• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಬದುಕಿನ ಸಾರ್ಥಕತೆ ಹೆಚ್ಚಿಸಿದ ನಾಡಪ್ರಭುಗಳ ಪ್ರತಿಮೆ

cknewsnow desk by cknewsnow desk
November 10, 2022
in EDITORS'S PICKS, STATE
Reading Time: 1 min read
0
ಬದುಕಿನ ಸಾರ್ಥಕತೆ ಹೆಚ್ಚಿಸಿದ ನಾಡಪ್ರಭುಗಳ ಪ್ರತಿಮೆ
962
VIEWS
FacebookTwitterWhatsuplinkedinEmail

ಪುಳಕ ಹುಟ್ಟಿಸಿದ ಪ್ರಗತಿ ಪ್ರತಿಮೆಯ ಯಾತ್ರೆ; ಪ್ರಧಾನಿ ಮೋದಿ ಅವರಿಂದ ಇಂದು ಲೋಕಾರ್ಪಣೆ

by Dr.C.N.Ashwathanarayana

ನಾಡಪ್ರಭು ಕೆಂಪೇಗೌಡರು ಬೆಂಗಳೂರಿನ ಭಾಗ್ಯವಿಧಾತರು. ಬೆಂಗಳೂರಿನ ಜನತೆ ಸೇರಿದಂತೆ, ಇಡೀ ರಾಜ್ಯದ ಕನ್ನಡಿಗರು ಇದಕ್ಕಾಗಿ ಅವರನ್ನು ಸದಾ ಗೌರವದಿಂದ ನೆನೆಯುತ್ತಾರೆ. 485 ವರ್ಷಗಳ ಹಿಂದೆ, 1537ರಲ್ಲಿ ಅವರು ಕಟ್ಟಿದ ಬೆಂಗಳೂರು ಇನ್ನು ಹದಿನೈದು ವರ್ಷಗಳಲ್ಲಿ 500ನೇ ವರ್ಷಾಚರಣೆಯನ್ನು ಕಾಣಲಿದೆ.

ಈಗ, ನಮ್ಮ ಬಿಜೆಪಿ ಸರಕಾರವು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ದೇವನಹಳ್ಳಿಯ ಬಳಿ ಇರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸುವ ಮೂಲಕ ಮಹೋನ್ನತ ರೀತಿಯಲ್ಲಿ ಗೌರವ ಸಲ್ಲಿಸುತ್ತಿದೆ. ಇದು ನಮ್ಮಲ್ಲಿ ಕೃತಾರ್ಥತೆಯ ಭಾವನೆಯನ್ನು ಹುಟ್ಟಿಸಿದೆ. ಅದರಲ್ಲೂ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ಈ ಪ್ರತಿಮೆಯನ್ನು ಲೋಕಾರ್ಪಣೆ ಮಾಡುತ್ತಿರುವುದು ಚರಿತ್ರೆಯ ಪುಟಗಳಲ್ಲಿ ದಾಖಲಾಗಲಿದೆ.

ಕೆಂಪೇಗೌಡರಿಗೆ ನಾಡು ಈ ಮುಂಚೆಯೂ ಗೌರವ ಸಲ್ಲಿಸಿದೆ. ಬಡಾವಣೆ, ಪ್ರಮುಖ ರಸ್ತೆ, ಉದ್ಯಾನ, ಬಸ್‌ ನಿಲ್ದಾಣ, ವಿಮಾನ ನಿಲ್ದಾಣ, ಪ್ರಶಸ್ತಿ ಪುರಸ್ಕಾರ ಇತ್ಯಾದಿಗಳಿಗೆಲ್ಲ ಬೆಂಗಳೂರಿನ ಜನಕರ ಹೆಸರನ್ನಿಡಲಾಗಿದೆ; ನಗರದ ಹಲವು ಸ್ಥಳಗಳಲ್ಲಿ ಅವರ ಪ್ರತಿಮೆಗಳನ್ನು ಸಾಂಕೇತಿಕವಾಗಿ ಪ್ರತಿಷ್ಠಾಪಿಸಲಾಗಿದೆ; ಪ್ರತೀವರ್ಷವೂ ನೂರಾರು ಸಂಘಸಂಸ್ಥೆಗಳು ಮತ್ತು ಸರಕಾರ ಅವರ ಜನ್ಮಜಯಂತಿಯನ್ನು ಆಚರಿಸುತ್ತವೆ; ಸಭೆ-ಸಮಾರಂಭಗಳಲ್ಲಿ ಅವರನ್ನು ಸ್ಮರಿಸುವ ಕೆಲಸವಾಗುತ್ತಿರುತ್ತದೆ; ಬೆಂಗಳೂರಿನ ಚರಿತ್ರೆಯ ಉಲ್ಲೇಖವಾದಾಗ ಕೆಂಪೇಗೌಡರ ಹೆಸರು ಸಹಜವಾಗಿಯೇ ಬರುತ್ತದೆ; ಸಮುದಾಯ ಜಾಗೃತಿಯ ಪ್ರಶ್ನೆ ಬಂದಾಗಲೂ ಅವರಿಂದ ಸ್ಫೂರ್ತಿ-ಪ್ರೇರಣೆ ಪಡೆದುಕೊಳ್ಳಲಾಗುತ್ತದೆ. ಇಷ್ಟರ ಮಟ್ಟಿಗೆ ಕೆಂಪೇಗೌಡರು ನಮ್ಮೆಲ್ಲರ ಅನುದಿನ ಬದುಕನ್ನು ಆವರಿಸಿಕೊಂಡಿದ್ದಾರೆ.

