ನು ಬೆಳೆಸುವುದು ಎಲ್ಲರ ಆದ್ಯತೆಯಾಗಬೇಕಿದೆ. “ಒಂದು ಪುಸ್ತಕ ಹತ್ತು ಜನ ಸ್ನೇಹಿತರಿಗೆ ಸಮ” ಎಂಬ ಮಾತಿದೆ. ನಾವು ಏಕಾಂಗಿ ಎಂದು ಭಾವಿಸುವವರಿಗೆಲ್ಲಾ ಜೊತೆಯಾಗುವುದಕ್ಕೆ ಈ ಪ್ರಕೃತಿ ಆಗಾಗ ಅವಕಾಶಗಳನ್ನು ಮಾಡಿಕೊಡುತ್ತಿರುತ್ತದೆ. ಆದರೆ ಅದನ್ನು ತೆರದ ಮನಸ್ಸಿನಿಂದ ನೋಡಬೇಕಾದದ್ದು ಅಂತಹ ಏಕಾಂಗಿಯ ಕರ್ತವ್ಯ. ನಮ್ಮ ಜೀವನದ ಅತ್ಯುತ್ತಮ ಜೊತೆಗಾರ ಪುಸ್ತಕ  ಎಂಬುದು  ಪ್ರಸಿದ್ಧರ ಮಾತು.

ಒಬ್ಬ ವ್ಯಕ್ತಿಯ ಜ್ಞಾನವನ್ನು ಹೆಚ್ಚಿಸಲು ಮತ್ತು ಆತನ ಮನೋವಿಕಾಸಕ್ಕೆ ಪುಸ್ತಕಗಳು ನೆರವಾಗುತ್ತವೆ. ಪುಸ್ತಕಗಳು ನಮ್ಮ ಕಲ್ಪನಾ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದೊಂದು ಪುಸ್ತಕವೂ ತನ್ನದೇ ಆದ ಪ್ರಪಂಚವನ್ನು, ನಮಗೆ ಪರಿಚಯವಿಲ್ಲದ ಜೀವನವನ್ನು ನಮಗೆ ಪರಿಚಯಿಸುತ್ತವೆ. ಹಾಗಾಗಿ ಪುಸ್ತಕಗಳೇ ನಮ್ಮಲ್ಲರ ನಿಜವಾದ ಸಂಗಾತಿಯಾಗಿದೆ. ಪುಸ್ತಕ ಓದುವ ಹವ್ಯಾಸ ಬೆಳಸಿಕೊಳ್ಳೊಣ. ಮುಂದುವರೆಸಿಕೊಂಡು ಹೋಗೋಣ.


ಡಾ.ಗುರುಪ್ರಸಾದ್‌ ಹವಲ್ದಾರ್

  • ಇವರು ವೃತ್ತಿಯಲ್ಲಿ ಉಪನ್ಯಾಸಕರು. ಪ್ರವೃತ್ತಿಯಲ್ಲಿ ಬರಹಗಾರರು. ಇತಿಹಾಸ, ರಾಜಕೀಯ, ಧಾರ್ಮಿಕ, ಪ್ರಚಲಿತ ಬೆಳವಣಿಗೆಗಳ ಬಗ್ಗೆ ಅತೀವ ಆಸಕ್ತಿ. ನಾಡಿನ ಪತ್ರಿಕೆಗಳು, ಡಿಜಿಟಲ್‌ ಪೋರ್ಟಲ್ಲುಗಳಿಗೆ ನಿಯಮಿತವಾಗಿ ಬರೆಯುತ್ತಾರೆ. ಅಪಾರ ಓದುಗ ಬಳಗ ಹೊಂದಿದ್ದಾರೆ.

cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಬೈಕಿನಲ್ಲಿ ಬುಸುಬುಸು ನಾಗಪ್ಪ!

ಬೈಕಿನಲ್ಲಿ ಬುಸುಬುಸು ನಾಗಪ್ಪ!

Leave a Reply Cancel reply

Your email address will not be published. Required fields are marked *

Recommended

ನಾಳೆಯಿಂದ SSLC ಪರೀಕ್ಷೆ, ಶುಭಾಶಯ ಮಕ್ಕಳೇ..

ನಾಳೆಯಿಂದ SSLC ಪರೀಕ್ಷೆ, ಶುಭಾಶಯ ಮಕ್ಕಳೇ..

4 years ago
ಧನ್ವಂತರಿ ಭಾರತೀಯರ ಮೊದಲ ವೈದ್ಯ

ಧನ್ವಂತರಿ ಭಾರತೀಯರ ಮೊದಲ ವೈದ್ಯ

3 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