• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಪ್ರೊ.ಬಿ.ಗಂಗಾಧರ ಮೂರ್ತಿ: ವೈಚಾರಿಕ ಚಿಂತನೆಯ ಪ್ರಖರ ಬೆಳಕು

cknewsnow desk by cknewsnow desk
September 11, 2022
in EDITORS'S PICKS, GUEST COLUMN
Reading Time: 2 mins read
0
ಪ್ರೊ.ಬಿ.ಗಂಗಾಧರ ಮೂರ್ತಿ: ವೈಚಾರಿಕ ಚಿಂತನೆಯ ಪ್ರಖರ ಬೆಳಕು
1k
VIEWS
FacebookTwitterWhatsuplinkedinEmail

ಬಹುಮುಖ ಸಾಧನೆಯ ಗುರುವಿಗೆ ನುಡಿನಮನ

Obituary

ಪ್ರೊ.ಬಿ.ಗಣಗಾಧರ ಮೂರ್ತಿ ಅವರು ಅವಿಭಜಿತ ಕೋಲಾರ ಜಿಲ್ಲೆಯ ವೈಚಾರಿಕತೆಯ ಸಾಕ್ಷಿಪ್ರಜ್ಞೆ ಎಂದು ನಿರ್ವಿವಾದವಾಗಿ ಹೇಳಬಹುದು. ಬೋಧಕರಾಗಿ, ಚಿಂತಕರಾಗಿ, ಲೇಖಕರಾಗಿ ಅವರು ಅವರು ಹಚ್ಚಿದ ಅರಿವಿನ ಹಣತೆ ಗಡಿನಾಡಿನಲ್ಲಿ ದೊಡ್ಡ ಪ್ರಭಾವ ಬೀರಿದೆ.

by Subramanyam H.R Bagepalli

ಕನ್ನಡ ನಾಡಿನ ದಲಿತಬಹುಜನ ಮತ್ತು ವೈಚಾರಿಕ ಚಿತಂಕರಾಗಿದ್ದ ಪ್ರೊ.ಬಿ.ಗಂಗಾಧರ ಮೂರ್ತಿ ಅವರು ಬೆಂಗಳೂರು ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಿಧನರಾದ ಸುದ್ದಿ ಅವರ ಶಿಷ್ಯವೃಂದ ಮತ್ತು ಅನುಯಾಯಿಗಳಲ್ಲಿ ತೀವ್ರ ದುಃಖ ಉಂಟುಮಾಡಿದೆ.

ʼಪ್ರೊ.ಬಿ.ಜಿ.ಎಂʼ ಎಂದೇ ಪ್ರಖ್ಯಾತಿ ಪಡೆದಿದ್ದ ಅವರು ಕಳೆದ ನಾಲ್ಕು ದಶಕಗಳಿಂದ ದಲಿತ-ಬಹುಜನ ಚಳುವಳಿ, ರೈತ ಚಳುವಳಿ, ಜನವಿಜ್ಞಾನ ಚಳುವಳಿ, ಪ್ರಗತಿಪರ ಮತ್ತು ವಿಚಾರವಾದಿ ಚಳುವಳಿಗಳಲ್ಲಿ ಸಕ್ರಿಯರಾಗಿದ್ದರು. ಜೊತೆಗೆ ಸಾಂಸ್ಕೃತಿಕ ಚಿಂತಕರಾಗಿ, ಬರಹಗಾರರಾಗಿ, ಅನುವಾದರಾಗಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಭಾರತ ಜ್ಞಾನವಿಜ್ಞಾನ ಸಮಿತಿಯ ʼಟೀಚರ್‌ʼ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಒಂದು ದಶಕಕ್ಕೂ ಮಿಗಿಲಾಗಿ ಕಾರ್ಯನಿರ್ವಹಿಸಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದಲ್ಲಿ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವಾಗ ಇವರ ಗುರುಗಳಾದ ಡಾ.ಯು.ಆರ್.‌ಅನಂತಮೂರ್ತಿ ಅವರಿಂದ ಪ್ರಭಾವಿತರಾಗಿ ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ಬೆಂಗಳೂರಿನ ನ್ಯಾಷನಲ್‌ ಎಜುಕೇಷನ್‌ ಸೊಸೈಟಿಯ ಗೌರಿಬಿದನೂರಿನ ನ್ಯಾಷನಲ್‌ ಕಾಲೇಜಿನಲ್ಲಿ ಆಂಗ್ಲ ಪ್ರಾಧ್ಯಾಪಕರಾಗಿ ಸುಮಾರು ೩೦ ವರ್ಷಗಳ ಕಾಲ ಬೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.

