ದ್ವಿತೀಯ ಪಿಯು ಫಲಿತಾಂಶ: ವಿಜ್ಞಾನದಲ್ಲಿ ಗುಡಿಬಂಡೆಯ ವೈಡೂರ್ಯಗೆ ರಾಜ್ಯದಲ್ಲೇ 5ನೇ ಸ್ಥಾನ
ಶೇ.64.49ರಷ್ಟು ಫಲಿತಾಂಶ; 9 ರಿಂದ 14ನೇ ಸ್ಥಾನಕ್ಕೆ ಕುಸಿತ
ಚಿಕ್ಕಬಳ್ಳಾಪುರ: ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಯಲ್ಲಿ ಶೇ.64.49ರಷ್ಟು ಫಲಿತಾಂಶ ಬಂದಿದೆ. ಜಿಲ್ಲೆಯಲ್ಲಿ ಒಟ್ಟು 13519 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 8718 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ರಾಜ್ಯದ ಜಿಲ್ಲೆಗಳ ಫಲಿತಾಂಶಕ್ಕೆ ಹೋಲಿಸಿದರೆ ಚಿಕ್ಕಬಳ್ಳಾಪುರ ಜಿಲ್ಲೆ 16ನೇ ಸ್ಥಾನದಲ್ಲಿದೆ. 2020ರಲ್ಲಿ ಶೇ.73.74 ರಷ್ಟು ಫಲಿತಾಂಶದೊಂದಿಗೆ 9ನೇ ಸ್ಥಾನದಲ್ಲಿತ್ತು. ಈ ಸಾಲಿನಲ್ಲಿ 16ನೇ ಸ್ಥಾನಕ್ಕೆ ಕುಸಿದಿದೆ.
ನೇಹಾ ರಾಜ್ಯಕ್ಕೆ ಪ್ರಥಮ
ಅಗಲಗುರ್ಕಿ ಬಿಜಿಎಸ್ ಪಿಯ ಕಾಲೇಜಿನ ಬಿ.ಆರ್.ನೇಹಾ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 596 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಎಲ್ಲ ವಿಭಾಗಗಳಿಗೆ ಹೋಲಿಸಿದರೆ ರಾಜ್ಯದಲ್ಲೇ ಮೂರನೇ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ 2286 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 737 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.32.24ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 6301 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 4133 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.65.59ರಷ್ಟು ಫಲಿತಾಂಶ ಬಂದಿದೆ. ಇನ್ನು ವಿಜ್ಞಾನ ವಿಭಾಗದಲ್ಲಿ 4932 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 3848 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.78.02ರಷ್ಟು ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದ ಟಾಪರ್ಸ್
ಅಗಲಗುರ್ಕಿ ಬಿಜಿಎಸ್ ಪಿಯು ಕಾಲೇಜಿನ ಶ್ರೀವತ್ಸ , ನಗರದ ಬೆಸ್ಟ್ ಪಿಯು ಕಾಲೇಜಿನ ನಿರೀಷಾ, ಗೌರಿಬಿದನೂರು ಬಿಜಿಎಸ್ ಪಿಯು ಕಾಲೇಜಿನ ಎನ್.ಲಕ್ಷ್ಮೀ ಲಹರಿ 600 ಅಂಕಕ್ಕೆ 595 ಅಂಕ ಪಡೆದಿದ್ದಾರೆ. ಚಿಂತಾಮಣಿ ವಿಜಯ ಪಿಯು ಕಾಲೇಜಿನ ನಿಧಿ ನಾರಾಯಣ್, ವೆಂಕಟಾದ್ರಿ ಪಿಯು ಕಾಲೇಜಿನ ಸುಹಾ ಜೀನತ್, ಆರ್ ಕೆ ವಿಷನ್ ಪಿಯು ಕಾಲೇಜಿನ ನಿಶಿತಾ, ಗೌರಿಬಿದನೂರಿನ ಬಿಜಿಎಸ್ ಪಿಯು ಕಾಲೇಜಿನ ಎಸ್.ಸ್ನೇಹ, ಅಗಲಗುರ್ಕಿ ಬಿಜಿಎಸ್ ಪಿಯು ಕಾಲೇಜಿನ ವೈಢೂರ್ಯ 600 ಅಂಕಗಳಿಗೆ 594 ಅಂಕ ಪಡೆದಿದ್ದಾರೆ. ಶಿಡ್ಲಘಟ್ಟ ಬಿಜಿಎಸ್ ಪಿಯು ಕಾಲೇಜಿನ ಎ.ಜಿ.ಸ್ಮಿತಾ ಹಾಗೂ ಅಗಲಗುರ್ಕಿ ಬಿಜಿಎಸ್ ಕಾಲೇಜಿನ ಕೃಷ್ಣ 600 ಅಂಕಗಳಿಗೆ 593 ಅಂಕ ಪಡೆದಿದ್ದಾರೆ.