ಆದರೂ ಅಷ್ಟು ಎತ್ತರದ ಸಾಧಕರಿಗೆ ತಕ್ಕ ಗೌರವವಾಗಿಲ್ಲ ಎನ್ನುವ ಕೊರಗು ನನಗೆ ಇದ್ದೇ ಇತ್ತು. ಅದರಲ್ಲೂ ಜಗತ್ತಿನ ನಾನಾ ಭಾಗಗಳನ್ನು ನೋಡಿರುವ ನನ್ನಂಥವರಿಗೆ ಇದು ಸಹಜವಾಗಿ ಕಾಡುತ್ತಿತ್ತು. ಮೂರು ವರ್ಷಗಳ ಹಿಂದೆ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತಷ್ಟೆ. ಆಗ ನಾನು, ವಿಮಾನ ನಿಲ್ದಾಣ ಸಮುಚ್ಚಯದಲ್ಲಿ ಕೆಂಪೇಗೌಡರ ಈ 108 ಅಡಿ ಪ್ರತಿಮೆಯನ್ನು ಸ್ಥಾಪಿಸಬೇಕೆನ್ನುವ ನನ್ನ ಅಂತರಂಗದ ಹಂಬಲವನ್ನು ಅವರೊಂದಿಗೆ ಹಂಚಿಕೊಂಡೆ. ಜನ ಸಮುದಾಯಗಳ ನಾಯಕರಾದ ಅವರು, ಇದಕ್ಕೆ ಹಿಂದುಮುಂದು ಯೋಚಿಸದೆ ಒಪ್ಪಿಗೆ ಕೊಟ್ಟರು. ಇಷ್ಟೇ ಅಲ್ಲ, ಈ ಯೋಜನೆಯ ಅನುಷ್ಠಾನದ ಉಸ್ತುವಾರಿಯ ಹೊಣೆಯನ್ನೂ ಅವರು ನನಗೇ ವಹಿಸಿದರು. ಇದು ನನ್ನ ಮೇಲೆ ಅವರಿಟ್ಟಿರುವ ನಂಬಿಕೆಯ ಪ್ರತೀಕವಾಗಿತ್ತು.

ಜೊತೆಗೆ, ಇಂತಹ ಒಂದು ‘ಡ್ರೀಮ್‌ ಪ್ರಾಜೆಕ್ಟ್‌’ನ ಹೊಣೆ ನನ್ನ ಹೆಗಲಿಗೆ ಬಿದ್ದಿದ್ದು ನನ್ನನ್ನು ಮತ್ತಷ್ಟು ವಿನೀತನನ್ನಾಗಿಸಿತು. ದೊಡ್ಡದೊಡ್ಡ ಕೆಲಸಗಳು ಮನುಷ್ಯನನ್ನು ನಮ್ರವಾಗಿಸುತ್ತವೆ ಎನ್ನುವ ಆಳದ ನಂಬಿಕೆ ಮತ್ತೊಮ್ಮೆ ಸಾಬೀತಾಯಿತು.

