• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆಯ ದೇವನಹಳ್ಳಿಯಲ್ಲೇ ಹಳ್ಳಹಿಡಿದ ಸ್ವಚ್ಛಭಾರತ!!

cknewsnow desk by cknewsnow desk
June 20, 2022
in STATE
Reading Time: 5 mins read
0
ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆಯ ದೇವನಹಳ್ಳಿಯಲ್ಲೇ ಹಳ್ಳಹಿಡಿದ ಸ್ವಚ್ಛಭಾರತ!!

ದೇವನಹಳ್ಳಿ ಮಿನಿ ವಿಧಾನಸೌಧ

1.1k
VIEWS
FacebookTwitterWhatsuplinkedinEmail

ತಿಪ್ಪೆಯಾದ ದೇವನಹಳ್ಳಿ ಮಿನಿ ವಿಧಾನಸೌಧ; ಹೊರಗೆ ಶ್ವೇತಸೌಧ! ಒಳಗೆ ಕೊಳಕುಸೌಧ!!

by Sidhu Devanahalli

ದೇವನಹಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿಯ ‘ಸ್ವಚ್ಛ ಭಾರತ್’ ಅಭಿಯಾನವು ಕರ್ನಾಟಕದ ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಹಳ್ಳ ಹಿಡಿದು ಹೋಗಿದೆ. ಅದರಲ್ಲೂ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿರುವ ಕಟ್ಟಡಗಳಲ್ಲಿ ಸ್ವಚ್ಛ ಭಾರತಕ್ಕೆ ಎಳ್ಳೂನೀರು ಬಿಡಲಾಗಿದ್ದು, ಕಂದಾಯ ಸಚಿವರ ಕಣ್ಣಿಗೂ ಕಾಣುತ್ತಿಲ್ಲ.

ಹೌದು. ಸ್ವಚ್ಛಭಾರತವು ಹೇಗೆಲ್ಲ ಹಳ್ಳ ಹಿಡಿದಿದೆ ಎನ್ನುವುದನ್ನು ನೋಡಲು ಯಾರಾದರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ತಹಸೀಲ್ದಾರ್‌ ಕಚೇರಿಗೆ (ಮಿನಿ ವಿಧಾನಸೌಧ) ಭೇಟಿ ನೀಡಿದರೆ ಸಾಕು.

ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ಕಚೇರಿಗಳು ಗಬ್ಬೆದ್ದು ನಾರುತ್ತಿವೆ, ತಿಪ್ಪೆಗಳಂಥ ದೃಶ್ಯಗಳು ಸ್ವಾಗತಿಸುತ್ತವೆ. ಅಲ್ಲಿನ ಶೌಚಾಲಯಗಳ ಮುಂದೆ ಮೂಗು ಮುಚ್ಚಿಕೊಂಡು ಓಡಾಡುವಂಥ ದುಃಸ್ಥಿತಿ ನಿರ್ಮಾಣವಾಗಿದೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದೃಶ್ಯಗಳು ಹೇಗಿವೆ ಎಂದರೆ, ಅವುಗಳನ್ನು ನೋಡುವುದು ಕಷ್ಟವಾಗುತ್ತದೆ, ಅವುಗಳ ಬಗ್ಗೆ ಬರೆಯುವುದಕ್ಕೂ ಹೇಸಿಗೆಯಾಗುತ್ತದೆ.

ಆದರೂ, ಅಸ್ವಚ್ಛ ಕರ್ನಾಟಕ ಮುಖ ತೋರಿಸುವ ಅನಿವಾರ್ಯದಿಂದ ಈ ಚಿತ್ರಗಳನ್ನು ಪ್ರಕಟಿಸದೇ ವಿಧಿ ಇಲ್ಲ. ಈ ಚಿತ್ರಗಳನ್ನು ನೋಡಿಯಾದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌, ಕಂದಾಯ ಸಚಿವ ಆರ್.‌ಅಶೋಕ್‌ ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನೆ ಮಾಡಿಕೊಳ್ಳಬೇಕಿದೆ.

ಕೊಳಗೇರಿಯಾದ ಮಿನಿ ವಿಧಾನಸೌಧ

ಕರ್ನಾಟಕವಷ್ಟೇ ಅಲ್ಲ, ಪ್ರತಿಷ್ಠಿತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನತಿ ದೂರದಲ್ಲೇ ಇರುವ ದೇವನಹಳ್ಳಿ ಮಿನಿ ವಿಧಾನಸೌಧವು ಕೊಳಗೇರಿಯಂತೆ ಆಗಿದ್ದು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ದಿವ್ಯನಿರ್ಲಕ್ಷ್ಯಕ್ಕೆ ಸಾಕ್ಷಿಯಂತಿದೆ. ಅವರೆಲ್ಲರೂ ಬದುಕಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ನಮ್ಮ ಪಾಲಿಗೆ ಇವರೆಲ್ಲ ಇಲ್ಲ ಎಂದು ಜನರು ಸಿಟ್ಟಾಗಿದ್ದಾರೆ.

