ಖಾತೆ ಹಂಚಿಕೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರಿಗೆ ಬಂಪರ್
ಬೆಂಗಳೂರು: ಅಂತೂ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಭಾನುವಾರ ತಡರಾತ್ರಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಖಾತೆಗಳನ್ನು ಹಂಚಿಕೆಯ ಅಧಿಸೂಚನೆ ಹೊರಡಿಸಿದ್ದಾರೆ.
ಖಾತೆಗಳ ಹಂಚಿಕೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಜಾಕ್ ಪಾಟ್ ಹೊಡೆದಿದ್ದಾರೆ. ಜಾರ್ಜ್ ಅವರಿಗೆ ಇಂಧನ, ಸತೀಶ್ ಜಾರಕಿಹೊಳಿ ಅವರಿಗೆ ಲೋಕೋಪಯೋಗಿ, ಎಂ.ಬಿ.ಪಾಟೀಲ್ ಅವರಿಗೆ ಬೃಹತ್ ಕೈಗಾರಿಕೆ ಸೇರಿ ಬಹುತೇಕರಿಗೆ ಪೊಗದಸ್ತಾದ ಖಾತೆಗಳು ಸಿಕ್ಕಿವೆ.
ಡಿ.ಕೆ.ಶಿವಕುಮಾರ್ ಅವರು ಮಾತ್ರ ಭರ್ಜರಿ ಖಾತೆಗಳನ್ನು ಪಡೆದುಕೊಂಡು ತಮ್ಮ ಬೆಂಬಲಿಗರಿಗೆ ಸಾಮಾನ್ಯ ಖಾತೆಗಳನ್ನೇ ಕೊಡಿಸಿದ್ದಾರೆ. ಸಾರಿಗೆ ಬೇಡ ಎಂದು ಗಲಾಟೆ ಮಾಡಿಕೊಂಡು ಕೂತಿದ್ದ ರಾಮಲಿಂಗಾರೆಡ್ಡಿ ಅವರಿಗೆ ಹೆಚ್ಚುವರಿಯಾಗಿ ಮುಜರಾಯಿ ಕೊಡಲಾಗಿದೆ.
ಮುಜರಾಯಿ ಖಾತೆ ಪಡೆದವರ ರಾಜಕೀಯ ಖತಂ ಎನ್ನುವ ನಂಬಿಕೆ ಹಿನ್ನೆಲೆಯಲ್ಲಿ ಈಗ ರೆಡ್ಡಿ ಅವರ ಮುಂದಿನ ಚುನಾವಣೆ ಭವಿಷ್ಯ ಏನು ಎನ್ನುವುದು ಪ್ರಶ್ನಾರ್ಥಕವಾಗಿದೆ. ಈ ಚುನಾವಣೆಯಲ್ಲಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಕಡಿಮೆ ಅಂತರದಿಂದ ಸೋತಿದ್ದರು.
ಇನ್ನು; ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ಅವರಿಗೆ ಉನ್ನತ ಶಿಕ್ಷಣ ಖಾತೆ ಕೊಟ್ಟು ಮೂಗಿಗೆ ತುಪ್ಪ ಸವರಲಾಗಿದೆ. ಕೋಲಾರ ಜಿಲ್ಲೆಗೆ ಒಂದಿಷ್ಟು ಒಳಿತಾಗಬಹುದು ಎನ್ನುವುದಾದರೆ, ಕೃಷ್ಣಭೈರೇಗೌಡರಿಗೆ ಕಂದಾಯ ಸಿಕ್ಕಿದೆ. ಅದೇ ಸಮಾಧಾನ. ಅವರೂ ಸಿದ್ದರಾಮಯ್ಯ ಅವರ ಕಟ್ಟರ್ ಬೆಂಬಲಿಗರು.
ಇನ್ನು; ತಮ್ಮ ವಿರೋಧಿ ಕೆ.ಹೆಚ್.ಮುನಿಯಪ್ಪ ಅವರಿಗೆ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಕೊಡಲಾಗಿದೆ. ಅಕ್ಕಿಭಾಗ್ಯದ ಹೊರೆಯನ್ನು ಅವರು ಹೊರಬೇಕಿದೆ.
ಒಟ್ಟಾರೆಯಾಗಿ ಖಾತೆ ಹಂಚಿಕೆಯಲ್ಲಿ ವೈಜ್ಞಾನಿ ಅಥವಾ ತಿಳಿವಳಿಕೆಯ ಮಾನದಂಡ ಅನುಸರಿಸಲಾಗಿಲ್ಲ. ನಿಮಗಿಷ್ಟು, ನನಗಿಷ್ಟು ಎಂದು ಹಂಚಿಕೊಂಡ ಹಾಗೆ ಇದೆ ಎಂದು ಬಿಜೆಪಿ ಟೀಕಿಸಿದೆ.