ಆಂಗ್ಲ ಮತ್ತು ಕನ್ನಡ ಸಾಹಿತ್ಯವನ್ನು ಚೆನ್ನಾಗಿ ಬಲ್ಲವರಾಗಿದ್ದು ಸಾಹಿತ್ಯವನ್ನು ಜನಪರ ದೃಷ್ಟಿಯಲ್ಲಿ ಅರ್ಥೈಸುವ ಮತ್ತು ವಿಮರ್ಶಿಸುವ ವಿಚಾರವಂತಿಕೆಯನ್ನು ಪ್ರೊ.ಬಿಜಿಎಂ ಬೆಳೆಸಿಕೊಂಡಿದ್ದರು. ಯುವಕರಾಗಿದ್ದಾಗಲೇ ಕಾಲೇಜಿನಲ್ಲಿ ಬೋಧನೆಯೊಂದಿಗೆ ಬರವಣಿಗೆ, ಚಳವಳಿ ಮತ್ತು ವೈಚಾರಿಕತೆಯನ್ನು ಮೈಗೂಡಿಸಿಕೊಂಡು ಇವರ ಬಹುಕಾಲದ ಈ ಭಾಗದ ಮತ್ತೊಬ್ಬ ಚಳುವಳಿಯ ಒಡನಾಡಿ ಕೆ.ನಾರಾಯಣಸ್ವಾಮಿ ಅವರೊಟ್ಟಿಗೆ ಅವಿಭಜಿತ ಕೋಲಾರದ ಭಾಗದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಕಟ್ಟುವ ಮಹತ್ಕಾರ್ಯವನ್ನು ಮಾಡಿದ್ದಾರೆ. ನಾಗಸಂದ್ರ ಭೂ ಹೋರಾಟದಲ್ಲಿ ಮುಂಚೂಣಿಯ ನಾಯಕರಾಗಿ ಕೆಲಸ ಮಾಡಿ ಭೂರಹಿತ ದಲಿತ ಬಹುಜನರಿಗೆ ಭೂಮಿ ಮತ್ತು ನಿವೇಶನ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬರದ ನಾಡು ಮತ್ತು ಮೂಲ ಸೌರ್ಕರ್ಯಗಳಿಂದ ವಂಚಿತವಾಗಿದ್ದ ಪ್ರದೇಶದ ಕಾಲೇಜಿನ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿಶ್ವಾಸ ತುಂಬಿ ಜೀವನ ಕಟ್ಟಿಕೊಳ್ಳುವಲ್ಲಿ ನೆರವಾಗಿದ್ದಾರೆ. ಇದಕ್ಕೆ ಇಂದು ಈ ಭಾಗದ ತುಂಬೆಲ್ಲಾ ಕಂಬನಿ ಮಿಡಿಯುವ ಹೃದಯಗಳೇ ಸಾಕ್ಷಿ.