ಹೊರಗೆ ನಿಂತು ನೋಡಿದರೆ ಶ್ವೇತಸೌಧದಂತೆ ಸುಂದರವಾಗಿ ಕಂಗೊಳಿಸುತ್ತಿರುವ ಈ ಕಟ್ಟಡದ ಒಳಹೊಕ್ಕರೆ ಕೊಳಕಿನ ದರ್ಶನವಾಗುತ್ತದೆ. ಇಡೀ ಸೌಧವೇ ತಿಪ್ಪೆಯಂತೆ ಗೋಚರವಾಗುತ್ತದೆ. ಪ್ರತಿದಿನವೂ ಸಾವಿರಾರು ಜನರು ಕುಂದುಕೊರತೆಗಳನ್ನು ಹೊತ್ತು ಬರುತ್ತಿದ್ದು, ಅವರೆಲ್ಲರೂ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಮಹಿಳೆಯರಂತೂ ಓಡಾಡುವುದೇ ದುಸ್ಥರ ಅನ್ನುವ ಕರ್ಮ. ಅಧಿಕಾರಿಗಳು ಆ ಕೊಳಕಿನ ಪಕ್ಕದಲ್ಲೇ ನಿತ್ಯವೂ ಓಡಾಡುತ್ತಿದ್ದರೂ ಆ ಬಗ್ಗೆ ಅವರಿಗೆ ಗಮನವೇ ಇಲ್ಲ.

ಈ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್ ಮುಖ್ಯ ಕಚೇರಿ ಇದೆ. ಸಬ್ ರಿಜಿಸ್ಟ್ರಾರ್‌ ಕಚೇರಿ, ಪಿಂಚಣಿ ಸೇರಿದಂತೆ ಕಂದಾಯ ಇಲಾಖೆಯ ಎಲ್ಲ ಕಚೇರಿಗಳು ಇಲ್ಲಿಯೇ ಇವೆ. ನಿತ್ಯವೂ ಸಾವಿರಾರು ಜನರು ಈ ಕಚೇರಿಗಳಿಗೆ ಕೆಲಸಗಳಿಗಾಗಿ ಭೇಟಿ ನೀಡುತ್ತಾರೆ. ಜನರು ಕೂಡ ಜವಾಬ್ದಾರಿಯನ್ನು ಮರೆತು ಗೋಡೆಗಳಿಗೆ ಗುಟ್ಕಾ, ಎಲೆ ಅಡಿಕೆ ಊಗಿರುವ ದೃಶ್ಯಗಳು ಎಲ್ಲೆಲ್ಲೂ ಕಾಣುತ್ತವೆ. ಪ್ರತಿಯೊಂದು ಮಹಡಿಯಲ್ಲಿ ಕಟ್ಟಡದ ಗೋಡೆಗಳು ಕೊಳಕು ಬಿದ್ದು ಹೋಗಿವೆ. ಅಲ್ಲಿಗೆ ಬರುವವರಲ್ಲಿ ಮುಖ್ಯವಾಗಿ ವೃದ್ಧರು, ವಿಕಲಚೇತನರು, ಮಹಿಳೆಯರೇ ಹೆಚ್ಚು. ಅಲ್ಲಿನ ಶೌಚಾಲಯಗಳು ನಿರ್ವಹಣೆ, ಸ್ವಚ್ಛತೆ ಇಲ್ಲದೆ ಹೊಟ್ಟೆ ತೊಳಿಸುವಂತಿವೆ. ಇದಾವುದರ ಪರಿವೆಯೇ ಇಲ್ಲದ ಜಿಡ್ಡುಗಟ್ಟಿದ ಸ್ಥಿತಿಯಲ್ಲಿ ತಹಸೀಲ್ದಾರ್‌ ಅವರಿದ್ದಾರೆ. ನಿತ್ಯವೂ ಅವರು ಅದೇ ಶೌಚಾಲಯ, ಕೊಳಕು ಗೋಡೆ, ಎಲ್ಲೆಂದರಲ್ಲಿ ರಾಶಿರಾಶಿಯಾಗಿ ಬಿದ್ದಿರುವ ಗಲೀಜಿನ ಎದುರಿನಲ್ಲಿಯೇ ಅವರು ಓಡಾಡುತ್ತಿದ್ದಾರೆಯಾದರೂ ಅವರಿಗೆ ಏನೇನೂ ಅನಿಸುತ್ತಿಲ್ಲವೇ? ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

