• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಉದ್ಘಾಟನೆಯಾಗದ ಕೋಲಾರದ ಯರಗೋಳ್ ಯೋಜನೆ; ಸರಕಾರದ ವಿಳಂಬ ನೀತಿ ನಾಚಿಕೆಗೇಡು

P K Channakrishna by P K Channakrishna
August 5, 2022
in STATE
Reading Time: 2 mins read
0
ಉದ್ಘಾಟನೆಯಾಗದ ಕೋಲಾರದ ಯರಗೋಳ್ ಯೋಜನೆ; ಸರಕಾರದ ವಿಳಂಬ ನೀತಿ ನಾಚಿಕೆಗೇಡು

ತುಂಬಿ ಹರಿಯುತ್ತಿರುವ ಯರಗೋಳ್‌ ಜಲಾಶಯ.

964
VIEWS
FacebookTwitterWhatsuplinkedinEmail

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿ; ಪಂಚರತ್ನಕ್ಕೆ ಕೋಲಾರ, ಚಿಕ್ಕಬಳ್ಳಾಪುರ ಕೆರೆಗಳ ಸಂರಕ್ಷಣೆ ಯೋಜನೆ ಸೇರ್ಪಡೆ

ಬೆಂಗಳೂರು: ಕೋಲಾರ ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ಶಾಶ್ವತ ಕುಡಿಯುವ ಮೀರಿನ ಸೌಲಭ್ಯ ಕಲ್ಪಿಸುವ ಯರಗೋಳ್ ಜಲಾಶಯ ತುಂಬಿ ಹರಿಯುತ್ತಿದ್ದರೂ, ಇನ್ನೂ ಆ ಯೋಜನೆಯನ್ನು ಉದ್ಘಾಟನೆ ಮಾಡದ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮೃದ್ಧ ಮಳೆಯಿಂದ ಜಲಾಶಯ ಕೋಡಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಅವರು; ಶೀಘ್ರವೇ ಜಲಾಶಯಕ್ಕೆ ಭೇಟಿ ನೀಡಿ ಗಂಗಾಮಾತೆಗೆ ಬಾಗೀನ ಅರ್ಪಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸರಕಾರದ ನಿರ್ಲಕ್ಷ್ಯ ವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಅಣೆಕಟ್ಟೆ ತುಂಬಿ ಹರಿಯುತ್ತಿರುವ ದೃಶ್ಯ ಕಂಡು ನನ್ನ ಮನದುಂಬಿ ಬಂದಿದೆ. ಕುಡಿಯುವ ನೀರಿಲ್ಲದೆ ತತ್ತರಿಸಿದ್ದ ಈ ಭಾಗದ ಜನರಿಗೆ ಪರಿಶುದ್ಧ ನೀರು ಒದಗಿಸಲು 2006ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಯರಗೋಳ್ ಯೋಜನೆಗೆ ಒಪ್ಪಿಗೆ ನೀಡಿದ್ದೆ. ಈ ಅಣೆಕಟ್ಟೆಗೆ ನೀರೆಲ್ಲಿಂದ ಬರುತ್ತದೆ ಎಂದು ಮೂಗು ಮುರಿದಿದ್ದವರು ಈಗೊಮ್ಮೆ ನೋಡಬೇಕು. ಅಲ್ಲಿ ಕಂಗೊಳಿಸುತ್ತಿರುವ ʼಜಲಸಿರಿʼ ನೋಡಲು ಎರಡು ಕಣ್ಣು ಸಾಲದು. ಕೋಲಾರ, ಮಾಲೂರು, ಬಂಗಾರಪೇಟೆ, ಕೆಜಿಎಫ್ ಸೇರಿ 4 ತಾಲೂಕುಗಳಿಗೆ ನೀರೊದಗಿಸುವ ಈ ಯೋಜನೆಯನ್ನು ಸರಕಾರ ಕೂಡಲೇ ಲೋಕಾರ್ಪಣೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಅಣೆಕಟ್ಟೆಗೆ ನೀರೆಲ್ಲಿಂದ ಬರುತ್ತದೆ ಎಂದು ಮೂಗು ಮುರಿದಿದ್ದವರು ಈಗೊಮ್ಮೆ ನೋಡಬೇಕು. ಅಲ್ಲಿ ಕಂಗೊಳಿಸುತ್ತಿರುವ ʼಜಲಸಿರಿʼ ನೋಡಲು ಎರಡು ಕಣ್ಣು ಸಾಲದು. ಕೋಲಾರ,ಮಾಲೂರು,ಬಂಗಾರಪೇಟೆ,ಕೆಜಿಎಫ್ ಸೇರಿ 4 ತಾಲೂಕುಗಳಿಗೆ ನೀರೊದಗಿಸುವ ಈ ಯೋಜನೆಯನ್ನು @BJP4Karnataka ಸರಕಾರ ಕೂಡಲೇ ಲೋಕಾರ್ಪಣೆ ಮಾಡಬೇಕು. 2/10 pic.twitter.com/K6PHBqZtXS

— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) August 4, 2022

ಜೆಡಿಎಸ್‌ ಪಕ್ಷ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗ ಕಳೆದ ಏ.24ರಂದು ನಾನೇ ಯರಗೋಳ್‌ʼಗೆ ತೆರಳಿ ಕಳಸಕ್ಕೆ ನೀರು ತುಂಬಿಕೊಂಡಿದ್ದೆ. ಆ ಕ್ಷಣ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಇಂಥ ಇನ್ನಷ್ಟು ಯೋಜನೆಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತೇವೆ. ಜಲಧಾರೆ ದಿನವೇ ನಾನು ಮುಖ್ಯ ಎಂಜಿನೀಯರ್‌, ಸಂಬಂಧಿತ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಸ್ಥಳದಿಂದಲೇ ಸಂಪರ್ಕಿಸಿ, ತಕ್ಷಣವೇ ಈ ಯೋಜನೆ ಉದ್ಘಾಟಿಸುವಂತೆ ಆಗ್ರಹಿಸಿದ್ದೆ. ಪಂಪ್‌ ಅಳವಡಿಕೆ ಬಾಕಿ ಇದೆ ಎಂದು ಅವರು ಹೇಳಿದ್ದರು. ಗುತ್ತಿಗೆದಾರರಿಗೆ ಹಣ ಬಾಕಿ ಇದೆ ಎಂಬ ಮಾಹಿತಿಯೂ ಇದೆ. ಬಿಜೆಪಿ ಸರಕಾರದ ನಿರ್ಲಕ್ಷ್ಯದ ಪರಾಕಾಷ್ಠೆ ಇದು ಎಂದು ಅವರು ಕಿಡಿಕಾರಿದ್ದಾರೆ.

ಅಂದೇ ನಾನು ಮುಖ್ಯ ಎಂಜಿನೀಯರ್‌, ಸಂಬಂಧಿತ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಸ್ಥಳದಿಂದಲೇ ಸಂಪರ್ಕಿಸಿ,ತಕ್ಷಣವೇ ಈ ಯೋಜನೆ ಉದ್ಘಾಟಿಸುವಂತೆ ಆಗ್ರಹಿಸಿದ್ದೆ. ಪಂಪ್‌ ಅಳವಡಿಕೆ ಬಾಕಿ ಇದೆ ಎಂದು ಅವರು ಹೇಳಿದ್ದರು.ಗುತ್ತಿಗೆದಾರರಿಗೆ ಹಣ ಬಾಕಿ ಇದೆ ಎಂಬ ಮಾಹಿತಿಯೂ ಇದೆ. @BJP4Karnataka ಸರಕಾರದ ನಿರ್ಲಕ್ಷ್ಯದ ಪರಾಕಾಷ್ಠೆಇದು.4/10

— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) August 4, 2022

ನನ್ನ ಸರಕಾರದ ನಂತರ @BJP4Karnataka, @INCKarnataka ಪಕ್ಷಗಳು ತಲಾ 5 ವರ್ಷ ಆಡಳಿತ ನಡೆಸಿದರೂ ಯೋಜನೆ ಪೂರ್ಣವಾಗಲಿಲ್ಲ.‌ 3 ವರ್ಷದಿಂದ @BJP4Karnataka ಸರಕಾರಕ್ಕೆ ಯರಗೋಳ್‌ ಕಡೆ ಚಿತ್ತವೇ ಇಲ್ಲ. ಅಣೆಕಟ್ಟಿಗೆ ಪಂಪು ಜೋಡಿಸುವುದರಲ್ಲೇ ವರ್ಷಗಳನ್ನೇ ನುಂಗುತ್ತಿದೆ. ಬರಪೀಡಿತ ಜಿಲ್ಲೆಗಳೆಂದರೆ ಬಿಜೆಪಿಗೆ ಅಪಥ್ಯ! ಇದು ನಾಚಿಕೆಗೇಡು.6/10

— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) August 4, 2022

2006 ಮಾ.26ರಂದು ಬಾಗೇಪಲ್ಲಿಯ ಚಿತ್ರಾವತಿ ಅಣೆಕಟ್ಟೆ ಲೋಕಾರ್ಪಣೆ ಮಾಡಿದ ವೇಳೆ ಮಾಧ್ಯಮ ಮಿತ್ರರೊಬ್ಬರು ಯರಗೋಳ್‌ ಬಗ್ಗೆ ಕೇಳಿದ್ದ ಪ್ರಶ್ನೆ ನನ್ನ ಮನಸ್ಸಿಗೆ ನಾಟಿತು. ನಾನು ತಡ ಮಾಡದೇ ಅಧಿಕಾರಿಗಳ ಜತೆ ಚರ್ಚಿಸಿ ಯರಗೋಳ್‌ ಯೋಜನೆಗೆ ಒಪ್ಪಿಗೆ ಕೊಟ್ಟು ಬಜೆಟ್‌ʼನಲ್ಲೇ 50 ಕೋಟಿ ರೂ. ಅನುದಾನ ಮೀಸಲಿಟ್ಟೆ. ನನ್ನ ಸರಕಾರದ ನಂತರ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳು ತಲಾ 5 ವರ್ಷ ಆಡಳಿತ ನಡೆಸಿದರೂ ಯೋಜನೆ ಪೂರ್ಣವಾಗಲಿಲ್ಲ.‌ 3 ವರ್ಷದಿಂದ ಬಿಜೆಪಿ ಸರಕಾರಕ್ಕೆ ಯರಗೋಳ್‌ ಕಡೆ ಚಿತ್ತವೇ ಇಲ್ಲ. ಅಣೆಕಟ್ಟಿಗೆ ಪಂಪು ಜೋಡಿಸುವುದರಲ್ಲೇ ವರ್ಷಗಳನ್ನೇ ನುಂಗುತ್ತಿದೆ. ಬರಪೀಡಿತ ಜಿಲ್ಲೆಗಳೆಂದರೆ ಬಿಜೆಪಿಗೆ ಅಪಥ್ಯ! ಇದು ನಾಚಿಕೆಗೇಡು ಅಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆರೆ ರಾಜ್ಯಗಳ ಜತೆ ನೀರಿಗಾಗಿ ಗುದ್ದಾಡುವ ಸರಕಾರಕ್ಕೆ ಮಳೆ ನೀರಿನ ಕನಿಷ್ಠ ಪ್ರಜ್ಞೆಯೇ ಇಲ್ಲ. ಬದಲಿಗೆ ಬೆಂಗಳೂರಿನ ವಿಷತ್ಯಾಜ್ಯ ನೀರನ್ನು ಅರೆಬರೆ ಸಂಸ್ಕರಿಸಿ ಹರಿಸುತ್ತಿದೆ. ಈ ಜಿಲ್ಲೆಗಳನ್ನು ಭವಿಷ್ಯದಲ್ಲಿ ರಾಜ್ಯದ ಅತಿದೊಡ್ಡ ʼಆನಾರೋಗ್ಯ ಕೂಪʼವನ್ನಾಗಿ ಮಾಡಲೊರಟಿದೆ. ಈ ಜಿಲ್ಲೆಯ ʼಸ್ವಯಂಘೋಷಿತ ಭಗೀರಥʼರ ಹುನ್ನಾರವೂ ಇದೇ! ಕೆಲ ವರ್ಷದಿಂದ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಸಮೃದ್ಧ ಮಳೆ ಆಗುತ್ತಿದೆ. ಕೆರೆಗಳಲ್ಲಿ ಮಳೆನೀರು ನಿಲ್ಲದೆ, ಪಕ್ಕದ ಆಂಧ್ರ, ತಮಿಳುನಾಡು ಪಾಲಾಗುತ್ತಿದೆ. ಗುತ್ತಿಗೆದಾರರ ಜೇಬು ತುಂಬಿಸಲು ರಾಷ್ಟ್ರೀಯ ಪಕ್ಷಗಳ ಜನವಿರೋಧಿ ಸರಕಾರಗಳು ಕೆಸಿ ವ್ಯಾಲಿ, ಹೆಚ್ ಎನ್ ವ್ಯಾಲಿಯಂಥ ಕೆಟ್ಟ ಯೋಜನೆಗಳನ್ನು ರೂಪಿಸಿ ಹಣ ಲೂಟಿ ಹೊಡೆಯುತ್ತಿವೆ ಎಂದು ಅವರು ದೂರಿದ್ದಾರೆ.

