ರಂಗೇರಿದ ರಾಜ್ಯಸಭೆ ಚುನಾವಣೆ
ಬೆಂಗಳೂರು: ರಾಜ್ಯಸಭೆಯ ನಾಲ್ಕನೇ ಸ್ಥಾನ ಗಳಿಸಲು ಮೂರು ರಾಜಕೀಯ ಪಕ್ಷಗಳು ಉದ್ದಿಮೆದಾರರನ್ನು ಕಣಕ್ಕಿಳಿಸಿವೆ.
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದ್ದು, ಹಾಲಿ ವಿಧಾನಸಭೆಯ ಬಲಾಬಲದ ಆಧಾರದ ಮೇಲೆ ಬಿಜೆಪಿ ಎರಡು, ಕಾಂಗ್ರೆಸ್ ಒಂದು ಸ್ಥಾನಗಳನ್ನು ಮೊದಲ ಪ್ರಾಶಸ್ತ್ಯ ಆಧಾರದ ಮೇಲೆ ಜಯ ಗಳಿಸಲಿವೆ. ಉಳಿದ ಒಂದು ಸ್ಥಾನಕ್ಕೆ ಯಾರ ಬಳಿಯೂ ಮೊದಲ ಪ್ರಾಶಸ್ತ್ರ್ಯ 46 ಮತಗಳಿಲ್ಲ.
ಮೊದಲ ಪ್ರಾಶಸ್ತ್ರ್ಯದ ಮೇಲೆ ಗೆಲ್ಲಬಹುದಾದ ಸ್ಥಾನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಚಿತ್ರನಟ ಜಗ್ಗೇಶ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ರಾಷ್ಟ್ರೀಯ ಕಾಂಗ್ರೆಸ್‌ನ ಚಿಂತಕರ ಚಾವಡಿಯಲ್ಲಿರುವ ರಮೇಶ್ ಜಯರಾಂ ಅವರನ್ನು ಮತ್ತೆ ಕಣಕ್ಕಿಳಿಸಿದ್ದು, ಅವರು ಮೊದಲ ಪ್ರಾಶಸ್ತ್ಯ ಮತಗಳಿಂದ ಎರಡನೇ ಬಾರಿಗೆ ರಾಜ್ಯಸಭೆ ಪ್ರವೇಶಿಸಲಿದ್ದಾರೆ.
ಇನ್ನು ಉಳಿದ ಒಂದು ಸ್ಥಾನಕ್ಕೆ ಬಿಜೆಪಿಯಿಂದ ಲೇಹರ್‌ಸಿಂಗ್, ಜೆಡಿಎಸ್‌ನಿಂದ ಡಿ.ಕುಪೇಂದ್ರ ರೆಡ್ಡಿ ಹಾಗೂ ಕಾಂಗ್ರೆಸ್‌ನಿಂದ ಮನ್ಸೂರ್ ಅಲಿಖಾನ್ ಕಣಕ್ಕಿಳಿದಿದ್ದು, ಇವರೆಲ್ಲರೂ ಉದ್ದಿಮೆದಾರರು.
ನಾಲ್ಕನೇ ಸ್ಥಾನ ಪಡೆಯಲು ಮೂರೂ ಪಕ್ಷಗಳು ನಾಲ್ಕನೇ ಅಭ್ಯರ್ಥಿ ಬಳಿ ಪೂರ್ಣ ಮತಗಳಿಲ್ಲ. ಆದರೆ ಆ ಸ್ಥಾನ ಪಡೆಯಲು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪೈಪೋಟಿಗೆ ಇಳಿದಿವೆ. ಕಾಂಗ್ರೆಸ್ ನೆಪ ಮಾತ್ರಕ್ಕೆ ಕಣದಲ್ಲಿದ್ದು, ಅದರ ಉದ್ದೇಶ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವುದಾಗಿದೆ.
- ಬಿಜೆಪಿ ಎರಡನೇ ಅಭ್ಯರ್ಥಿ ಜಗ್ಗೇಶ್, ಮೂರನೇ ಅಭ್ಯರ್ಥಿ ಲೆಹರ್ ಸಿಂಗ್, ಮೊದಲ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ನಾಮಪತ್ರ.