ಕನ್ನಡದಲ್ಲಿ ಪುನೀತ್ ಅವರ ಜತೆ ನಟಿಸಿದ್ದ ಬಹುಭಾಷಾ ಹಿರೋಯಿನ್
ಚೆನ್ನೈ: ಪವರ್ ಸ್ಟಾರ್ ಪುನೀತ್ ರಾಜ್ʼಕುಮಾರ್ ಅವರ ʼಪವರ್ʼ ಚಿತ್ರದಲ್ಲಿ ನಟಿಸಿದ್ದ ಬಹಭಾಷಾ ನಟಿ ತ್ರಿಷಾ ಕೃಷ್ಣನ್ ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ ಎಂದು ಚೆನ್ನೈ ಮೂಲಗಳು ವರದಿ ಮಾಡಿವೆ.
ಈಗಷ್ಟೇ ಮಣಿರತ್ನಂ ನಿರ್ದೇಶನದ ʼಪೊನ್ನಿಯನ್ ಸೆಲ್ವನ್ʼದಂತಹ ಮಹತ್ವಾಕಾಂಕ್ಷಿ ಚಿತ್ರದಲ್ಲಿ ನಟಿಸಿರುವ ತ್ರಿಷಾ, ರಾಜಕೀಯಕ್ಕೆ ಪ್ರವೇಶ ಮಾಡಲು ಬಹಳ ದಿನದಿಂದ ಹೋಮ್ ವರ್ಕ್ ಮಾಡಿದ್ದಾರೆಂಬ ಮಾಹಿತಿ ಇದೆ.
ಕೆಲ ದಿನಗಳ ಹಿಂದೆ ಅಷ್ಟೇನೂ ಅವಕಾಶಗಳು ಇಲ್ಲದಿದ್ದ ತ್ರಿಷಾ ಅವರಿಗೆ ಈಗ ವಿಪರೀತ ಎನ್ನುವಷ್ಟು ಆಫರ್ʼಗಳು ಬರುತ್ತಿವೆ. ರಾಜಕೀಯ ಪ್ರವೇಶಕ್ಕೆ ಇದಕ್ಕಿಂತ ಉತ್ತಮ ಸಮಯ ಇರಲಾರದು ಎಂದು ಅವರು ನಂಬಿದಂತಿದೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.
ತ್ರಿಷಾ ಅವರು ಕಾಂಗ್ರೆಸ್ ಪಕ್ಷ ಸೇರುವುದು ಖಚಿತ ಎನ್ನಲಾಗಿದ್ದು, ಈ ಬಗ್ಗೆ ತಮಿಳುನಾಡು ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದಾರೆ. ಸದ್ಯಕ್ಕೆ ಪ್ರಬಲವಾಗಿರುವ ಬಿಜೆಪಿ ಅಥವಾ ತಮಿಳು ಆಸ್ಮಿತೆಯುಳ್ಳ ಡಿಎಂಕೆ, ಅಣ್ಣಾ ಡಿಎಂಕೆ ಪಕ್ಷಗಳನ್ನು ಹೊರತುಪಡಿಸಿ ಅವರು ಕಾಂಗ್ರೆಸ್ ಪಕ್ಷವನ್ನೇ ಏಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.