ಮದ್ಯದದೊರೆ ವಿಜಯ್ ಮಲ್ಯ ನೀಡಿದ್ದ ಕಾಣಿಕೆ
ಶಬರಿಮಲೆ: ಕೇರಳದ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಗರ್ಭಗುಡಿಯ ಚಿನ್ನಲೇಪಿತ ಮಾಳಿಗೆ ಸೋರುತ್ತಿದೆ ಎಂದು ವರದಿಯಾಗಿದ್ದು, ಭಕ್ತರಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.
ಪ್ರವೇಶ ದ್ವಾರದ ಎಡಭಾಗದಲ್ಲಿರುವ ಗರ್ಭಗುಡಿಯ ಹೊರಗೋಡೆಯ ಮೂಲಕ ನೀರು ಸೋರುತ್ತಿದೆ ಎಂದು ಗೊತ್ತಾಗಿದ್ದು, ಇದನ್ನು ದುರಸ್ಥಿ ಮಾಡಲು ತಿರುವಾಂಕೂರು ದೇವೋಸ್ವಂ ಮಂಡಳಿ (ಟಿಡಿಬಿ) ಮುಂದಾಗಿದೆ. ತನ್ನದೇ ಖರ್ಚಿನಲ್ಲಿ ಈ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.
ಜುಲೈ 16ರಂದು ನಡೆಲಿರುವ ಮಾಸಿಕ ಪೂಜೆಗಾಗಿ ದೇಗುಲದ ಬಾಗಿಲು ತೆರೆಯಲಾಗಿತ್ತು, ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ವಿಗ್ರಹದ ಮೇಲೆ ನೀರು ಜಿನುಗುತ್ತಿರುವುದು ಕಂಡು ಬಂದಿದೆ. ಅಗಸ್ಟ್ 3ರಂದು ದೇವಾಲಯದ ಮುಖ್ಯ ಅರ್ಚಕ ಶ್ರೀ ರಾಜೀವ ಕಂದರಾರು ಹಾಗೂ ದೇವಳದ ವಾಸ್ತುಶಾಸ್ತ್ರಜ್ಞರ ತಂಡ ಛಾವಣಿಯ ಪರಿಶೀಲನೆ ನಡೆಸಿದೆ. ಬಳಿಕ ದುರಸ್ಥಿ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದು ಮಂಡಳಿ ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಡಳಿ ಅಧ್ಯಕ್ಷ ಕೆ.ಅನಂತಗೋಪನ್ ಅವರು ಹೇಳಿದ್ದಿಷ್ಟು;
”ಗರ್ಭಗುಡಿಯ ಮುಂಭಾಗದ ಎಡ ಮೂಲೆಯಲ್ಲಿ ಸೋರಿಕೆ ಆಗುತ್ತಿರುವುದು ಪತ್ತೆಯಾಗಿದೆ. ಆದಷ್ಟು ಬೇಗ ಅದನ್ನು ಸರಿಪಡಿಸಲಾಗುವುದು. ಈ ಕೆಲಸಕ್ಕೆ ಆಗುವ ಪೂರ್ಣ ವೆಚ್ಚವನ್ನು ಸಂಪೂರ್ಣವಾಗಿ ಮಂಡಳಿಯೇ ಭರಿಸಲಿದೆ. ಈ ದುರಸ್ಥಿ ಕಾಮಗಾರಿ 45 ದಿನಗಳಲ್ಲಿ ಪೂರ್ಣಗೊಳಿಸುತ್ತೇವೆ.”
ಬೆಂಗಳೂರು ಮೂಲದ, ಸದ್ಯಕ್ಕೆ ಬ್ರಿಟನ್ʼನಲ್ಲಿ ಆಶ್ರಯ ಪಡೆದಿರುವ ಮದ್ಯದದೊರೆ ವಿಜಯ್ ಮಲ್ಯ ಅವರು 1998ರಲ್ಲಿ ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ಮೇಲ್ಛಾವಣಿಯನ್ನು ಸ್ವರ್ಣಲೇಪನ ಮಾಡಿಸಿದ್ದರು. ಈ ಕಾರ್ಯಕ್ಕೆ 31 ಕೆಜಿ ಚಿನ್ನ ಮತ್ತು 1,900 ಕೆಜಿ ತಾಮ್ರವನ್ನು ಅವರು ಸ್ವಾಮಿ ಅಯ್ಯಪ್ಪಗೆ ಸಮರ್ಪಣೆ ಮಾಡಿದ್ದರು. ಅವರು ದಾನ ಕೊಟ್ಟಿರುವ ಬಗ್ಗೆ ಪಂಪಾ ನದಿಯಿಂದ ಶಬರಿಮಲೆ ಏರುವ ಆರಂಭ
ಮದ್ಯದ ದೊರೆ ವಿಜಯ್ ಮಲ್ಯ 1998ರಲ್ಲಿ ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ಮೇಲ್ಛಾವಣಿಯ ಚಿನ್ನದ ಲೇಪನ ನೀಡಿದ್ದರು. ಇದಕ್ಕಾಗಿ 31 ಕೆಜಿ ಚಿನ್ನ ಮತ್ತು 1,900 ಕೆಜಿ ತಾಮ್ರ ದಾನವಾಗಿ ನೀಡಿದ್ದರು. ಅವರ ದಾನ ನೀಡಿರುವ ಬಗ್ಗೆ ಪಂಪಾ ನದಿಯಿಂದ ಶಬರಿಮಲೆ ಹತ್ತುವ ಆರಂಭದಲ್ಲಿಯೇ ಮಾಹಿತಿ ಫಲಕ ಹಾಕಲಾಗಿದೆ.