ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ
ಮೈಸೂರು: ವನವಾಸಿ, ಬುಡಕಟ್ಟು ಜನರ ಅಭಿವೃದ್ದಿಗೆ ಎಲ್ಲಾ ಕಾರ್ಪೊರೇಟ್ ಕಂಪನಿಗಳು ಮುತ್ತೂಟ್ ಸಂಸ್ಥೆಯಂತೆ ಪ್ರೋತ್ಸಾಹ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರು ಹೇಳಿದರು.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತೂಟ್ ಸಂಸ್ಥೆಯು ಬೆಳಕು ಫೌಂಡೇಶನ್ ನ ಸಹಯೋಗದಲ್ಲಿ ಆಯೋಜಿಸಿದ್ದ ಬಡಜನರಿಗೆ ಸೋಲಾರ್ ಆಧಾರಿತ ಹೋಮ್ ಲೈಟಿಂಗ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರದೊಂದಿಗೆ ಎಲ್ಲಾ ಖಾಸಗಿ ಸಂಸ್ಥೆಗಳು ಸಾಮಾಜದ ಆರೋಗ್ಯ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ದಿಗೆ ಸಹಕರಿಸದರೆ ಮಾತ್ರ ಸರ್ವತೋಮುಖ ಅಭಿವೃದ್ದಿ ಸಾದ್ಯವಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ವಿದ್ಯುತ್ ಸಮಸ್ಯೆ ಅತೀ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಸೋಲಾರ್ ಕಿಟ್ ಗಳ ಮೂಲಕ ಮುತ್ತೂಟ್ ಸಂಸ್ಥೆ ಬೆಳೆಕಿ ಗ್ರಾಮೀಣ ಪ್ರದೇಶದಲ್ಲಿ ಬಡ ಜನರ ಮನೆಗಳಲ್ಲಿ ಬೆಳಕು ತುಂಬುವುದರ ಮೂಲಕ ಮಕ್ಕಳ ವಿದ್ಯಾಭ್ಯಾಕ್ಕೆ ಅನುಕೂಲ ಮಾಡಿಕೊಡುತ್ತಿರುವುದು ಶ್ಲಾಘನೀಯ ಎಂದರು.
ಮುತ್ತೂಟ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಸುಬ್ರಹ್ಮಣ್ಯ ಪಿ.ಜೋಶಿ ಮಾತನಾಡಿ, ಮುತ್ತೂಟ್ ಸಂಸ್ಥೆ ಅನೇಕ ಸಮಾಜಿಕ ಕಾರ್ಯಗಳನ್ನು ಮಾಡುವುದರ ಮೂಲಕ ಬಡ ಜನರಿಗೆ ನೆರವಾಗುತ್ತಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಶಾಲಾ ಕೊಠಡಿಗಳ ನಿರ್ಮಾಣ, ಬೀದಿ ಬದಿಯ ಕಡು ಬಡವರ ಜೀವನೋಪಾಯಕ್ಕಾಗಿ ತಳ್ಳುವ ಬಂಡಿ, ತಕ್ಕಡಿ ವಿತರಣೆ, ನಿತ್ಯ ಉಚಿತ ಆರೋಗ್ಯ ತಪಾಸಣೆ, ಆರೋಗ್ಯ ಪರೀಕ್ಷೆಗಳು, ಕೊವಿಡ್ ಸಮಯದಲ್ಲಿ ಉಚಿತ ಮಾಸ್ಕ್ ಸೇರಿದಂತೆ ಕಿಟ್ ವಿತರಣೆ,ಕೊವಿಡ್ ವೈದ್ಯರಿಗೆ ಸನ್ಮಾನ ಕಾರ್ಯಕ್ರಮಗಳು ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಪಂಚವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿ 50ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಸೊಲಾರ್ ಆಧಾರಿತ ಹೋಮ್ ಲೈಟಿಂಗ್ ಕಿಟ್ ಗಳನ್ನು ವಿತರಿಸಲಾಯಿತು.
ಈ ವೇಳೆ ಪಂಚವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ.ಎಚ್.ಗೋವಿಂದರಾಜು, ಪಂಚಾಯತ್ ಅಭಿವೃದ್ದಿ ಅಧಿಕಾರಿ, ಎಂ.ಎಸ್.ವೀರಭದ್ರಶೆಟ್ಟಿ, ಬೆಳಕು ಪೌಂಡೇಶನ್ ಸಂಸ್ಥಾಪಕಿ ಎಸ್. ಪ್ರತಿಮಾದೇವಿ,ಮುತ್ತೂಟ್ ನ ಸಿಎಸ್ ಆರ್ ವ್ಯವಸ್ಥಾಪಕ ಜಿ.ಆರ್.ಮಹೇಶ್, ದಿ ಮುತ್ತೂಟ್ ಗ್ರೂಪ್ ಆರ್.ಒ ನ ಪ್ರಾದೇಶಿಕ ವ್ಯವಸ್ಥಾಪಕ ಬುತ್ರ ನಾಗೇಂದ್ರ ಸೇರಿದಂತೆ ಹಲವರು ಇದ್ದರು.