ತಲೆಯಲ್ಲಿ ಕಾರ್ಲ್ ಮಾರ್ಕ್ಸ್‌, ಹೃದಯದಲ್ಲಿ ಅಂಬೇಡ್ಕರ್‌ ಮತ್ತು ನಡೆಯಲ್ಲಿ ಮಹಾತ್ಮಾ ಗಾಂಧಿಯನ್ನು ಅನುಸರಿಸುತ್ತಿದ್ದ ಬಹುಜನರ ಪ್ರೀತೀಯ ಮೇಷ್ಟ್ರು, ಜೀವನ ಮತ್ತು ಬದುಕಿನ ತುಂಬೆಲ್ಲ ಸರಳತೆಯನ್ನೇ ಮೈವೇತ್ತಂತೆ ಇದ್ದರು. ಎಲ್ಲಿಯೂ ಗೋಜು-ಗೊಂದಲಕ್ಕೆ ಅವಕಾಶವನ್ನೇ ಕೊಟ್ಟವರಲ್ಲ. ಎಲ್ಲವೂ ಬಿಳಿಯಾಳೆಯಷ್ಟು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ನೇರ ಮತ್ತು ನಿಷ್ಠುರದ ವ್ಯಕ್ತಿತ್ವವಾದರೂ ಮಗುವಿನಂತಹ ಮನಸ್ಸು ಅವರದ್ದು. ಮುಖದಲ್ಲಿ ಗಂಭೀರತೆಯಿದ್ದರೂ, ಅಗತ್ಯಕ್ಕೆ ತಕ್ಕಷ್ಟು ಮಾತಾದರೂ, ಆಗಾಗ್ಗೆ ತಿಳಿಹಾಸ್ಯ ಅವರ ವ್ಯಕ್ತಿತ್ವಕ್ಕೆ ಭೂಷಣವಾಗಿತ್ತು. ಕಿರಿಯ ಮಗ ಗುಜರಾತಿ ಮೂಲದ ಅನ್ಯಧರ್ಮದ ಹೆಣ್ಣುಮಗಳನ್ನು  ಮದುವೆಯಾಗಲು ಇಚ್ಚಿಸಿದಾಗ ಅವರು ಮನದುಂಬಿ ಹರಸಿದ್ದರು.

ಮೂಲತಃಹ ಹಾಸನ ಜಿಲ್ಲೆಯವರಾದರೂ ಸಹ ಬದುಕಿಗೊಂದು ಕಾಯಕ ಕಲ್ಪಿಸಿದ ಗೌರಿಬಿದನೂರಿನಲ್ಲೇ ಕೊನೆಯವರೆಗೂ ದಣಿವರಿಯದೆ ದುಡಿದರು. ಭಾರತ ಸ್ವಾತಂತ್ರ್ಯ ಚಳುವಳಿಯ ಇತಿಹಾಸದಲ್ಲಿ ಸ್ಥಳೀಯರ ಪಾತ್ರ ಮತ್ತು ಅದನ್ನು ಮುಂದಿನ ತಲೆಮಾರಿಗೂ ದಾಟಿಸುವ ಅವರ ರಾಜಕೀಯ ಪ್ರಜ್ಞೆ ಅದ್ವಿತೀಯವಾದದ್ದು. ಇದಕ್ಕೆ ಸಂಬಂಧಿಸಿದ ಅವರ ಮಹತ್ವಪೂರ್ಣ ಕೆಲಸವೆಂದರೆ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯ ಸ್ಮಾರಕವನ್ನು ರೂಪಿಸಿದ್ದು. ೧೯೩೮ರ ಧ್ವಜ ಸತ್ಯಾಗ್ರಹದ ಹತ್ಯಾಕಾಂಡದ ನಂತರ ಕರ್ನಾಟಕದ ಜಲಿಯನ್‌ ವಾಲಾಬಾಗ್‌ ಎಂದು ಕರೆಯಲ್ಪಡುವ ವಿದುರಾಶ್ವತ್ಥದಲ್ಲಿ ಸ್ವಾತಂತ್ತ್ಯ ಸ್ಮಾರಕ ಸಂಕೀರ್ಣವನ್ನು ಅಪಾರ ಶ್ರಮ ಹಾಗೂ ಬದ್ದತೆಯಿಂದ ವಿಶಿಷ್ಟವಾಗಿ ರೂಪಿಸಿ, ವಿನ್ಯಾಸಗೊಳಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಚಿತ್ರಪಟ ಗ್ಯಾಲರಿ ಮತ್ತು ಥೀಮ್‌ ಗ್ರಂಥಾಲಯ ರೂಪಿಸಿದ್ದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಹಲವು ಆಯಾಮಗಳನ್ನು ಅನಾವರಣಗೊಳಿಸುವ ಆ ಸ್ಮಾರಕ ದೇಶದಲ್ಲೇ ಅಪರೂಪದ ಸ್ಮಾರಕವಾಗಿ ಖ್ಯಾತಿ ಪಡೆದಿದೆ.

