• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಗುಡಿಬಂಡೆಯಲ್ಲಿ ಅದ್ದೂರಿ ಕರಗ ಮಹೋತ್ಸವ

cknewsnow desk by cknewsnow desk
May 13, 2022
in STATE
Reading Time: 2 mins read
0
ಗುಡಿಬಂಡೆಯಲ್ಲಿ ಅದ್ದೂರಿ ಕರಗ ಮಹೋತ್ಸವ
1.4k
VIEWS
FacebookTwitterWhatsuplinkedinEmail

ಹೂವಿನ ಕರಗ ಹೊತ್ತು ಹೆಜ್ಜೆಹಾಕಿದ ಬಾಲಾಜಿ ಸ್ವಾಮಿ; ವಿಶೇಷ ಪೂಜೆ, ಹಾಡುಗಳ ಮೂಲಕ ಕಣ್ಣುತುಂಬಿಕೊಂಡ ಜನಸಾಗರ

ಬಾಗೇಪಲ್ಲಿ ಶಾಸಕರಿಗೆ ಟಾಂಗ್ ಕೊಟ್ಟ ಮಿಥುನ್ ರೆಡ್ಡಿ

by GS Bharath Gudibande

ಗುಡಿಬಂಡೆ: ಪಟ್ಟಣದ ಪ್ರತಿ ಮನೆಗಳ ಮುಂದೆ ರಂಗಿನ ರಂಗೋಲಿ, ಮಾವಿನ ತೋರಣದಿಂದ ಸಿಂಗಾರಗೊಂಡ ಬೀದಿಗಳು.. ಜತೆಗೆ ತಾಲೂಕಿನಾದ್ಯಾಂತ ಹಬ್ಬದ ಸಡಗರ ಮನೆ ಮಾಡಿತ್ತು, ರಾತ್ರೀ ಇಡೀ ಜನಸಾಗರದಲ್ಲಿ ಕರಗವನ್ನು ನೋಡುವ ಉತ್ಸಾಹ ಕಡಿಮೆಯಾಗಿರಲಿಲ್ಲ.

ಸುಮಾರು ಎರಡು ವರ್ಷಗಳ ನಂತರ ಪಟ್ಟಣದಲ್ಲಿ ಕರಗ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪಟ್ಟಣದ ಸೊಪ್ಪಿನ ಪೇಟೆಯ ಜಾಲಾರಿ ಸಪ್ಪಲ್ಲಮ್ಮ ದೇವಿ ಹೂವಿನ ಕರಗ ಮಹೋತ್ಸವ ಕಾರ್ಯಕ್ರವನ್ನು ದೇವಸ್ಥಾನದ ಟ್ರಸ್ಟಿ, ಸಮಾಜ ಸೇವಕ ಮಿಥುನ್ ರೆಡ್ಡಿ ಮತ್ತು ತಂಡದವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಜಾಲಾರಿ ಸಪ್ಪಲಮ್ಮ ದೇವಸ್ಥಾನದಿಂದ ಹೂವಿನ ಕರಗ ಹೊರಬಂದ ಕೂಡಲೇ ಪಟ್ಟಣದ ಜನಸಾಗರ ಜೈಕಾರ ಹಾಕಿದರು. ಟಮಟೆಯ ನಾದಕ್ಕೆ ಭಕ್ತಪರವಶರಾಗಿ ಕರಗ ಹೊತ್ತ ಬಾಲಾಜಿ ಸ್ವಾಮಿಗಳು ನೃತ್ಯ ಮಾಡುವ ಮೂಲಕ ಎಲ್ಲರನ್ನೂ ಭಾವಪರವಶರನ್ನಾಗಿ ಮಾಡಿದರು.