ತ್ಯಾಜ್ಯ, ಗಲೀಜು, ಕೊಳಕಿನ ತಿಪ್ಪೆಯಾಗಿರುವ ದೇವನಹಳ್ಳಿ ವಿಧಾನಸೌಧ.#cknewsnow #Devanahalli@PMOIndia @CMofKarnataka @RAshokaBJP @mla_sudhakar @Karnataka_DIPR pic.twitter.com/PtMFN0U3qL

— cknewsnow.com (@cknewsnow) June 20, 2022

ದೇವನಹಳ್ಳಿ ಮಿನಿ ವಿಧಾನಸೌಧ ಗೋಡೆಗಳು. ಅಸಹ್ಯ, ಹೇಸಿಗೆಯ ದರ್ಶನ.#cknewsnow #Devanahalli@PMOIndia @CMofKarnataka @RAshokaBJP @mla_sudhakar @Karnataka_DIPR pic.twitter.com/7PPvLQbMP8

— cknewsnow.com (@cknewsnow) June 20, 2022

ದೇವನಹಳ್ಳಿ ಮಿನಿ ವಿಧಾನಸೌಧ. ಕಸ, ಕೊಳಕಿನ ಕೂಪ.#cknewsnow #Devanahalli@PMOIndia @CMofKarnataka @RAshokaBJP @mla_sudhakar @Karnataka_DIPR pic.twitter.com/9GndOuQHtY

— cknewsnow.com (@cknewsnow) June 20, 2022
ಶೌಚಾಲಯ ಬಳಸಿದರೆ ಸೋಂಕು

ದೇವನಹಳ್ಳಿ ಮಿನಿ ವಿಧಾನಸೌಧದಲ್ಲಿ ಶೌಚಾಲಯಗಳ ನಿರ್ವಹಣೆಯನ್ನೇ ಮಾಡುತ್ತಿಲ್ಲ. ಅಲ್ಲಿ ಸ್ವಚ್ಛತೆಯ ಸಿಬ್ಬಂದಿಯೇ ಇಲ್ಲವಾ? ಎನ್ನುವ ಪ್ರಶ್ನೆ ಎದುರಾಗಿದೆ. ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಇತರೆ ಜನಪ್ರತಿನಿಧಿಗಳು ಮಿನಿ ವಿಧಾನಸೌಧದ ಕಡೆ ತಲೆಹಾಕುತ್ತಿಲ್ಲ.

ಪ್ರತಿ ಮಹಡಿಯ ಶೌಚಾಲಯಗಳಿಗೆ ನಿರ್ವಹಣೆಯ ಭಾಗ್ಯವೇ ಇಲ್ಲ. ನಲ್ಲಿಗಳೆಲ್ಲ ಹಾಳಾಗಿ, ಶೌಚಾಲಯಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಹಾಗಿದ್ದರೂ ಜನರು ಇವೇ ಶೌಚಾಲಯಗಳನ್ನು ಸಾರ್ವಜನಿಕರು ಬಳಕೆ ಮಾಡುತ್ತಿದ್ದಾರೆ. ಪರಿಣಾಮವಾಗಿ ಸೋಂಕಿನ ಕಾಯಿಲೆಗಳು ಹರಡುತ್ತಿವೆ.

ದೇವನಹಳ್ಳಿ ಮಿನಿ ವಿಧಾನಸೌಧ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದ ಪರಮಾವಧಿ.#cknewsnow #Devanahalli@PMOIndia @CMofKarnataka @RAshokaBJP @mla_sudhakar @Karnataka_DIPR pic.twitter.com/4LWMcHt8Rj

— cknewsnow.com (@cknewsnow) June 20, 2022

ದೇವನಹಳ್ಳಿ ಮಿನಿ ವಿಧಾನಸೌಧ.#cknewsnow #Devanahalli@PMOIndia @CMofKarnataka @RAshokaBJP @mla_sudhakar @Karnataka_DIPR pic.twitter.com/9PpYKP8ZY3

— cknewsnow.com (@cknewsnow) June 20, 2022

ಯಾರು ಏನಂತಾರೆ?