ಒಂದು ದೊಡ್ಡ ಕೆಲಸವೆಂದ ಮೇಲೆ ಸವಾಲುಗಳು ಸಹಜ. ಆದರೆ, ಕೆಂಪೇಗೌಡರ ಭೂಮವಾದ ವ್ಯಕ್ತಿತ್ವವು ಇದನ್ನು ನನ್ನ ಪಾಲಿಗೆ ಸುಲಭವಾಗಿ ಪರಿಣಮಿಸಿದಂತೆ ನನಗೆ ಭಾಸವಾಗುತ್ತಿತ್ತು. ಏಕೆಂದರೆ, ಪ್ರತಿಮೆಯ ರೂಪುರೇಷೆ, ಅದರ ತೂಕ, ಅದರ ಭಾವ-ಭಂಗಿಗಳು, ಒಂದೊಂದು ಹಂತದಲ್ಲೂ ಪ್ರತಿಮೆಯ ಭಾಗಗಳನ್ನು ವಿಧಿಬದ್ಧವಾಗಿ ಸ್ವೀಕರಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೂಡ ಇದರ ಬಗ್ಗೆ ಮುತುವರ್ಜಿ ವಹಿಸಿ, ನನಗೆ ನೈತಿಕ ಬೆಂಬಲವಾಗಿ ನಿಂತಿದ್ದು ಇದಕ್ಕೆ ಕಾರಣವಾಗಿತ್ತು.

ಇದರ ಜತೆಗೆ ಹೆಜ್ಜೆಹೆಜ್ಜೆಯಲ್ಲೂ ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿಯವರು ನನಗೆ ಸೂಕ್ತ ಸಲಹೆ, ಮಾರ್ಗದರ್ಶನಗಳನ್ನು ಕೊಡುತ್ತ ಬಂದಿದ್ದು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸುತ್ತಿತ್ತು. 100 ಟನ್ ಕಂಚು ಮತ್ತು 120 ಟನ್‌ ಉಕ್ಕನ್ನು ಬಳಸಿ ಸಿದ್ಧಪಡಿಸಿರುವ ಈ ಪ್ರತಿಮೆ ಈಗ ಬೆಂಗಳೂರಿಗೊಂದು ನೂತನ ಹೆಗ್ಗುರುತು! ಏಕೆಂದರೆ, ಜಾಗತಿಕ ಸ್ತರದಲ್ಲಿ ಹೆಸರು ಮಾಡಿರುವ ನಮ್ಮ ರಾಜಧಾನಿಗೆ ದೇಶ/ವಿದೇಶಗಳಿಂದ ದಿನವೂ ಸಾವಿರಾರು ಜನ ವಿಮಾನಗಳಲ್ಲಿ ಬಂದಿಳಿಯುತ್ತಾರೆ; ಹಾಗೆಯೇ, ಇಲ್ಲಿಂದಲೂ ಸಾವಿರಾರು ಜನ ಹೊರಭಾಗಗಳಿಗೆ ತೆರಳುತ್ತಾರೆ. ಹೀಗಾಗಿ, ಇವರಿಗೆಲ್ಲ ಪ್ರತೀಕ್ಷಣದಲ್ಲೂ ಕಣ್ಮುಂದೆ ಕೆಂಪೇಗೌಡರ ಕ್ಷಾತ್ರ ತೇಜಸ್ಸು, ಅವರ ದೂರದೃಷ್ಟಿ, ವೈಜ್ಞಾನಿಕ ನಗರ ನಿರ್ಮಾಣ ಇವೆಲ್ಲವೂ ಕಣ್ಮುಂದೆ ಬಂದು, ಐದು ಶತಮಾನಗಳ ಈ ಪಯಣದ ಮಧುರ ನೆನಪುಗಳ ಮೆರವಣಿಗೆ ನಡೆಯಬೇಕೆನ್ನುವುದು ನನ್ನ ಕನಸಾಗಿತ್ತು. ಪ್ರತಿಮೆಯ ಸ್ಥಾಪನೆಯಿಂದ ಹಿಡಿದು, ಅದು ಎಲ್ಲಿ ತಲೆಯೆತ್ತಬೇಕು ಎನ್ನುವವರೆಗೂ ಸಕ್ರಿಯವಾಗಿ ಪಾಲ್ಗೊಂಡಿರುವ ನನಗೆ ಇದೊಂದು ಧನ್ಯತೆಯ ಭಾವವನ್ನು ಮೂಡಿಸಿದೆ.