ಈ ವೇಳೆ ಸಮಾಜ ಸೇವಕ ಹಾಗೂ ಬಾಗೇಪಲ್ಲಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಿಥುನ್ ರೆಡ್ಡಿ ಕರಗ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಗುಡಿಬಂಡೆ ಪಟ್ಟಣದಲ್ಲಿ ಎರಡು ವರ್ಷಗಳ ನಂತರ ಹೂವಿನ ಕರಗ ಮಹೋತ್ಸವ ಮಾಡುತ್ತಿರುವುದು ಸಂತೋಷವಾಗಿದೆ. 2005ರಲ್ಲಿ ದಿವಂಗತ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಏನು ಅಭಿವೃದ್ದಿ ಮಾಡಿದ್ದರೂ ಅಷ್ಟೇ, ಅದನ್ನು ಹೊರತುಪಡಿಸಿದರೆ ಬೇರೆಯವರು ಮಾಡಿರುವ ಅಭಿವೃದ್ಧಿ ಏನು? 300 ಎಕರೆ ಜಮೀನನ್ನು ಕೈಗಾರಿಕೆಗಳ ಸ್ಥಾಪನೆಗೆ ಮೀಸಲಿಡಲಾಗಿತ್ತು. ಈಗ 700 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆದರೆ, ಇದುವರೆಗೂ ಯಾವುದೇ ಅಭಿವೃದ್ದಿಯಾಗಿಲ್ಲ. ಬಾಗೇಪಲ್ಲಿ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದರೂ ಅದನ್ನು ಹೋಗಲಾಡಿಸುವ ಪ್ರಯತ್ನವನ್ನು ಶಾಸಕರು ಮಾಡಿದ್ದಾರಾ? ಎಂದು ನೇರವಾಗಿ ಪ್ರಶ್ನೆ ಮಾಡಿದರು.

ಕರಗದ ಮತ್ತಷ್ಟು ಚಿತ್ರಗಳನ್ನು ನೋಡಲು ಈ ಕೆಳಗಿನ ಸ್ಲೈಡ್‌ ಶೋ ನೋಡಿ...
ಹೆಣ್ಣುಮಕ್ಕಳು ಕೆಲಸ ಹುಡಿಕಿಕೊಂಡು ಹೋಗಬೇಕು

ಬಾಗೇಪಲ್ಲಿ, ಗುಡಿಬಂಡೆ ತಾಲೂಕಿನ ಹೆಣ್ಣುಮಕ್ಕಳು, ಯುವಕರು ಕೆಲಸಕ್ಕಾಗಿ ಪಕ್ಕದ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಕ್ಕೆ ಬೆಳಗ್ಗೆ 5 ಗಂಟೆಗೆ ಎದ್ದು ಹೊಗುವ ಪರಿಸ್ಥಿತಿ ಇದೆ. ಇದುವರೆಗೂ ಗುಡಿಬಂಡೆಯಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿಲ್ಲ. ಇನ್ನು ಮುಂದೆ ಆ ಜವಾಬ್ದಾರಿಯನ್ನು ನಾನು ಹೊತ್ತುಕೊಂಡು ತಕ್ಷಣಕ್ಕೆ 500 ಜನ ಹೆಣ್ಣುಮಕ್ಕಳು ಕೆಲಸ ಮಾಡುವ ಗಾರ್ಮೆಂಟ್ಸ್ ಮಾಡಿಸಲು ಶೀಘ್ರದಲ್ಲಿ ಭೂಮಿಪೂಜೆ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.

ಪಿಎಸೈ ಪರೀಕ್ಷೆ ಶುಲ್ಕ ಕೊಡುತ್ತೇನೆ

ಸುಮಾರು ಜನರು ಕ್ಷೇತ್ರಕ್ಕೆ ಬರುತ್ತಾರೆ. ನಾನು ಸಮಾಜ ಸೇವೆ ಮಾಡುತ್ತೇನೆ, ನಾನು ಅಭ್ಯರ್ಥಿ ಅಂತ ಬರುತ್ತಾರೆ. ಆದರೆ, ಹಣ ಕೊಟ್ಟು ಗೆದ್ದುಕೊಂಡು ಹೋಗುತ್ತಾರೆ ವಿನಾ ಇಲ್ಲಿನ ಜನರಿಗೆ ಯಾರೂ ಕೆಲಸ ಮಾಡಿಕೊಟ್ಟಿಲ್ಲ. ಪಿಸಿ, ಪಿಎಸೈ ಪರೀಕ್ಷೆ ಬರೆಯಲು 500 ರಿಂದ 800 ರೂಪಾಯಿ ಪರೀಕ್ಷೆ ಶುಲ್ಕ ಕಟ್ಟಲು ಸಾಧ್ಯವಾಗದೆ ನೂರಾರು ಬಡ ವಿದ್ಯಾಥಿಗಳು ಹಿಂದೆ ಉಳಿಯುತ್ತಿದ್ದಾರೆ. ಅಂತಹ ಎಷ್ಟೇ ಅಭ್ಯರ್ಥಿಗಳಿದ್ದರೂ ಅವರಿಗೆ ನಾನು ಸಂಪೂರ್ಣ ಪ್ರೋತ್ಸಾಹ ನೀಡುತ್ತೇನೆ ಎಂದು ಯುವಕರಿಗೆ ಧೈರ್ಯ ತುಂಬಿದರು.