ಸತ್ಯಶೋಧನೆಯಲ್ಲಿ ಬಹುವಾಗಿ ನಂಬಿಕೆಯಿರಿಸಿದ್ದರಿಂದ, ಸತ್ಯಾಸತ್ಯತೆಯನ್ನು ಸಮಾಜಕ್ಕೆ ತಿಳಿಸಲು ದೇಶದ ಪ್ರಖ್ಯಾತ ಚಿಂತಕರಾದ ಜಿ.ಎನ್‌.ದೇವಿ, ನಗರಿ ಬಾಬಯ್ಯ, ಪ್ರೊ.ಶ್ರೀಧರ್‌, ಡಾ.ಜಿ.ರಾಮಕೃಷ್ಣ, ಗುಂಡಣ್ಣ, ಪ್ರೊ.ನಗರಗೆರೆ ರಮೇಶ್‌, ವೇಣುಗೋಪಾಲ್‌ ಮತ್ತು ದು.ಸರಸ್ವತಿ ಅವರನ್ನು ಕರೆಸಿ ಚರ್ಚಾಕೂಟಗಳನ್ನು ಏರ್ಪಡಿದ್ದರು ಪ್ರೊ.ಗಂಗಾಧರ ಮೂರ್ತಿ ಅವರು.

ಅಪ್ಪಟ ನಾಸ್ತಿಕರಾದರೂ ಬುದ್ದ, ಬಸವ, ಗಾಂಧಿ ಹಾಗೂ ಅಂಬೇಡ್ಕಋ ಅವರನ್ನು ತಾವು ಮಾಡುವ ಕೆಲಸದಲ್ಲಿ ಕಾಣುತ್ತಿದ್ದರು ಪ್ರೊ.ಬಿಜಿಎಂ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಸಾಮಾಜಿಕ ನ್ಯಾಯವನ್ನು ತನ್ನ ಜೀವನದುದ್ದಕ್ಕೂ ಪ್ರತಿಪಾದಿಸುತ್ತಿದ್ದದ್ದರು. ಸಾಮಾಜಿಕ ಸಮಾನತೆಗಾಗಿ ದುಡಿಯುವ ಮತ್ತು ಮಿಡಿಯುವ ಜನತೆಗಾಗಿ ಸ್ಥಳೀಯ ಶಾಸಕರ ನೆರವಿನಿಂದ ಪಟ್ಟಣದ ಹೊಸ ತಹಶೀಲ್ದಾರ್‌ ಕಚೇರಿ ಪಕ್ಕದಲ್ಲಿ ಅಂಬೇಡ್ಕರ್‌ ನೆನಪಿನಲ್ಲಿ ʼಸಮಾನತಾ ಸೌಧʼವನ್ನು ರೂಪಿಸುವಲ್ಲಿ ಶ್ರಮಿಸಿದ್ದಾರೆ. ಇದರಲ್ಲಿ ಒಂದು ಭಾಗದಲ್ಲಿ ಅಂಬೇಡ್ಕರ್‌  ಜೀವನ ಮತ್ತು ಮುಖ್ಯ ಘಟನೆಗಳನ್ನು ಬಿಂಬಿಸುವ ಗ್ಯಾಲರಿಗಳನ್ನು ಅನಾವರಣ ಮಾಡಲಾಗಿದೆ. ಮತ್ತೊಂದು ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳ ತರಬೇತಿ ಮತ್ತು ಅಧ್ಯಯನಕ್ಕೆ ಸಜ್ಜುಗೊಳಿಸಲಾಗಿದೆ.

ಕೆಳವಗಿನ ಸುದ್ದಿ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ..
ಪ್ರೊ.ಬಿ.ಗಂಗಾಧರಮೂರ್ತಿ ಇನ್ನಿಲ್ಲ