ದೇಶದಲ್ಲಿ ಮೋದಿಯವರು ಪ್ರಧಾನಿಗಳಾದ ಮೇಲೆ ತಮ್ಮ ತವರು ರಾಜ್ಯದ ಕೇವಾಡಿಯಾದಲ್ಲಿ ‘ಆಧುನಿಕ ಭಾರತದ ಶಿಲ್ಪಿ’ಗಳಾಗಿರುವ ಸರ್ದಾರ್‍‌ ವಲ್ಲಭಭಾಯ್‌ ಪಟೇಲರ ಬೃಹತ್‌ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರು. ಇಂತಹ ಋಣದ ಭಾವ ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರಲ್ಲೂ ಬಂದು, ಅದು ಮೂರ್ತರೂಪದಲ್ಲಿ ಪ್ರಕಟವಾಗಲು ಯಾವುದೋ ಒಂದು ದೇಶ-ಕಾಲ ಸಂದರ್ಭ ಸೃಷ್ಟಿಯಾಗಬೇಕಾಗುತ್ತದೆ.

ಕೆಂಪೇಗೌಡರಿಗೆ ಆಯಾ ಕಾಲಘಟ್ಟಗಳಲ್ಲಿ ಸಲ್ಲಬೆಕಾದ ಗೌರವ ಸಂದಿದೆ. ಆದರೆ, ಈ 108 ಅಡಿ ಎತ್ತರದ ಪ್ರತಿಮೆ ಈಗಿನ ಮನ್ವಂತರಕ್ಕೆ ಕಾಯುತ್ತಿತ್ತು ಎನಿಸುತ್ತದೆ!

ಹಾಗೆಯೇ, ಇದರಲ್ಲಿ ನಾನೂ ಒಂದು ಭಾಗವಾಗಿದ್ದು ನನ್ನ ಸುದೈವವೆನಿಸುತ್ತದೆ. ಇದು ಕೆಂಪೇಗೌಡರ ಕೃಪಾಕಟಾಕ್ಷ ಮತ್ತು ಜನತೆಯ ಆಶೀರ್ವಾದ, ಹಾಗೂ ನಾನಿರುವ ಪಕ್ಷದ ವಿಶ್ವಾಸದ ಶಕ್ತಿಗಳೆಲ್ಲ ಮುಪ್ಪುರಿಗೊಂಡಾಗ ಮಾತ್ರ ಸಂಭವಿಸುವಂಥದ್ದು ಎನ್ನುವುದರಲ್ಲಿ ಅನುಮಾನವಿಲ್ಲ. ಸಾಮಾನ್ಯವಾಗಿ ನಮ್ಮಲ್ಲಿ ದೈವ ಋಣ, ಪಿತೃ ಋಣ, ಆಚಾರ್ಯ ಋಣ ಇತ್ಯಾದಿಗಳ ಒಂದು ಪರಂಪರೆ ಇದೆ. ಇದಕ್ಕೆ ಕೆಂಪೇಗೌಡರಂಥ ನಿಸ್ಪೃಹರ ಸಮಾಜ ಋಣವನ್ನು ಸೇರಿಸಬೇಕು. ಈಗ ಭವ್ಯವಾಗಿ ಮೈದಾಳಿರುವ ಅವರ ಪ್ರತಿಮೆಯು ನನ್ನನ್ನೂ ಸೇರಿದಂತೆ ನಮ್ಮೆಲ್ಲರಲ್ಲೂ ಇಂತಹ ವಾರಸುದಾರಿಕೆಯ ಪ್ರಜ್ಞೆಯನ್ನು ರೂಢಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ, ಇತಿಹಾಸವನ್ನು ಅರಿತವರು ಮಾತ್ರ ಇತಿಹಾಸವನ್ನು ಸೃಷ್ಟಿಸಬಲ್ಲರು!

