• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ರಾಯರ ನೆನೆಯೋಣ, ಗುರು ರಾಯರ ನೆನೆಯೋಣ

cknewsnow desk by cknewsnow desk
August 12, 2022
in GUEST COLUMN, STATE
Reading Time: 2 mins read
0
ರಾಯರ ನೆನೆಯೋಣ, ಗುರು ರಾಯರ ನೆನೆಯೋಣ
998
VIEWS
FacebookTwitterWhatsuplinkedinEmail

ಶ್ರೀ ಶ್ರೀ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ

by Dr Guruprasad Hawldar

ಕಲಿಯುಗದ ಕಾಮಧೇನು, ಕಲಿಯುಗದ ಕಲ್ಪತರು ಎಂದು ಭಕ್ತಸಮೂಹದಿಂದ ಕರೆಸಿಕೊಳ್ಳುವ ಮಂತ್ರಾಲಯದ ಗುರುವರ್ಯರು ಶ್ರೀ ಶ್ರೀ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ಎರಡು ಶತಮಾನಗಳಿಂದ ಭಕ್ತರ ದೃಷ್ಟಿ ಪಥಕ್ಕೆ ಅಗೋಚರವಾಗಿ ಬೃಂದಾವನದಲ್ಲಿ ನೆಲೆಸಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಧರ್ಮಾತೀತವಾಗಿ ಭವ ಭಯವನ್ನು ನೀಗಿಸುತ್ತಿದ್ದಾರೆ.

ಧಾರ್ಮಿಕ ಆಚರಣೆ, ನಂಬಿಕೆ, ಶ್ರದ್ಧೆ, ಭಕ್ತಿ, ಪವಾಡಗಳನ್ನು ಅಚಲವಾಗಿ ನಂಬುವ ಅಥವಾ ನಂಬದೇ ಇರುವ ವಾಡಿಕೆ ಬಹು ಹಿಂದಿನಿಂದಲೂ ಅನೂಚಾನವಾಗಿ ನಡೆದು ಬಂದಿದೆ. ಕೆಲವರು ವೈಚಾರಿಕತೆಯ ನಿಲುವನ್ನು ಹೊಂದಿದ ನಾಸ್ತಿಕರು ಹಾಗೂ ಕೆಲವರು ಧಾರ್ಮಿಕತೆಯ ತಾತ್ತ್ವಿಕ ಸಿದ್ಧಾಂತವನ್ನು ನಂಬುವ ಆಸ್ತಿಕರೂ ಇದ್ದಾರೆ. ಇವರಲ್ಲಿ ಯಾರಿಗೆ ಯಾವುದರಿಂದ ಸಂತೃಪ್ತಿ ಸಿಗುತ್ತೋ ಆ ಮಾರ್ಗವನ್ನು ಅನುಸರಿಸುತ್ತಾರೆ.

ತಮ್ಮೂಲಕ ಜನರ ಮನೋಗತದಲ್ಲಿ ಸಂಚಲನ ಮೂಡಿಸುತ್ತಾ ಬದುಕಿನ ಮೌಲ್ಯಗಳನ್ನು ಬಿತ್ತುತ್ತಾರೆ. ಮನುಷ್ಯನ ಮಾನಸಿಕತೆ ದಿನದಿಂದ ದಿನಕ್ಕೆ ದೌರ್ಬಲ್ಯವನ್ನು ಹೊಂದುತ್ತಿದೆ. ಅನೇಕ ಸಮಸ್ಯೆಗಳನ್ನು ಹೊತ್ತು ಜೀವನವನ್ನು ನಡೆಸುತ್ತಾನೆ. ಆ ಸಮಸ್ಯೆಯ ಹೊರೆಯನ್ನು ಇಳಿಸಿಕೊಳ್ಳಲು ದೇವರ, ಗುರುಗಳ ಸಾನ್ನಿಧ್ಯಕ್ಕೆ ಶರಣಾಗುತ್ತಾನೆ. ಅಂತಹವರ ಬದುಕಿಗೆ ಆಶಾಕಿರಣವಾಗಿ ಬದುಕಿನಲ್ಲಿ ದಿವ್ಯತೆಯ ಪ್ರಕಾಶವನ್ನು ಬೆಳಗಿಸಿ ಚಕಿತವನ್ನು ಮಾಡುತ್ತಿರುವವರೇ ಶ್ರೀ ಗುರುರಾಘವೇಂದ್ರರು.

ಅಂತಹ ರಾಯರು ಮಾಡಿದ ಪವಾಡಗಳು ಒಂದಲ್ಲ ಎರೆಡಲ್ಲ, ನೂರಾರು ನಿದರ್ಶನ ಸಿಗುತ್ತವೆ. ಅದರಲ್ಲೂ ವಿಶೇಷವಾಗಿ ಮಾಡಿದ ಪವಾಡವನ್ನು ಹೇಳ ಬಯಸುತ್ತೇನೆ.