ಇದರ ಜತೆಗೆ ಪಟ್ಟಣದಲ್ಲಿ ಓದುವ ಅಭಿರುಚಿ ಇರುವ ಯುವಜನ, ವಿದ್ಯಾರ್ಥಿ ಮತ್ತು ಶಿಕ್ಷಕ, ಶಿಕ್ಷಕಿಯರನ್ನೊಳಗೊಂಡ ಗುಂಪುಗಳನ್ನು ಮಾಡಿ ಆಯ್ದ ಲೇಖಕರಿಂದ ರಚಿತವಾದ ಪುಸ್ತಕಗಳನ್ನು ಹಂಚಿ, ಓದಿ, ಚರ್ಚಿಸುವಂತೆ ಮಾಡುತ್ತಿದ್ದರು. ನಮ್ಮಂತಹ ಸಂವಿಧಾನ ಪ್ರೇಮಿ ಯುವಜನರ ʼಜನಪದವಾಗಲಿ ಸಂವಿಧಾನʼ ಎಂಬ ತಂಡಕ್ಕೆಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿದ್ದರು. ನನ್ನಂತಹ ಎಷ್ಟೋ ಮಂದಿಗೆ ಮಾರ್ಗದರ್ಶಕರಾಗಿ ಹೋರಾಟದ ಹಾದಿಯನ್ನೂ ತೋರಿಸಿದ್ದಾರೆ. ನನ್ನನ್ನು ಬರವಣಿಗೆಗೆ ಹಚ್ಚಿದವರು ಇವರೇ. ಇತ್ತೀಚೆಗೆ ಬಿಡುಗಡೆಯಾದ ನನ್ನ ಅನುವಾದ ಕೃತಿಯನ್ನು ಬಹಳ ಆಸ್ಥೆಯಿಂದ ಅವರೇ, ಪ್ರಕಟಿಸಿ, ನ್ಯಾಷನಲ್‌ ಕಾಲೇಜು ಬಾಗೇಪಲ್ಲಿಯಲ್ಲಿ  ರಂಗಕರ್ಮಿ ಪ್ರಸನ್ನರಿಂದ ಬಿಡುಗಡೆಗೊಳಿಸಿದ್ದರು.

ಲೇಖಕರಾಗಿಯೂ ಗಂಗಾಧರಮೂರ್ತಿ ಅವರು ಮಹತ್ದ ಕೆಲಸವನ್ನು ಮಾಡಿದ್ದಾರೆ. ಅವುಗಳೆಂದರೆ, ಹೂ ಹರಳುವಂಥ ಮಣ್ಣು (ಕವನ), ಸಂಸ್ಕಾರ ಸಮೀಕ್ಷೆ (ಸಂ:ವಿಮರ್ಶಾ ಲೇಖನಗಳು), ಬಾರತೀಯ ಸಾಹಿತ್ಯ ವರ್ಗನೆಲೆ (ಸಹ ಸಂ: ವಿಮರ್ಶಾ ಲೇಖನಗಳು), ನಾಗಸಂದ್ರ ಭೂ ಅಕ್ರಮಣ ಚಳುವಳಿ, ಮಕ್ಕಳಿಗಾಗಿ ಸೂಫಿ ಕಥೆಗಳು, ಭಾರತ ಸ್ವಾತಂತ್ರ್ಯ ಚಳುವಳಿಯ ಪ್ರಧಾನೇತರ ಹೋರಾಟಗಳು, ದ ಪಾಲಿಟಿಕ್ಸ್‌ ಆಫ್‌ ಬ್ಯಾನಿಂಗ್‌ ಭೀಫ್‌, ಕರ್ನಾಟಕದ ಜಲಿಯನ್‌ ವಾಲಾಬಾಗ್-ವಿಧುರಾಶ್ವತ್ಥ,(ಸ್ಮಿತಾರೆಡ್ಡಿ ಅವರೊಂದಿಗೆ), ಪದ್ಮಭೂಷಣ ಡಾ.ಎಚ್.‌ನರಸಿಂಹಯ್ಯನವರು (ಸಂಕ್ಷಿಪ್ತ ಜೀವನ ಚಿತ್ರಣ), ಭಾರತದ ಭೌದ್ದಿಕ ದಾರಿದ್ರ್ಯ (ಅನುವಾದ), ಭಾರತೀಯ ಸಂಸ್ಕೃತಿಯ ಜಾತಿ ಲಕ್ಷಣ (ಅನುವಾದ), ಅಂಬೇಡ್ಕರ್‌ ಮತ್ತು ಮುಸ್ಲೀಮರು (ಅನುವಾದ), ವಸಾಹತುಪೂರ್ವ ಕಾಲದ ಜಾತಿ ಹೋರಾಟಗಳು (ಅನುವಾದ), ಹಿಂದುತ್ವ ಮತ್ತು ದಲಿತರು (ಅನುವಾದ) ಕೋಮುವಾದಿ ಕಾರ್ಯಚರಣೆ ಮತ್ತು ದಲಿತ ಪ್ರತಿಸ್ಪಂದನೆ (ಅನುವಾದ), ಗೀತೆ ಒಳಗಿನ ಸತ್ಯ ಏನು? (ಅನುವಾದ), ಭಾರತೀಯ ಭಾಷಾ ಸಾಹಿತ್ಯಗಳ ವರ್ಗಸೆಲೆ (ಸಂಪಾದನೆ) ಕತ್ತೆ ಪುರಾಣ, ಅಂಬೇಡ್ಕರ್‌ ಅನುಭವದ ಆರು ಕಥನಗಳು. ದೇಶ ವಿಭಜನೆಯ ವಾಸ್ತವ ಸತ್ಯಗಳು (ಅನುವಾದ), ಲಕ್ಷ್ಮೀಪುರಾಣ (ಅನುವಾದ), ಮತ್ತು ಭಾರತದ ಪ್ರಜೆಗಳಾದ ನಾವು (ಅನುವಾದ).