ದೇವನಹಳ್ಳಿ ಮಿನಿ ವಿಧಾನಸೌಧವನ್ನು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಬಹಳ ಸುಸಜ್ಜಿತವಾಗಿ, ಅತ್ಯುತ್ತಮವಾಗಿ ಕಟ್ಟಿದ್ದಾರೆ. ಆದರೆ, ಅಧಿಕಾರಿಗಳಿಗೆ ಅದನ್ನು ಸರಿಯಾಗಿ ಇಟ್ಟುಕೊಳ್ಳುವ ಯೋಗ್ಯತೆ ಇಲ್ಲ. ಗೋಡೆಗಳ ಮೇಲೆಲ್ಲ ಉರಿದು, ಶೌಚಾಲಾಯಗಳನ್ನು ಸ್ವಚ್ಛ ಮಾಡದೇ ಗಬ್ಬುನಾರುತ್ತಿದೆ. ಪ್ರಧಾನಮಂತ್ರಿಗಳು ನೋಡಿದರೆ ಸ್ವಚ್ಛಭಾರತ ಎಂದು ಹೇಳುತ್ತಾರೆ. ಆದರೆ, ಇಲ್ಲಿ ಇಡೀ ತಾಲೂಕಿನ ಆಡಳಿತ ನೋಡುವವರು, ನಾಲ್ಕು ಜನರಿಗೆ ತಿಳಿ ಹೇಳಬೇಕಾದರ ಕಚೇರಿಯೇ ಇಷ್ಟು ಗಬ್ಬುನಾರುತ್ತಿದೆ. ಇವರ ಮನೆಗಳನ್ನು ಈ ರೀತಿ ಇಟ್ಟುಕೊಳ್ಳುತ್ತಾರಾ? ಈ ಅಧಿಕಾರಿಗಳಿಗೆ ಹಣ ಮಾಡುವುದರ ಮೇಲೆ ಇರುವಷ್ಟು ಗಮನ ಜನರ ಕೆಲಸದ ಬಗ್ಗೆ ಇಲ್ಲ. ಸರಕಾರಿ ಆಸ್ತಿಯನ್ನು ರಕ್ಷಣೆ ಮಾಡುವ ಕೆಲಸವನ್ನೂ ಯಾರು ಮಾಡುತ್ತಿಲ್ಲ. ಇಲ್ಲಿ ತಹಸೀಲ್ದಾರ್‌ ಒಬ್ಬರೇ ಅಲ್ಲ, ಈ ಮಿನಿ ವಿಧಾನಸೌಧದಲ್ಲಿ ಹದಿಮೂರು ಇಲಾಖೆಗಳಿವೆ. ಯಾವೊಬ್ಬ ಅಧಿಕಾರಿಯೂ ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿಲ್ಲ. ಆದ್ದರಿಂದ ಆಮ್‌ ಆದ್ಮಿ ಪಕ್ಷದಿಂದಲೇ ನಾವೇ ಪೊರಕೆ ಹಿಡಿದು ಸ್ವಚ್ಛ ಮಾಡಿ ಇಡೀ ಕಟ್ಟಡವನ್ನು ನಾವೇ ನಿರ್ವಹಣೆ ಮಾಡೋಣ ಎಂದು ನಿರ್ಧಾರ ಮಾಡಿದ್ದೇವೆ. ನಾವೆಲ್ಲ ಜನರೆಲ್ಲ ಸೇರಿ ಒಂದೊಂದು ರೂಪಾಯಿ ಹಾಕಿಕೊಳ್ಳುತ್ತೇವೆ. ಇದೇ ಕೊನೆ ಎಚ್ಚರಿಕೆ.

ಬಿ.ಕೆ.ಶಿವಪ್ಪ, ಆಮ್ ಆದ್ಮಿ ಪಾರ್ಟಿ‌

ಮಿನಿ ವಿಧಾನಸೌಧದಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಹಿರಿಯ ನಾಗರೀಕರು ಲಿಫ್ಟ್‌ ಇಲ್ಲದೆ ಮೂರು ಮಹಡಿಗಳನ್ನು ಹತ್ತಿ ಇಳಿಯಬೇಕು. ವಿಪರೀತ ಗಲೀಜು, ಶೌಚಾಲಯಗಳಲ್ಲಿ ದುರ್ನಾತ.