ದನ ಕಾಯುವವನು ದಿವಾನನಾದ ಕಥೆ

1662ರಲ್ಲಿ ಬಿಜಾಪುರವನ್ನು ಆದಿಲ್ ಶಾ ಆಳುತ್ತಿದ್ದ ಸಂದರ್ಭದಲ್ಲಿ ಆತನ ನವಾಬನಾದ ಸಿದ್ಧಿ ಮಸೂದ ಎಂಬ ಕಂದಾಯ ಸಂಗ್ರಹಿಸುವುದಕ್ಕೆ ರಾಯಚೂರು ಸಮೀಪದ ಕಂಡಾಹಾರ ಗ್ರಾಮಕ್ಕೆ ಹೋಗಿದ್ದ, ಆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಇಬ್ಬರೂ ಕುದುರೆ ಸವಾರರು ಇವನ ಬಳಿ ಧಾವಿಸಿ ಬಂದು ಒಂದು ಖಾಸಗಿ ಪತ್ರವನ್ನು ನೀಡಿದರು. ಆದರೆ ಮಸೂದ್ ಖಾನ್ʼಗೆ ಕನ್ನಡ ಓದುವುದಕ್ಕೆ ಬರುತ್ತಿರಲಿಲ್ಲ. ಸಮೀಪದಲ್ಲಿದ್ದ ವೆಂಕಣ್ಣನನ್ನು ಕರೆದು ಓದುವಂತೆ ಹೇಳಿದ್ದ. ವೆಂಕಣ್ಣ ಅನಕ್ಷರಸ್ಥ. ನನಗೆ ಓದುವುದು ಸಾಧ್ಯವಿಲ್ಲ ಎಂದು ಹೇಳಿದ. ಕೋಪಗೊಂಡ ಆದಿಲ್ ಶಾ ಓದದೇ ಇದ್ದರೆ ಶಿಕ್ಷೆಯನ್ನು ಕೊಡುತ್ತೇನೆ ಎಂದ. ಇದಕ್ಕೆ ಹೆದರಿದ ವೆಂಕಣ್ಣನು ಶ್ರೀ ರಾಘವೇಂದ್ರ, ಶ್ರೀ ರಾಘವೇಂದ್ರ ಎಂದು ರಾಯರನ್ನು ಸ್ಮರಿಸಿದ. ರಾಯರ ಕೃಪೆಯಿಂದ ಪತ್ರವನ್ನು ವೆಂಕಣ್ಣ ಸರಾಗವಾಗಿ ಓದಿ ಮುಗಿಸಿದ.

ಆ ನಂತರ ಉತ್ತಮ ವಿದ್ವಾಂಸ ಎಂದು ಹೆಸರು ಪಡೆದ ವೆಂಕಣ್ಣ ಮುಂದೆ ದಿವಾನರಾಗಿ ಹೆಸರು ಪಡೆಯುತ್ತಾನೆ. ಈ ಹಿಂದೆ ದನಕಾಯುವ ವೆಂಕಣ್ಣನ ಜೀವನದಲ್ಲಿ ಒಂದು ಘಟನೆ ಕಾರಣ ಅದು ರಾಯರ ದರ್ಶನದಿಂದ ಮುಂದೆ ದಿವಾನರಾಗುತ್ತಾರೆ. ಒಮ್ಮೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭೇಟಿ ಮಾಡುವ ಅವಕಾಶ ವೆಂಕಣ್ಣನಿಗೆ ಸಿಕ್ಕಿರುತ್ತದೆ. ವೆಂಕಣ್ಣ ರಾಯರ ಮುಂದೆ ತನ್ನ ಬಡತನ ಮತ್ತು ಓದು-ಬರಹ ಗೊತ್ತಿಲ್ಲದ ಬಗ್ಗೆ ಅಳಲನ್ನು ತೋಡಿಕೊಂಡಿದ್ದ, ಬೇಡಿಕೊಂಡಿದ್ದರು ವೆಂಕಣ್ಣನಿಗೆ ಮಂತ್ರಾಕ್ಷತೆಯನ್ನು ನೀಡಿ ನಿನಗೆ ಕಷ್ಟ ಬಂದಾಗ ನನ್ನನ್ನು ಸ್ಮರಿಸು ಎಂದು ಹೇಳಿರುತ್ತಾರೆ. ದನಕಾಯುವ ವೆಂಕಣ್ಣ ಪತ್ರವನ್ನು ಓದುವ ಮುಂಚೆ ರಾಘವೇಂದ್ರ ಸ್ವಾಮಿಗಳನ್ನು ಸ್ಮರಿಸಿದ್ದು, ನವಾಬನ ಮೆಚ್ಚುಗೆ ಪಾತ್ರವಾಗಿ ದಿವಾನಾದ.