೨೦೧೩ರಲ್ಲಿ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ ಮತ್ತು ೨೦೧೭ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳಿಂದ ಇವರು ಸನ್ಮಾನಿತರಾಗಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ನಾನು ಅವರನ್ನು ಭೇಟಿ ಮಾಡಿದ್ದೆ. ಆದರೆ, ಈಗ ಅವರು ನಮ್ಮೊಂದಿಗೆ ಇಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ಕಲಿಸಿದ್ದು, ಹೇಳಿದ್ದು, ತೋರಿದ ಋಜುಮಾರ್ಗ ಸದಾ ನಮಗೆಲ್ಲರಿಗೂ ಬೆಳಕಾಗಿದೆ.

***

ಪ್ರೊ.ಬಿ.ಗಂಗಾಧರಮೂರ್ತಿ ಅವರೊಂದಿಗೆ ಲೇಖಕ ಸುಬ್ರಮಣ್ಯಂ ಹೆಚ್.ಆರ್‌.
ಲೇಖಕ ಸುಬ್ರಮಣ್ಯಂ ಹೆಚ್.ಆರ್‌. ಅವರು ಪ್ರೊ.ಬಿ.ಗಂಗಾಧರಮೂರ್ತಿ ಅವರ ಶಿಷ್ಯರು. ಅವರ ಜತೆ ಕೆಲವಾರು ವರ್ಷ ನಿಕಟವಾಗಿದ್ದವರು. ಬಾಗೇಪಲ್ಲಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.
Tags: 1947chikkaballapuracknewsnowgouribidanurguest columnkolarnational collegepro bg gangadhara murthyvidurashwatha
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಜೈಲಿನಿಂದ ಹೊರಬಂದ ಕೂಡಲೇ ಮೀಡಿಯಾ ಮುಂದೆ ಕುಳಿತ ಅಲ್ಲು ಅರ್ಜುನ್‌

ಜೈಲಿನಿಂದ ಹೊರಬಂದ ಕೂಡಲೇ ಮೀಡಿಯಾ ಮುಂದೆ ಕುಳಿತ ಅಲ್ಲು ಅರ್ಜುನ್‌

by cknewsnow desk
December 14, 2024
0

ಅರೆಸ್ಟ್ ಆದ 24 ಗಂಟೆಗಳಲ್ಲೇ ಜೈಲಿನಿಂದ ರಿಲೀಸ್; ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ ಪುಷ್ಪಾ - 2