ಈ ಪ್ರತಿಮೆಗೆ ರೂಪು ಕೊಟ್ಟಿರುವವರು ದೆಹಲಿ ಬಳಿಯ ನೋಯಿಡಾದ ವಿಖ್ಯಾತ ಶಿಲ್ಪಿಗಳಾದ ರಾಮ್‌ ಸುತಾರ್‍‌ ಅವರು. ಅವರ ಮನೆತನದ ಮೂರು ತಲೆಮಾರಿನವರು ವಾಸ್ತುಶಿಲ್ಪ ಪರಂಪರೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪಟೇಲರು, ಅಂಬೇಡ್ಕರ್, ಈಶ್ವರ, ಶ್ರೀರಾಮ, ಗಾಂಧೀಜಿ ಹೀಗೆ ಮಹಾಮಹಿಮರ ಅದೆಷ್ಟೋ ಪ್ರತಿಮೆಗಳನ್ನು ತಮ್ಮ ಸೂಕ್ಷ್ಮ ಪ್ರತಿಭೆಯ ಬಲದಿಂದ ಅರಳಿಸಿದ ಕೀರ್ತಿ ಅವರದು. ಕೆಂಪೇಗೌಡರ ಪ್ರತಿಮೆಯ ನೆಪದಲ್ಲಿ ನಾನು ಅವರಲ್ಲಿಗೂ ನಾಲ್ಕೈದು ಬಾರಿ ಬೆಂಗಳೂರಿನಿಂದ ‘ಯಾತ್ರೆ’ ಮಾಡಿದ್ದುಂಟು! ಒಂದು ಪುಣ್ಯದ ಕೆಲಸದ ಭಾಗವಾದಾಗ ಇವೆಲ್ಲವೂ ತಮ್ಮಿಂತಾನೇ ಒದಗಿಬರುತ್ತವೆ. ಇವುಗಳನ್ನು ನಾನು, ನನ್ನ ಕರ್ತವ್ಯದ ಭಾಗವೆಂದೇ ಪರಿಗಣಿಸಿ, ಓಡಾಡಿದೆ. ಇದು ನನಗೆ ಇನ್ನೊಂದು ಲೋಕವನ್ನೇ ತೋರಿಸಿತು ಎಂದರೆ ಸುಳ್ಳಲ್ಲ.

ಹಾಗೆಯೇ ಪ್ರತಿಮೆಯ ಪಾದುಕೆ, ಖಡ್ಗ, ಹಸ್ತ ಇತ್ಯಾದಿಗಳು ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದಾಗಲೋ ಏನೋ ಒಂದು ಕಾತರ, ಕುತೂಹಲ, ಒಂದಿಷ್ಟು ಆತಂಕ, ಅಪಾರವಾದ ನಿರೀಕ್ಷೆಗಳು ನನ್ನಲ್ಲಿ ಮನೆ ಮಾಡಿಕೊಂಡಿರುತ್ತಿದ್ದವು. ಆದರೆ ಈ ಯಾವ ಕೆಲಸದಲ್ಲೂ ನಮಗೆ ಒಂದು ಸಣ್ಣ ವಿಘ್ನವೂ ಎದುರಾಗಲಿಲ್ಲ! ಬದಲಿಗೆ, ಇವೆಲ್ಲವೂ ಹೂವಿನ ಸರವನ್ನು ಎತ್ತಿದಂತೆ ಸುಗಮವಾಗಿ ನೆರವೇರುತ್ತಿದ್ದವು. ಇದನ್ನೆಲ್ಲ ಕಂಡು, ನಾನು ನಿರಾಳತೆಯನ್ನು ಅನುಭವಿಸುತ್ತ ಬಂದೆ.

ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವ ಈ ಯೋಜನೆಗೆ ಹಣಕಾಸಿನ ಅಡಚಣೆ ಕೂಡ ನಮಗೆ ಎದುರಾಗಲಿಲ್ಲ. ಇದರ ಜತೆಗೆ, ಪ್ರತಿಮೆಯ ಮಹತ್ತ್ವವನ್ನು ಅರಿತ ನಂತರ ವಿಮಾನ ನಿಲ್ದಾಣದವರು ಕೂಡ ಕೆಂಪೇಗೌಡರ ಹೆಸರಿನ ಥೀಮ್‌ ಪಾರ್ಕ್ ಅಭಿವೃದ್ಧಿಗೆಂದು 23 ಎಕರೆ ಜಮೀನನ್ನು ಬಿಟ್ಟು ಕೊಡಲು ಮುಂದಾದರು. ಇದು ಇನ್ನೊಂದು ಮಹತ್ತ್ವದ ಹೆಜ್ಜೆ. ಇದರ ಜತೆಗೆ ಪ್ರತಿಮೆಯು ಸುಂಟರಗಾಳಿ, ಉರಿವ ಬಿಸಿಲು, ಕುಂಭದ್ರೋಣ ಮಳೆ, ಕೊರೆವ ಚಳಿ, ನಡುಗಿಸುವ ಭೂಕಂಪ ಇಂತಹ ಯಾವುದೇ ಪ್ರಾಕೃತಿಕ ವಿಕೋಪಗಳಿಗೂ ಈಡಾಗದೆ, ಶಾಶ್ವತವಾಗಿ ಪ್ರತಿಷ್ಠಾಪಿತವಾಗಿರಬೇಕು ಎನ್ನುವ ಉದ್ದೇಶದಿಂದ ಕೂಡ ಇದಕ್ಕೆ ಮುಂಜಾಗ್ರತಾ ಕ್ರಮಗಳನ್ನು ವೈಜ್ಞಾನಿಕವಾಗಿಯೇ ತೆಗೆದುಕೊಳ್ಳಲಾಗಿದೆ.

