ಕೋಲಾರದಲ್ಲಿನ್ನೂ ಕನ್ʼಫ್ಯೂಸ್, ಅನೇಕ ಕಡೆ ಬಂಡಾಯದ ಸುಳಿವು
ನವದೆಹಲಿ: ಕರ್ನಾಟಕ ವಿದಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 2 ನೇ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ.
ಒಟ್ಟು 42 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಕೈ ನಾಯಕರು ಬೆಳಗ್ಗೆ ಬಿಡುಗಡೆ ಮಾಡಿದ್ದಾರೆ.
ತಮ್ಮ ಆಪ್ತ ರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದ ಡಿ.ಕೆ. ಶಿವಕುಮಾರ್ ಗೆ ಎರಡು ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ.
ತೀರ್ಥಹಳ್ಳಿಯಲ್ಲಿ ಮಂಜುನಾಥ ಗೌಡ ಪರ ಡಿಕೆಶಿ ಪಟ್ಟು ಹಿಡಿದಿದ್ದರು. ಆದರೆ ಕಿಮ್ಮನೆ ರತ್ನಾಕರ್ ಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ಹಾಗೆಯೇ ಕಲಘಟಗಿಯಲ್ಲಿ ನಾಗರಾಜ್ ಚಬ್ಬಿಗೆ ಟಿಕೆಟ್ ಕೊಡುವಂತೆ ಡಿಕೆಶಿ ಕೋರಿದ್ದರು ಆದರೆ ಇಲ್ಲೂ ಸಂತೋಷ್ ಲಾಡ್ ಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಹಾಗಾಗು ಈ ಎರಡೂ ಕ್ಷೇತ್ರದಲ್ಲಿ ಡಿಕೆಶಿಗೆ ಹಿನ್ನಡೆಯಾಗಿದೆ.
ಬೇಲೂರಿನಲ್ಲಿ ಡಿಕೆಶಿ ಕೈ ಮೇಲಾಗಿದೆ. ರುದ್ರೇಶ್ ಗೌಡ ಕುಟುಂಬ ಹಾಗೂ ಸಿದ್ದರಾಮಯ್ಯ ಬಣ ಎರಡಕ್ಕೂ ಟಾಂಗ್ ಕೊಟ್ಟು ತಮ್ಮ ಆಪ್ತ ಮಾಜಿ ಸಚಿವ ಗಂಡಸಿ ಶಿವರಾಂಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರಕ್ಕೆ ಇನ್ನೂ ಟಿಕೆಟ್ ಪ್ರಕಟಿಸಿಲ್ಲ ಹಾಗಾಗಿ ಸಿದ್ದೂಗಾ ಅಥವಾ ಇನ್ಯಾರಿಗೆ ಟಿಕೆಟ್ ಎಂಬ ಕುತೂಹಲ ಹಾಗೆಯೇ ಇದೆ. ಜತೆಗೆ ಹಾಲಿ ಶಾಸಕ ವಿ. ಮುನಿಯಪ್ಪ ಕ್ಷೇತ್ರ ಶಿಡ್ಲಘಟ್ಟಕ್ಕೂ ಕೂಡ ಘೋಷಣೆ ಆಗಿಲ್ಲ.
ಚಿತ್ರದುರ್ಗದಲ್ಲಿ ಪರಿಷತ್ ಮಾಜಿ ಸದಸ್ಯ ರಘು ಆಚಾರ್ ಗೆ ಟಿಕೆಟ್ ನೀಡದೆ ದೊಡ್ಡಣ್ಣ ಅಳಿಯ ವೀರೇಂದ್ರ ಪಪ್ಪಿಗೆ ಮಣೆ ಹಾಕಲಾಗಿದೆ.
ಹಾಲಿ ಶಾಸಕರ ಆಯ್ಕೆಯಲ್ಲಿ ಗೊಂದಲವಿದ್ದು ಲಿಂಗಸುಗೂರು, ಪುಲಕೇಶಿ ನಗರ, ಕುಂದಗೋಳ, ಹರಿಹರ, ಶಿಡ್ಲಘಟ್ಟಕ್ಕೆ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿಲ್ಲ.