ಉದ್ಯೋಗ & ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಸ

ಉದ್ಯೋಗ & ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಸ

by cknewsnow desk
July 23, 2024
0

ಪ್ರಧಾನಿ ಕನಸಿನ 'ವಿಕಸಿತ ಭಾರತ' ನಿರ್ಮಾಣಕ್ಕೆ ಶಕ್ತಿ ತುಂಬುವ ಬಜೆಟ್

ಹಾಸನ ಪೆನ್‍ಡ್ರೈವ್ ಪ್ರಕರಣ; ಅಶ್ಲೀಲ ವಿಡಿಯೋ ಲೀಕ್‌ ಹಿಂದೆ DCM ಡಿಕೆಶಿ ಕೈ ಚಳಕ

ಹಾಸನ ಪೆನ್‍ಡ್ರೈವ್ ಪ್ರಕರಣ; ಅಶ್ಲೀಲ ವಿಡಿಯೋ ಲೀಕ್‌ ಹಿಂದೆ DCM ಡಿಕೆಶಿ ಕೈ ಚಳಕ

by cknewsnow desk
May 6, 2024
0

ನಾಗಮಂಗಲದ ಎಲ್.‌ಆರ್.‌ಶಿವರಾಮೇಗೌಡ ಮಧ್ಯಸ್ಥಿಕೆ; ಮೊಬೈಲ್‌ ಸಂಭಾಷಣೆ ಆಡಿಯೋ ಬಿಡುಗಡೆ

ಶ್ರೀರಾಮ ನವಮಿ ಶುಭಾಶಯಗಳು

ಶ್ರೀರಾಮ ನವಮಿ ಶುಭಾಶಯಗಳು

by cknewsnow desk
April 17, 2024
0

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೇ | ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ || ಶ್ರೀ ರಾಮ ಜಾನಕೀನಾಥ ತಾಟಕಾಸುರ ಮರ್ದನ | ಇಕ್ಷ್ವಾಕುಕುಲಸಂಭೂತ ರಣಪಂಡಿತ ರಾಘವಃ...

ಪ್ರಕಾಶ್ ರೈ ಸಂಸ್ಥೆಗೆ ಸರಕಾರದ ಹಣ; ದಾರಿ ತಪ್ಪಿದ ಕಲಾವಿದ ಎಂದು ಕುಟುಕಿದ JDS

ಪ್ರಕಾಶ್ ರೈ ಸಂಸ್ಥೆಗೆ ಸರಕಾರದ ಹಣ; ದಾರಿ ತಪ್ಪಿದ ಕಲಾವಿದ ಎಂದು ಕುಟುಕಿದ JDS

by cknewsnow desk
April 16, 2024
0

ಕುಮಾರಸ್ವಾಮಿ ಅವರನ್ನು ದಾರಿ ತಪ್ಪಿದ ಮಗ ಎಂದ ನಟನಿಗೆ ತಿರುಗೇಟು ಕೊಟ್ಟ ದಳ

Next Post
11 ಸಲ ಕಾಲ್‌ ಮಾಡಿದ  ಮಾಜಿ ಸಿಎಂ! ಜೆಡಿಎಸ್‌ ಶಾಸಕರ ಬ್ರೈನ್‌ವಾಶ್!!

ಬಿಜೆಪಿ ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಬಾಂಬ್

Leave a Reply Cancel reply

Your email address will not be published. Required fields are marked *

Recommended

ಕನ್ನಡದ ಮೇಲೆ ಹಿಂದಿ ಸವಾರಿ; ಬಿಜೆಪಿ ಸರಕಾರ ಬಂದ ಮೇಲೆ ಕನ್ನಡಿಗರ ಮೇಲೆ ದಬ್ಬಾಳಿಕೆ ಹೆಚ್ಚಿದೆ!

ಕನ್ನಡದ ಮೇಲೆ ಹಿಂದಿ ಸವಾರಿ; ಬಿಜೆಪಿ ಸರಕಾರ ಬಂದ ಮೇಲೆ ಕನ್ನಡಿಗರ ಮೇಲೆ ದಬ್ಬಾಳಿಕೆ ಹೆಚ್ಚಿದೆ!

4 years ago
ಸಚಿವರೆಂದರೆ ದೇವಲೋಕದಿಂದ ಇಳಿದು ಬಂದವರಾ? ನಾವೇನು ಬಿಟ್ಟಿ ಬಿದ್ದಿದ್ದೀವಾ? ಫೋನ್‌ ಕಾಲ್‌ ಪಿಕ್‌ ಮಾಡದ ಸಚಿವ ಡಾ.ಸುಧಾಕರ್‌ ವಿರುದ್ಧ ಶಾಸಕ ರೇಣುಕಾಚಾರ್ಯ ಗರಂ

ಸಚಿವರೆಂದರೆ ದೇವಲೋಕದಿಂದ ಇಳಿದು ಬಂದವರಾ? ನಾವೇನು ಬಿಟ್ಟಿ ಬಿದ್ದಿದ್ದೀವಾ? ಫೋನ್‌ ಕಾಲ್‌ ಪಿಕ್‌ ಮಾಡದ ಸಚಿವ ಡಾ.ಸುಧಾಕರ್‌ ವಿರುದ್ಧ ಶಾಸಕ ರೇಣುಕಾಚಾರ್ಯ ಗರಂ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