ಕೆಂಪೇಗೌಡರೆಂದರೆ, ಬರೀ ಬೆಂಗಳೂರಿಗೆ ಸೀಮಿತವಾಗಬಾರದು ಅಥವಾ ಹಳೆ ಮೈಸೂರಿಗೋ, ಒಕ್ಕಲಿಗ ಸಮುದಾಯಕ್ಕೋ ಮಿತಗೊಳ್ಳಬಾರದು. ಬದಲಿಗೆ, ಅವರ ಹೆಸರು ಇಡೀ ಕರ್ನಾಟಕದಲ್ಲಿ ಅನುರಣಿಸಬೇಕು ಮತ್ತು ಅದು ನಮ್ಮ ನಾಡನ್ನು ಏಕೋಭಾವದಲ್ಲಿ ಹಿಡಿದಿಡಬೇಕು ಎನ್ನುವುದು ನನ್ನ ಅಭಿಲಾಷೆಯಾಗಿದೆ. ಇದಕ್ಕಾಗಿ, ನನ್ನನ್ನೂ ಸೇರಿದಂತೆ ನಮ್ಮೆಲ್ಲರಲ್ಲೂ ಹೊಳೆದ ಆಲೋಚನೆ ಎಂದರೆ, ರಾಜ್ಯದ ಹಳ್ಳಿಹಳ್ಳಿಗೂ ಹೋಗಿ ಅಲ್ಲಿನ ಕೆರೆಕಟ್ಟೆ, ಕಲ್ಯಾಣಿ, ಪುಷ್ಕರಿಣಿ, ನದಿ, ದೇವಸ್ಥಾನ ಇತ್ಯಾದಿ ಪುಣ್ಯಸ್ಥಳಗಳಿಂದ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಿ, ಅದೆಲ್ಲವನ್ನೂ ಈ ಪ್ರತಿಮೆಯ ಜಾಗದಲ್ಲಿ ಸಮರ್ಪಿಸಬೇಕೆನ್ನುವ ಸಂಗತಿ. ಇದಕ್ಕೆಂದೇ ಹದಿನೈದು ದಿನಗಳ ಅಭಿಯಾನವನ್ನೂ ನಡೆಸಲಾಯಿತು. ವಿಧಾನಸೌಧದ ಎದುರು ಮುಖ್ಯಮಂತ್ರಿಗಳಿಂದ ಚಾಲನೆ ಪಡೆದ ಈ ಅಭಿಯಾನವು ಪುನಃ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಂಪನ್ನಗೊಂಡಿದೆ.