ಮರಿಯಪ್ಪಾಚಾರಿ, ದೇವನಹಳ್ಳಿ ಟೌನ್

ದೇವನಹಳ್ಳಿ ಮಿನಿ ವಿಧಾನಸೌಧದಲ್ಲಿ ಯಾವುದೇ ನಾಗರೀಕ ಸೌಲಭ್ಯಗಳಿಲ್ಲ. ಮಹಿಳೆಯರ ಶೌಚ ಸೇರಿ ಮತ್ತಿತರೆ ಯಾವುದೇ ಸೌಲಭ್ಯಗಳಿಲ್ಲ. ಒಳಕ್ಕೆ ಹೋದರೆ ವಾಕರಿಕೆ ಬರುತ್ತದೆ. ನೀರಿನ ಸೌಲಭ್ಯವಿಲ್ಲ. ಮಹಡಿಗಳನ್ನು ಹತ್ತಿ ಇಳಿಯುವ ಮೆಟ್ಟಿಲು, ಗೋಡೆಗಳು ವಿಪರೀತ ಎನ್ನುವಷ್ಟು ಗಲೀಜಾಗಿವೆ.

ಸಾಕಮ್ಮ, ಸ್ಥಳೀಯ ಮಹಿಳೆ
ತಲೆ ಹಾಕದ ಉಸ್ತುವಾರಿ ಸಚಿವರು

ಕೋವಿಡ್‌ ನಾಲ್ಕನೇ ಅಲೆ ಶುರುವಾದ ಮೇಲೆ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಜಿಲ್ಲೆಯತ್ತ, ಅದರಲ್ಲೂ ಮುಖ್ಯವಾಗಿ ದೇವನಹಳ್ಳಿಯತ್ತ ತಲೆ ಹಾಕಿಲ್ಲ. ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಜತೆಗಿನ ತಿಕ್ಕಾಟವೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರುತ್ತಿದ್ದಾರೆ. ಬೆಂಗಳೂರು-ಚಿಕ್ಕಬಳ್ಳಾಪುರದ ನಡುವೆ ಸಂಚರಿಸುವ ಸಚಿವರು, ಬೈಪಾಸ್‌ ಮೇಲೆ ಹಾದು ಹೋಗುತ್ತಾರೆಯೇ ವಿನಾ, ದೇವನಹಳ್ಳಿ ಪಟ್ಟಣದೊಳಕ್ಕೆ ಹೆಜ್ಜೆ ಇಡುತ್ತಿಲ್ಲ ಎಂದು ಜನರು ಹೇಳುತ್ತಾರೆ.

Tags: basavaraj bommaiBengalurudevanahallidr k sudhakarkarnatakakempegowda international airportnarendra modiprime ministerswachh bharat
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
40 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ, 40 ತಿಂಗಳಲ್ಲಿ ಪೂರ್ಣಗೊಳಿಸಲು ಚಿಂತನೆ: ನರೇಂದ್ರ ಮೋದಿ

40 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ, 40 ತಿಂಗಳಲ್ಲಿ ಪೂರ್ಣಗೊಳಿಸಲು ಚಿಂತನೆ: ನರೇಂದ್ರ ಮೋದಿ

Leave a Reply Cancel reply

Your email address will not be published. Required fields are marked *

Recommended

ಅರಮನೆಯಲ್ಲಿ ಆರಾಮಾಗಿರುವ ವ್ಯಕ್ತಿ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡಲು ಬೀದಿಗೆ ಬಂದರೆ ಸಂತೋಷ!

ಅರಮನೆಯಲ್ಲಿ ಆರಾಮಾಗಿರುವ ವ್ಯಕ್ತಿ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡಲು ಬೀದಿಗೆ ಬಂದರೆ ಸಂತೋಷ!

2 years ago
ನಾಲ್ಕು ವರ್ಷ ಜೈಲು ಶಿಕ್ಷೆ ಮುಗಿಸಿದ ವಿ.ಕೆ.ಶಶಿಕಲಾ ಬಿಡುಗಡೆ; ಕೋವಿಡ್‌ ನೆಗೆಟೀವ್‌ ವರದಿ ಬರುವ ತನಕ ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಚಿಕಿತ್ಸೆ, 30ರಂದು ನೆಗೆಟೀವ್‌ ಬಂದರೆ ಮನೆಗೆ

ನಾಲ್ಕು ವರ್ಷ ಜೈಲು ಶಿಕ್ಷೆ ಮುಗಿಸಿದ ವಿ.ಕೆ.ಶಶಿಕಲಾ ಬಿಡುಗಡೆ; ಕೋವಿಡ್‌ ನೆಗೆಟೀವ್‌ ವರದಿ ಬರುವ ತನಕ ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಚಿಕಿತ್ಸೆ, 30ರಂದು ನೆಗೆಟೀವ್‌ ಬಂದರೆ ಮನೆಗೆ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