ನಿಪ್ಪಾಣಿ– ಕಾಕಾಸಾಹೇಬ್ ಪಾಟೀಲ್, ಗೋಕಾಕ್– ಮಹಾಂತೇಶ್ ಕಡಾಡಿ, ಕಿತ್ತೂರು– ಬಾಬಾ ಸಾಹೇಬ್ ಡಿ ಪಾಟೀಲ್, ಸವದತ್ತಿ ಯಲ್ಲಮ್ಮ– ವಿಶ್ವಾಸ್ ವಸಂತ್ ವಿದ್ಯಾ, ಮುಧೋಳ ಎಸ್‍ಸಿ– ರಾಮಪ್ಪ ಬಾಳಪ್ಪ ತಿಮ್ಮಾಪೂರ್, ಬಿಳಗಿ– ಜಿ.ಟಿ ಪಾಟೀಲ್, ಬಾದಾಮಿ– ಭೀಮಸೇನಾ ಬಿ ಚಿಮ್ಮನಕಟ್ಟಿ, ಬಾಗಲಕೋಟೆ – ಹುಲ್ಲಪ್ಪ ವೈ ಮೇಟಿ, ಬಿಜಾಪುರ ನಗರ – ಅಬ್ದುಲ್ ಅಹ್ಮದ್ ಖಾಜಸಾಹೇಬ್ ಮುಷರಫಿ, ನಾಗಠಾಣ ಎಸ್‍ಸಿ– ವಿಠಲ್ ಕಟಕದೋಂಧ್, ಅಫ್ಜಲಪುರ್– ಎಂವೈ ಪಾಟೀಲ್, ಯಾದಗಿರಿ– ಚನ್ನರೆಡ್ಡಿ ಪಾಟೀಲ್, ಗುರುಮಿಠ್ಕಲ್– ಚಿಂಚನಸೂರ್, ಕಲಬುರಗಿ ದಕ್ಷಿಣ– ಅಲ್ಲಮಪ್ರಭು ಪಾಟೀಲ್, ಬಸವಕಲ್ಯಾಣ – ವಿಜಯ್ ಧರ್ಮಸಿಂಗ್, ಗಂಗಾವತಿ – ಇಕ್ಬಾಲ್ ಅನ್ಸಾರಿ, ನರಗುಂದ– ಬಿ.ಆರ್ ಯಾವಗಲ್, ಧಾರವಾಡ– ವಿನಯ್ ಕುಲಕರ್ಣಿ, ಕಲಘಟಗಿ– ಸಂತೋಷ್ ಎಸ್ ಲಾಡ್, ಸಿರಸಿ– ಭಿಮಣ್ಣ ನಾಯಕ್, ಯಲ್ಲಾಪುರ– ವಿಎಸ್ ಪಾಟೀಲ್, ಕೂಡ್ಲಿಗಿ– ಶ್ರೀನಿವಾಸ್ ಎನ್.ಟಿ, ಮೊಳಕಾಲ್ಮೂರು– ಎನ್ ವೈ ಗೋಪಾಲಕೃಷ್ಣ, ಚಿತ್ರದುರ್ಗ– ಕೆ.ಸಿ ವೀರೇಂದ್ರ, ಹೊಳಲ್ಕೆರೆ– ಹೆಚ್. ಆಂಜನೇಯ, ಚನ್ನಗಿರಿ– ಬಿ.ವಿ ಶಿವಗಂಗಾ, ತೀರ್ಥಹಳ್ಳಿ– ಕಿಮ್ಮನೆ ರತ್ನಾಕರ್, ಉಡುಪಿ– ಪ್ರಸಾದ್ ರಾಜ್ ಕಾಂಚಾನ, ಕಡೂರು– ಕೆ.ಎಸ್ ಆನಂದ್, ತುಮಕೂರು ನಗರ, ಇಕ್ಬಾಲ್ ಅಹ್ಮದ್, ಗುಬ್ಬಿ– ಎಸ್.ಆರ್ ಶ್ರೀನಿವಾಸ್, ಯಲಹಂಕ– ಕೇಶವ ರಾಜಣ್ಣ ಬಿ, ಯಶವಂತಪುರ– ಎಸ್. ಬಾಲರಾಜ್ ಗೌಡ, ಮಹಾಲಕ್ಷ್ಮಿ ಲೇ ಔಟ್– ಕೇಶವಮೂರ್ತಿ, ಪದ್ಮನಾಭನಗರ– ರಘುನಾಥ ನಾಯ್ಡು, ಮೇಲುಕೋಟೆ– ದರ್ಶನ್ ಪುಟ್ಟಣ್ಣಯ್ಯ, ಮಂಡ್ಯ– ಪಿ. ರವಿಕುಮಾರ್, ಕೆ ಆರ್ ಪೇಟೆ– ಬಿ.ಎಲ್ ದೇವರಾಜ್, ಬೇಲೂರು– ಬಿ. ಶಿವರಾಂ, ಮಡಿಕೇರಿ– ಮಂಥರ್ ಗೌಡ, ಚಾಮುಂಡೇಶ್ವರಿ– ಸಿದ್ದೇಗೌಡ, ಕೊಳ್ಳೇಗಾಲ– ಎ. ಆರ್ ಕೃಷ್ಣಮೂರ್ತಿ.
ಟಿಕೆಟ್ ವಂಚಿತರು: ಕಡೂರು– ವೈ. ಎಸ್. ವಿ ದತ್ತ, ಚನ್ನಗಿರಿ– ವಡ್ನಾಳ್ ರಾಜಣ್ಣ, ಚಿತ್ರದುರ್ಗ– ರಘು ಆಚಾರ್, ತೀರ್ಥಹಳ್ಳಿ– ಮಂಜುನಾಥಗೌಡ, ಮೊಳಕಾಲ್ಮೂರು– ಯೋಗೀಶ್ ಬಾಬು, ಕಲಘಟಗಿ– ನಾಗರಾಜ್ ಛಬ್ಬಿ.