ಸಿಹಿಸುದ್ದಿ ಕೊಟ್ಟ ಇಸ್ರೋ
ಬೆಂಗಳೂರು: ಸಮಸ್ತ ಭಾರತೀಯರ ಕುತೂಹಲಕ್ಕೆ ಕಾರಣವಾಗಿರುವ ಚಂದ್ರಯಾನ-3 ರ ಬಗ್ಗೆ ಒಳ್ಳೆಯ ಸುದ್ದಿ ಬಂದಿದೆ.
ನಮ್ಮೆಲ್ಲರ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಯಶಸ್ಸಿನ ಮೈಲುಗಲ್ಲಿನತ್ತ ಸಾಗುತ್ತಿದೆ. ಚಂದ್ರಯಾನ-3 ನೌಕೆಯು ಯಶಸ್ವಿಯಾಗಿ ಚಂದ್ರನ ಕಕ್ಷೆಯೊಳಗೆ ಪ್ರವೇಶ ಮಾಡಿದೆ ಎಂದು ಇಸ್ರೋ ತಿಳಿಸಿದೆ.
ಸ್ವತಃ ಈ ಬಗ್ಗೆ ಟ್ವಿಟರಿನಲ್ಲಿ ಮಾಹಿತಿ ನೀಡಿರುವ ಇಸ್ರೋ; “ಚಂದ್ರಯಾನ ನೌಕೆಯು ನಿಗದಿತ ಗುರಿಯಾದ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ. ಈ ಮೂಲಕ ಮತ್ತೊಂದು ಹಂತವನ್ನು ಯಾವುದೇ ಅಡ್ಡಿ ಆತಂಕ ಇಲ್ಲದೇ ಪೂರ್ಣಗೊಳಿಸಲಾಗಿದೆ” ಎಂದಿದೆ.
ಚಂದ್ರನ ಕಕ್ಷೆ (Lunar Orbit Injection (LOI)) ಸೇರ್ಪಡೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬೆಂಗಳೂರಿನ ISTRACಯ ಮಿಷನ್ ಆಪರೇಷನ್ ಕಾಂಪ್ಲೆಕ್ಸ್‌ನಿಂದ (Mission Operations Complex -MOX)) ಚಂದ್ರನಿಗೆ ಅತಿ ಸಮೀಪದ ಕಕ್ಷೆಯ ಭಾಗವಾದ ಪೆರಿಲೂನ್‌ನಿಂದ ರೆಟ್ರೋ ಬರ್ನಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಇಸ್ರೋ ತಿಳಿಸಿದೆ.
ಇನ್ನು, ಚಂದ್ರಯಾನ-3ರ ರೋವರ್ ಚಂದ್ರನ ದಕ್ಷಿಣ ಮೇಲ್ಮೈನಲ್ಲಿ ಇಳಿಸುವ ಪ್ರಕ್ರಿಯೆಯನ್ನು ಇಡೀ ಭಾರತೀಯರಷ್ಟೇ ಅಲ್ಲ, ಜಗತ್ತಿಗೆ ಜಗತ್ತೇ ಕುತೂಹಲದಿಂದ ಎದುರು ನೋಡುತ್ತಿದೆ.