ತನ್ನ ಜೀವನ ಪರ್ಯಂತ ದಿವಾನನಾದ ವೆಂಕಣ್ಣನು ಶ್ರೀ ಗುರುರಾಯರ ಆಗದ ಸೇವೆಯನ್ನು ಮಾಡುತ್ತಾನೆ. ಈಗ ಮಂತ್ರಾಲಯವಾಗಿರುವ ಸ್ಥಳ ಹಿಂದೆ ಬರಡು ಭೂಮಿಯಾಗಿರುತ್ತದೆ. ಅಂತಹ ಬರಡು ಭೂಮಿಗೆ ಪ್ರೀತಿಯ ಸ್ಥಳವಾಗಿರುತ್ತದೆ. ಈ ಸ್ಥಳವನ್ನು ಉಡುಗೊರೆಯಾಗಿ ಕೊಡಿಸಿದ್ದ ಇದಿಷ್ಟೇ ಅಲ್ಲದೆ, ವೆಂಕಣ್ಣ ಜೀವನದುದ್ದಕ್ಕೂ, ರಾಯರ ಸೇವೆ ಮಾಡುತ್ತಾ ಅವರ ಆತ್ಮೀಯ ಶಿಷ್ಯನಾಗಿದ್ದ.

ದಿವಾನರಾಗಿದ್ದ ವೆಂಕಣ್ಣ ಒಮ್ಮೆ ಅಸತ್ ಉಲ್ಲಾಖಾನ್ ಎನ್ನುವ ನವಾಬನಿಗೆ ಮಹಾಮಹಿಮರು ರಾಯರು ಬರುತ್ತಿದ್ದಾರೆ, ಅವರನ್ನು ಭೇಟಿ ಮಾಡಿ ಎಂದು ಹೇಳುತ್ತಾನೆ. ನವಾಬನಿಗೆ ಯಾವ ಗುರುಗಳ ಬಗ್ಗೆಯೂ ನಂಬಿಕೆ ಇರುವುದಿಲ್ಲ. ಈ ಕಾರಣಕ್ಕಾಗಿಯೇ ಗುರುಗಳ ಪರೀಕ್ಷೆ ಮಾಡುವುದಕ್ಕಾಗಿ ಮುಂದಾಗುತ್ತಾನೆ. ಅಲ್ಲೇ ಇದ್ದ ಸೇವೆಗೆ ಒಂದು ತಟ್ಟೆ ತುಂಬಾ ಮಾಂಸವನ್ನು ತಂದು ಮುಂದಿಡುವಂತೆ ಹೇಳುತ್ತಾನೆ. ನವಾಬನು ಶ್ರೀ ರಾಘವೇಂದ್ರ ಸ್ವಾಮಿಗಳ ಬಳಿ ಬಂದು ನಮಸ್ಕರಿಸುತ್ತಾನೆ. ತಾನು ತಂದಿದ್ದ ಪ್ರೀತಿಯ ಕಾಣಿಕೆಯನ್ನು ಸ್ವೀಕರಿಸಬೇಕು ಎಂದು ಹೇಳುತ್ತಾನೆ. ಮಾಂಸವಿರುವ ದೊಡ್ಡ ಹರಿವಾಣವನ್ನು ಗುರುರಾಯರಿಗೆ ಅರ್ಪಿಸುತ್ತಾನೆ. ಗುರುಗಳು ನಸುನಗುತ್ತ ತನ್ನ ಮಂತ್ರಶಕ್ತಿಯಿಂದ ಮಾಂಸವನ್ನು ಹಣ್ಣುಗಳನ್ನಾಗಿ ಪರಿವರ್ತನೆ ಮಾಡುತ್ತಾರೆ. ಈ ಪವಾಡವನ್ನು ಮಾಡಿದ ನಂತರ ನವಾಬನು ಗುರುಗಳಿಗೆ ಶರಣಾಗುತ್ತಾನೆ. ಇದು ರಾಯರ ಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ.

