ಆಡಿಯೋ ತಂದ ಆಪತ್ತು
ಬೆಳಗಾವಿ: ಬಸವ ತತ್ವ ಪ್ರತಿಪಾದಕ ಹಾಗೂ ಅನುಯಾಯಿ ನೇಗಿನಹಾಳ ಶ್ರೀ ಗುರು ಮಡಿವಾಳೇಶ್ವರ ಮಠದ ಬಸವ ಸಿದ್ದಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾನುವಾರ ತಡ ರಾತ್ರಿ ಮಠದಲ್ಲಿರುವ ತಮ್ಮ ಕೊಠಡಿಯಲ್ಲಿ ಸ್ವಾಮೀಜಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುರುಘಾ ಶ್ರೀಗಳ ಪ್ರಕರಣದ ಹಿನ್ನಲೆಯಲ್ಲಿ ಇಬ್ಬರು ಮಹಿಳೆಯರು ಸ್ವಾಮೀಜಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಆ ಆಡಿಯೋದಲ್ಲಿ ಬಸವ ಸಿದ್ದಲಿಂಗ ಸ್ವಾಮೀಜಿ ಹೆಸರು ಕೇಳಿಬಂದಿದೆ.
ಸ್ವಾಮೀಜಿಗಳು ಲಫಂಗರು, ಹೆಣ್ಣು ಮಕ್ಕಳೊಂದಿಗೆ ಅನೈತಿಕ ಸಂಪರ್ಕ ಹೊಂದಿದ್ದಾರೆ ಎಂದು ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು. ಆಡಿಯೋದಲ್ಲಿ ತಮ್ಮ ಹೆಸರು ಪ್ರಸ್ತಾಪ ಅಗಿದ್ದರಿಂದ ಮನನೊಂದು ಬಸವ ಸಿದ್ದಲಿಂಗ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಭಾನುವಾರ ತಡ ರಾತ್ರಿವರಗೆ ಭಕ್ತರೊಂದೊಗೆ ಸಮಾಲೋಚನೆ ನಡೆಸಿ, ನೀವೆಲ್ಲರೂ ನಮ್ಮನ್ನು ಸಂಶಯದಿಂದ ನೋಡುವಂತಾಗಿದೆ ಎಂದು ನೊಂದು ನುಡಿದರೆಂದು ಕೆಲ ಭಕ್ತರು ತಿಳಿಸಿದ್ದಾರೆ.
ಈ ಘಟನೆಯಿಂದ ಜೀವಂತ ಇರಬಾರದು ಎಂದೆನಿಸಿದೆ ಎಂದೂ ಸ್ವಾಮೀಜಿ ಅಳಲು ತೋಡಿಕೊಂಡಿದ್ದರಂತೆ. ಸಿಪಿಐ ಉಳವಪ್ಪ ಸಾತೆನಹಳ್ಳಿ, ಡಿಎಸ್ಪಿ ಕಟಗಿ ಮಠಕ್ಕೆ ಬಂದು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪರಿಶೀಲನೆ ವೇಳೆ ಸ್ವಾಮೀಜಿ ಬರೆದಿರುವ ಡೆತ್ ನೋಟ್ ಪತ್ತೆಯಾಗಿದೆ.