ಬಿಜೆಪಿ ಮುಖಂಡ ಮುನಿರಾಜುಗೆ ಟಾಂಗ್ ಕೊಟ್ಟ ಕೆಪಿಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷ ನವೀನ್
by GS Bharath Gudibande
ಗುಡಿಬಂಡೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಾಗೇಪಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಹ್ವಾನ ನೀಡಿರುವುದು ಶಾಸಕ ಸುಬ್ಬಾರೆಡ್ಡಿ ಅವರಿಗೆ ಸೋಲಿನ ಭೀತಿಯಿಂದ ಎಂದು ಭಾಷಣ ಬಿಗಿಯುವವರು ಮೂರ್ಖರು ಎಂದು ಕಾಂಗ್ರೆಸ್ ಮುಖಂಡ ಗರುಡಾಚಾರ್ಲಹಳ್ಳಿ ನವೀನ್ ಅವರು ಟಾಂಗ್ ನೀಡಿದ್ದಾರೆ

ಈ ವಿಚಾರವಾಗಿ ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಸಾಮಾಜಿಕ ಜಾಲತಾಣದ ತಾಲೂಕು ಅಧ್ಯಕ್ಷ ನವೀನ್ ಮಾತನಾಡಿದರು. ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಅವರು ದಶಕಗಳಿಂದ ಕ್ಷೇತ್ರದ ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿದ್ದಾರೆ. ಬರದ ನಾಡು ಬಾಗೇಪಲ್ಲಿ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಹೀಗಿರುವಾಗ ಅವರ ಬಗ್ಗೆ ಮಾತನಾಡುವುದು ಮೂರ್ಖತನ ಎಂದು ಟೀಕಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸಹಜ, ಹಾಗೂ ಚುನಾವಣೆಗೆ ಯಾರು, ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು ಎಂಬುದನ್ನು ಅವರು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಸಿದ್ದಾಂತವಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಜನ ಮೆಚ್ವಿದ ನಾಯಕರಾಗಿದ್ದಾರೆ. ಅಂತಹ ಹಿರಿಯ ನಾಯಕರು ಬಾಗೇಪಲ್ಲಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಕ್ಷೇತ್ರ ಹೆಚ್ಚು ಅಭಿವೃದ್ಧಿಯಾಗುತ್ತದೆ ಎಂಬ ಉದ್ದೇಶದಿಂದ ಬಾಗೇಪಲ್ಲಿಯಲ್ಲಿ ಸ್ಪರ್ಧಿಸಲು ಆಹ್ವಾನ ನೀಡಿದ್ದಾರೆ ಶಾಸಕರು. ಅದನ್ನು ಬಿಟ್ಟು ಬೇರೆ ರೀತಿಯ ಟೀಕೆ ಮಾಡುವುದು ಸರಿಯಲ್ಲ. ಇನ್ನಾದರೂ ಅವರು ನಾಲಗೆಯನ್ನು ಹತೋಟಿಯಲ್ಲಿಟ್ಟುಕೊಂಡು ಮಾತನಾಡಬೇಕು ಎಂದು ನವೀನ್ ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಮುಂದೆ ಬೇಳೆ ಬೇಯುವುದಿಲ್ಲ
ಬಾಗೇಪಲ್ಲಿ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿರುವುದು ಕೆಲವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ, ಒಂದು ವೇಳೆ ಅವರು ಬಾಗೇಪಲ್ಲಿಯಲ್ಲಿ ಸ್ಪರ್ಧಿಸಿದರೆ ವಿರೋಧ ಪಕ್ಷದವರ ಬೇಳೆ ಬೇಯುವುದಿಲ್ಲ ಎಂಬುದು ಅವರಿಗೆ ಅರಿವು ಆಗಿರಬೇಕು ಎಂದು ಲೇವಡಿ ಮಾಡಿದ್ದಾರೆ.
ಮೊದಲು ನೀವುಗಳು ಕಿತ್ತಾಡೋದು ಬಿಟ್ಟು ಪ್ರಜೆಗಳ ಸಮಸ್ಯೆ ನೋಡಿ
Jai s n s 🤚🤚🤚🤚🤚🤚