ರಾಯರಲ್ಲಿದ್ದು ದಯೆ, ಶಾಂತಿ, ಔದಾರ್ಯ, ವಿದ್ವತ್ತು, ಜ್ಞಾನ, ವಿಜ್ಞಾನ, ಗಾಂಭೀರ್ಯತೆಯ ನುಡಿ, ಸರ್ವೋತ್ಕೃಷ್ಟವಾದ ಪ್ರೇಮ ಜನರನ್ನು ಮಂತ್ರ ಮಗ್ನರನ್ನಾಗಿಸುವ ಶಕ್ತಿ ಸದಾ ರಾರಾಜಿಸುತ್ತದೆ. ಅವರು ಕೇವಲ ಪವಾಡಗಳನ್ನು ಮಾಡಲಿಲ್ಲ ಮಾನವೀಯ ಮೌಲ್ಯಗಳ ಸಾತ್ವಿಕ, ತಾತ್ತ್ವಿಕ ಸಿದ್ಧಾಂತದೊಂದಿಗೆ ಜನಮಾಸದಲ್ಲಿ ರಾರಾಜಿಸುವ ಹಾಗೆ ಮಾಡಿದರು. ಪ್ರತಿಯೊಬ್ಬ ವ್ಯಕ್ತಿಯ ಹೃನ್ಮನಗಳಲ್ಲಿ ಪರಂಜ್ಯೋತಿ ಪ್ರಕಾಶಮಾನರಾಗಿ ರಾಯರು ದೀಪ್ಯಮಾನರಾಗಿದ್ದಾರೆ.

ಪ್ರತಿವರ್ಷ ಜಗತ್ತಿನಾದ್ಯಂತ ಶ್ರೀ ರಾಘವೇಂದ್ರ ಸ್ವಾಮಿಗಳ ಪುಣ್ಯಾರಾಧನೆ ನಡೆಯುತ್ತದೆ. ಶ್ರೀ ರಾಘವೇಂದ್ರ ಸ್ವಾಮಿಗಳು ಸಜೀವ ಬೃಂದಾವನಸ್ಥರಾಗಿ ಇಂದಿಗೆ 351 ವರ್ಷಗಳು ಸಂದಿವೆ. ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನವಿರುವುದು ತುಂಗಭದ್ರಾ ನದಿಯ ತಟದ ಪುಣ್ಯ ಪರಿಸರದ ಮಂತ್ರಾಲಯದಲ್ಲಿ. ಗುರುಗಳ ಪುಣ್ಯಾರಾಧನೆಯ ಮಹೋತ್ಸವ ಮಂತ್ರಾಲಯದಲ್ಲಿ ನಡೆಯುವ ಬಹುದೊಡ್ಡ ವಾರ್ಷಿಕ ಮಹೋತ್ಸವ.

ಧರ್ಮ, ಸಮುದಾಯಗಳ ಭೇದಭಾವ ಇಲ್ಲದೆ ದೇಶ ವಿದೇಶಗಳಿಂದ ರಾಯರ ಭಕ್ತರು ಆರಾಧನಾ ಮಹೋತ್ಸವಕ್ಕೆ ಆಗಮಿಸಿ ಗುರುವಿನ ಕೃಪೆಗೆ ಪಾತ್ರರಾಗುತ್ತಾರೆ .


ಡಾ.ಗುರುಪ್ರಸಾದ ಹವಲ್ದಾರ್

ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.‌

Tags: cknewsnowguest columnmantralayasri raghavendra swamysri raghavendra swamy 351th apadana
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
RSS ಟ್ವೀಟರ್ ಪ್ರೊಫೈಲ್’ನಲ್ಲೂ ತಿರಂಗಾ

RSS ಟ್ವೀಟರ್ ಪ್ರೊಫೈಲ್'ನಲ್ಲೂ ತಿರಂಗಾ

Leave a Reply Cancel reply

Your email address will not be published. Required fields are marked *

Recommended

ಮುಜರಾಯಿ ಇಲಾಖೆ ಅರ್ಚಕರು, ದೇವಾಲಯ ನೌಕರರಿಗೆ ದಸರಾ ಬಂಪರ್

ಮುಜರಾಯಿ ಇಲಾಖೆ ಅರ್ಚಕರು, ದೇವಾಲಯ ನೌಕರರಿಗೆ ದಸರಾ ಬಂಪರ್

5 years ago
ನಮ್ಮ ದೇಶದಲ್ಲೇ ತಯಾರಾದ ಕೊರೊನಾ ಲಸಿಕೆ ಕುರಿತು ಅಗೌರವ ಬೇಡ; ಭಾರತ್ ಬಯೋಟೆಕ್ ನಂಬಿಕೆಗೆ ಅರ್ಹವಾದ ಕಂಪನಿ ಎಂದ ಡಾ.ಕೆ.ಸುಧಾಕರ್

ಕೋಲಾರದ ಮಾಲೂರಿನಲ್ಲಿ 100 ಎಕರೆ ಜಾಗದಲ್ಲಿ ಕೊವ್ಯಾಕ್ಸಿನ್ ಲಸಿಕೆ ತಯಾರಿಕಾ ಘಟಕ I ದೃಢಪಡಿಸಿದ ಡಿಸಿಎಂ I ಐದು ಪಟ್ಟು ಹೆಚ್ಚು ಲಸಿಕೆ ತಯಾರಿಕೆ, ರಾಜ್ಯದಲ್ಲಿ ನೀಗುತ್ತಾ ವ್ಯಾಕ್ಸಿನ್‌ ಕೊರತೆ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