ಕೆಲಸಕ್ಕೆ ಬದಲು ಬಾರ್‌ʼಗಳನ್ನು ಕೊಟ್ಟ ಶಾಸಕರು!!


ಈ ಕ್ಷೇತ್ರದಲ್ಲಿ ಓದಲು ಉತ್ತಮ ಶಾಲಾ ಕಾಲೇಜುಗಳಿಲ್ಲ. ಉತ್ತಮ ಆಸ್ಪತ್ರೆಗಳಿಲ್ಲ. ರೈತರ ಬಳಿ ಜಮೀನುಗಳನ್ನು ಕಿತ್ತುಕೊಂಡು ಕೈಗಾರಿಕೆಗಳಿಗೆ ಕೊಡುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದಂತೆ ಬೆಂಗಳೂರಿನಿಂದ ಸಮಾಜ ಸೇವಕರು ಸೂಟ್ಕೇಸ್ ತೆಗೆದುಕೊಂಡು ಬರುತ್ತಾರೆ ಅಂತ ಹೇಳುವ ಶಾಸಕರು, ಈವರೆಗೆ ಏನು ಸಮಾಜ ಸೇವೆ ಮಾಡಿದ್ದಾರೆ? 10 ವರ್ಷಗಳಿಂದ ಶಾಕರಾಗಿದ್ದಾರೆ. ಅವರು ಜನರಿಗೆ ಕೆಲಸ ಕೊಡಿ ಅಂದರೆ, ಕುಡಿಯಲ್ಲಿಕ್ಕೆ ‌ಬಾರ್‌ʼಗಳನ್ನು ತೆರೆದು ಜನರನ್ನು ಹಾಳು ಮಾಡುತ್ತಿದ್ದಾರೆ ಎಂದು ಶಾಸಕ ಎಸ್.ಎನ್.‌ ಸುಬ್ಬಾರೆಡ್ಡಿ ವಿರುದ್ಧ ನೇರವಾಗಿ ಮಿಥುನ್ ರೆಡ್ಡಿ ಆರೋಪಿಸಿದರು.

ಕೋವಿಡ್ ಸಂದರ್ಭದಲ್ಲಿ ಎಲ್ಲಾ ಬಾರ್‌ʼಗಳನ್ನು ಮುಚ್ಚಲಾಗಿತ್ತು. ಅಂತಹ ಸಂದರ್ಭದಲ್ಲಿಯೂ ಮದ್ಯವನ್ನು ಬ್ಲಾಕ್‍ನಲ್ಲಿ ಮಾರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬರುವ ಅಭ್ಯರ್ಥಿಗಳ ಸಾವಿರ, ಎರಡು ಸಾವಿರ ಹಣ ಕೊಟ್ಟು ಓಟು ಹಾಕಿಸಿಕೊಳ್ಳುತ್ತಾರೆ. ಆದರೆ, ನೀವು ಪಡೆದ ಸಾವಿರ, ಎರಡು ಸಾವಿರ ರೂ. ಹಣ ಒಂದು ರಾತ್ರಿ ಕೂಡ ನಿಮ್ಮ ಬಳಿ ಇರುವುದಿಲ್ಲ. ಹಾಗಾಗಿ ಒಳ್ಳೆಯ ನಾಯಕನನ್ನು ಆಯ್ಕೆ ಮಾಡಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಜನರಲ್ಲಿ ಮನವಿ ಮಾಡಿಕೊಂಡರು.