ಸಚಿವರಿಗೆ ಹಂಚಲಾಗಿರುವ ಖಾತೆಗಳು ಹೀಗಿವೆ;
01.ಸಿದ್ದರಾಮಯ್ಯ
ಹಣಕಾಸು, ಸಂಪುಟ ವ್ಯವಹಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಐಟಿ-ಬಿಟಿ, ಮೂಲಭೂತ ಸೌಕರ್ಯ ಹಾಗೂ ಹಂಚಿಕೆಯಾಗದ ಇತರೆ ಎಲ್ಲಾ ಖಾತೆಗಳು
02.ಡಿ.ಕೆ.ಶಿವಕುಮಾರ್
ಜಲಸಂಪನ್ಮೂಲ ಮತ್ತು ಬೆಂಗಳೂರು ನಗರ ಅಭಿವೃದ್ಧಿ
03.ಡಾ.ಜಿ.ಪರಮೇಶ್ವರ
ಗೃಹ
04.ಹೆಚ್.ಕೆ.ಪಾಟೀಲ್
ಕಾನೂನು ಮತ್ತು ಸಂದೀಯ ವ್ಯವಹಾರ & ಪ್ರವಾಸೋದ್ಯಮ
05.ಕೆ.ಎಚ್.ಮುನಿಯಪ್ಪ
ಆಹಾರ ಮತ್ತು ನಾಗರೀಕ ಪೂರೈಕೆ
06.ರಾಮಲಿಂಗಾರೆಡ್ಡಿ
ಸಾರಿಗೆ & ಮುಜರಾಯಿ
07.ಎಂ.ಬಿ.ಪಾಟೀಲ್
ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕೆ
08.ಕೆ.ಜೆ.ಜಾರ್ಜ್
ಇಂಧನ
09.ದಿನೇಶ್ ಗುಂಡೂರಾವ್
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
10.ಹೆಚ್.ಸಿ.ಮಹಾದೇವಪ್ಪ
ಸಮಾಜ ಕಲ್ಯಾಣ
11.ಸತೀಶ್ ಜಾರಕೀಹೊಳಿ
ಲೊಕೋಪಯೋಗಿ
12.ಕೃಷ್ಣಭೈರೇಗೌಡ
ಕಂದಾಯ
13.ಪ್ರಿಯಾಂಕ್ ಖರ್ಗೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
13.ಶಿವಾನಂದ ಪಾಟೀಲ್
ಜವಳಿ, ಸಕ್ಕರೆ, ಕೃಷಿ ಉತ್ಪನ್ನ ಮಾರುಕಟ್ಟೆ
14.ಜಮೀರ್ ಅಹಮದ್ ಖಾನ್
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ
15.ಶರಣಬಸಪ್ಪ ದರ್ಶನಾಪುರ
ಸಣ್ಣ ಕೈಗಾರಿಕೆ
16.ಈಶ್ವರ ಖಂಡ್ರೆ
ಅರಣ್ಯ ಮತ್ತು ಪರಿಸರ, ಜೀವಿಶಾಸ್ತ್ರ
17.ಎನ್.ಚಲುವರಾಯಸ್ವಾಮಿ
ಕೃಷಿ
19.ಎಸ್.ಎಸ್.ಮಲ್ಲಿಕಾರ್ಜುನ್
ಗಣಿ ಮತ್ತು ಭೂ ವಿಜ್ಜಾನ ಹಾಗೂ ತೋಟಗಾರಿಕೆ
20.ರಹೀಂ ಖಾನ್
ಪೌರಾಡಳಿತ ಮತ್ತು ಹಜ್
21.ಸಂತೋಷ್ ಲಾಡ್
ಕಾರ್ಮಿಕ
22.ಶರಣಪ್ರಕಾಶ್ ಪಾಟೀಲ್
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ
23.ಆರ್.ಬಿ.ತಿಮ್ಮಾಪುರ
ಅಬಕಾರಿ
24.ಕೆ.ವೆಂಕಟೇಶ್
ಪಶು ಸಂಗೋಪನೆ ಮತ್ತು ರೇಷ್ಮೆ
25.ಶಿವರಾಜ್ ತಂಗಡಗಿ
ಹಿಂದುಳಿದ ವರ್ಗ ಮತ್ತು ಕನ್ನಡ ಮತ್ತು ಸಂಸ್ಕೃತಿ
26.ಡಿ.ಸುಧಾಕರ್
ಯೋಜನೆ, ಸಾಂಖ್ಯಿಕ
27.ಬಿ.ನಾಗೇಂದ್ರ
ಯುವಜನ ಮತ್ತು ಕ್ರೀಡೆ / ಪರಿಶಿಷ್ಟ ಕಲ್ಯಾಣ
28.ಕೆ.ಎನ್.ರಾಜಣ್ಣ
ಸಹಕಾರ
29.ಭೈರತಿ ಸುರೇಶ್
ನಗರಾಭಿವೃದ್ಧಿ (ಬೆಂಗಳೂರು ಬಿಟ್ಟು) ಮತ್ತು ಪಟ್ಟಣಾಭಿವೃದ್ಧಿ
30.ಲಕ್ಷ್ಮೀ ಹೆಬ್ಬಾಳ್ಕರ್
ಮಹಿಳಾ ಮತ್ತು ಮಕ್ಕಳ ಕಲ್ಯಾಣ
31.ಮಂಕಲ್ ವೈದ್ಯ
ಮೀನುಗಾರಿಕೆ ಮತ್ತು ಬಂದರು, ಒಳಸಾರಿಗೆ
32.ಮಧು ಬಂಗಾರಪ್ಪ
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
33.ಡಾ.ಎಂ.ಸಿ.ಸುಧಾಕರ್
ಉನ್ನತ ಶಿಕ್ಷಣ
34.ಎನ್.ಎಸ್.ಬೋಸರಾಜು
ಸಣ್ಣ ನೀರಾವರಿ & ವಿಜ್ಞಾನ ತಂತ್ರಜ್ಞಾನ