ಹಾಗೆಯೇ, ಇನ್ನೊಂದೆಡೆ, ನಾಡಪ್ರಭು ಕೆಂಪೇಗೌಡರ ಸಮಾಧಿ ಇರುವ ಮಾಗಡಿ ತಾಲ್ಲೂಕಿನ ಕೆಂಪಾಪುರದ ಅಭಿವೃದ್ಧಿ, ಅವರಿಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಸ್ಥಳಗಳ ಪ್ರವಾಸಿ ಸರ್‍ಕ್ಯೂಟ್‌ ಅಭಿವೃದ್ಧಿ ಇತ್ಯಾದಿಗಳಿಗೂ ಚಾಲನೆ ನೀಡಲಾಗಿದೆ. ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷನಾಗಿ ಮತ್ತು ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಈ ಪಾತ್ರವನ್ನು ನಿರ್ವಹಿಸುವ ಸದವಕಾಶ ನನ್ನದಾಗಿದ್ದು ಸುಕೃತವೇ ಸರಿ. ಈಗ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಬಾನೆತ್ತರಕ್ಕೆ ನಿಂತಿದೆ. ಇಂತಹ ಇನ್ನೊಂದು ಪ್ರತಿಮೆ ಜಗತ್ತಿನ ಯಾವ ನಗರದ ವಿಮಾನ ನಿಲ್ದಾಣದಲ್ಲೂ ಇಲ್ಲ. ಈ ಪ್ರತಿಮೆಯು ದೇಶಕಾಲಾತೀತವಾಗಿ ಕೆಂಪೇಗೌಡರ ಸಾಹಸ, ಶೌರ್ಯ, ನಿಸ್ವಾರ್ಥಗಳ ಕಥನವನ್ನು ಆಚಂದ್ರಾರ್ಕವಾಗಿ ಸ್ಫುರಿಸಲಿದೆ. ಇಂತಹ ಒಂದು ಕಾರ್ಯದಲ್ಲಿ ನನ್ನ ಕೈಲಾದಷ್ಟು ಯೋಗದಾನವನ್ನು ಮಾಡುವ ಅವಕಾಶವನ್ನು ಕರುಣಿಸಿದ್ದಕ್ಕಾಗಿ ನಾನು ನಾಡಿನ ಪ್ರತಿಯೊಬ್ಬರಿಗೂ ಆಭಾರಿಯಾಗಿದ್ದೇನೆ. ಇದು ನನಗೆ ಪುಳಕವನ್ನು ಕೊಟ್ಟಿದೆ; ಇದಕ್ಕಿಂತ ಹೆಚ್ಚಾಗಿ ಪುನೀತ ಭಾವವನ್ನು ನನ್ನಲ್ಲಿ ತಂದಿದೆ.

***

ಲೇಖಕರು ಉನ್ನತ ಶಿಕ್ಷಣ ಸಚಿವರು, ಉಪಾಧ್ಯಕ್ಷರು ನಾಡಪ್ರಭು ಕೆಂಪೇಗೌಡರ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರ

Tags: BengaluruindiakarnatakaNadaprabhu KempegowdaNamma Bengalurunarendra modiStatute of Prosperity
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಮಾರ್ಮಿಕವಾಗಿ ಮಾತಿನ ಬಾಣ ಬಿಟ್ಟ ಬೊಮ್ಮಾಯಿ!

ಕುರಿಗಾಹಿಗಳಿಗೆ ಕುರಿದೊಡ್ಡಿ, ಮನೆ

Leave a Reply Cancel reply

Your email address will not be published. Required fields are marked *

Recommended

ಮುಜರಾಯಿ ಇಲಾಖೆ ಅರ್ಚಕರು, ದೇವಾಲಯ ನೌಕರರಿಗೆ ದಸರಾ ಬಂಪರ್

ಮುಜರಾಯಿ ಇಲಾಖೆ ಅರ್ಚಕರು, ದೇವಾಲಯ ನೌಕರರಿಗೆ ದಸರಾ ಬಂಪರ್

5 years ago
ನಮ್ಮ ದೇಶದಲ್ಲೇ ತಯಾರಾದ ಕೊರೊನಾ ಲಸಿಕೆ ಕುರಿತು ಅಗೌರವ ಬೇಡ; ಭಾರತ್ ಬಯೋಟೆಕ್ ನಂಬಿಕೆಗೆ ಅರ್ಹವಾದ ಕಂಪನಿ ಎಂದ ಡಾ.ಕೆ.ಸುಧಾಕರ್

ಕೋಲಾರದ ಮಾಲೂರಿನಲ್ಲಿ 100 ಎಕರೆ ಜಾಗದಲ್ಲಿ ಕೊವ್ಯಾಕ್ಸಿನ್ ಲಸಿಕೆ ತಯಾರಿಕಾ ಘಟಕ I ದೃಢಪಡಿಸಿದ ಡಿಸಿಎಂ I ಐದು ಪಟ್ಟು ಹೆಚ್ಚು ಲಸಿಕೆ ತಯಾರಿಕೆ, ರಾಜ್ಯದಲ್ಲಿ ನೀಗುತ್ತಾ ವ್ಯಾಕ್ಸಿನ್‌ ಕೊರತೆ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