ಚುನಾವಣೆ ಹತ್ತಿರ ಬರುತಿದ್ದಂತೆ ಯಾರಿಗೆ ಮನೆ, ಸೈಟುಗಳಿಲ್ಲ, ಅವರಿಗೆ ಸರಕಾರದಿಂದ ಬರುವ ಉಚಿತ ನಿವೇಶನಗಳನ್ನು ನೀಡಲು ಶಾಸಕರು ಪಟ್ಟಿ ರೆಡಿ ಮಾಡಿ ಇಟ್ಟುಕೊಂಡಿದ್ದಾರೆ. ನಾನು ಸೈಟು ಕೊಟ್ಟಿದ್ದೇನೆ, ಅದಕ್ಕೆಲ್ಲ ನೀವು ಮರಳಾಗಬೇಡಿ. ರಾಜ್ಯದ ರಾಜಧಾನಿಯಿಂದ ಕೇವಲ 80 ಕಿ.ಮೀ. ದೂರದಲ್ಲಿರುವ ಬಾಗೇಪಲ್ಲಿ ಕ್ಷೇತ್ರ ಭಾರೀ ಹಿಂದುಳಿದಿದೆ. ಜನರಿಗೆ ಕೆಲಸವಿಲ್ಲ, ರೈತರ ಜಮೀನು ಕೈಗಾರಿಕೆಗಾಗಿ ಸ್ವಾಧೀನ ಮಾಡಿಕೊಂಡು ಕಿತ್ತುಕೊಳ್ಳುತ್ತಿದ್ದಾರೆ. ಕ್ಷೇತ್ರದ ಜನರಿಗೆ ಏನೇ ಕಷ್ಟ-ಸುಖಗಳಿರಲಿ, ಜಾತಿ ರಾಜಕಾರಣ ಮಾಡದೇ ಎಲ್ಲರೂ ಒಟ್ಟಾಗಿ ಕೇತ್ರದ ಅಭಿವೃದ್ಧಿಗೆ ಶ್ರಮಿಸೋಣ, ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಕ್ಷೇತ್ರದ ಜನರಿಗೆ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಪಟ್ಟಣದ ಪಂಚಾಯತಿ ಮಾಜಿ ಅಧ್ಯಕ್ಷ ದ್ವಾರಕಾನಾಥ್ ನಾಯ್ಡು, ಅಪ್ಸರ್ ಪಾಷ, ಉಪಾಧ್ಯಕ್ಷ ರಾಜಣ್ಣ, ಜಾಲಾರಿ ಸಪ್ಪಲಮ್ಮ ದೇವಿಯ ಹೂವಿನ ಕರಗದ ಆಯೋಜಕರಾದ ಶ್ರೀನಿವಾಸ್ ಸ್ವಾಮಿ, ರಾಮಾಂಜಿ, ಪ್ರಭಾಕರ್, ಮಿಥುನ್ ರೆಡ್ಡಿ ಅಭಿಮಾನಿಗಳು, ಸಾಕಷ್ಟು ಜನರು ಹಾಜರಿದ್ದರು.

ಗುಡಿಬಂಡೆ ಪಟ್ಟಣದಲ್ಲಿ ಎರಡು-ಮೂರು ವರ್ಷಗಳ ನಂತರ ಕರಗ ಮಹೋತ್ಸವವನ್ನು ಆಯೋಜಿಸಿರುವುದು ಬಹಳ ಸಂತೋಷದ ವಿಷಯ. ಹಿಂದು-ಮುಸ್ಲಿಮರು ಸೇರಿ ಭಾವೈಕ್ಯತೆಯಿಂದ ಕರಗವನ್ನು ಆಚರಣೆ ಮಾಡಿದ್ದು ವಿಶೇಷವಾಗಿತ್ತು. ಇದೇ ರೀತಿ ಮುಂದಿನ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂಬುದು ನನ್ನ ಅಭಿಲಾಶೆಯಾಗಿದೆ.

ಅಪ್ಸರ್ ಪಾಷಾ, ಪಪಂ ಮಾಜಿ ಅಧ್ಯಕ್ಷರು, ಗುಡಿಬಂಡೆ

cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಯಾರ ಹಂಗಿಲ್ಲದ ಪೂರ್ಣ ಸರಕಾರ ನೀಡಿದರೆ ಸಮಗ್ರ ನೀರಾವರಿ

ಯಾರ ಹಂಗಿಲ್ಲದ ಪೂರ್ಣ ಸರಕಾರ ನೀಡಿದರೆ ಸಮಗ್ರ ನೀರಾವರಿ

Leave a Reply Cancel reply

Your email address will not be published. Required fields are marked *

Recommended

ಲಸಿಕೆ: ಗುಜರಾತ್‌ಗೆ ಬೆಣ್ಣೆ! ಕರ್ನಾಟಕಕ್ಕೆ ಸುಣ್ಣ!!

ಕಣ್ಣೀರಿಟ್ಟ‌ ಡಿಕೆಶಿ

3 years ago
ಗುಡಿಬಂಡೆಯಲ್ಲಿ ಶ್ರೀ ತ್ರಿಮತಾಚಾರ್ಯ ಗಾಯತ್ರಿ ಮಂದಿರ 33ನೇ ವರ್ಷದ ವಾರ್ಷಿಕೋತ್ಸವ

ಗುಡಿಬಂಡೆಯಲ್ಲಿ ಶ್ರೀ ತ್ರಿಮತಾಚಾರ್ಯ ಗಾಯತ್ರಿ ಮಂದಿರ 33ನೇ ವರ್ಷದ ವಾರ್ಷಿಕೋತ್ಸವ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