ಕಲಾ ವಿಭಾಗದ ಟಾಪರ್ಸ್
ಶಿಡ್ಲಘಟ್ಟ ತಾಲೂಕಿನ ಸಾದಲಿ ಸರಕಾರಿ ಪಿಯು ಕಾಲೇಜಿನ ಎಸ್.ಎಚ್.ಲಕ್ಷ್ಮೀ 582, ಚಿಕ್ಕಬಳ್ಳಾಪುರದ ಸೆಂಟ್ ಜೋಸೆಫ್ ಗಲ್ರ್ಸ್ ಪಿಯು ಕಾಲೇಜಿನ ಸ್ನೇಹ ತಿವಾರಿ 569, ಚಿಕ್ಕಬಳ್ಳಾಪುರ ಚಿತ್ರ ಪಿನಾಕಿನಿ ಪಿಯು ಕಾಲೇಜಿನ ಭರತ್ ಕುಮಾರ್ 569, ಗೌರಿಬಿದನೂರಿನ ಅಲಿಪುರ ಜೈನಬಿಯಾ ಪಿಯು ಕಾಲೇಜಿನ ಸೈಯದಾ 569 ಹಾಗೂ ಶಿಡ್ಲಘಟ್ಟ ತಾಲೂಕಿನ ವಿವೇಕಾನಂದ ಪಿಯು ಕಾಲೇಜಿನ ಜಿ.ಮೌಲ್ಯ 565 ಅಂಕ ಗಳಿಸಿದ್ದಾರೆ.
ವಾಜ್ಯಜ್ಯ ವಿಭಾಗದ ಟಾಪರ್ಸ್
ಅಗಲಗುರ್ಕಿ ಬಿಜಿಎಸ್ ಪಿಯು ಕಾಲೇಜಿನ ಬಿ.ಆರ್.ನೇಹಾ 596, ಚಿಂತಾಮಣಿಯ ವಿಜಯ ಪಿಯು ಕಾಲೇಜಿನ ಪದ್ಮ ನಯನ 590, ಗೌರಿಬಿದನೂರು ಬಿಜಿಎಸ್ ಪಿಯು ಕಾಲೇಜಿನ ರಫಿಯಾ ಕೌಸರ್ 589 ಹಾಗೂ ಚಿಕ್ಕಬಳ್ಳಾಪುರ ಸೆಂಟ್ ಜೋಸೆಫ್ ಗರ್ಲ್ಸ್ ಪಿಯು ಕಾಲೇಜಿನ ಎಂ.ಚಂದನಾ 589 ಅಂಕ ಗಳಿಸಿದ್ದಾರೆ.
16ನೇ ಸ್ಥಾನಕ್ಕೆ ಕುಸಿತ
ಕಳೆದ ಸಾಲಿನಲ್ಲಿ ಕೊರೊನಾ ಹಿನ್ನೆಲೆ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣ ಎಂದು ಘೋಷಿಸಲಾಗಿತ್ತು. 2020ರಲ್ಲಿ ಶೇ.73.74ರಷ್ಟು ಫಲಿತಾಂಶ ಬಂದಿತ್ತು. ಆದರೆ ಈ ಸಾಲಿನಲ್ಲಿ ಶೇ.64.49ರಷ್ಟು ಫಲಿತಾಂಶ ಬಂದಿದ್ದು 16ನೇ ಸ್ಥಾನಕ್ಕೆ ಕುಸಿದಿದ್ದು ಹಿನ್ನಡೆಯಾಗಿದೆ.
ಕೊರೊನಾ ಹಿನ್ನೆಲೆ ಈ ಬಾರಿ ಆಗಸ್ಟ್‍ನಲ್ಲಿ ಪಿಯು ಕಾಲೇಜು ಆರಂಭವಾಗಿತ್ತು. ಸಾಮಾನ್ಯವಾಗಿ ಜೂನ್ ತಿಂಗಳಿಂದಲೇ ಪಾಠಗಳು ನಡೆಯಬೇಕಿತ್ತು. ಇನ್ನೊಂದೆಡೆ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾದ ಹಿನ್ನೆಲೆ ಜಿಲ್ಲೆಯಲ್ಲಿ ಫಲಿತಾಂಶದಲ್ಲಿ ಹಿನ್ನಡೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ. ರಾಜ್ಯ ಮಟ್ಟದಲ್ಲೂ ಫಲಿತಾಂಶ ಕಡಿಮೆ ಬಂದಿರುವುದರಿಂದ ಜಿಲ್ಲೆಯಲ್ಲೂ ಶೇಖಡವಾರು ಪ್ರಮಾಣ ಕಡಿಮೆಯಾಗಿದೆ.
ರಾಜ್ಯದಲ್ಲೇ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಅಗಲಗುರ್ಕಿ ಬಿಜಿಎಸ್ ಪಿಯು ಕಾಲೇಜಿನ ಬಿ.ಆರ್.ನೇಹಾಗೆ ಆದಿಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ.ಸ್ಮರಣಿಕೆ ನೀಡಿ ಆಶೀರ್ವದಿಸಿದರು.