ಕೆರೆಕಟ್ಟೆ,ಕಾಲುವೆ,ಗೋಕುಂಟೆಗಳಂಥ ಸಾಂಪ್ರದಾಯಿಕ ಜಲಮೂಲಗಳನ್ನು ನಾಶಗೊಳಿಸಿ ಕಾಗದದ ಮೇಲಷ್ಟೇ ಬಣ್ಣಬಣ್ಣವಾಗಿ ಕಾಣುವ, ದುಡ್ಡು ಹೊಡೆಯುವ ಯೋಜನೆಗಳು ಇನ್ನಾದರೂ ನಿಲ್ಲಲಿ. ಈ ಜಿಲ್ಲೆಗಳನ್ನು ʼಶಾಶ್ವತ ಮರುಭುಮಿʼ ಮಾಡುವುದು ಬೇಡ. ಮಳೆ ನೀರನ್ನು ಸದ್ಬಳಕೆ ಮಾಡಿಕೊಂಡರೆ ಬರಪೀಡಿತ ಜಿಲ್ಲೆಗಳ ಬವಣೆ ನೀಗುತ್ತದೆ. ಶೀಘ್ರದಲ್ಲೇ ನಾನು ಯರಗೋಳ್‌ ಅಣೆಕಟ್ಟೆಗೆ ಭೇಟಿ ನೀಡುತ್ತೇನೆ. ಗಂಗಾ ಮಾತೆಗೆ ಪೂಜೆ ಸಲ್ಲಿಸಿ ಬಾಗೀನ ಸಮರ್ಪಿಸುತ್ತೇನೆ. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮಳೆನೀರು ಉಳಿಸಿ,ಕರೆಕಟ್ಟೆ ಅಭಿವೃದ್ಧಿಪಡಿಸಿ ಜನತೆಗೆ ಪರಿಶುದ್ಧ ನೀರು ಕೊಡುವುವುದು ನನ್ನ ವಾಗ್ದಾನ. ಪಂಚರತ್ನ ಕಾರ್ಯಕ್ರಮದಲ್ಲಿ ಇದನ್ನು ಸೇರ್ಪಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Tags: bangarpetdrinking waterkarnatakakgfkolaryargolyargol dam
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಗುಡಿಬಂಡೆ ಇಂದಿರಾ ಕ್ಯಾಂಟೀನ್‌ ಪರಿಶೀಲಿಸಿದ ಪ.ಪಂ. ಉಪಾಧ್ಯಕ್ಷ

ಗುಡಿಬಂಡೆ ಇಂದಿರಾ ಕ್ಯಾಂಟೀನ್‌ ಪರಿಶೀಲಿಸಿದ ಪ.ಪಂ. ಉಪಾಧ್ಯಕ್ಷ

Leave a Reply Cancel reply

Your email address will not be published. Required fields are marked *

Recommended

ಬಾಗೇಪಲ್ಲಿ ರೈತರ ಮೇಲಿನ ಗೋಲಿಬಾರ್‌ಗೆ 41 ವರ್ಷ; ಹುತಾತ್ಮರಿಗೆ ಅಶ್ರುತರ್ಪಣ

ಬಾಗೇಪಲ್ಲಿ ರೈತರ ಮೇಲಿನ ಗೋಲಿಬಾರ್‌ಗೆ 41 ವರ್ಷ; ಹುತಾತ್ಮರಿಗೆ ಅಶ್ರುತರ್ಪಣ

5 years ago
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ; 800 ಕೋಟಿ ಲೂಟಿ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ; 800 ಕೋಟಿ ಲೂಟಿ

4 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