ಯುವಕರು ಕನ್ನಡ ಸೇವೆಗೆ ಮುಂದಾಗಬೇಕು ಕಸಾಪ ಡಾ.ಕೋಡಿ ರಂಗಪ್ಪ
by GS Bharath Gudibande
ಗುಡಿಬಂಡೆ: ತಾಲೂಕಿನಾದ್ಯಂತ ನಾಡು, ನುಡಿ ಸೊಗಡನ್ನು ಪಸರಿಸುವಲ್ಲಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೊಸ ಪೀಳಿಗೆಯನ್ನು ಕನ್ನಡ ಸೇವೆಗೆ ಎಲ್ಲರೂ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೋಡಿ ರಂಗಪ್ಪ ಹೇಳಿದರು.
ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಕಟ ಪೂರ್ವ ಅಧ್ಯಕ್ಷೆ ಅನುರಾಧ ಆನಂದ್ ಅವರಿಂದ ಕನ್ನಡದ ಭಾವುಟವನ್ನು ಸ್ವೀಕರಿಸುವ ಮೂಲಕ ನೂತನ ಅಧ್ಯಕ್ಷ ಕವಿ ಸುಬ್ಬರಾಯಪ್ಪ ತಾಲೂಕು ಕಸಾಪ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು.
ಕನ್ನಡದ ಕೆಲಸವನ್ನು ಅಭಿಮಾನ, ಪ್ರೀತಿಯಿಂದ ಮಾಡಬೇಕು. ಪ್ರತಿನಿತ್ಯ ಕನ್ನಡದ ಜಾಗೃತಿ ಮೂಡಿಸಿ ಶಾಲೆ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಕನ್ನಡ ನಾಡು ನುಡಿ ನೆಲ ಜಲದ ಕುರಿತಂತೆ ಅರಿವು ಮೂಡಿಸಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮ ಬುದ್ದಿಯನ್ನು ಬೇರೆ ಕೆಲಸಗಳಿಗೆ ತೊಡಗಿಸಿಕೊಂಡು, ಆತ್ಮಹತ್ಯೆಯಂಥ ಆತಂಕಕಾರಿ ಕೃತ್ಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಯುವಕರು ತಮ್ಮ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಕನ್ನಡ ಸೇವೆಗೆ ಹೆಚ್ಚು ಯುವಜನರು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಮಾಡತನಾಡಿ; “ನಮ್ಮ ಕನ್ನಡ ಭಾಷೆಯ ಬಗ್ಗೆ ನಮಗೆ ಹೆಚ್ಚು ಪ್ರಿತಿ ಇರಬೇಕೇ ಹೊರತು ನಾವು ಬೇರೆ ಬಾಷೆಗಳನ್ನು ದೂಷಿಸಬಾರದು. ತಾಲೂಕಿನಲ್ಲಿನ ಕನ್ನಡ ಪತ್ರಿಕೆಗಳ ಓದುಗರ ಸಂಖ್ಯೆ ಹೆಚ್ಚಾಗಬೇಕು. ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಸಮಯ ಕಳೆಯಬೇಕು, ಸಾಹಿತ್ಯದ ಕ್ಷೇತ್ರದಲ್ಲಿ ಸಾಹಿತಿಗಳು ಹೆಚ್ಚು ಮಾತಾಡುವುದಿಲ್ಲ, ಅವರ ಅಕ್ಷರಗಳು ಹೆಚ್ಚು ಮಾತಾಡಬೇಕು, ಅದೇ ರೀತಿ ಕನ್ನಡ ಸಾಹಿತ್ಯ ಪರಿಷತ್ತಿನ ತಂಡ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಇವರೇ ಗುಡಿಬಂಡೆ ತಾಲೂಕು ಕಸಾಪದ ನೂತನ ಪದಾಧಿಕಾರಿಗಳು:
- 1) ಅಧ್ಯಕ್ಷರು: ಸುಬ್ಬರಾಯಪ್ಪ
- 2) ಗೌರವ ಕಾರ್ಯದರ್ಶಿ: ಪುರೋಷತ್ತಮ
- 3) ಗೌರವ ಕಾರ್ಯದರ್ಶಿ: ಪಿ.ಎನ್ ವೇಣುಗೋಪಾಲ
- 4) ಗೌರವ ಕೋಶಾಧ್ಯಕ್ಷ: ನವೀನ್ ರಾಜ್ ಕನ್ನಡಿಗ
- 5) ಜಂಟಿ ಕಾರ್ಯದರ್ಶಿ: ಬಿ.ಮಂಜುನಾಥ್
- 6) ಜಂಟಿ ಕಾರ್ಯದರ್ಶಿ: ತಿಮ್ಮಾರೆಡ್ಡಿ
- 7) ಸಂಘಟನಾ ಕಾರ್ಯದರ್ಶಿ: ಸಿ.ಆರ್.ಮಂಜುನಾಥ್
- 8) ಸಂಘಟನಾ ಕಾರ್ಯದರ್ಶಿ: ಅಂಬರೀಶ್
- 9) ಸಾಂಸ್ಕೃತಿಕ ಕಾರ್ಯದರ್ಶಿ: ಜನಪದ ರಾಜಪ್ಪ
- 10) ಸಾಂಸ್ಕೃತಿಕ ಕಾರ್ಯದರ್ಶಿ: ಮಂಜುಳಾ ನಾಯ್ಡು
- 11) ಪರಿಶಿಷ್ಟ ಜಾತಿ ಪ್ರತಿನಿಧಿ: ನಾರಾಯಣಸ್ವಾಮಿ
- 12) ಪರಿಶಿಷ್ಟಜಾತಿ ಪ್ರತಿನಿಧಿ: ನಾರಾಯಣಸ್ವಾಮಿ (ಜೀವಿಕ)
- 13) ಪರಿಶಿಷ್ಟ ಪಂಗಡ ಪ್ರತಿನಿಧಿ: ಎ.ಕೃಷ್ಣಪ್ಪ
- 14) ಅಲ್ಪಸಂಖ್ಯಾತರ ಪ್ರತಿನಿಧಿ: ಫಯಾಜ್ ಅಹಮ್ಮದ್ ಖಾನ್
- 15) ಹಿಂದುಳಿದ ವರ್ಗಗಳ ಪ್ರತಿನಿಧಿ: ಶ್ರೀನಿವಾಸ್ (ಗಾಂಧಿ)
- 16) ಮಹಿಳಾ ಪ್ರತಿನಿಧಿ: ಮಾಲಾ ನಾಯ್ಡು
- 17) ಮಹಿಳಾ ಪ್ರತಿನಿಧಿ: ಡಿ.ಆರ್.ಅನಿತಾ ಚಂದ್ರಶೇಖರ್
- 18) ಸಂಘ ಸಂಸ್ಥೆಗಳ ಪ್ರತಿನಿಧಿ: ಬುಲೆಟ್ ಶ್ರೀನಿವಾಸ್
- 19) ತಾಲೂಕು ಶಿಕ್ಷಣಾಧಿಕಾರಿ: ಸಿದ್ದಪ್ಪ ಎನ್
- 20) ಮಾಧ್ಯಮ ವಕ್ತಾರ: ಪರಮೇಶ್ ಜಿ.ವಿ
- 21) ನಿಕಟಪೂರ್ವ ಅಧ್ಯಕ್ಷರು: ಅನುರಾಧ ಆನಂದ್
ಕನ್ನಡದ ಬಗ್ಗೆ ಹೆಚ್ಚು ಕಾಳಜಿ, ಪ್ರೀತಿ ಮತ್ತು ಕಳಕಳಿ ಇಟ್ಟುಕೊಳ್ಳಬೇಕು. ಪರಭಾಷೆಗಳು ಎಷ್ಟೇ ಪ್ರಭಾವ ಬೀರಿದರೂ ನಮ್ಮ ಮಾತೃಭಾಷೆಯನ್ನು ಎಂದೆಂದಿಗೂ ಮರೆಯಬಾರದು. ಯುವಕರು ಸಾಹಿತ್ಯ ಸೇವೆಯನ್ನು ಮಾಡಲು ಮುಂದಾಗಬೇಕು. ತಾಲೂಕಿನಲ್ಲಿ ಕನ್ನಡ ಭವನಕ್ಕೆ ಜಾಗದ ಅವಶ್ಯಕತೆ ಇದ್ದು, ಅದನ್ನು ಶಾಸಕರು ಮಂಜೂರು ಮಾಡಿಕೊಡುವ ಭರವಸೆ ನಿಡಿದ್ದಾರೆ. ನೂತನ ಪದಾಧಿಕಾರಿಗಳ ತಂಡಕ್ಕೆ ಹೆಚ್ಚು ಜವಾಬ್ದಾರಿ ಇದ್ದು, ತಾಲೂಕಿನಾದ್ಯಂತ ಕನ್ನಡದ ಗಂಧವನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನ ಮಾಡಬೇಕು. ಹಿರಿಯರು, ಕಿರಿಯರು, ನಿಕಟ ಪೂರ್ವ ಅಧ್ಯಕ್ಷರು, ಪತ್ರಕರ್ತರು, ಎಲ್ಲಾ ಸಂಘಸಂಸ್ಥೆಗಳ ಸಹಕಾರದಿಂದ ಗಡಿ ಪ್ರದೇಶದಲ್ಲಿ ಕನ್ನಡವನ್ನು ಬೆಳಗಿಸುವ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ.
ಕವಿ ಸುಬ್ಬರಾಯಪ್ಪ, ಅಧ್ಯಕ್ಷರು, ಕಸಾಪ, ಗುಡಿಬಂಡೆ